ಪಾಶ್ಚಾತ್ಯ ದೇಶಗಳಿಂದ ಅನೇಕ ದಶಕಗಳು ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡಿರಲಿಲ್ಲ ! – ವಿದೇಶಾಂಗ ಸಚಿವ ಎಸ್. ಜೈಶಂಕರ

ರಷ್ಯಾದಿಂದ ಭಾರತದ ಶಸ್ತ್ರಾಸ್ತ್ರ ಖರೀದಿಗೆ ಬೆಂಬಲ !

ವಿದೇಶಾಂಗ ಸಚಿವ ಎಸ್. ಜೈಶಂಕರ

ಕ್ಯಾನಬೇರ (ಆಸ್ಟ್ರೇಲಿಯಾ) – ಭಾರತದ ಶಸ್ತ್ರಾಸ್ತ್ರ ಖರೀದಿಯ ಬಗ್ಗೆ ರಷ್ಯಾದಿಂದ ಬೆಂಬಲ ಸಿಗುವಾಗಲೇ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡುವ ಪಾಶ್ಚಾತ್ಯ ದೇಶಗಳಿಗೆ ಭಾರತದ ವಿದೇಶಾಂಗ ಸಚಿವರು ಎಸ್. ಜೈಶಂಕರ ಇವರು ಚೆನ್ನಾಗಿಯೇ ಬುದ್ಧಿ ಹೇಳಿದ್ದಾರೆ. ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ವೆನಿ ವೊಂಗ ಇವರ ಜೊತೆ ಅಕ್ಟೋಬರ್ ೧೦ ರಂದು ನಡೆದಿರುವ ಪತ್ರಕರ್ತರ ಪರಿಷತ್ತಿನಲ್ಲಿ ಅವರು ಮಾತನಾಡುತ್ತಿದ್ದರು.

ಈ ಪತ್ರಕರ್ತ ಪರಿಷತ್ತುನಲ್ಲಿ ಓರ್ವ ಆಸ್ಟ್ರೇಲಿಯನ್ ಪತ್ರಕರ್ತನು ಜೈಶಂಕರ ಇವರಿಗೆ ‘ರಷ್ಯಾ-ಉಕ್ರೇನ್ ಇವರಲ್ಲಿನ ಯುದ್ಧದ ಸಂದರ್ಭದಲ್ಲಿ ರಷ್ಯಾದಿಂದ ನಡೆಯುವ ಶಸ್ತ್ರಾಸ್ತ್ರ ಖರೀದಿ ಕಡಿಮೆ ಮಾಡುವರೆ ?’ ಮತ್ತು ‘ರಷ್ಯಾದ ಜೊತೆಗೆ ಇರುವ ಸಂಬಂಧದ ಸಂದರ್ಭದಲ್ಲಿ ಪುನರ್ ವಿಚಾರ ಮಾಡುವರೆ ?’, ಎಂಬ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರ ನೀಡುವಾಗ ಅವರು, “ಭಾರತ ಮತ್ತು ರಷ್ಯಾ ಇವರಲ್ಲಿ ಬಹಳ ಸಮಯದಿಂದ ಸ್ನೇಹ ಸಂಬಂಧವಿದೆ. ಅದು ಖಂಡಿತವಾಗಿಯೂ ಭಾರತದ ಹಿತಕ್ಕಾಗಿಯೇ ಇದೆ. ನಮ್ಮ ಹತ್ತಿರ ಸೋವಿಯತ್ ರಷ್ಯಾದ ಕಾಲದಲ್ಲಿ ಹಾಗೂ ರಷ್ಯಾ ನಿರ್ಮಿತ ಶಸ್ತ್ರಾಸ್ತ್ರಗಳ ಪ್ರಮಾಣ ಹೆಚ್ಚು ಇದೆ. ಅದರ ಅನೇಕ ಕಾರಣಗಳಿವೆ. ಅದರ ಪೈಕಿ ಒಂದು ಎಂದರೆ ಪಾಶ್ಚಾತ್ಯ ದೇಶಗಳು ದಶಕ ಕಾಲಗಳಿಂದ ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡಿಲ್ಲ. ತದ್ವಿರುದ್ಧ ಅವರು ನಮ್ಮಗಿಂತ ಸರ್ವಾಧಿಕಾರಿಗಳ ಸಹಯೋಗಿ ಮಾಡಿದರು.” ಎಂದು ಹೇಳಿದರು.
ಆ ಸಮಯದಲ್ಲಿ ಜೈ ಶಂಕರ್ ಇವರ ಮಾತು ನೇರ ಪಾಕಿಸ್ತಾನದ ಬಗ್ಗೆ ಆಗಿತ್ತು. ಪಾಕಿಸ್ತಾನ ಅಸ್ತಿತ್ವಕ್ಕೆ ಬಂದು ೭೫ ವರ್ಷ ಕಾಲ ಕಳೆದಿದ್ದು ಅಲ್ಲಿ ಹೆಚ್ಚಿನ ಸಮಯ ಸರ್ವಾಧಿಕಾರಿಗಳೇ ಇದ್ದರು ಎಂದು ಹೇಳಿದರು.