೧. ಇಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಿ !
ಬಿಹಾರದ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರು ಬಿಹಾರದ ಥಾವೆ ನಗರದ ಪ್ರಸಿದ್ಧ ಶ್ರೀ ಥಾವೇಮಾತಾ ದೇವಸ್ಥಾನದಲ್ಲಿ ಚಪ್ಪಲಿಹಾಕಿಕೊಂಡು ಹೋಗಿರುವ ವೀಡಿಯೋ ಭಿತ್ತರವಾಗಿದೆ.
೨. ಜಾತ್ಯತೀತರು ಈಗೇಕೆ ಮೌನವಾಗಿದ್ದಾರೆ?
ಹಿಂದೂ ಧರ್ಮದವಳಾಗಿದ್ದ ಪತ್ನಿಯು ಮದುವೆಯಾದ ನಂತರ ಇಸ್ಲಾಂನಂತೆ ಆಚರಣೆ ಮಾಡದ ಕಾರಣ ಚೆಂಬೂರಿನ (ಮುಂಬಯಿ) ಮುಸ್ಲಿಂ ಪತಿ ಇಕ್ಬಾಲ್ ಮಹಮ್ಮದ ಶೇಖ್ ಇವನು ಅವಳನ್ನು ನಡುರಸ್ತೆಯಲ್ಲಿ ಕುತ್ತಿಗೆ ಸೀಳಿ ಕೊಂದಿದ್ದಾನೆ.
೩. ಇಂತಹ ಮನೋರೋಗಿಗಳಿಗೆ ಕೇವಲ ಹಿಂದೂಗಳ ಧಾರ್ಮಿಕ ಸ್ಥಳಗಳು ಮಾತ್ರ ಹೇಗೆ ಕಾಣಿಸುತ್ತವೆ ?
ಭಾಗ್ಯನಗರದಲ್ಲಿ ಶ್ರೀ ದುರ್ಗಾದೇವಿಯ ವಿಗ್ರಹವನ್ನು ಧ್ವಂಸ ಮಾಡಿದ ಇಬ್ಬರು ಬುರಖಾಧಾರಿ ಮುಸಲ್ಮಾನ ಮಹಿಳೆಯರನ್ನು ಬಂಧಿಸಲಾಗಿದೆ. ಈ ಬಗ್ಗೆ ಪೊಲೀಸ್ ಉಪಾಯುಕ್ತ ರಾಜೇಶ ಕುಮಾರ್ ಇವರು ಮಾತನಾಡುತ್ತಾ, ಇವರಿಬ್ಬರೂ ಮನೋರೋಗಿಗಳಾಗಿದ್ದಾರೆ ಎಂದು ಹೇಳಿದರು.
೪. ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ಕ್ರೈಸ್ತರಾಗಿರುವುದರ ದುಷ್ಪರಿಣಾಮ !
ಆಂಧ್ರಪ್ರದೇಶದ ತಿರುಪತಿಯಲ್ಲಿ, ರಸ್ತೆಯ ಉದ್ದಕ್ಕೂ ಇರುವ ಗೋಡೆಗಳ ಮೇಲೆ ಶಿವ, ಆಂಜನೇಯ ಮತ್ತು ಇತರ ದೇವತೆಗಳ ಚಿತ್ರಗಳನ್ನು ಬಿಡಿಸಲಾಗಿತ್ತು; ಆದರೆ ಈಗ ಅದರ ಮೇಲೆ ಆಡಳಿತಾರೂಢ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ನೀಲಿ, ಹಸಿರು ಮತ್ತು ಬಿಳಿ ಬಣ್ಣಗಳನ್ನು ಹಚ್ಚಲಾಗಿದೆ.
೫. ಮುಂಬಯಿಯಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವ ಅಪಾಯವನ್ನು ತಿಳಿಯಿರಿ !
ಮುಂಬಯಿಯ ೨೦ ಕ್ಕೂ ಹೆಚ್ಚು ಸ್ಥಳಗಳಲ್ಲಿ, ಮುಸಲ್ಮಾನರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದು ಈ ಪ್ರದೇಶಗಳಲ್ಲಿನ ಹಿಂದೂಗಳು ಅಲ್ಪಸಂಖ್ಯಾತರಾಗುವ ಮಾರ್ಗದಲ್ಲಿದ್ದಾರೆ. ಮುಂಬಯಿಯಲ್ಲಿ ಮುಸಲ್ಮಾನರ ಜನಸಂಖ್ಯೆಯು ೧೯೯೭ ಕ್ಕಿಂತ ಮೂರು ಪಟ್ಟು ಹೆಚ್ಚಳವಾಗಿದ್ದು ಈಗ ೩೬ ಲಕ್ಷದಷ್ಟಾಗಿದೆ.
೬. ಇಂತಹವರಿಗೆ ಈಗ ಕಠಿಣ ಶಿಕ್ಷೆಯಾಗಬೇಕು !
ಇಮ್ತಿಯಾಜ್ ಅನ್ಸಾರಿ ಎಂಬ ಯುವಕನು ಧನಬಾದ (ಜಾರ್ಖಂಡ) ನ ಜಮಡಿಹಾ ಗ್ರಾಮದ ಶಿವ ಮಂದಿರದಲ್ಲಿರುವ ಶ್ರೀ ಹನುಮಂತನ ವಿಗ್ರಹವನ್ನು ಧ್ವಂಸಗೊಳಿಸಿದ್ದಾನೆ. ಇದೇ ಇಮ್ತಿಯಾಜ್‌ನು ೬ ತಿಂಗಳ ಹಿಂದೆ ಕೋಟಾಲಡಿಹ ಮತ್ತು ೨೦೧೬ ರಲ್ಲಿ ನಾವಾಟಾಂಡ ಗ್ರಾಮಗಳಲ್ಲಿನ ವಿಗ್ರಹಗಳನ್ನು ಧ್ವಂಸಗೊಳಿಸಿದ್ದನು.
೭. ಇಸ್ಲಾಮಿಕ್ ದೇಶಗಳಲ್ಲಿ ಮಾತ್ರವಲ್ಲ, ಭಾರತದಲ್ಲಿಯೂ ಹಿಂದೂಗಳು ಅಸುರಕ್ಷಿತರಾಗಿದ್ದಾರೆ !
ಅಕ್ಟೋಬರ್ ೧ ರಂದು ರಾತ್ರಿ ದೆಹಲಿಯ ಸುಂದರನಗರ ಪ್ರದೇಶದಲ್ಲಿ ಆಲಂ, ಬಿಲಾಲ್ ಮತ್ತು ಫೈಜಾನ್ ಎಂಬ ಮುಸಲ್ಮಾನ ಯುವಕರು ಮನೀಷ ಎಂಬ ಯುವಕನನ್ನು ಚಾಕುವಿನಿಂದ ಅನೇಕ ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದರು.