ಬಾಂಗ್ಲಾದೇಶದಲ್ಲಿನ ಶ್ರೀ ಕಾಳಿ ಮಾತೆಯ ಮಂದಿರದಲ್ಲಿ ದುಷ್ಕರ್ಮಿಗಳಿಂದ ದುಷ್ಕೃತ್ಯ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಝೆನಾಯಿದಹ ಜಿಲ್ಲೆಯ ದೌತಿಯಾ ಗ್ರಾಮದಲ್ಲಿನ ಶ್ರೀ ಕಾಳಿ ಮಾತೆಯ ದೇವಸ್ಥಾನದಲ್ಲಿ ದುಷ್ಕರ್ಮಿಗಳಿಂದ ದುಷ್ಕೃತ್ಯದ ಘಟನೆ ನಡೆದಿದೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ. ದೇವಸ್ಥಾನದ ಪದಾಧಿಕಾರಿಗಳಿಗೆ ಮೂರ್ತಿಯ ಕೆಲವು ತುಂಡುಗಳು ಕಂಡವು ಮತ್ತು ದೇವಸ್ಥಾನದಿಂದ ಕೆಲವೇ ಅಂತರದಲ್ಲಿ ಮೂರ್ತಿಯ ಕೆಲವು ಭಾಗಗಳು ಪತ್ತೆಯಾದವು, ಎಂದು ದೇವಸ್ಥಾನದ ಸಮಿತಿಯ ಅಧ್ಯಕ್ಷ ಸುಕುಮಾರ ಕುಂದಾ ಇವರು ಮಾಹಿತಿ ನೀಡಿದರು. ಸುಕುಮಾರ ಕುಂದಾ ಇವರು, ಶ್ರೀ ಕಾಳಿ ಮಾತೆ ದೇವಸ್ಥಾನವು ಹಿಂದೂಗಳ ಶ್ರದ್ಧಾಸ್ಥಾನವಾಗಿದೆ ಮತ್ತು ಈ ಸ್ಥಳದಲ್ಲಿ ನಿತ್ಯ ನಿಯಮಿತ ಪೂಜೆ ನಡೆಯುತ್ತದೆ ಎಂದು ಹೇಳಿದರು.

ಇದೇ ಮಾರ್ಚ್ ೧೭ ರಂದು ಬಾಂಗ್ಲಾದೇಶದಲ್ಲಿನ ಇಸ್ಕಾನ್ ದೇವಸ್ಥಾನದಲ್ಲಿ ಕೂಡ ದುಷ್ಕೃತ್ಯದ ಘಟನೆ ನಡೆದಿತ್ತು.

ಈ ಮೇಲಿನ ಚಿತ್ರ ಪ್ರಕಟಿಸುವುದರ ಹಿಂದೆ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ

 

ಸಂಪಾದಕೀಯ ನಿಲುವು

ಮುಸಲ್ಮಾನ ಬಹುಸಂಖ್ಯಾತ ಬಾಂಗ್ಲಾದೇಶ ಇರಲಿ ಅಥವಾ ಹಿಂದು ಬಹುಸಂಖ್ಯಾತ ಇರುವ ಭಾರತ ಇರಲಿ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ !

ಬಾಂಗ್ಲಾದೇಶದಲ್ಲಿ ಕೇವಲ ಹಿಂದೂಗಳು ಮಾತ್ರವಲ್ಲದೇ ಅವರ ಧಾರ್ಮಿಕ ಸ್ಥಳಗಳು ಕೂಡ ಅಸುರಕ್ಷಿತವಾಗಿವೆ !