ಪಾಕಿಸ್ತಾನದ ಸಿಂಧ್‌ಪ್ರಾಂತ್ಯದಲ್ಲಿ ಅಪ್ರಾಪ್ತ ಹಿಂದೂ ಬಾಲಕಿಯ ಅಪಹರಣ

೧೫ ದಿನಗಳಲ್ಲಿ ೪ನೇ ಘಟನೆ

ಇಸ್ಲಾಮಾಬಾದ್ – ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೈದರಾಬಾದ್‌ನಲ್ಲಿ ೧೫ ವರ್ಷದ ಹಿಂದೂ ಬಾಲಕಿಯನ್ನು ಅಪಹರಿಸಲಾಗಿದೆ. ಇದು ಕಳೆದ ೧೫ ದಿನಗಳಲ್ಲಿ ಹಿಂದೂ ಮಹಿಳೆಯರನ್ನು ಅಪಹರಿಸಿದ ನಾಲ್ಕನೇ ಘಟನೆಯಾಗಿದೆ. ಈ ಹಿಂದೆ ಅಪಹರಿಸಿದ ಮೂವರು ಹಿಂದೂ ಮಹಿಳೆಯರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲಾಯಿತು. ಈ ಅಪ್ರಾಪ್ತ ಬಾಲಕಿಯ ಸಂಬಂಧಿಕರ ಹೇಳಿಕೆಯಂತೆ, ಸಂತ್ರಸ್ತೆ ಮನೆಗೆ ಹಿಂದಿರುಗದಿದ್ದಾಗ ಕೆಲವರು ಅವಳನ್ನು ಅಪಹರಿಸಿದರು. ಅವರು ಪೊಲೀಸರಲ್ಲಿ ದೂರು ದಾಖಲಿಸಿದರು; ಆದರೆ ಆ ಹುಡುಗಿ ಪತ್ತೆಯಾಗಲಿಲ್ಲ.