ವ್ಯಕ್ತಿಯು ಸೇವಿಸುವ ಆಹಾರದಿಂದ ಆತನ ಮೇಲಾಗುವ ಆಧ್ಯಾತ್ಮಿಕ ಪರಿಣಾಮ

`ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು `ಯುನಿವರ್ಸಲ್ ಔರಾ ಸ್ಕ್ಯಾನರ್’ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷೆ

`ಇತ್ತೀಚೆಗೆ ಮನೆಯಲ್ಲಿ ತಯಾರಿಸಿದ ಪೌಷ್ಠಿಕ ಆಹಾರಕ್ಕಿಂತ ಉಪಾಹಾರ ಗೃಹಗಳಲ್ಲಿನ ರುಚಿಕರ ಪದಾರ್ಥಗಳನ್ನು ಸೇವಿಸುವುದರ ಕಡೆಗೆ ಜನರ ಒಲವು ಹೆಚ್ಚುತ್ತಿರುವುದು ಕಂಡುಬರುತ್ತದೆ. ಹಾಗೆಯೇ ಮಾಂಸಾಹಾರ ಮಾಡುವುದರ ಪ್ರಮಾಣವೂ ಹೆಚ್ಚಾಗಿದೆ. ವ್ಯಕ್ತಿ ಸೇವಿಸುವ ಆಹಾರದಿಂದ ಅವನ ಮೇಲಾಗುವ ಆಧ್ಯಾತ್ಮಿಕ ಪರಿಣಾಮಗಳ ಅಧ್ಯಯನಕ್ಕಾಗಿ `ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಒಂದು ಪರೀಕ್ಷಣೆಯನ್ನು ಮಾಡಿತು. ಈ ಪರೀಕ್ಷಣೆಗಾಗಿ `ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣವನ್ನು ಉಪಯೋಗಿಸಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆಯನ್ನು ಮುಂದೆ ಕೊಡಲಾಗಿದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಮೊದಲನೇ ಪ್ರಯೋಗದಲ್ಲಿ ವ್ಯಕ್ತಿಗೆ ಉಪಹಾರಗೃಹದಲ್ಲಿ ಸಸ್ಯಾಹಾರಿ (ಮಿಕ್ಸ ವೆಜ್) ಮತ್ತು ಮಾಂಸಾಹಾರಿ (ಫಿಶ್‌ಫ್ರೈ ಮತ್ತು ಚಿಕನ್‌ಫ್ರೈ) ಪದಾರ್ಥಗಳನ್ನು ಸೇವಿಸಲು ಕೊಡಲಾಯಿತು. ಇನ್ನೊಂದು ಪ್ರಯೋಗದಲ್ಲಿ ಸಾತ್ತ್ವಿಕ ಸ್ಥಳದಲ್ಲಿ (ಸನಾತನದ ಆಶ್ರಮದಲ್ಲಿ) ತಯಾರಿಸಿದ ಪಲ್ಯವನ್ನು ಅವನಿಗೆ ಸೇವಿಸಲು ಕೊಡಲಾಯಿತು. ಪ್ರತಿಯೊಂದು ಪ್ರಯೋಗದಲ್ಲಿ ವ್ಯಕ್ತಿ ಪದಾರ್ಥಗಳನ್ನು ಸೇವಿಸುವ ಮೊದಲು ಮತ್ತು ಸೇವಿಸಿದ ನಂತರ `ಯು.ಎ.ಎಸ್.’ ಉಪಕರಣದ ಮೂಲಕ ಅವನ ಪರೀಕ್ಷಣೆಯನ್ನು ಮಾಡಲಾಯಿತು. ವ್ಯಕ್ತಿಗೆ ಈ ಪದಾರ್ಥಗಳನ್ನು ತಿನ್ನಲು ಕೊಡುವ ಮೊದಲು ಆ ಪದಾರ್ಥಗಳ ಪರೀಕ್ಷಣೆಯನ್ನೂ ಮಾಡಲಾಯಿತು.

ಸೌ. ಮಧುರಾ ಕರ್ವೆ

೧ ಅ. ಉಪಾಹಾರಗೃಹದಲ್ಲಿನ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪದಾರ್ಥಗಳಲ್ಲಿ ತುಂಬಾ ನಕಾರಾತ್ಮಕ ಊರ್ಜೆ ಇರುವುದು ಮತ್ತು ಸಾತ್ತ್ವಿಕ ಸ್ಥಳದಲ್ಲಿ ತಯಾರಿಸಿದ ಪಲ್ಯದಲ್ಲಿ ತುಂಬಾ ಸಕಾರಾತ್ಮಕ ಊರ್ಜೆ ಇರುವುದು ಕಂಡುಬರುವುದು : ಉಪಾಹಾರಗೃಹದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪದಾರ್ಥಗಳಲ್ಲಿ ಸಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ, ಅದರ ವಿರುದ್ಧ ಅವುಗಳಲ್ಲಿ ತುಂಬಾ ನಕಾರಾತ್ಮಕ ಊರ್ಜೆ ಕಂಡುಬಂದಿತು. ತದ್ವಿರುದ್ಧ ಸಾತ್ತ್ವಿಕ ಸ್ಥಳದಲ್ಲಿ ತಯಾರಿಸಿದ ಪಲ್ಯದಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ, ತದ್ವಿರುದ್ಧ ಅದರಲ್ಲಿ ತುಂಬಾ ಸಕಾರಾತ್ಮಕ ಊರ್ಜೆ ಕಂಡುಬಂದಿತು. ಇದು ಮುಂದಿನ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

೧ ಆ. ಉಪಾಹಾರಗೃಹದಲ್ಲಿನ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪದಾರ್ಥಗಳನ್ನು ಸೇವಿಸಿದ್ದರಿಂದ ವ್ಯಕ್ತಿಯ ಮೇಲೆ ನಕಾರಾತ್ಮಕ ಪರಿಣಾಮವಾಗುವುದು ಮತ್ತು ಅವನು ಸಾತ್ತ್ವಿಕ ಸ್ಥಳದಲ್ಲಿ ತಯಾರಿಸಿದ ಪಲ್ಯವನ್ನು ಸೇವಿಸುವುದರಿಂದ ಅವನ ಮೇಲೆ ಸಕಾರಾತ್ಮಕ ಪರಿಣಾಮವಾಗುವುದು : ವ್ಯಕ್ತಿಯು ಉಪಹಾರಗೃಹದಲ್ಲಿನ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪದಾರ್ಥಗಳನ್ನು ಸೇವಿಸುವ ಮೊದಲು ಅವನಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಎರಡೂ ಊರ್ಜೆಗಳಿದ್ದವು. ಅವನು ಆ ಪದಾರ್ಥಗಳನ್ನು ಸೇವಿಸಿದ ನಂತರ ಅವನಲ್ಲಿನ ನಕಾರಾತ್ಮಕ ಊರ್ಜೆಯಲ್ಲಿ ತುಂಬಾ ಹೆಚ್ಚಳವಾಯಿತು ಮತ್ತು ಅವನಲ್ಲಿನ ಸಕಾರಾತ್ಮಕ ಊರ್ಜೆ ಕಡಿಮೆ ಅಥವಾ ಇಲ್ಲವಾಯಿತು. ತದ್ವಿರುದ್ಧ ವ್ಯಕ್ತಿಯು ಸಾತ್ತ್ವಿಕ ಸ್ಥಳದಲ್ಲಿ ತಯಾರಿಸಿದ ಪಲ್ಯವನ್ನು ಸೇವಿಸಿದ ನಂತರ ಅವನಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆಯಾಗಿ ಅವನಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ತುಂಬಾ ಹೆಚ್ಚಳವಾಯಿತು. ಇದು ಮುಂದೆ ಕೊಟ್ಟಿರುವ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

೨. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತಿçಯ ವಿಶ್ಲೇಷಣೆ

೨ ಅ. ಮಾಂಸಾಹಾರಿ ಪದಾರ್ಥಗಳಿಂದ ಪ್ರಕ್ಷೇಪಿತವಾಗುವ ತಮೋ ಗುಣಿ ಸ್ಪಂದನಗಳಿಂದ ಅವುಗಳನ್ನು ಸೇವಿಸುವವರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಹಾನಿಯಾಗುವುದು : ಮಾಂಸಾಹಾರಿ ಪದಾರ್ಥಗಳು ತಮೋಗುಣಿ ಆಗಿರುತ್ತವೆ. ಆದುದರಿಂದ ಅವುಗಳನ್ನು ಸೇವಿಸುವುದರಿಂದ ವ್ಯಕ್ತಿಯಲ್ಲಿನ ತಮೋಗುಣದಲ್ಲಿ ಹೆಚ್ಚಳವಾಗುತ್ತದೆ. ಇದರ ನಕಾರಾತ್ಮಕ ಪರಿಣಾಮವು ಅವನ ದೇಹ, ಮನಸ್ಸು ಮತ್ತು ಬುದ್ಧಿಯ ಮೇಲಾಗುತ್ತದೆ. ಪರೀಕ್ಷಣೆಯಲ್ಲಿನ ವ್ಯಕ್ತಿಯು ಮಾಂಸಹಾರ ಮಾಡಿದ್ದರಿಂದ ಅವನಲ್ಲಿನ ನಕಾರಾತ್ಮಕ ಉರ್ಜೆಯಲ್ಲಿ ತುಂಬಾ ಹೆಚ್ಚಳವಾಯಿತು ಮತ್ತು ಅವನಲ್ಲಿನ ಸಕಾರಾತ್ಮಕ ಊರ್ಜೆ ಇಲ್ಲವಾಯಿತು. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಮಾಂಸಾಹಾರವನ್ನು ಸೇವಿಸಿದ್ದರಿಂದ ಅವನಿಗೆ ಆಧ್ಯಾತ್ಮಿಕ ಸ್ತರದಲ್ಲಿ ಹಾನಿಯಾಯಿತು. ಇದರಿಂದ ನಿಯಮಿತವಾಗಿ ವಾರಕ್ಕೊಮ್ಮೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಮಾಂಸಾಹಾರವನ್ನು ಸೇವಿಸುವವರಿಗೆ ಎಷ್ಟು ಹೆಚ್ಚು ಪ್ರಮಾಣದಲ್ಲಿ ಹಾನಿ ಆಗುತ್ತಿರಬಹುದು ಎಂಬುದರ ಕಲ್ಪನೆ ಬರುತ್ತದೆ. ಆದುದರಿಂದ ಮಾಂಸಾಹಾರವನ್ನು ಸೇವಿಸುವವರು ತಮ್ಮ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಉತ್ತಮ ಆರೋಗ್ಯಕ್ಕಾಗಿ ಮಾಂಸಾಹಾರವನ್ನು ಬಿಟ್ಟು ಸಾತ್ತ್ವಿಕ ಆಹಾರವನ್ನು ಸೇವಿಸುವುದು ಉತ್ತಮ !

೨ ಆ. ಉಪಾಹಾರಗೃಹಕ್ಕಿಂತ ಮನೆಯಲ್ಲಿ ತಯಾರಿಸಿದ ಸಾತ್ತ್ವಿಕ ಪದಾರ್ಥಗಳನ್ನು ಸೇವಿಸಬೇಕು : ಇಲ್ಲಿ ಗಮನದಲ್ಲಿಡಬೇಕಾದ ಮಹತ್ವದ ಅಂಶವೆಂದರೆ ಉಪಾಹಾರಗೃಹದ ಸಸ್ಯಾಹಾರಿ ಪದಾರ್ಥಗಳಲ್ಲಿ ಸಕಾರಾತ್ಮಕ ಉರ್ಜೆ ಸ್ವಲ್ಪವೂ ಇರಲಿಲ್ಲ, ತದ್ವಿರುದ್ಧ ತುಂಬಾ ನಕಾರಾತ್ಮಕ ಊರ್ಜೆ ಕಂಡುಬಂದಿತು. ಆದುದರಿಂದ ಪರೀಕ್ಷಣೆಯಲ್ಲಿ ವ್ಯಕ್ತಿಗೆ ಆ ಪದಾರ್ಥಗಳನ್ನು ಸೇವಿಸಿದ್ದರಿಂದ ಆಧ್ಯಾತ್ಮಿಕದೃಷ್ಟಿಯಿಂದ ಲಾಭವಾಗದೇ, ಹಾನಿಯೇ ಆಯಿತು. ಪದಾರ್ಥಗಳಲ್ಲಿನ ಸಾತ್ತ್ವಿಕಯು ಅನೇಕ ಘಟಕಗಳನ್ನು ಅವಲಂಬಿಸಿರುತ್ತದೆ, ಉದಾ. ಪದಾರ್ಥಗಳನ್ನು ತಯಾರಿಸುವ ಸ್ಥಳ, ಅದರ ಹಿಂದಿನ ಉದ್ದೇಶ, ಪದಾರ್ಥಗಳನ್ನು ತಯಾರಿಸುವ ವ್ಯಕ್ತಿ ಮುಂತಾದವುಗಳು. ಈ ಘಟಕಗಳು ಎಷ್ಟು ಸಾತ್ತ್ವಿಕವಾಗಿರುತ್ತವೆಯೋ, ಅಷ್ಟು ಆ ಪದಾರ್ಥಗಳು ಸಾತ್ತ್ವಿಕವಾಗುತ್ತವೆ. ಸಾತ್ತ್ವಿಕ ಪದಾರ್ಥಗಳನ್ನು ಸೇವಿಸುವುದರಿಂದ ವ್ಯಕ್ತಿಗೆ ಅದರಲ್ಲಿನ ಸಾತ್ತ್ವಿಕತೆಯ ಲಾಭವಾಗುತ್ತದೆ.

ಪರೀಕ್ಷಣೆಯಲ್ಲಿ ವ್ಯಕ್ತಿಯು ಸಾತ್ತ್ವಿಕ ಸ್ಥಳದಲ್ಲಿ (ಸನಾತನ ಆಶ್ರಮದಲ್ಲಿ) ತಯಾರಿಸಿದ ಪಲ್ಯವನ್ನು ಸೇವಿಸಿದ್ದರಿಂದ ಅವನಿಗೆ `ತನ್ನ ನಕಾರಾತ್ಮಕ ಊರ್ಜೆ ಕಡಿಮೆಯಾಗುವುದು ಮತ್ತು ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗುವುದು’, ಹೀಗೆ ಆಧ್ಯಾತ್ಮಿಕ ಮಟ್ಟದಲ್ಲಿ ಲಾಭವಾಯಿತು. ವ್ಯಕ್ತಿಯು ಸಾತ್ತ್ವಿಕ ಆಹಾರವನ್ನು ಸೇವಿಸುವುದರಿಂದ ಅವನ ಮನಸ್ಸಿನಲ್ಲಿ ಸಾತ್ತ್ವಿಕ ವಿಚಾರಗಳು ಬರುತ್ತವೆ. ಸಾತ್ತ್ವಿಕ ವಿಚಾರಗಳಿಂದ ಅವನಿಂದ ಸಾತ್ತ್ವಿಕ ಕೃತಿಗಳಾಗುತ್ತವೆ. ಇದರಿಂದಾಗಿ ಅವನ ವೃತ್ತಿಯೂ ಸಾತ್ತ್ವಿಕವಾಗುತ್ತದೆ. ಆದುದರಿಂದ ಉಪಹಾರಗೃಹಕ್ಕಿಂತ ಮನೆಯಲ್ಲಿ ತಯಾರಿಸಿದ ಸಾತ್ತ್ವಿಕ ಪದಾರ್ಥಗಳನ್ನು ಸೇವಿಸಬೇಕು. ಮನೆಯಲ್ಲಿ ತಯಾರಿಸಿದ ಪದಾರ್ಥಗಳಲ್ಲಿನ ಸಾತ್ತ್ವಿಕತೆ ಹೆಚ್ಚಾಗಲು ಅದನ್ನು ನಾಮಜಪ ಮಾಡುತ್ತಾ ತಯಾರಿಸಬೇಕು.’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೪.೬.೨೦೨೨)

ವಿ-ಅಂಚೆ : [email protected]