ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಬಗ್ಗೆ ಗಮನಕ್ಕೆ ಬಂದ ಮಹತ್ವ !

ಶ್ರೀ. ಚೇತನ ಹರಿಹರ

೧. ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆ ಆರಂಭಿಸುವ ಮೊದಲು ನಾನು ಮತ್ತು ನನ್ನ ಸೇವೆ ಇಷ್ಟೇ ಸಂಕುಚಿತ ವಿಚಾರ ಇರುವುದು

‘ನಾನು ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆ ಆರಂಭಿಸುವ ಮೊದಲು ನನ್ನಲ್ಲಿ ತುಂಬ ಸಂಕುಚಿತ ಸ್ವಭಾವವಿತ್ತು. ನಾನು ‘ನಾನು ಮತ್ತು ನನ್ನ ಸೇವೆ’ ಇಷ್ಟರಲ್ಲೇ ಸೀಮಿತವಾಗಿದ್ದೆ. ಯಾರೇ ಸಾಧಕರು ನನ್ನಲ್ಲಿ ಸಹಾಯ ಕೇಳಲು ಬಂದಾಗ ನಾನು ‘ನನಗೆ ಆಗುವುದಿಲ್ಲ, ನನಗೆ ಅಡಚಣೆ ಇದೆ’, ಎಂದು ಹೇಳುತ್ತಿದ್ದೆ; ಆದರೆ ಪ್ರತ್ಯಕ್ಷದಲ್ಲಿ ನನಗೆ ಆ ರೀತಿಯ ಅಡಚಣೆ ಇರುತ್ತಿರಲಿಲ್ಲ.

೨. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಮಾಡುತ್ತಿರುವಾಗ ಇತರರಿಗೆ ಸಹಾಯ ಮಾಡುವುದರ ಮಹತ್ವ ತಿಳಿಯುವುದು

ನಾನು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಗೆ ಹೋದನಂತರ ನನಗೆ ಇತರರಿಗೆ ಸಹಾಯ ಮಾಡುವುದರ ಮಹತ್ವ ತಿಳಿಯಿತು. ‘ನಾನು ಮತ್ತು ನನ್ನ ಸೇವೆ ಇದರಿಂದ ಎಷ್ಟು ಸಾಧನೆ ಆಗುತ್ತದೆಯೋ, ಅದಕ್ಕಿಂತ ದುಪ್ಪಟ್ಟು ಸಾಧನೆ ಇತರರಿಗೆ ಸಹಾಯ ಮಾಡುವುದರಿಂದ ಆಗುತ್ತದೆ’, ಎಂಬುದು ನನ್ನ ಗಮನಕ್ಕೆ ಬಂತು. ಈಗ ಸಾಧಕರು ನನಗೆ ಸಹಾಯದ ಬಗ್ಗೆ ಕೇಳಿದಾಗ ‘ಅದೂ ನನ್ನ ಸೇವೆ ಆಗಿದೆ’, ಎಂಬ ವಿಚಾರ ಬರುತ್ತದೆ ಮತ್ತು ನಾನು ಆ ಸೇವೆಯನ್ನು ಉತ್ಸಾಹದಿಂದ ಮಾಡುತ್ತೇನೆ.

೩. ‘ಸಾಧಕರಿಗೆ ಸಹಾಯ ಮಾಡುವಾಗ ಆನಂದದಿಂದ ಮಾಡುವುದು ಮತ್ತು ದೇವರ ಕೃಪೆಯಿಂದ ನನ್ನ ಸೇವೆಯೂ ಆನಂದದಿಂದ ಪೂರ್ಣವಾಗುವುದು

ಕೆಲವು ಸಮಯ ನಾನು ನನ್ನ ಸೇವೆ ಮಾಡುವಾಗ ಸಾಧಕರು ಸಹಾಯ ಕೇಳಿದಾಗ ನಾನು ಕೂಡಲೇ ಅವರಿಗೆ ಸಹಾಯ ಮಾಡುತ್ತೇನೆ. ಆ ಸಮಯದಲ್ಲಿ ‘ನಾನು ಅವರಿಗೆ ಸಹಾಯ ಮಾಡಿದ ನಂತರವೂ ನನ್ನ ಸೇವೆ ಸಮಯಕ್ಕೆ ಸರಿಯಾಗಿ ಅಥವಾ ಅದಕ್ಕಿಂತ ಮೊದಲೇ ಪೂರ್ಣವಾಗುತ್ತದೆ’, ಎಂಬುದು ನನ್ನ ಗಮನಕ್ಕೆ ಬಂದಿತು. ಕೆಲವು ಸಮಯದಲ್ಲಿ ನಾನು ಸಾಧಕರಿಗೆ ಸೇವೆ ಮಾಡುವಾಗ ನನ್ನ ಸೇವೆ ಬಾಕಿ ಉಳಿಯುತ್ತದೆ. ಆಗ ನಾನು ಸ್ವಲ್ಪ ಜಾಗರಣೆ ಮಾಡಿ ಆ ಸೇವೆಯನ್ನು ಪೂರ್ಣಗೊಳಿಸುತ್ತೇನೆ. ಜಾಗರಣೆ ಮಾಡಿ ಸೇವೆ ಮಾಡುವಾಗ ನಿದ್ರೆ ಅಥವಾ ನಿರುತ್ಸಾಹ ಇರುವುದಿಲ್ಲ, ಬದಲಾಗಿ ಆನಂದ ಸಿಗುತ್ತದೆ. ಇದೆಲ್ಲವೂ ಗುರುಗಳ ಕೃಪೆಯಿಂದಲೇ ಸಾಧ್ಯವಾಯಿತು.

೪. ನಿರಂತರ ಅನುಸಂಧಾನದಲ್ಲಿದ್ದರೆ ನಡೆದ ಪ್ರಸಂಗ ಸಹಜವಾಗಿ ಸ್ವೀಕಾರ ಆಗುವುದು

ನನಗೆ ಕೆಲವು ಸಲ ಕೆಲವು ಪ್ರಸಂಗ ಸ್ವೀಕಾರ ಆಗುವುದಿಲ್ಲ. ಈ ಬಗ್ಗೆ ನಾನು ಚಿಂತನೆ ಮಾಡಿದಾಗ ‘ಯಾವ ಪ್ರಸಂಗದಲ್ಲಿ ನಾನು ದೇವರೊಂದಿಗೆ ಅನುಸಂಧಾನದಲ್ಲಿ ಇರುತ್ತೇನೆಯೋ, ಆ ಪ್ರಸಂಗ ನನ್ನಿಂದ ಸಹಜವಾಗಿ ಸ್ವೀಕಾರ ಆಗುತ್ತದೆ ಮತ್ತು ಯಾವ ಪ್ರಸಂಗದಲ್ಲಿ ನಾನು ದೇವರ ಅನುಸಂಧಾನದಲ್ಲಿ ಇರುವುದಿಲ್ಲವೋ, ಆ ಪ್ರಸಂಗ ನನಗೆ ಸ್ವೀಕಾರ ಆಗುವುದಿಲ್ಲ’, ಎಂದರಿವಾಯಿತು. ‘ಇದರಿಂದ ದೇವರ ಅನುಸಂಧಾನದಲ್ಲಿರುವುದು ಎಷ್ಟು ಮಹತ್ವದ್ದಾಗಿದೆ ?’, ಎಂಬುದು ನನ್ನ ಗಮನಕ್ಕೆ ಬಂತು.’

– ಶ್ರೀ. ಚೇತನ ಹರಿಹರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೬.೧೦.೨೦೨೧)