ಒಂದೇ ವಿಷಯದಲ್ಲಿ ಇಬ್ಬರು ನ್ಯಾಯಾಧೀಶರಿಂದ ಭಿನ್ನ ತೀರ್ಪು !

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೧. ನ್ಯಾಯಾಲಯವು ತಲೋಜಾ ಸೆರೆಮನೆಯ ಕೈದಿ ಗೌತಮ ನವಲಖಾ ಇವರಿಗೆ ಸೊಳ್ಳೆಪರದೆಯನ್ನು ಉಪಯೋಗಿಸುವ ಅನುಮತಿಯನ್ನು ನಿರಾಕರಿಸುವುದು

`ಮುಂಬಯಿಯ ತಲೋಜಾ ಮಧ್ಯವರ್ತಿ ಸೆರೆಮನೆಯ ಕೈದಿ `ಎಲ್ಗಾರ ಪರಿಷತ್ತಿ’ನ ಗೌತಮ ನವಲಖಾ ಮತ್ತು ಇನ್ನೊಬ್ಬ ಆರೋಪಿ ಸಾಗರ ಗೋರಖೆ ಇವರು ಸೆರೆಮನೆಯಲ್ಲಿ ಸೊಳ್ಳೆಪರದೆ (ಸೊಳ್ಳೆಗಳಿಂದ ತೊಂದರೆಯಾಗಬಾರದೆಂದು ಮಲಗುವಾಗ ಕಟ್ಟುವ ಪರದೆ) ಸಿಗಬೇಕೆಂದು, ಮುಂಬಯಿ ವಿಶೇಷ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಇದೇ ರೀತಿಯ ಬೇಡಿಕೆಯನ್ನು ಇದೇ ಸೆರೆಮನೆಯ ಕೈದಿ ಮತ್ತು ಅಂಟೇಲಿಯಾ ಸ್ಫೋಟಕ ಪ್ರಕರಣದಲ್ಲಿ ವಜಾಗೊಳಿಸಲಾದ ಪೊಲೀಸ್ ಅಧಿಕಾರಿ ಸುನಿಲ್ ಮಾನೆ ಇವರು ಕೂಡ ಸಲ್ಲಿಸಿದ್ದರು. ಇವೆರಡೂ ಅರ್ಜಿಗಳು ಬೇರೆ ಬೇರೆ ವಿಶೇಷ ನ್ಯಾಯಾಧೀಶರಲ್ಲಿ ಆಲಿಕೆಗೆ ಬಂದಿದ್ದವು. ಎರಡು ಭಿನ್ನ ನ್ಯಾಯಧೀಶರು ಎರಡು ಭಿನ್ನ ಆದೇಶವನ್ನು ಹೊರಡಿಸಿದರು. ನವಲಖಾ ಇವರು ಹಿರಿಯ ನಾಗರಿಕರಾಗಿದ್ದ ಕಾರಣ ಮತ್ತು ಅವರಿಗೆ ಮಲೇರಿಯಾ ಅಥವಾ ಡೆಂಗ್ಯೂವಿನ ಕಾಯಿಲೆಯಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟು ವೈದ್ಯಕೀಯ ಅಧಿಕಾರಿ ಡಾ. ಕಾಳೆ ಮತ್ತು `ಆರ್ಡರ್ ಸರ್ಕಲ್ ಇನ್ಚಾರ್ಜ್’ ಮೋಟೆ ಇವರು ಅವರಿಗೆ ಸೊಳ್ಳೆಪರದೆಯನ್ನು ಉಪಯೋಗಿಸಲು ಅನುಮತಿಯನ್ನು ನೀಡಿದ್ದರು. ಈಗಿನ ಸೆರೆಮನೆ ಅಧಿಕಾರಿಯು ಈ ಅನುಮತಿಯನ್ನು ನಿರಾಕರಿಸಿದರು. ಆದ್ದರಿಂದ ನವಲಖಾ ಇವರು ಸೊಳ್ಳೆಪರದೆ ಉಪಯೋಗಿಸಲು ಅನುಮತಿ ಸಿಗಬೇಕೆಂದು ವಿಶೇಷ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಪ್ರಕರಣವು ನ್ಯಾಯಾಲಯದ ಮುಂದೆ ಬಂದಾಗ ತಲೋಜಾ ಸೆರೆಮನೆಯ ಅಧೀಕ್ಷಕರು ಸೊಳ್ಳೆಪರದೆಯ ಉಪಯೋಗವನ್ನು ವಿರೋಧಿಸಿದರು.

ಅವರು ಹೇಳಿದರು, “ಸೊಳ್ಳೆಗಳನ್ನು ಓಡಿಸಲು `ಒಡೋಮಾಸ್’ ಅಥವಾ ಊದುಬತ್ತಿಗಳನ್ನು ಉಪಯೋಗಿಸಬಹುದು. ಪನವೇಲ ಮಹಾನಗರಪಾಲಿಕೆಯಿಂದ ಸೆರೆಮನೆಯಲ್ಲಿ ಸ್ಟ್ರೇ ಮತ್ತು ಫ್ಯುಮಿಗೇಶನ್ (ಹೊಗೆ ಮತ್ತು ಉಗ್ರ ವಾಸನೆಯುಳ್ಳ ವಾಯು) ನಿಯಮಿತವಾಗಿ ಮಾಡಲಾಗುತ್ತದೆ. ಅದರಿಂದ ಸೊಳ್ಳೆಗಳ ನಿಯಂತ್ರಣವಾಗುತ್ತದೆ. ಆರೋಪಿ ಸೊಳ್ಳೆ ಪರದೆ ಯನ್ನು ಆತ್ಮಹತ್ಯೆ ಮಾಡಿಕೊಳ್ಳಲು ಅಥವಾ ಇತರರ ಹತ್ಯೆ ಮಾಡಲು ಉಪಯೋಗಿಸಬಹುದು. ಈ ಕಾರಣದಿಂದ ಸೊಳ್ಳೆಪರದೆಯ ಉಪಯೋಗಕ್ಕೆ ನಿರ್ಬಂಧ ಹೇರಲಾಗಿದೆ.” ಎರಡೂ ಕಡೆಯಿಂದ ಯುಕ್ತಿವಾದವನ್ನು ಆಲಿಸಿದ ನಂತರ `ಮೋಕ್ಕಾ’, `ಟಾಡಾ’, `ಪೋಟಾ’, `ಸಿಟಿ ಸಿವಿಲ್ ಹಾಗೂ ಸೆಶನ್ಸ್ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಜಯೇಶ ಕಟಾರಿಯಾ ಇವರು ಜುಲೈ ೭ ರಂದು ಆರೊಪಿಯ ಅರ್ಜಿಯನ್ನು ತಳ್ಳಿಹಾಕಿ ದರು. `ಸೆರೆಮನೆ ಅಧಿಕಾರಿಗಳು ೧೫ ದಿನಗಳಿಗೊಮ್ಮೆ ಸ್ಟ್ರೇ, ಫ್ಯುಮಿಗೇಶನ್ ಅಥವಾ ಕೀಟನಾಶಕವನ್ನು ಸಿಂಪಡಿಸಬೇಕು (ಇನ್‌ಸೆಕ್ಟಿಸೈಡ್ಸ್ ಮಾಡಬೇಕು) ಹಾಗೂ ಆರೋಪಿಗೆ ಆಯಿಂಟ್ ಮೆಂಟ್ಸ್, ಓಡೋಮಾಸ್ ಮತ್ತು ಊದುಬತ್ತಿಯನ್ನು ಉಪಯೋಗಿ ಸಲು ಅನುಮತಿಯನ್ನು ನೀಡಲಾಯಿತು. ಸೆರೆಮನೆ ಅಧಿಕಾರಿಗಳು ಯೋಗ್ಯವಾದ ಕಾಳಜಿಯನ್ನು ವಹಿಸಬೇಕು’, ಎಂದು ನ್ಯಾಯಾಧೀಶರು ಹೇಳಿದ್ದಾರೆ. ಈ ರೀತಿಯಲ್ಲಿ ಪ್ರಕರಣದ ನಿರ್ಣಯವಾಯಿತು.

೨. ನ್ಯಾಯಾಲಯವು ತಲೋಜಾ ಸೆರೆಮನೆಯಲ್ಲಿನ ಕೈದಿ ಸುನಿಲ ಮಾನೆ ಇವರಿಗೆ ಸೊಳ್ಳೆಪರದೆಯನ್ನು ಉಪಯೋಗಿಸಲು ಅನುಮತಿಯನ್ನು ನೀಡುವುದು

ಕೆಲವು ದಿನಗಳ ಹಿಂದೆ ಅಂಟೇಲಿಯಾ ಸ್ಫೋಟಕಗಳ ಪ್ರಕರಣದಲ್ಲಿ ವಜಾಗೊಳಿಸಿದ ಪೊಲೀಸ್ ಅಧಿಕಾರಿ ಮತ್ತು ತಲೋಜಾ ಸೆರೆಮನೆಯ ಕೈದಿ ಸುನಿಲ್ ಮಾನೆ ಇವರು ಸೊಳ್ಳೆಪರದೆಯನ್ನು ಉಪಯೋಗಿಸಲು ಅನುಮತಿಯನ್ನು ಪಡೆಯಲು ವಿಶೇಷ ನ್ಯಾಯಾಧೀಶರಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಇದರಲ್ಲಿ ಅವರು `ಕೈದಿಗಳ ಹಿತದೃಷ್ಟಿಯ ವಿಷಯಗಳನ್ನು ಸೆರೆಮನೆ ಅಧಿಕಾರಿಗಳು ಪೂರೈಸಬೇಕು’, ಎಂದು ಹೇಳಿದ್ದರು. ಈ ಅರ್ಜಿಯ ವಿಶೇಷ ನ್ಯಾಯಾಧೀಶ ಎ.ಎಮ್. ಪಾಟೀಲರ ಮುಂದೆ ಆಲಿಕೆಯಾಯಿತು. ಈ ಮನವಿಗೆ ಸೆರೆಮನೆ ಅಧಿಕಾರಿಗಳಿಂದ ಲಿಖಿತ ಉತ್ತರ ಬಂದಿರಲಿಲ್ಲ. ಈ ಪ್ರಕರಣದಲ್ಲಿ ಎರಡೂ ಕಡೆಯ ತರ್ಕವನ್ನು ಆಲಿಸಿದ ನಂತರ ನ್ಯಾಯಾಧೀಶ ಪಾಟೀಲರು ಆರೋಪಿಗೆ ಸೊಳ್ಳೆಪರದೆಯನ್ನು ಉಪಯೋಗಿಸಲು ಅನುಮತಿಯನ್ನು ನೀಡಿದರು.

೩. ಸೆರೆಮನೆ ಅಧಿಕಾರಿಗಳು ತಮ್ಮ ನಿಲುವನ್ನು ಪರಿಶೀಲಿಸಬೇಕು !

ನವಲಖಾ ಮತ್ತು ಮಾನೆ ಇವರಿಬ್ಬರೂ ತಲೋಜಾ ಸೆರೆ ಮನೆಯ ಕೈದಿಗಳಾಗಿದ್ದಾರೆ. ಇಬ್ಬರಿಗೂ ಒಂದೇ ರೀತಿಯ ನಿಯಮಗಳಿವೆ. ಸೆರೆಮನೆಯ ನಿಯಮಕ್ಕನುಸಾರ ಅವರು ಒಂದೇ ಸೆರೆಮನೆಯಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಆದರೂ ಸೊಳ್ಳೆ ಪರದೆಯನ್ನು ಉಪಯೋಗಿಸಲು ಅನುಮತಿ ನೀಡುವ ವಿಷಯದಲ್ಲಿ ಇಬ್ಬರು ನ್ಯಾಯಾಧೀಶರು ಪರಸ್ಪರವಿರೋಧಿ ಆದೇಶವನ್ನು ನೀಡಿದರು. `ಸೆರೆಮನೆಯ ನಿಯಮಕ್ಕನುಸಾರ ಆದೇಶವನ್ನು ನೀಡಲಾಯಿತು’, ಎಂದು ಇಬ್ಬರು ನ್ಯಾಯಾಧೀಶರೂ ಹೇಳುತ್ತಾರೆ. ಹಾಗಾದರೆ ಆರೋಪಿಯನ್ನು ನೋಡಿ ನಿಯಮ ಬದ ಲಾಗುತ್ತದೆಯೇ ? ಕೈದಿಗಳು ಮಾಡಿದ ಬೇಡಿಕೆಯನ್ನು ವಿರೋಧಿ ಸುವುದೋ ಸಮರ್ಥನೆ ಮಾಡುವುದೋ, ಎಂಬುದನ್ನು ಸೆರೆ ಮನೆಯ ಅಧಿಕಾರಿಗಳು ನಿರ್ಧರಿಸುತ್ತಾರೆಯೆ ? ಇಬ್ಬರು ಕೈದಿ ಗಳೂ ಒಂದೇ ರೀತಿಯ ಮನವಿಯನ್ನು ಮಾಡಿರುವುದರಿಂದ ಭಿನ್ನ ನ್ಯಾಯಾಧೀಶರು ಭಿನ್ನ ನಿರ್ಣಯವನ್ನು ಹೇಗೆ ನೀಡಿದರು ? ಎಂಬ ವಿಷಯದ ಗೊಂದಲ ಜನಸಾಮಾನ್ಯರ ಮನಸ್ಸಿನಲ್ಲಿ ಉದ್ಭವಿಸಬಹುದು. ಇಲ್ಲಿ ಗೌತಮ ನವಲಖಾ ಇವರ ಪಕ್ಷವಹಿಸುವ ಪ್ರಯತ್ನವಲ್ಲ, `ಸೆರೆಮನೆ ಅಧಿಕಾರಿಗಳು ತಮ್ಮ ನಿಲುವನ್ನು ಪರಿಶೀಲಿಸಿ ನೋಡಬೇಕು’, ಎಂದು ಅನಿಸುತ್ತದೆ.’

ಶ್ರೀಕೃಷ್ಣಾರ್ಪಣಮಸ್ತು !’

– (ಪೂ) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ. (೧೨.೭.೨೦೨೨)