ನೈಸರ್ಗಿಕ ಸಂಕಟಗಳ ಆಪತ್ಕಾಲ ಮತ್ತು ಭಕ್ತಿಯ ಅನಿವಾರ್ಯತೆ !

ಕಳೆದ ಕೆಲವು ವರ್ಷಗಳಲ್ಲಿ ಇಡೀ ಜಗತ್ತು ಮತ್ತು ಭಾರತದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ನೈಸರ್ಗಿಕ ಆಪತ್ತುಗಳು ಬಂದವು. ‘ವಾತಾವರಣದಲ್ಲಿ ಹೆಚ್ಚುತ್ತಿರುವ ರಜ-ತಮದ ಪ್ರಮಾಣ’ವೇ ರಾಷ್ಟ್ರದ ಮೇಲೆ ಬರುವ ನೈಸರ್ಗಿಕ ಆಪತ್ತುಗಳ ಹಿಂದಿನ ಆಧ್ಯಾತ್ಮಿಕ ಕಾರಣವಾಗಿದೆ. ಸದ್ಯ ಕಲಿಯುಗಾಂತರ್ಗತ ೬ ನೇಯ ಕಲಿಯುಗದ ಕೊನೆಯಾಗುವ ಮೊದಲಿನ ಸಂಧಿಕಾಲ ನಡೆಯುತ್ತಿದೆ. ಈಗ ಈ ಯುಗಪರಿವರ್ತನೆಯ ಕಾಲಾವಧಿಯಲ್ಲಿ ಆಪತ್ಕಾಲ ಪ್ರಾರಂಭವಾಗಿದೆ. ಜಗತ್ತಿನಲ್ಲಿ ಮತ್ತು ಭಾರತದಲ್ಲಿ ಘಟಿಸುತ್ತಿರುವ ವಿವಿಧ ಘಟನೆಗಳಿಂದ ಈ ಆಪತ್ಕಾಲವನ್ನು ಎಲ್ಲರೂ ಅನುಭವಿಸುತ್ತಿದ್ದಾರೆ. ಕೊರೊನಾದಂತಹ ಮಹಾಮಾರಿಯೂ ಸಹ ಅದರ ಒಂದು ಉದಾಹರಣೆಯೇ ಆಗಿದೆ. ‘ಮುಂಬರುವ ಕಾಲದಲ್ಲಿ ನೈಸರ್ಗಿಕ ಆಪತ್ತುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಜೀವ ಹಾನಿಯಾಗಲಿದೆ’, ಎಂದು ಅನೇಕ ದಾರ್ಶನಿಕ ಸಂತರು ಮತ್ತು ಪ್ರಸಿದ್ಧ ಭವಿಷ್ಯಕಾರರು ಹೇಳಿದ್ದಾರೆ.

ಯುರೋಪನಲ್ಲಿ ಉಷ್ಣತೆಯ ಹಾಹಾಕಾರ !

ಇತ್ತೀಚೆಗೆ ಬ್ರಿಟನ್ ಸಹಿತ ಇಡೀ ಯುರೋಪನಲ್ಲಿ ತೀವ್ರ ಉಷ್ಣತೆ ಮತ್ತು ಕಡಿಮೆ ಮಳೆಯಿಂದಾಗಿ ಹಾಹಾಕಾರವೆದ್ದಿತ್ತು. ಯೂರೋಪಿನ ಶೇ.೬೦ ರಷ್ಟು ಭೂಭಾಗದ ಮೇಲೆ ಬರಗಾಲದಂತಹ ಪರಿಸ್ಥಿತಿ ಬಂದಿತ್ತು. ಈ ಕ್ಷೇತ್ರಫಲವು ಭಾರತದ ಕ್ಷೇತ್ರಫಲದಷ್ಟಿದೆ. ಯುರೋಪ್‌ನಲ್ಲಿನ ೧ ಕೋಟಿ ೭೦ ಲಕ್ಷ ಜನರು ಉಷ್ಣತೆಯಿಂದ ತೊಂದರೆಗೀಡಾಗಿದ್ದರು. ‘ಮುಂಬರುವ ಕೆಲವು ದಿನಗಳಲ್ಲಿ ಇನ್ನೂ ೧ ಕೋಟಿ ೫೦ ಲಕ್ಷ ಜನರಿಗೆ ಇಂತಹ ಸಂಕಟವನ್ನು ಎದುರಿಸಬೇಕಾಗಬಹುದು’, ಎಂದು ಹೇಳಲಾಗುತ್ತಿದೆ. ಸ್ಪೇನ್, ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳಲ್ಲಿ ಜುಲೈ ತಿಂಗಳಲ್ಲಿ ೪೦ ಸೆಲ್ಸಿಯಸ್‌ಗಿಂತಲೂ ಹೆಚ್ಚು ತಾಪಮಾನ ದಾಖಲಾಗಿತ್ತು. ತಂಪು ಪ್ರದೇಶದಲ್ಲಿನ ಜನರಿಗೆ ಅದನ್ನು ಸಹಿಸುವುದು ಕಠಿಣವಾಗಿತ್ತು. ಇಂಗ್ಲೆಂಡಿನ ಕೆಲವು ಸ್ಥಳಗಳಲ್ಲಿ ಕುಡಿಯುವ ನೀರನ್ನು ಖರೀದಿಸುವ ವಿಷಯದಲ್ಲಿ ಜನರಲ್ಲಿ ಹೊಡೆದಾಟಗಳಾದವು !

ವಿನಾಶಕಾರಿ ಕಾಡ್ಗಿಚ್ಚು !

ವಾತಾವರಣದ ಬದಲಾವಣೆಯಿಂದ ಸಂಪೂರ್ಣ ಜಗತ್ತಿನಲ್ಲಿ ಕಾಡುಗಳಿಗೆ ಬೆಂಕಿ ತಗಲುವ (ಕಾಡ್ಗಿಚ್ಚುಗಳ) ಘಟನೆಗಳು ಹೆಚ್ಚಾಗುತ್ತಿವೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಆಸ್ಟ್ರೇಲಿಯಾದ ಕಾಡುಗಳಲ್ಲಿನ ಕಾಡ್ಗಿಚ್ಚು ಮತ್ತು ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದಾಗಿ ನೂರಾರು ದಶಲಕ್ಷ ಹೆಕ್ಟರ್ ಭೂಮಿ ಬೆಂಕಿಯ ಜ್ವಾಲೆಯಲ್ಲಿ ಸುಟ್ಟು ಭಸ್ಮವಾಗಿದೆ. ಇಲ್ಲಿ ವರ್ಷ ೨೦೧೯-೨೦ ರಲ್ಲಿ ತಾಗಿದ ಕಾಡ್ಗಿಚ್ಚಿನಲ್ಲಿ ೩೦೦ ಕೋಟಿ ಪಶು-ಪಕ್ಷಿಗಳು ಸುಟ್ಟು ಭಸ್ಮವಾದವು. ಫ್ರಾನ್ಸ್, ಸ್ಪೇನ್, ಪೊರ್ಚುಗಲ್, ಗ್ರೀಸ್, ಕ್ರೋಯೇಶಿಯಾ, ಈ ದೇಶಗಳಲ್ಲಿನ ಸಹಸ್ರಾರು ಜನರನ್ನು ಕಾಡ್ಗಿಚ್ಚಿನಿಂದಾಗಿ ಸ್ಥಳಾಂತರಿಸಬೇಕಾಯಿತು. ಈ ಕಾಡ್ಗಿಚ್ಚಿನಲ್ಲಿ ನೂರಾರು ಜನರು ಮೃತಪಟ್ಟಿದ್ದಾರೆ ಎಂಬ ಭೀತಿ ವ್ಯಕ್ತಪಡಿಸಲಾಗುತ್ತದೆ.

ಕಳೆದ ವರ್ಷ ಕೆನಡಾದಲ್ಲಿ ಹತ್ತಿದ ಕಾಡ್ಗಿಚ್ಚುಗಳು ಎಷ್ಟು ಸ್ಫೋಟಕವಾಗಿದ್ದವು ಎಂದರೆ , ಆ ಹೊಗೆಯಿಂದ ಮೋಡ ಮತ್ತು ಬಿರುಗಾಳಿ ನಿರ್ಮಾಣವಾಯಿತು. ‘ಪಾಯರೋ-ಕ್ಯುಮುಲೋನಿಂಬಸ್’ ಪ್ರಕಾರದ ಈ ಮೋಡಗಳಲ್ಲಿ ಮಿಂಚುಗಳಿಂದಾಗಿ ಅರಣ್ಯದಲ್ಲಿನ ಬೆಂಕಿ ಇನ್ನೂ ಹೆಚ್ಚಾಯಿತು. ಪಶ್ಚಿಮ ಅಮೇರಿಕಾದಲ್ಲಿ ೧೦ ಸಹಸ್ರ ಎಕರೆಗಳ ಮೇಲೆ  ಹರಡಿದ ಕಾಡ್ಗಿಚ್ಚಿನ ಪ್ರಮಾಣವು ವರ್ಷ ೧೯೭೦ ರ ತುಲನೆಯಲ್ಲಿ ೭ ಪಟ್ಟಿನಷ್ಟು ಹೆಚ್ಚಿತ್ತು. ಅಮೇರಿಕಾ, ಸ್ಪೇನ್, ಪೊರ್ಚುಗಲ್, ಜರ್ಮನ, ಫ್ರಾನ್ಸ್, ಚೀನಾ ಇವುಗಳ ಕಾಡುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ತಗಲಿ ಸಾವಿರಾರು ಹೆಕ್ಟರ ಭೂಮಿ ಮತ್ತು ಅರಣ್ಯ ಸಂಪತ್ತು ಸುಟ್ಟು ಭಸ್ಮವಾಗಿದೆ, ಹಾಗೆಯೇ ಬಹಳಷ್ಟು ಪ್ರಮಾಣದಲ್ಲಿ ಪಶು ಪಕ್ಷಿ ಮತ್ತು ಕಾಡು ಪ್ರಾಣಿಗಳು ಕಾಡಿನಲ್ಲಿಯೇ ಸಿಲುಕಿಕೊಂಡಿವೆ. ಭಾರತದಲ್ಲಿಯೂ ಕಳೆದ ಎರಡು ದಶಕಗಳಿಂದ ಕಾಡಿನಲ್ಲಿನ ಬೆಂಕಿಗಳ ಘಟನೆ ಮತ್ತು ಅವುಗಳ ತೀವ್ರತೆಯಲ್ಲಿ ಹೆಚ್ಚಳವಾಗಿದೆ.

ಇದ್ದದ್ದು ಇಲ್ಲದ್ದು ಎಲ್ಲವನ್ನೂ ಕೊಚ್ಚಿಕೊಂಡು ಹೋಗುವ ನೆರೆ !

ಜಾಗತಿಕ ತಾಪಮಾನದ ಹೆಚ್ಚಳದಿಂದ ವಾತಾವರಣದಲ್ಲಿ ತೀವ್ರ ಬದಲಾವಣೆಗಳಾಗಿವೆ. ಭಾರತದ ಜೊತೆಗೆ ಏಶಿಯಾ ಖಂಡದಲ್ಲಿ ಈ ವರ್ಷ ಪ್ರಚಂಡ ಪ್ರಮಾಣದಲ್ಲಿ ಮಳೆಯಾಗುತ್ತಿದೆ ಮತ್ತು ನೆರೆಯೂ ಬರುತ್ತಿವೆ. ಏಪ್ರಿಲ್ ತಿಂಗಳಿನಲ್ಲಿ ಸೌದಿ ಅರೇಬಿಯಾದಂತಹ ಮರಳು ಪ್ರದೇಶದಲ್ಲಿನ ಜನರು ನೆರೆಯ ನೀರಿನಿಂದ ಹೊರಬರಲು ದಾರಿಯನ್ನು ಹುಡುಕುತ್ತಿರುವ ಛಾಯಾಚಿತ್ರಗಳು ಪ್ರಸಿದ್ಧವಾಗಿದ್ದವು. ಭಾರತದಲ್ಲಿ ಎಲ್ಲ ನದಿಗಳ ನೀರಿನ ಪ್ರವಾಹವನ್ನು ಆಣೆಕಟ್ಟುಗಳನ್ನು ಕಟ್ಟಿ ತಡೆದಿದ್ದರಿಂದ ನೆರೆಯ ಸ್ಥಿತಿ ನಿರ್ಮಾಣವಾಗಿದೆ. ಆಪತ್ಕಾಲದಲ್ಲಿನ ವಿಪತ್ತು ನಿರ್ವಹಣೆ ಸೇವೆಯು ಕೇವಲ ಆಪತ್ತು ಬಂದ ಮೇಲೆ ಪ್ರಾರಂಭವಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಸ್ವಲ್ಪ ಮಳೆಯಾದರೂ ದೊಡ್ಡ ನೆರೆಗಳು ಬರುತ್ತಿವೆ. ಇತ್ತೀಚೆಗೆ ಒಂದೇ ದಿನದಲ್ಲಿ ೨೦೦ ಮಿ.ಮೀ. ಮಳೆಯಾಗುವ ಘಟನೆಗಳು ಹೆಚ್ಚಾಗಿವೆ. ವರ್ಷ ೨೦೨೧ ರಲ್ಲಿ ಮಹಾಬಳೇಶ್ವರದಲ್ಲಿ ೫೫೦ ಮಿ.ಮೀ. ಮಳೆಯಾಯಿತು. ನೆರೆಯಿಂದ ಮನುಷ್ಯನ ಜೊತೆಗೆ ವನ್ಯಜೀವಗಳು, ಮತ್ತು ಸಾಕು ಪ್ರಾಣಿಗಳ ಜೀವಹಾನಿಯೂ ಆಗುತ್ತದೆ. ಮನೆ, ಸರಕಾರಿ ಕಾರ್ಯಲಯ, ಧಾನ್ಯಗಳ ಉಗ್ರಾಣ, ಬ್ಯಾಂಕು ಮತ್ತು ಪೇಟೆಯಲ್ಲಿ ನೀರು ನುಗ್ಗುವುದರಿಂದ ವಸ್ತುಗಳ, ಅನ್ನಧಾನ್ಯಗಳ ಮತ್ತು ಹಣದ ಹಾನಿ ದೊಡ್ಡ ಪ್ರಮಾಣದಲ್ಲಿ ಆಗುತ್ತದೆ

ಇದ್ದದ್ದು-ಇಲ್ಲದ್ದು ಎಲ್ಲವನ್ನೂ ನಾಶಮಾಡುವ ಚಂಡಮಾರುತಗಳು !

ಪಾಶ್ಚಾತ್ಯ ತಜ್ಞರು ಜಾಗತಿಕ ತಾಪಮಾನದಲ್ಲಿನ ಹೆಚ್ಚಳ ಮತ್ತು ಪ್ರದೂಷಣದಿಂದಾಗಿ ಅರಬೀ ಸಮುದ್ರದಲ್ಲಿನ ಚಂಡಮಾರುತಗಳ ಸಂಖ್ಯೆಯು ಈ ದಶಕದಲ್ಲಿ ಹೆಚ್ಚಾಗುವವು ಎಂದು ಹಿಂದಿನ ದಶಕದಲ್ಲಿಯೇ ಹೇಳಿದ್ದರು. ಅರಬೀ ಸಮುದ್ರದ ಪೃಷ್ಠಭಾಗದ ತಾಪಮಾನವು ೦.೩೬ ಸೆಲ್ಸಿಯಸ್ ಹೆಚ್ಚಾಗಿದೆ. ಚಂಡಮಾರುತಕ್ಕೆ ಸಮುದ್ರದಿಂದ ಸಿಗುವ ಉರ್ಜೆಯು ೧೦೦ ಹೈಡ್ರೋಜನ್ ಬಾಂಬಗಳಿಗಿಂತಲೂ ಹೆಚ್ಚಿರುತ್ತದೆ. ಚಿಕ್ಕ ಮನೆಗಳು, ಮರಗಳು, ವಿದ್ಯುತ್ ಮತ್ತು ದೂರವಾಣಿ ಕಂಬ ಮುಂತಾದುವುಗಳು ನಾಶವಾಗುತ್ತವೆ. ಕಟ್ಟಡಗಳ (ಮನೆ, ಅಂಗಡಿ ಇತ್ಯಾದಿ) ಚಪ್ಪರಗಳು ಹಾರಿಹೊಗುತ್ತವೆ ಮತ್ತು ಗೋಡೆಗಳು ಕುಸಿಯುತ್ತವೆ, ಸಮುದ್ರದ ನೀರು ಹೊಲಕ್ಕೆ ಹೋದರೆ, ಭೂಮಿ ಬಂಜರಾಗುತ್ತದೆ. ಚಂಡಮಾರುತದ ಸಮಯದಲ್ಲಿ ಬಹಳಷ್ಟು ಮಳೆಯಾಗಿ ಪ್ರಳಯ ಬರುತ್ತದೆ. ಸಾವಿರಾರು ಜನರು ಮನೆಗಳನ್ನು ಕಳೆದುಕೊಳ್ಳುತ್ತಾರೆ. ವಿದ್ಯುತ್, ನೀರು ಹಾಗೂ ಸಂಪರ್ಕ ವ್ಯವಸ್ಥೆ ಸ್ಥಗಿತವಾಗುತ್ತವೆ. ನಾಗರಿಕರ ಆರೋಗ್ಯ ಮತ್ತು ಪುನರ್ವಸತಿಯ ಪ್ರಶ್ನೆ ಉದ್ಭವಿಸುತ್ತದೆ. ವರ್ಷ ೨೦೦೪ರಲ್ಲಿ ಬಂದ ತ್ಸುನಾಮಿ ಚಂಡಮಾರುತದಿಂದಲೂ ಅಪಾರ ಹಾನಿಯಾಗಿತ್ತು. ವರ್ಷ ೨೦೦೮ರಲ್ಲಿ ಬಂದ ನಿರ್ಗಿಸ್ ಚಂಡ ಮಾರುತದಿಂದ ಮ್ಯಾನ್ಮಾರದಲ್ಲಿ ೧ ಲಕ್ಷಕ್ಕಿಂತಲೂ ಹೆಚ್ಚು ಜನರು ಮೃತಪಟ್ಟರು

ಎಲ್ಲವನ್ನು ನಾಶ ಮಾಡುವ ಭೂಕಂಪ !

ವರ್ಷ ೨೦೧೫ ರಲ್ಲಿ ನೇಪಾಳದಲ್ಲಿ ಬಂದ ವಿನಾಶಕಾರಿ ಭೂಕಂಪದಲ್ಲಿ ೯ ಸಾವಿರಕ್ಕಿಂತಲೂ ಹೆಚ್ಚು ನಾಗರಿಕರು ಮೃತಪಟ್ಟರು, ೨೩ ಸಾವಿರಕ್ಕಿಂತಲೂ ಹೆಚ್ಚು ಜನರು ಗಾಯಗೊಂಡರು. ವರ್ಷ ೧೯೯೩ ರಲ್ಲಿನ ಮಹಾರಾಷ್ಟ್ರದಲ್ಲಿನ ಕಿಲ್ಲಾರಿಯ ಭೂಕಂಪದಲ್ಲಿ ಅಪಾರ ಜೀವಹಾನಿಯಾಗಿತ್ತು. ಭಾರತ ಮತ್ತು ಯುರೇಶಿಯಾದ ಭಾಗದಲ್ಲಾಗುವ ಭೂಗರ್ಭದಲ್ಲಿನ ಚಲನವಲನಗಳಿಂದ ಈ ಕ್ಷೇತ್ರದಲ್ಲಿನ ಭೂಕಂಪದ ಕ್ಷೇತ್ರ ಹೆಚ್ಚಾಗಿದೆ. ಪಶ್ಚಿಮ ಕ್ಷೇತ್ರದಲ್ಲಿ ೩೦ ಕ್ಕಿಂತಲೂ ಹೆಚ್ಚು ಜಲಾಶಯಗಳಿರುವುದರಿಂದ ಅದರಿಂದಲೂ ಭೂಕಂಪದ ಸಾಧ್ಯತೆ ಇದೆ.

ನೈಸರ್ಗಿಕ ಆಪತ್ತುಗಳಿಂದ ನಮ್ಮ ರಕ್ಷಣೆಯಾಗಲು ಈಶ್ವರನ ಭಕ್ತರಾಗಿರಿ !

ದ್ವಾಪರಯುಗದಲ್ಲಿ ಶ್ರೀಕೃಷ್ಣನ ಗೋಕುಲದಲ್ಲಿ ಇಂದ್ರದೇವನು ಅಗಾಧ ಪ್ರಮಾಣದಲ್ಲಿ ಮಳೆಯನ್ನು ಸುರಿಯಲು ಪ್ರಾರಂಭಿಸಿದನು, ಆಗ ಶ್ರೀಕೃಷ್ಣನು ಎಲ್ಲ ಗೋಪ-ಗೋಪಿಯರನ್ನು ಗೋವರ್ಧನ ಪರ್ವತದ ಕೆಳಗೆ ಸುರಕ್ಷಿತವಾಗಿಟ್ಟನು. ಅವನು ತನ್ನ ಕಿರುಬೆರಳಿನ ಮೇಲೆ ಗೋವರ್ಧನ ಪರ್ವತವನ್ನು ಎತ್ತಿಹಿಡಿದನು ಮತ್ತು ಎಲ್ಲ ಗೋಪ-ಗೋಪಿಯರು ಕೆಳಗಿನಿಂದ ಅದಕ್ಕೆ ತಮ್ಮ ತಮ್ಮ ಕೋಲನ್ನು ತಾಗಿಸಿದರು. ಗೋಪ-ಗೋಪಿಯರು ಕೃಷ್ಣನ ಭಕ್ತರಾಗಿ ದ್ದರಿಂದ ಕೃಷ್ಣನು ಅವರ ರಕ್ಷಣೆಯನ್ನು ಮಾಡಿದನು. ಈಗಿನ ಆಪತ್ಕಾಲದಲ್ಲಿಯೂ ಗೋಪ-ಗೋಪಿಯರಂತೆ ಭಕ್ತಿಯನ್ನು ಮಾಡಿದರೆ, ಈಶ್ವರನು ಭಕ್ತರ ರಕ್ಷಣೆಯನ್ನು ಮಾಡುವನು !

ನೈಸರ್ಗಿಕ ಸಂಕಟಗಳ ಕಾಲದಲ್ಲಿ ಪಂಚಮಹಾಭೂತಗಳಿಗೆ ಪ್ರಾರ್ಥನೆಯನ್ನು ಮಾಡುವುದು ಆವಶ್ಯಕ

ಪಂಚಮಹಾಭೂತಗಳೂ ಈಶ್ವರನ ರೂಪಗಳೇ ಆಗಿರುವುದರಿಂದ ಅವುಗಳಿಗೆ ಪ್ರಾರ್ಥನೆಯನ್ನು ಮಾಡಿದರೆ ಖಂಡಿತವಾಗಿಯೂ ಮಾನವನ ರಕ್ಷಣೆ ಆಗುತ್ತದೆ. ಆದುದರಿಂದ ಎಲ್ಲರೂ ತಮ್ಮ ಭಕ್ತಿಯನ್ನು ಹೆಚ್ಚಿಸಿ ಈಶ್ವರನಿಗೆ ಮೊರೆ ಹೋಗುವುದು ಆವಶ್ಯಕವಾಗಿದೆ. ಶ್ರೀಕೃಷ್ಣನ ‘ನ ಮೇ ಭಕ್ತಃ ಪ್ರಣಶ್ಯತಿ’ ಎಂಬ ವಚನವಿದೆ, ಅಂದರೆ ‘ನನ್ನ ಭಕ್ತರ ನಾಶ ಎಂದಿಗೂ  ಆಗಲಾರದು.’ ಅದಕ್ಕನುಸಾರ ಆಪತ್ಕಾಲದಲ್ಲಿನ ನೈಸರ್ಗಿಕ ಆಪತ್ತುಗಳ ಹೆಚ್ಚುತ್ತಿರುವ ಪ್ರಭಾವವನ್ನು ನೋಡಿದರೆ ಪ್ರತಿಯೊಬ್ಬರೂ ಈಶ್ವರನ ಭಕ್ತರಾಗುವುದು ಆವಶ್ಯಕವಾಗಿದೆ !