ಶ್ರೀಕೃಷ್ಣನಂತೆಯೇ ಸತತ ಸಾಕ್ಷಿಭಾವದಲ್ಲಿರುವ ಪರಾತ್ಪರ ಗುರು ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಕ್ಷಿಭಾವದಲ್ಲಿರುವುದರಿಂದ ಯಾರಾದರೂ ಏನಾದರೂ ಹೇಳಿದರೆ ಮಾತ್ರ ಕೃತಿಯನ್ನು ಮಾಡಲು ಸಾಧ್ಯ ಎಂದು ಹೇಳುವುದು

‘ಕೆಲವು ವರ್ಷಗಳ ಹಿಂದೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಒಮ್ಮೆ ನನಗೆ, ”ಸಂಸ್ಥೆಯಲ್ಲಿ ಏನಾದರೂ ತಪ್ಪುಗಳು ಕಂಡುಬಂದರೆ ಸಾಧಕರು ನನಗೆ ಹೇಳಬೇಕು’’, ಎಂದು ಹೇಳಿದ್ದರು. ನಾನು ಅವರಿಗೆ, ”ಆದರೆ ನಿಮಗೆಲ್ಲವೂ ತಿಳಿಯುತ್ತದೆಯಲ್ಲ !’’ ಎಂದು ನಾನು ಹೇಳಿದೆನು. ಆಗ ಸಚ್ಚಿದಾನಂದ ಪರಬ್ರಹ್ಮ ಗುರುದೇವರು, ”ಇಲ್ಲ: ಏಕೆಂದರೆ ನಾನು ಸಾಕ್ಷಿಭಾವದಲ್ಲಿರುತ್ತೇನೆ. ಯಾರಾದರೂ ಏನಾದರೂ ಹೇಳಿದರೆ ಮಾತ್ರ ನಾನು ಕೃತಿಯನ್ನು ಮಾಡಬಲ್ಲೆನು’’, ಎಂದು ಹೇಳಿದರು.

ಡಾ. ರೂಪಾಲಿ ಭಾಟಕರ

೨. ದ್ರೌಪದಿ ವಸ್ತ್ರಹರಣದ ಸಮಯದಲ್ಲಿ ದ್ರೌಪದಿಯು ಮೊರೆಯಿಟ್ಟಾಗಲೇ ಶ್ರೀಕೃಷ್ಣನು ಸಹಾಯಕ್ಕಾಗಿ ಬರುವುದು

ಬಹಳ ವರ್ಷಗಳ ಹಿಂದೆ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಯಾರೋ ಸಾಧಕರ ತಪ್ಪುಗಳ ಬಗ್ಗೆ ಹೇಳಿದಾಗ ಅವರು ಒಂದು ಅಭಿಯಾನವನ್ನು ಏರ್ಪಡಿಸಿದ್ದರು. ೧೮.೮.೨೦೨೧ ಈ ದಿನದಂದು ನಾನು ಆ ಬಗ್ಗೆ ಓರ್ವ ಸಾಧಕಿಗೆ ಹೇಳಿದೆನು. ೧೯.೮.೨೦೨೧ ಈ ದಿನದಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಭಾವಸತ್ಸಂಗದಲ್ಲಿ ದ್ರೌಪದಿ ವಸ್ತ್ರಹರಣದ ಕಥೆಯನ್ನು ಹೇಳಿದರು. ಅದರಲ್ಲಿ ದ್ರೌಪದಿಯು ಶ್ರೀಕೃಷ್ಣನಿಗೆ, ‘ಹೇ ಸಖನೇ, ನೀನು ನನ್ನನ್ನು ರಕ್ಷಿಸಲು ಮೊದಲೇ ಏಕೆ ಬರಲಿಲ್ಲ ?’ ಎಂದು ಕೇಳುತ್ತಾಳೆ. ಅದಕ್ಕೆ ಶ್ರೀಕೃಷ್ಣನು, ”ಎಲ್ಲಿಯವರೆಗೆ ನೀನು ನನ್ನನ್ನು ಕರೆಯುವುದಿಲ್ಲವೋ, ಅಲ್ಲಿಯವರೆಗೆ ನಾನು ನಿನಗೆ ಸಹಾಯ ಮಾಡಲು ಸಾಧ್ಯವಿಲ್ಲ. ನೀನು ಕರೆದ ತಕ್ಷಣ ನಾನು ಕೂಡಲೇ ಬಂದೆನು’, ಎಂದು ಹೇಳಿದನು. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನೀಡಿದ ಉತ್ತರವನ್ನೇ ಶ್ರೀಕೃಷ್ಣನು ದ್ರೌಪದಿಗೆ ನೀಡುತ್ತಾನೆ.

೩. ಸಾಕ್ಷಿಭಾವದಲ್ಲಿರುವ ಭಗವಂತನು ಅವನನ್ನು ಕರೆದಾಗಲೇ ಸಹಾಯ ಮಾಡುವುದು

ಭಗವಂತನು ಸಾಕ್ಷಿಭಾವದಲ್ಲಿರುತ್ತಾನೆ. ಎಲ್ಲಿಯವರೆಗೆ ನಾವು ಅವನನ್ನು ಕರೆದು ಜಾಗೃತ ಮಾಡುವುದಿಲ್ಲವೋ, ಅಲ್ಲಿಯವರೆಗೆ ಅವನು ನಮಗೆ ಸಹಾಯ ಮಾಡುವುದಿಲ್ಲ. ಇದರಿಂದ ‘ಮಹರ್ಷಿ’ಗಳು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ‘ಶ್ರೀವಿಷ್ಣುವಿನ ಅವತಾರವೆಂದೇಕೆ ಹೇಳುತ್ತಾರೆ ?’ ಎಂದು ಸ್ಪಷ್ಟವಾಯಿತು.’

– ಡಾ. ರೂಪಾಲಿ ಭಾಟಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೦.೮.೨೦೨೧)