ಕಾನೂನುಗಳನ್ನು ಕಠೋರಗೊಳಿಸಿದರೂ ಬಲಾತ್ಕಾರಗಳ ಸಂಖ್ಯೆಯಲ್ಲಿ ಹೆಚ್ಚಳವೇ ಆಗುವುದು, ಇದರಿಂದ ಕಾನೂನುಗಳ ನಿರರ್ಥಕತೆ ಸಿದ್ಧವಾಗುವುದು !

ಮಹಿಳೆಯರ ರಕ್ಷಣೆಗಾಗಿ ಕಾನೂನುಗಳಿಗಿಂತ ಸಮಾಜದ ಮನಸ್ಸನ್ನು ಬದಲಾಯಿಸುವುದು ಆವಶ್ಯಕ !

(ಸಾಂದರ್ಭಿಕ ಚಿತ್ರ)

೧. ಮಹಿಳೆಯರ ಮೇಲಿನ ಬಲಾತ್ಕಾರ ಮತ್ತು ಅವರ ಹತ್ಯೆಗಳ ನಂತರ ಕಾನೂನುಗಳನ್ನು ಕಠಿಣಗೊಳಿಸಿದರೂ ಇಂತಹ ಘಟನೆಗಳು ಹಾಗೇ ಮುಂದುವರಿಯುವುದು

ಡಿಸೆಂಬರ್ ೨೦೧೨ ರಲ್ಲಿ ದೆಹಲಿಯ `ನಿರ್ಭಯಾ’ಳ ಮೇಲಿನ ಸಾಮೂಹಿಕ ಬಲಾತ್ಕಾರ ಮತ್ತು ಅವಳ ಹತ್ಯೆಯ ನಂತರ ದೇಶದಲ್ಲಿ ವಿಪರೀತ ಭಯ ಮತ್ತು ಗೊಂದಲ ನಿರ್ಮಾಣವಾಯಿತು. ಅನಂತರ ಅನೇಕ ಕಠಿಣ ಕಾನೂನುಗಳನ್ನು ತರಲಾಯಿತು.

ಸೆಪ್ಟೆಂಬರ್ ೨೦೨೦ ರಲ್ಲಿ ಉತ್ತರಪ್ರದೇಶದ ಹಾಥರಸದಲ್ಲಿನ ಬಲಾತ್ಕಾರದ ಪ್ರಕರಣದ ನಂತರ ಕಾನೂನುಗಳಲ್ಲಿ ಇನ್ನಷ್ಟು ಬದಲಾವಣೆಗಳನ್ನು ಮಾಡಲಾಯಿತು. ಬಲಾತ್ಕಾರಗಳ ಪ್ರಕರಣಗಳನ್ನು ತ್ವರಿತಗತಿ ನ್ಯಾಯಾಲಯಗಳಲ್ಲಿ ನಡೆಸಿ ಬೇಗನೆ ತೀರ್ಪು ಕೊಡಲು ನಿರ್ಧರಿಸಲಾಯಿತು, ಆದರೆ ಅದರ ನಂತರವೂ ಸಾಮೂಹಿಕ ಬಲಾತ್ಕಾರಗಳ ಮತ್ತು ಹೆಣ್ಣುಮಕ್ಕಳ ಮೇಲಿನ ಕ್ರೌರ್ಯದ ಪ್ರಕರಣಗಳು ನಿಂತಿಲ್ಲ. ೨೦೧೯ ರಲ್ಲಿ ಭಾಗ್ಯನಗರ (ಹೈದರಾಬಾದ) ದಲ್ಲಿ ಪಶುವೈದ್ಯಕೀಯ ಅಧಿಕಾರಿಯಾಗಿದ್ದ ಯುವತಿಯನ್ನು ಸಾಮೂಹಿಕ ಬಲಾತ್ಕಾರ ಮಾಡಿ ಜೀವಂತ ಸುಟ್ಟು ಹತ್ಯೆ ಮಾಡಿದ ನಂತರ `ಶಕ್ತಿ’ ಕಾನೂನನ್ನು ರಚಿಸಲಾಯಿತು. ಹೀಗಿದ್ದರೂ, `ನ್ಯಾಶನಲ್ ಕ್ರೆöÊಮ್ ರೆಕಾರ್ಡ್ಸ್ ಬ್ಯುರೋ’ದ ಇತ್ತೀಚಿನ ವರದಿಗಳ ಪ್ರಕಾರ ದೇಶದಲ್ಲಿ ಬಲಾತ್ಕಾರಗಳ ಸಂಖ್ಯೆ ಕಡಿಮೆಯಾಗಿಲ್ಲ. ಆಗಸ್ಟ್ ೨೦೨೨ ರಲ್ಲಿ ಝಾರಖಂಡದ ದುಮಕಾದಲ್ಲಿ ಓರ್ವ ಯುವತಿಯನ್ನು ಒಮ್ಮುಖ ಪ್ರೀತಿಸುವ ಯುವಕನು ಆಕೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ ಪ್ರಕರಣದಲ್ಲಿ ಪೊಲೀಸರು ಶಾಹರೂಖ ಎಂಬ ಯುವಕನನ್ನು ಬಂಧಿಸಿದ್ದಾರೆ. ಈ ಘಟನೆಯಿಂದ ಮಹಿಳೆಯರ ರಕ್ಷಣೆಯ ಪ್ರಶ್ನೆ ಪುನಃ ಮುನ್ನೆಲೆ ಬಂದಿದೆ. ಮಹಿಳೆಯರ ರಕ್ಷಣೆಯ ಬಗ್ಗೆ ಸರಕಾರವು ಎಷ್ಟೇ ಸಮರ್ಥನೆಗಳನ್ನು ಮಾಡಿದರೂ ಅವು ಟೊಳ್ಳಾಗಿವೆ ಎಂಬುದು ಇಂತಹ ಘಟನೆಗಳಿಂದ ಕಂಡು ಬರುತ್ತದೆ.

ಶ್ರೀ. ರಮೇಶ ಶಿಂದೆ

೨. ಕಾನೂನುಗಳನ್ನು ಕಠಿಣಗೊಳಿಸಿದರೂ ಅವುಗಳ ಅಂಜಿಕೆ ಅಪರಾಧಿಗಳಲ್ಲಿ ನಿರ್ಮಾಣವಾಗಿಲ್ಲ, ಇದು ಸರಕಾರಕ್ಕೆ ಚಿಂತೆಯ ವಿಷಯ !

ಒಮ್ಮುಖ ಪ್ರೀತಿಯಿಂದ ಮಹಿಳೆಯರ ಹತ್ಯೆಯನ್ನು ಮಾಡುವ ಅಥವಾ ಅತ್ಯಾಚಾರ ಮಾಡಿ ಹತ್ಯೆ ಮಾಡುವ ಘಟನೆಗಳು ದೇಶದಲ್ಲಿ ಬಹುತೇಕ ಎಲ್ಲ ಭಾಗಗಳಲ್ಲಿ ನಡೆಯುತ್ತಿವೆ. ಬಿಹಾರ ಮತ್ತು ಝಾರಖಂಡ ರಾಜ್ಯಗಳಲ್ಲಿ ಹುಡುಗಿಯರ ಮೇಲೆ ಎಸಿಡ್ ಎಸೆಯುವ ಘಟನೆಗಳೂ ನಡೆಯುತ್ತಿವೆ. ಇಂತಹ ಘಟನೆಗಳ ನಂತರ ಅನೇಕ ರಾಜ್ಯ ಸರಕಾರಗಳು ಕಠಿಣ ಕಾನೂನುಗಳನ್ನು ಮಾಡಿದ್ದಾರೆ, ಆದರೂ ಅಪರಾಧಿಗಳಲ್ಲಿ ಕಾನೂನಿಯ ಭಯ ನಿರ್ಮಾಣವಾಗಿಲ್ಲ, ಆದುದರಿಂದ ಇದರ ದೋಷ ಎಲ್ಲಿದೆ ? ಎಂಬುದು ಒಂದು ಚಿಂತನದ ವಿಷಯವಾಗಿದೆ. ಬಲಾತ್ಕಾರಗಳ ನಂತರದ ಹತ್ಯೆಯ ಪ್ರಮಾಣ ಕಳೆದ ಕೆಲವು ವರ್ಷಗಳಲ್ಲಿ ಬಹಳ ಹೆಚ್ಚಾಗಿವೆ. ಅತ್ಯಾಚಾರಿಗಳಿಗೆ ಮರಣದಂಡನೆ ಕಾಯದೆಯನ್ನು ತಂದಾಗಿನಿಂದ, ಸಾಕ್ಷಿಯನ್ನು ನಾಶ ಮಾಡುವುದು, ಅಂದರೆ ಸಂಬಂಧಿತ ಮಹಿಳೆಯ ಹತ್ಯೆಯನ್ನು ಮಾಡುವುದು, ಎಂದು ಮಹಿಳೆಯರ ಹತ್ಯೆಗಳು ಹೆಚ್ಚಾಗುತ್ತಿಲ್ಲವಲ್ಲ ? ಎಂಬುದರ ವಿಚಾರ ಮಾಡುವುದು ಆವಶ್ಯಕವಾಗಿದೆ.

ಹೆಣ್ಣುಮಕ್ಕಳಿಗೆ ಸ್ವಸಂರಕ್ಷಣೆ ತರಬೇತಿಯನ್ನು ನೀಡಿದರೆ ನಮ್ಮ ಜವಾಬ್ದಾರಿ ಮುಗಿಯಿತು ಎಂದು ಸಮಾಜ ಮತ್ತು ಆಡಳಿತವು ತಿಳಿದುಕೊಂಡಿದ್ದರೆ, ಅದು ತಪ್ಪಾಗಿದೆ. ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ದಾವೆಗಳ ತೀರ್ಪನ್ನು ಆದಷ್ಟು ಬೇಗನೇ ನೀಡಲು ಕಠಿಣ ಕಾನೂನು ಮತ್ತು ಇತರ ಎಲ್ಲ ವ್ಯವಸ್ಥೆಗಳಿವೆ. ಹೀಗಿರುವಾಗಲೂ ಇಂತಹ ಪ್ರಕರಣಗಳ ತನಿಖೆ ಮತ್ತು ಇತರ ಅಂಶಗಳು ಎಷ್ಟು ತೊಡಕಿನವುಗಳಾಗಿರುತ್ತವೆ ಎಂದರೆ, ಅನೇಕ ಪ್ರಕರಣಗಳಲ್ಲಿ ಯೋಗ್ಯ ನ್ಯಾಯ ಸಿಗುವುದೇ ಇಲ್ಲ. ಇಂತಹ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ಬಹಳ ಕಡಿಮೆ ಇದೆ. ಆದುದರಿಂದ ಇಂತಹ ಅಪರಾಧಗಳನ್ನು ಮಾಡುವವರಲ್ಲಿ ಕಾನೂನಿನ ಭಯ ನಿರ್ಮಾಣವಾಗುವುದಿಲ್ಲ.

೩. ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಆಗುವ ಹೆಚ್ಚಳ ಮತ್ತು ಲೈಂಗಿಕ ಸಮಸ್ಯೆಗಳನ್ನು ತಡೆಗಟ್ಟಲು ಸಮಾಜದ ಮನಸ್ಥಿತಿಯಲ್ಲಿ ಬದಲಾವಣೆ ಆಗುವುದು ಆವಶ್ಯಕ !

ಕೇವಲ ಕಾನೂನುಗಳನ್ನು ಕಠಿಣಗೊಳಿಸಿದರೆ ಆಗುವುದಿಲ್ಲ, ಈ ಕಾನೂನಿಗಳಿಗನುಸಾರ ಶಿಕ್ಷೆಯಾಗಬೇಕು ಮತ್ತು ಆಗಿರುವ ಶಿಕ್ಷೆಯ ಕಾರ್ಯ ಸಮಯಮಿತಿಯಲ್ಲಾಗಬೇಕು. `ನ್ಯಾಶನಲ್ ಕ್ರೆöÊಮ್ ರೆಕಾರ್ಡ್ಸ್ ಬ್ಯೂರೋ’ ಇದರ ವರದಿಯ ಆಧಾರವನ್ನು ತೆಗೆದುಕೊಂಡರೆ, ಶಿಕ್ಷೆಯ ಪ್ರಮಾಣವು ಎಷ್ಟು ನಗಣ್ಯವಾಗಿದೆ, ಎಂಬುದು ಗಮನಕ್ಕೆ ಬರುತ್ತದೆ. ೨೦೨೦ ರಲ್ಲಿ ಅತ್ಯಾಚಾರಗಳ ೪೩ ಸಾವಿರಗಳಿಗಿಂತ ಹೆಚ್ಚು ಅಪರಾಧಗಳ ವಿಚಾರಣೆಯನ್ನು ಮಾಡಲಾಯಿತು; ಆದರೆ ಕೇವಲ ೩ ಸಾವಿರದ ೮೧೪ ಪ್ರಕರಣಗಳಲ್ಲಿ ಮಾತ್ರ ಆಪರಾಧಿಗಳಿಗೆ ಶಿಕ್ಷೆಯಾಯಿತು. ಸರಕಾರವು ಡಿಸೆಂಬರ್ ೨೦೨೧ ರಲ್ಲಿ ಸಂಸತ್ತಿನಲ್ಲಿ, ೨೦೨೦ ರಲ್ಲಿ ದೇಶಾದ್ಯಂತ ಮಹಿಳೆಯರ ವಿರುದ್ಧದ ೩ ಲಕ್ಷ ೭೧ ಸಾವಿರದ ೫೦೩ ಅಪರಾಧಗಳ ನೋಂದಣಿಯಾಗಿತ್ತು, ಆದರೆ ಕೇವಲ ೩೧ ಸಾವಿರ ೪೦೨ ಜನರನ್ನು ಮಹಿಳೆಯರ ಮೇಲಿನ ಅಪರಾಧಗಳಿಗಾಗಿ ಅಪರಾಧಿಗಳೆಂದು ನಿರ್ಧರಿಸಲಾಯಿತು. ೨೦೨೧ ರಲ್ಲಿ `ನ್ಯಾಶನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ’ವು ಘೋಷಿಸಿದ ಈ ಅಂಕಿಗಳು ಹೆಚ್ಚು ಚಿಂತೆಗೀಡು ಮಾಡುವಂತಿವೆ; ಏಕೆಂದರೆ ಈ ವರ್ಷ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಶೇ. ೪೧ ರಷ್ಟು ಹೆಚ್ಚಳವಾಗಿದೆ. ರಾಷ್ಟಿçÃಯ ಮಹಿಳಾ ಆಯೋಗವು, ಭಾರತೀಯ ಕಾಯದೆಗಳಲ್ಲಿನ ಲೈಂಗಿಕ ಕಿರುಕುಳ ವ್ಯವಸ್ಥೆಗಳ ಪುನರ್ವಿಚಾರ ಮಾಡುವುದು ಆವಶ್ಯಕವಾಗಿದೆ ಎಂದು ಹೇಳಿದೆ. ಈ ವ್ಯವಸ್ಥೆಯಲ್ಲಿ ಬಲಾತ್ಕಾರ, ಮಾನಭಂಗ ಮುಂತಾದ ಅಪರಾಧಗಳ ಸಮಾವೇಶವಿದೆ. `ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷದ್,(`ಎನ್.ಸಿ.ಈ.ಆರ್.ಟಿ.’ಯು) ಶಾಲೆಯ ಮಕ್ಕಳಲ್ಲಿ ಲೈಂಗಿಕ ಸಮಸ್ಯೆಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಲೈಂಗಿಕ ವಿಷಯವನ್ನು ಆಧರಿಸಿದ ಪಠ್ಯಪುಸ್ತಕಗಳನ್ನು ಮತ್ತು ಪಾಠಗಳನ್ನು ಕಲಿಸುವ ಆಯೋಜನೆಯನ್ನು ಅಭಿವೃದ್ಧಿಗೊಳಿಸಿದೆ.

`ನಿರ್ಭಯಾ’ಳ ಮೃತ್ಯುವಿನ ನಂತರ ಜನತೆಯು ಮಾಡಿದ ಚಳುವಳಿಯಿಂದ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರಗಳ ಅಂಶವು ವೇಗವಾಗಿ ಮುಂದೆ ಬಂದಿತು ಮತ್ತು ವಿವಿಧ ಕಾರ್ಯಕ್ರಮ ಮತ್ತು ಕಾರ್ಯಾಗಾರಗಳ ಮಾಧ್ಯಮದಿಂದ ಜನರಿಗೆ ಅದರ ಅರಿವನ್ನು ಮಾಡಿಕೊಡಲಾಯಿತು. ಇಂತಹ ಪ್ರಯತ್ನಗಳ ಸಂಖ್ಯೆ ಹೆಚ್ಚಾಗಬೇಕು. ಕಾನೂನಿಗಿಂತ ಮನಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುವುದು ಮಹತ್ವದ್ದಾಗಿದೆ ಮತ್ತು ಆ ದಿಶೆಯಲ್ಲಿ ಬಹಳಷ್ಟು ಕಾರ್ಯವಾಗುವುದು ಕಂಡು ಬರುವುದಿಲ್ಲ.

೪. `ನಿರ್ಭಯಾ ನಿಧಿ’ಯ ಪೂರ್ಣ ಉಪಯೋಗವಾಗಲಿಲ್ಲ !

ಸರಕಾರವು `ನಿರ್ಭಯಾ ನಿಧಿ’ಯ ಸ್ಥಾಪನೆಯನ್ನು ಮಾಡಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಮಾಡಲು ವಿವಿಧ ರಾಜ್ಯಗಳಲ್ಲಿ ಹಮ್ಮಿಕೊಳ್ಳಲಾದ ಯೋಜನೆಗಳಿಗಾಗಿ ಈ ನಿಧಿಯನ್ನು ಕೊಡುವುದು ಎಂದು ನಿಶ್ಚಯಿಸಲಾಗಿತ್ತು. ಅವರ ದೂರುಗಳಿಗಾಗಿ `ವನ್-ಸ್ಟಾಪ್ ಕೇಂದ್ರ’ವೆಂದು `ಹೆಲ್ಪಲೈನ್’ ಮಾಡುವುದರೊಂದಿಗೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಯಿತು; ಆದರೆ ಈ ಯೋಜನೆಗೆ ಮಂಜೂರಾದ ಹಣವು ಅನೇಕ ರಾಜ್ಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಲಿಲ್ಲ. ತಮಿಳುನಾಡಿನಲ್ಲಿ ಎಪ್ರಿಲ್ ೨೦೨೧ ರವರೆಗೆ ಮಂಜೂರಾದ ೪೬೧ ಕೋಟಿ ರೂಪಾಯಿಗಳ ಪೈಕಿ ಕೇವಲ ಶೇ. ೧೦ ರಷ್ಟು ಮೊತ್ತವನ್ನು ಬಳಸಲಾಗಿದೆ. ಓಡಿಶಾ ಸರಕಾರಕ್ಕೆ ಜನವರಿ ೨೦೨೧ ರ ಕೊನೆಯಲ್ಲಿ `ನಿರ್ಭಯಾ ನಿಧಿ’ಯಿಂದ ೨೫೩೨.೪೯ ಲಕ್ಷ ರೂಪಾಯಿಗಳು ದೊರಕಿದವು; ಆದರೆ ಅವುಗಳ ಪೈಕಿ ೧೮೭೨.೪೨ ಲಕ್ಷ ರೂಪಾಯಿಗಳು ಖರ್ಚಾಗಲಿಲ್ಲ.

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ (೨೯.೮.೨೦೨೨)