ಸಮಾನಾಂತರ ಅರ್ಥವ್ಯವಸ್ಥೆ ನಿರ್ಮಾಣ ಮಾಡುವ ಹಲಾಲ್ ಪರಿಷತ್ತ ಸರಕಾರ ನಡೆಯಲು ಬಿಡಬಾರದು ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಮುಂಬಯಿನಲ್ಲಿ ನಡೆಯುವ ಹಲಾಲ್ ಪರಿಷತ್ತಿಗೆ ಹಿಂದುತ್ವನಿಷ್ಠ ಸಂಘಟನೆಗಳಿಂದ ವಿರೋಧ !

ಶ್ರೀ. ರಮೇಶ ಶಿಂದೆ

ಮುಂಬಯಿ, ಅಕ್ಟೋಬರ್ ೩(ವಾರ್ತೆ) – ಇಸ್ಲಾಂನ ಹೆಸರಿನಲ್ಲಿ ದೇಶದಲ್ಲಿ ಸಮಾನಾಂತರ ಅರ್ಥವ್ಯವಸ್ಥೆ ನಡೆಸಲಾಗುತ್ತಿದೆ. ಭಾರತದಂತಹ ಜಾತ್ಯತೀತ ದೇಶದಲ್ಲಿ ಸಮಾನಾಂತರ ಅರ್ಥವ್ಯವಸ್ಥೆ ನಿರ್ಮಾಣ ಮಾಡುವ ಹಲಾಲ್ ಪರಿಷತ್ ಸರಕಾರ ನಡೆಯಲು ಬಿಡಬಾರದು, ಎಂದು ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಕರೆ ನೀಡಿದರು. ಈ ಪರಿಷತ್ತಿಗೆ ವಿರೋಧ ವ್ಯಕ್ತಪಡಿಸುವುದಕ್ಕಾಗಿ ಅಕ್ಟೋಬರ್ ೯ ರಂದು ‘ಸ್ವಾತಂತ್ರ್ಯ ವೀರ ಸಾವರ್ಕರ ರಾಷ್ಟ್ರೀಯ ಸ್ಮಾರಕ’ ದಲ್ಲಿ ಸಂಜೆ ೫.೩೦ ಗಂಟೆಗೆ ‘ಹಲಾಲ್ ಕಡ್ಡಾಯದ ವಿರುದ್ಧ ಪರಿಷತ್ತಿನ ಆಯೋಜನೆ ಮಾಡಲಾಗಿದೆ. ಸಮಸ್ತ ಹಿಂದೂ ಬಾಂಧವರು ಈ ಪರಿಷತ್ತಿಗೆ ಉಪಸ್ಥಿತರಾಗಬೇಕೆಂದು ಶ್ರೀ. ರಮೇಶ ಶಿಂದೆ ಇವರು ಸಾಮಾಜಿಕ ಜಾಲತಾಣದ ಮೂಲಕ ಕರೆ ನೀಡಿದ್ದಾರೆ.

ಶ್ರೀ ರಮೇಶ ಶಿಂದೆ ಮಾತು ಮುಂದುವರೆಸಿ, “ಮುಂಬಯಿನಲ್ಲಿ ನವೆಂಬರ್ ೧೨ ಮತ್ತು ೧೩ ರಂದು ನಡೆಯುವ ‘ಹಲಾಲ್ ಪರೀಷತ್ತಿಗೆ’ ಹಿಂದೂ ಜನ ಜಾಗೃತಿ ಸಮಿತಿಯ ವಿರೋಧವಿದೆ. ಈ ಮೊದಲು ಕೇವಲ ಮಾಂಸ ಹಲಾಲ ಮಾಡುವ ಪದ್ಧತಿ ಇತ್ತು. ಪ್ರಸ್ತುತ ಕಟ್ಟಡ, ಜಾಲತಾಣ, ಸಿಹಿ ತಿಂಡಿಗಳು ಮುಂತಾದಗಳಿಗೆ ಕೂಡ ಹಲಾಲ ಪ್ರಮಾಣ ಪತ್ರ ನೀಡಲಾಗುತ್ತಿದೆ. ಹಲಾಲ ಪ್ರಮಾಣ ಪತ್ರದ ಹೆಸರಿನಲ್ಲಿ ಹಿಂದೂ ವ್ಯಾಪಾರಿಗಳಿಂದ ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಲಾಗುತ್ತಿದೆ. ಭಾರತ ಸರಕಾರದಿಂದ ಪ್ರಮಾಣ ಪತ್ರ ನೀಡಲಾಗುತ್ತಿರುವಾಗ ಖಾಸಗಿ ಸಂಸ್ಥೆಯಿಂದ ಹಲಾಲ ಪ್ರಮಾಣ ಪತ್ರದಂತಹ ಸಮಾನಾಂತರ ಪ್ರಮಾಣ ಪತ್ರದ ಅವಶ್ಯಕತೆ ಏನು ?

ಸಮಾನಾಂತರ ಅರ್ಥವ್ಯವಸ್ಥೆ ನಿರ್ಮಿಸಿ ಸರಕಾರಕ್ಕೆ ಆವಾಹನೆ ನೀಡುವ ಹಲಾಲ್ ಪರಿಷತ್ ಈ ದೇಶದಲ್ಲಿ ನಡೆಯಬಾರದು. ಮುಂಬಯಿನಲ್ಲಿ ನಡೆಯುವ ಹಲಾಲ್ ಪರಿಷತ್ತಿಗೆ ಸಮಸ್ತ ಹಿಂದುತ್ವನಿಷ್ಠ ಸಂಘಟನೆಗಳಿಂದ ತೀವ್ರವಾಗಿ ವಿರೋಧ ವ್ಯಕ್ತಪಡಿಸಲಾಗಿದೆ. ಈ ಪರಿಷತ್ತಿನ ವಿರುದ್ಧ ಸಮಸ್ತ ಹಿಂದುತ್ವನಿಷ್ಠ ಸಂಘಟನೆಗಳಿಂದ ಸ್ವಾತಂತ್ರ್ಯ ವೀರ ಸಾವರ್ಕರ ಸ್ಮಾರಕದ ಎದುರು ಹಲಾಲ ಕಡ್ಡಾಯ ವಿರೋಧಿ ಪರಿಷತ ಆಯೋಜಿಸಲಾಗಿ ಹಲಾಲ್ ಪ್ರಮಾಣ ಪತ್ರದ ವಿರುದ್ಧ ಮುಂದಿನ ದಿಕ್ಕು ನಿರ್ಧರಿಸಲಾಗುವುದು.” ಎಂದು ಹೇಳಿದರು.