ದೀರ್ಘಶ್ವಾಸ ತೆಗೆದುಕೊಳ್ಳುವುದು ಮನುಷ್ಯರಿಗಾಗಿ ಒಂದು ಪರಿಪೂರ್ಣ ಔಷಧ

ಉಸಿರಾಟವು ಜೀವನದ ಆಧಾರವಾಗಿದೆ. ಉಸಿರಾಟವು ಮನಸ್ಸು ಮತ್ತು ಜೀವನ ಇವುಗಳ ನಡುವಿನ ರಹಸ್ಯಮಯ ಕೊಂಡಿಯಾಗಿದೆ. ಎಲ್ಲ ಪ್ರಾಣಿಗಳು ಉಸಿರಾಟದ ಆಧಾರದಲ್ಲಿಯೇ ಜೀವನದಲ್ಲಿ ಮೊದಲ ಹೆಜ್ಜೆಯನ್ನಿಡುತ್ತವೆ, ಆದ್ದರಿಂದ ಶಾರೀರಿಕ ಸಂರಚನೆಯಲ್ಲಿ ಉಸಿರಾಟದ ವೇಗದ ಸ್ಥಾನವು ಮಹತ್ವದ್ದಾಗಿದೆ; ಏಕೆಂದರೆ ಉಸಿರಾಟದ ವೇಗ ಹೆಚ್ಚಾದರೆ ಶರೀರದ ತಾಪಮಾನವೂ ಹೆಚ್ಚಾಗುತ್ತದೆ. ಅದಕ್ಕೆ ನಾವು ಅಲ್ಪಾಯುವಿನ ಸಂಕೇತಾಂಕ ಎನ್ನಬಹುದು.

ಪ್ರಾಣಾಯಾಮ

ಉಸಿರಾಟದ ಸರಾಸರಿ ವೇಗ ಉತ್ತಮವಾಗಿರುವುದು ದೀರ್ಘಾಯುಷ್ಯಕ್ಕೆ ಲಾಭದಾಯಕ !

ಉಸಿರಾಟದ ವೇಗ ಎಷ್ಟು ತೀವ್ರವಾಗಿರುತ್ತದೆಯೋ, ಅಷ್ಟು ಮರಣದ ಸಮಯ ಬೇಗ ಬರುತ್ತದೆ, ಇದು ವೈಜ್ಞಾನಿಕ ವಾಸ್ತವವಾಗಿದೆ. ಅತಿವೇಗವಾಗಿ ಉಸಿರಾಡುವ ಜಾನುವಾರುಗಳು ಇದಕ್ಕೆ ಪುರಾವೆಗಳಾಗಿವೆ. ಪಾರಿವಾಳ ೧ ನಿಮಿಷದಲ್ಲಿ ೩೭ ಬಾರಿ ಉಸಿರಾಡುತ್ತದೆ ಮತ್ತು ಅದು ೯ ವರ್ಷ ಬದುಕುತ್ತದೆ. ಮೊಲ ಕೂಡ ಒಂದು ನಿಮಿಷಕ್ಕೆ ೩೯ ಬಾರಿ ಉಸಿರಾಡುತ್ತದೆ ಮತ್ತು ಆದರ ಆಯುಷ್ಯವೂ ಹೆಚ್ಚು ಕಡಿಮೆ ೯ ವರ್ಷಗಳೇ ಆಗಿದೆ. ನಾಯಿ ೧ ನಿಮಿಷಕ್ಕೆ ೨೯ ಬಾರಿ ಉಸಿರಾಡುತ್ತದೆ ಮತ್ತು ಅದು ೧೩ ವರ್ಷ ಬದುಕುತ್ತದೆ. ಆನೆ ೧ ನಿಮಿಷಕ್ಕೆ ೧೧ ಬಾರಿ ಉಸಿರಾಡುತ್ತದೆ ಮತ್ತು ಅದು ೧೦೦ ವರ್ಷ ಬದುಕುತ್ತದೆ. ಆಮೆ ೧ ನಿಮಿಷಕ್ಕೆ ಕೇವಲ ೪ ಬಾರಿ ಉಸಿರಾಡಿ ೧೫೦ ವರ್ಷಗಳವರೆಗೆ ಬದುಕುತ್ತದೆ. ಮನುಷ್ಯನಿಗಾಗಿ ಸಾಮಾನ್ಯತಃ `ಜೀವೇತ್ ಶರದ ಶತಮ್’ ನ ವಚನ ಪ್ರಚಲಿತವಾಗಿದೆ. ಇದರ ಅರ್ಥ ಯಾರ ಉಸಿರಾಟದ ವೇಗ ಕಡಿಮೆ ಇರುತ್ತದೆಯೋ, ಅವನು ೧೦೦ ವರ್ಷ ಬದುಕಬಹುದು; ಅಂದರೆ ಒಂದು ನಿಮಿಷಕ್ಕೆ ೧೧ ರಿಂದ ೧೨ ಬಾರಿಯ ಉಸಿರಾಟ !

ಮನುಷ್ಯನ ಆಯುಷ್ಯ ಕುಸಿಯುತ್ತಿರುವುದರ ಕಾರಣ ಮತ್ತು ದೀರ್ಘಾಯುಷ್ಯದ ರಹಸ್ಯ !

ಇಂದು ಮನುಷ್ಯನ ಉಸಿರಾಟದ ವೇಗ ಹೆಚ್ಚಾಗಿರುವುದರಿಂದ, ಅಷ್ಟೇ ಪ್ರಮಾಣದಲ್ಲಿ ಅವನ ಆಯುಷ್ಯವೂ ಕಡಿಮೆಯಾಗಿದೆ. ಮನುಷ್ಯನ ಸರಾಸರಿ ಆಯುಷ್ಯವು ೬೦ ರಿಂದ ೬೫ ವರ್ಷ ಉಳಿದಿದೆ. ಅನೇಕ ಆಧುನಿಕ ವಿಜ್ಞಾನಿಗಳ ಅಭಿಪ್ರಾಯದಂತೆ, ಒಂದು ವೇಳೆ ಮನುಷ್ಯನ ಶರೀರದ ತಾಪಮಾನವನ್ನು ಅರ್ಧದಷ್ಟು ಕಡಿಮೆ ಮಾಡಲು ಸಾಧ್ಯವಾದಲ್ಲಿ, ಅವನು ೧ ಸಾವಿರ ವರ್ಷಗಳ ಕಾಲ ಸಹಜವಾಗಿ ಬದುಕಬಲ್ಲನು. ಇದಕ್ಕಾಗಿ ಅವನಿಗೆ ತನ್ನ ಉಸಿರಾಟದ ವೇಗಕ್ಕನುಗುಣವಾಗಿ ಅದನ್ನು ನಿಯಂತ್ರಿಸಬೇಕಾಗುವುದು. ಇದರ ಅರ್ಥ, `ಮನುಷ್ಯನ ಉಸಿರಾಟದ ವೇಗವನ್ನು ಪ್ರತಿ ನಿಮಿಷ ೨ ರಿಂದ ೩ ರ ವರೆಗೆ ನಿಯಂತ್ರಿಸಬೇಕಾಗುವುದು.’ ಇದು ತುಂಬಾ ಕಠಿಣವಾಗಿದೆ ನಿಜ; ಆದರೆ ಅಸಾಧ್ಯವಂತೂ ಅಲ್ಲ. ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಸಾವಿರಾರು ವರ್ಷಗಳ ವರೆಗೆ ಜೀವಿಸುತ್ತಿದ್ದರು. ಈ ಸತ್ಯದಿಂದ, ದೀರ್ಘಾಯುಷ್ಯದ ರಹಸ್ಯವು ಮನುಷ್ಯನ ಉಸಿರಾಟದ ವೇಗದಲ್ಲಿ ಅಡಗಿದೆ ಎಂಬುದು ಸಿದ್ಧವಾಗುತ್ತದೆ. ಆದ್ದರಿಂದ ನಾವು ನಮ್ಮ ಉಸಿರಾಟದ ವೇಗವನ್ನು ಕಡಿಮೆ ಮಾಡಲು ಮೊದಲು ಶ್ವಾಸ-ಉಚ್ಛಾ÷್ವಸದ ಪದ್ಧತಿಯನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ.

ಆರೋಗ್ಯವು ಉಸಿರಾಟದ ವೇಗವನ್ನು ಅವಲಂಬಿಸಿದೆ

ನಮ್ಮ ಗುರಿಯನ್ನು ಸಾಧಿಸಲು `ಪ್ರಾಣಾಯಾಮ’ ಒಂದು ನಿಶ್ಚಿತ ಮತ್ತು ದುಷ್ಪರಿಣಾಮರಹಿತ ಮಾರ್ಗವಾಗಿದೆ ! ಉಸಿರಾಟದ ದಾರದ ಮೇಲೆ ಮಾನವನ ಜೀವನ ಮತ್ತು ಆರೋಗ್ಯ ಅವಲಂಬಿಸಿದೆ. ಉಸಿರಾಟ ಎಷ್ಟು ಸ್ಥಿರ ಮತ್ತು ಬಲಿಷ್ಠ ಆಗಿರುವುದೋ, ಜೀವನವೂ ಅಷ್ಟೇ ಆರೋಗ್ಯಕರ ಮತ್ತು ನಿರೋಗಿ ಆಗಿರುವುದು. ಉಸಿರಾಟದಲ್ಲಿ ಎಷ್ಟು ವೇಗಶೀಲತೆ ಮತ್ತು ತೀವ್ರತೆ ಬರುವುದೋ, ಆರೋಗ್ಯವು ಅಷ್ಟೇ ಕುಸಿಯುತ್ತಾ ಹೋಗುವುದು, ಎಂಬುದು ಶಾಸ್ತ್ರೀಯ ಸತ್ಯವಾಗಿದೆ. ಏಕೆಂದರೆ, ಶರೀರದ ತಾಪಮಾನದೊಂದಿಗೆ ಉಸಿರಾಟಕ್ಕೆ ನೇರ ಸಂಬಂಧವಿದೆ. ಉಸಿರಾಟದ ವೇಗದಲ್ಲಿ ಎಷ್ಟು ತೀವ್ರತೆಯಿದೆಯೋ ಅಷ್ಟೇ ಪ್ರಮಾಣದಲ್ಲಿ ಶರೀರದ ತಾಪಮಾನ ಹೆಚ್ಚಾಗುತ್ತದೆ. ಕ್ರೋಧ, ಆವೇಶ ಮತ್ತು ಉತ್ತೇಜನದಿಂದಲೂ ಉಸಿರಾಟದ ವೇಗ ಹೆಚ್ಚಾಗುತ್ತದೆ. (ಆಧಾರ : ಸಾಮಾಜಿಕ ಜಾಲತಾಣ)

ದೀರ್ಘಾಯುಷ್ಯಕ್ಕಾಗಿ ಪ್ರತಿದಿನ ಪ್ರಾಣಾಯಾಮ ಮಾಡುವುದು ಆವಶ್ಯಕ !

ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳುವುದರ ಅರ್ಥವನ್ನು ಸ್ಪಷ್ಟಪಡಿಸುವಾಗ ಪ್ರಾಣ ವಿಜ್ಞಾನ ವಿಶೇಷತಜ್ಞ ಡಾ. ಮೆಕಡಾವಲ ಹೇಳುತ್ತಾರೆ, “ಪ್ರಾಣಾಯಾಮದಿಂದ ಕೇವಲ ಪುಪ್ಪುಸಗಳಿಗೆ ಮಾತ್ರವಲ್ಲ, ಹೊಟ್ಟೆಯಲ್ಲಿನ ಸಂಪೂರ್ಣ ಪಚನವ್ಯವಸ್ಥೆಗೆ ಪರಿಪೂರ್ಣ ಪೋಷಣೆ ಸಿಗುತ್ತದೆ. ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳುವುದು ರಕ್ತಶುದ್ಧಿಗಾಗಿ ಅಮೂಲ್ಯ ಔಷಧವನ್ನು ಸೇವಿಸಿದಂತಿದೆ. ಮನುಷ್ಯನ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು, ಅವನಲ್ಲಿ ಸ್ಫೂರ್ತಿ ಮತ್ತು ಉಲ್ಲಾಸವನ್ನು ಮೂಡಿಸಲು ದೀರ್ಘ ಶ್ವಾಸದ ಅಭ್ಯಾಸವನ್ನು ಮಾಡುವುದು ಆವಶ್ಯಕವಾಗಿದೆ.’’