ಭಾರತದ್ವೇಷಿಗಳ ಸರ್ವಾಧಿಕಾರ

‘ವಿಕಸನಶೀಲದಿಂದ ವಿಕಸಿತ ದೇಶ’ ಈ ನಿಟ್ಟಿನಲ್ಲಿ ಭಾರತದ ಮಾರ್ಗಕ್ರಮಣ ಇಂದು ವೇಗದಿಂದ ಆಗುತ್ತಿದೆ. ಇಡೀ ಜಗತ್ತಿಗೆ ಭಾರತ ದೇಶವು ‘ವಿಶ್ವದೀಪ’ ಅಥವಾ ಆಧಾರ ಸ್ತಂಭವೆಂದು ಸಿದ್ಧವಾಗುತ್ತಿರುವುದರಿಂದ ಎಲ್ಲ ದೇಶಗಳು ಭಾರತದತ್ತ ಆಶಾಭಾವನೆಯಿಂದ ನೋಡುತ್ತಿವೆ. ಅಂದರೆ ಯಾರೊಬ್ಬರ ಪ್ರಗತಿ ಅಥವಾ ಅಭ್ಯುದಯ ಇನ್ನೊಬ್ಬರಿಗೆ ಚುಚ್ಚುತ್ತದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಭಾರತವು ಪ್ರಗತಿಪಥದಲ್ಲಿದ್ದರೂ ಅನೇಕ ದೇಶಗಳು ಇಂದು ಭಾರತವನ್ನು ನಾಶಮಾಡಲು ಹೊಂಚು ಹಾಕುತ್ತಿವೆ. ‘ಇಸ್ಲಾಮಿಕ್ ಸ್ಟೇಟ್’ ಈ ಭಯೋತ್ಪಾದನಾ ಸಂಘಟನೆಯ ವಕ್ತಾರ ಅಬೂ ಉಮರ-ಉಲ್-ಮುಜಾಹಿರ್ ಈತ ಮುಸಲ್ಮಾನರನ್ನು ಪ್ರಚೋದಿಸುತ್ತಾ, ”ಇಸ್ಲಾಮ್‌ಅನ್ನು ರಕ್ಷಿಸಲು ಭಾರತದ ಮೇಲೆ ದಾಳಿ ಮಾಡಿ. ಪಾಕಿಸ್ತಾನ, ಬಾಂಗ್ಲಾದೇಶ, ಫಿಲಿಪಿನ್ಸ್, ಮಲೇಶಿಯಾ, ಇಂಡೊನೇಶಿಯಾ ಮತ್ತು ಸಿಂಗಾಪುರದ ಮುಸಲ್ಮಾನರು ಒಟ್ಟಾಗಿ ಭಾರತದ ಮೇಲೆ ದಾಳಿ ಮಾಡಬೇಕು”, ಎಂದು ಹೇಳಿದ. ಇದು ಕಡಿಮೆ ಎನ್ನುವಂತೆ, ಶ್ರೀರಾಮಜನ್ಮಭೂಮಿ ಖಟ್ಲೆಯ ಓರ್ವ ಕಕ್ಷಿದಾರರಾದ ಹಾಜಿ ಮಹಬೂಬ್ ಇವರೂ ಬೆದರಿಕೆಯ ವಾದದಲ್ಲಿ ಧುಮುಕುತ್ತಾ, ”ಅಯೋಧ್ಯೆಯಲ್ಲಿನ ಶ್ರೀರಾಮಜನ್ಮಭೂಮಿಯ ತೀರ್ಪಿನಂತೆ ಜ್ಞಾನವಾಪಿಯ ವಿಷಯದಲ್ಲಿ ಏನಾದರೂ ಘಟಿಸಿದರೆ ನೆಟ್ಟಗಿರದು. ರಾ.ಸ್ವ. ಸಂಘದ ಮೂಲಕ ಸರಕಾರವು ಏನಾದರೂ ತಪ್ಪು ಕ್ರಮಕೈಗೊಂಡರೆ ರಕ್ತಪಾತದ ಹೊರತಾಗಿ ಏನೂ ನಡೆಯಲಾರದು”, ಎಂದು ಹೇಳಿದರು. ರಕ್ತಪಾತವೇನು ಅಥವಾ ಆಕ್ರಮಣವೇನು, ಇವರೆಲ್ಲ ಭಾರತವನ್ನು ಕೊನೆಗೊಳಿಸಲು ನಿರ್ಧರಿಸಿದಂತಿದೆ. ಈ ಪರಿಸ್ಥಿತಿಯು ಜಾತ್ಯತೀತ ಭಾರತಕ್ಕೆ ಭೀಕರ ಮತ್ತು ಬಿಕ್ಕಟ್ಟಿನದು ಎಂದು ಸಿದ್ಧವಾಗುತ್ತದೆ. ಬೆದರಿಕೆ, ಪ್ರಚೋದನೆಗಳ ಚಕ್ರ ಪ್ರತಿದಿನ ಮುಂದುವರಿದಿದೆ; ಆದರೆ ಈ ಬಗ್ಗೆ ಭಾರತದ ಒಂದೂ ಮುಸಲ್ಮಾನ ಸಂಘಟನೆ, ಮುಖಂಡ ಅಥವಾ ಸಾಮಾಜಿಕ ಕಾರ್ಯಕರ್ತರು ಮಾತನಾಡುವುದಿಲ್ಲ ಅಥವಾ ವಿರೋಧಿಸುವುದಿಲ್ಲ. ಇಲ್ಲಿಯೇ ವಿಷಯ ಅಡಗಿಹೋಗುತ್ತದೆ. ‘ಇಸ್ಲಾಮಿಕ ಸ್ಟೇಟ್’ ಅಥವಾ ಮುಸಲ್ಮಾನ ಪಕ್ಷಗಳಿಗೆ ಇಂತಹವರ ಬೆಂಬಲವಿದೆ’, ಎಂದು ಭಾರತದ ಹಿಂದೂಗಳಿಗೆ ಅನಿಸಿದರೆ ತಪ್ಪೇನು ? ಹಿಂದೂ ಮತ್ತು ಭಾರತದ ವಿರುದ್ಧ ಆಗಾಗ ಮುಸಲ್ಮಾನರನ್ನು ಪ್ರಚೋದಿಸಲಾಗುತ್ತದೆ. ಸೇಡಿನ ಭಾಷೆಯನ್ನು ಮಾತನಾಡಲಾಗುತ್ತದೆ. ‘ರಕ್ತದ ಕೋಡಿ ಹರಿಯುವುದು’ ಅಥವಾ ‘ಶಸ್ತ್ರಗಳನ್ನು ಬಳಸುತ್ತೇವೆ’, ಎಂಬ ಬೆದರಿಕೆಯನ್ನು ಬಹಿರಂಗವಾಗಿ ನೀಡಲಾಗುತ್ತದೆ. ಹಿಂದೂಬಹುಸಂಖ್ಯಾತ ಭಾರತವು ಇದನ್ನು ಇನ್ನೂ ಎಷ್ಟು ಸಮಯ ಸಹಿಸಬೇಕು ? ಎಷ್ಟು ದಿನ ಸಹಿಷ್ಣು ಇರಬೇಕು ? ಭಾರತೀಯರ ಸಹನಶೀಲತೆಯ ದುರ್ಲಾಭ ಪಡೆಯಲಾಗುತ್ತಿದೆ. ಭಯೋತ್ಪಾದನೆಯನ್ನು ಮಾಡಲಾಗುತ್ತಿದೆ. ಸಾಮಾನ್ಯವಾಗಿ ಯಾವಾಗಲೋ ಒಬ್ಬ ಪೀಡಿತ ಹಿಂದೂ ತನಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ, ಅವನಿಂದಲೇ ತಪ್ಪಾಗಿದೆಯೆಂದು ವಿವೇಚನೆಯಿಲ್ಲದೇ ಹೇಳಿ ಸಂಪೂರ್ಣ ಕಾರ್ಯಾಚರಣೆಯನ್ನೇ ಅವನ ಮೇಲೆ ತಿರುಗಿಸಲಾಗುತ್ತದೆ; ಆದರೆ ಇಂದು ಈ ಮುಸಲ್ಮಾನರು ಅಥವಾ ಭಯೋತ್ಪಾದನಾ ಸಂಘಟನೆಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾನೂನುದ್ರೋಹಿ ಹೇಳಿಕೆಗಳನ್ನು, ಕರೆಗಳನ್ನು ನೀಡುತ್ತಿರುವಾಗ ಅವರ ಮೇಲೆ ಯಾವುದೇ ಕಾರ್ಯಾಚರಣೆ ಅಥವಾ ಅವರನ್ನು ಯಾರೂ ವಿರೋಧಿಸುವುದಿಲ್ಲ ! ಭಾರತದ್ವೇಷದ ಬೇರು ಈ ಭೂಮಿಯಲ್ಲಿ ಆಳವಾಗಿ ಬೇರೂರಿರುತ್ತಿರುವುದು ಇದರಿಂದ ಗಮನಕ್ಕೆ ಬರುತ್ತದೆ.

ಸರಕಾರದ ಕರ್ತವ್ಯ !

ಜ್ಞಾನವಾಪಿಯ ಪ್ರಕರಣದ ಬಗ್ಗೆ ರಕ್ತಪಾತದ ಭಾಷೆಯನ್ನು ಬಳಸುವ ಕಕ್ಷಿದಾರರು ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳದಿರುವುದು ಒಂದು ರೀತಿಯಲ್ಲಿ ಸಂವಿಧಾನವನ್ನೇ ವಿರೋಧಿಸಿದಂತಿದೆ. ದೇಶದ ಕಾನೂನು-ಸುವ್ಯವಸ್ಥೆಯನ್ನು ಉಲ್ಲಂಘಿಸುವವರಿಗೆ ಭಾರತದಲ್ಲಿರಲು ಹಕ್ಕಿದೆಯೇನು ? ನ್ಯಾಯಾಲಯದ ತೀರ್ಪನ್ನು ಅಯೋಗ್ಯವೆಂದು ಪರಿಗಣಿಸುವವರು ಇರ‍್ಯಾರು ? ‘ಶ್ರೀರಾಮಜನ್ಮಭೂಮಿಯ ತೀರ್ಪನ್ನು ನಾವು ಸ್ವೀಕರಿಸಿದ್ದೇವೆ’, ಎಂದು ತೋರ್ಪಡಿಸುವುದು ಮತ್ತು ವಿರೋಧಕ್ಕೆ ವಿರೋಧಿಸುತ್ತಲೇ ಇರುತ್ತಾರೆ. ಇದರಲ್ಲಿ ಯಾವುದೇ ತಿರುಳಿಲ್ಲ. ಉತ್ತರಪ್ರದೇಶದ ‘ಆಲ್ ಇಂಡಿಯಾ ಇಮಾಮ್ ಅಸೋಸಿಯೆಶನ್’ನ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ಇವರು ಮುಸಲ್ಮಾನರಿಗೆ, ”ಮದರಸಾಗಳ ಸಮೀಕ್ಷೆಯ ನೋಟಿಸ್ ತೆಗೆದುಕೊಂಡು ಬರುವವರನ್ನು ಚಪ್ಪಲಿಗಳಿಂದ ಸ್ವಾಗತಿಸಬೇಕು” ಎಂದು ಕರೆ ನೀಡಿದರು. ಹಿಂದೂಗಳೇ, ಪ್ರತಿಯೊಬ್ಬ ಮುಸಲ್ಮಾನನು ತನ್ನ ಧಾರ್ಮಿಕ ಸ್ಥಳಗಳ ಬಗ್ಗೆ ಎಷ್ಟು ಸಂವೇದನಾಶೀಲನಾಗಿರುತ್ತಾನೆ, ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳಿ ! ಮಠ-ದೇವಸ್ಥಾನಗಳ ವಿಷಯದಲ್ಲಿ ಈ ರೀತಿ ಸಂಭವಿಸಿದರೆ ಹಿಂದೂಗಳಿಗೆ ಯಾವುದೇ ಕೊಡುಕೊಳ್ಳುವಿಕೆ ಇರುವುದಿಲ್ಲ. ಅಂದರೆ ಮೌಲಾನಾರ ಹೇಳಿಕೆಗಳ ಕಡೆಗೆ ನಿರ್ಲಕ್ಷ ಮಾಡುವಂತಿಲ್ಲ. ಅವರು ನೀಡಿದ ಪ್ರಚೋದನೆಯನ್ನು ನೋಡಿದರೆ ಇಸ್ಲಾಮ್‌ನ ಬೋಧನೆಗಳು ಎಷ್ಟು ಆಳಕ್ಕೆ ಬೇರೂರಿವೆ ಎಂಬುದು ಸ್ಪಷ್ಟವಾಗಿ ಅರಿವಾಗುತ್ತದೆ. ಸ್ವಾತಂತ್ರ್ಯದ ೭೫ ವರ್ಷಗಳನ್ನು ಆಚರಿಸುವ ಭಾರತದಲ್ಲಿ ಈ ರೀತಿಯ ಬೆದರಿಕೆಗಳು, ಕರೆಗಳು, ಪ್ರಚೋದನೆಗಳನ್ನು ನಾಗರಿಕರು ಎದುರಿಸಬೇಕಾಗಿದ್ದರೆ, ಅದನ್ನು ಸ್ವಾತಂತ್ರ್ಯವೆಂದು ಕರೆಯಬೇಕೇ ? ಎಂಬ ಪ್ರಶ್ನೆ ಮೂಡದೇ ಇರಲಾರದು. ಹಿಂದುತ್ವದ ನೆಲೆಯಲ್ಲಿ ಅಧಿಕಾರಕ್ಕೆ ಬಂದ ಸರಕಾರವು ಇದರ ವಿರುದ್ಧ ಯಾವಾಗ ಕ್ರಮಕೈಗೊಳ್ಳಲಿದೆ ? ಭಾರತದ ಮೇಲೆ ಆಕ್ರಮಣ ಮಾಡುವ ಬೆದರಿಕೆಯನ್ನು ನೀಡುವವರ ಬಾಯಿಯನ್ನು ನಾವು ಯಾವಾಗ ಮುಚ್ಚುವೆವು ? ಅವರಿಗೆ ‘ಏಟಿಗೆ ಎದುರೇಟಿ’ನ ಪ್ರತ್ಯುತ್ತರವನ್ನು ಯಾವಾಗ ನೀಡುವಿರಿ ? ದಾಳಿ ಮಾಡಿದ ನಂತರ ಅಥವಾ ಅನ್ಯಾಯವಾದ ನಂತರ ಕಾರ್ಯಚರಣೆಯ ನಿಲುವನ್ನು ತಳೆಯುವ ಸರಕಾರ ಭಾರತೀಯರಿಗೆ ಅಪೇಕ್ಷಿತವಿಲ್ಲ.

ವಿಶ್ವವಿಜಯಿ ಭಾರತವನ್ನು ಬುಡಮೇಲು ಮಾಡಲು ದೊಡ್ಡ ಸಂಚನ್ನು ರಚಿಸಲಾಗುತ್ತಿದೆ. ಇದು ಭಾರತಕ್ಕೆ ಅಪಾಯದ ಗಂಟೆಯಾಗಿದೆ. ರಾತ್ರಿ ಮತ್ತು ಹಗಲು ಇವೆರಡೂ ವೈರಿಗಳದ್ದಾಗಿದೆ. ಆದುದರಿಂದ ಕೇವಲ ಭಾರತದಲ್ಲಿಯೇ ಅಲ್ಲ, ಆದರೆ ಭಾರತದ ನಾಗರಿಕರು, ಹಿಂದೂಗಳು, ದೇವಸ್ಥಾನಗಳು ಇವೆಲ್ಲರ ಕಡೆಗೆ ವಕ್ರದೃಷ್ಟಿಯಿಂದ ನೋಡುವ ಧೈರ್ಯ ಯಾರಿಗೂ ಆಗಬಾರದು, ಅಷ್ಟು ದೃಢತೆಯನ್ನು ಸರಕಾರವು ತೋರಿಸಬೇಕು. ಭಯೋತ್ಪಾದನೆಯ ವಿರುದ್ಧ ಮೇಲಿಂದ ಮೇಲೆ ಕಾರ್ಯಾಚರಣೆಯಾಗಬೇಕು. ಅವರ ಮೇಲೆ ಕಠಿಣ ನಿರ್ಬಂಧ ಜಾರಿಗೆ ತರಬೇಕು. ಹೀಗೆ ಮಾಡಿದಾಗಲೇ ಭಾರತವು ನಿಜವಾದ ಅರ್ಥದಲ್ಲಿ ಸುರಕ್ಷಿತವಾಗುವುದು. ಕಳೆದ ೩ ದಶಕಗಳಿಂದ ದೇಶದಲ್ಲಿ ಹೆಚ್ಚುತ್ತಿರುವ ಜಿಹಾದಿ ಭಯೋತ್ಪಾದನೆಯ ಕಡೆಗೆ ಸರಕಾರವು ದುರ್ಲಕ್ಷಿಸಬಾರದು.

ನಾಗರಿಕರೇ, ರಾಷ್ಟ್ರಪ್ರೇಮವನ್ನು ನಿರ್ಮಿಸಿ !

ಸದ್ಯದ ಸ್ಥಿತಿಯನ್ನು ನೋಡಿದರೆ ಭಾರತದಲ್ಲಿನ ಹಿಂದೂಗಳು ಈಗಲೇ ಬುದ್ಧಿವಂತರಾಗಬೇಕು. ಸರಕಾರದ ಮೇಲೆ ಅವಲಂಬಿಸಿರದೇ ದೇಶಕರ್ತವ್ಯವನ್ನು ನಿರ್ವಹಿಸಬೇಕು. ಮುಸಲ್ಮಾನರಿಂದ ನೀಡಲಾಗುವ ಪ್ರಚೋದನೆಗಳಿಗೆ ಬೆದರದೇ ತಮ್ಮಲ್ಲಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸಿ ಅವರನ್ನು ಹೋರಾಟದ ಮನೋಭಾವದಿಂದ ಎದುರಿಸಬೇಕು. ಜಾತ್ಯತೀತ ಪ್ರಜಾಪ್ರಭುತ್ವದಲ್ಲಿ ಮತಾಂಧರ ಸರ್ವಾಧಿಕಾರ ನಡೆಸಲು ಬಿಡಬಾರದು. ಈಗ ಕಾಲವೂ ಬಂದಿದೆ ಮತ್ತು ಸಮಯವೂ ಬಂದಿದೆ. ಆದುದರಿಂದ ಹತಾಶರಾಗಿ ಕುಳಿತರೆ ನಡೆಯುವುದಿಲ್ಲ. ಪ್ರತಿಯೊಬ್ಬರು ತಮ್ಮ ರಕ್ಷಣೆಯ ಭಾರವನ್ನು ತಾವೇ ಹೊರಬೇಕು. ಇದರಿಂದ ಸ್ವಸಂರಕ್ಷಣೆ ತರಬೇತಿಯ ಅಗತ್ಯವು ಇನ್ನೂ ಸ್ಪಷ್ಟವಾಗುತ್ತದೆ. ಎಲ್ಲ ನಾಗರಿಕರು ಕಾನೂನು ಮಾರ್ಗದಿಂದ ಹೋರಾಡಲು ನಿಶ್ಚಯಿಸಿದಾಗಲೇ ಈ ಭೀಕರ ಸಂಕಟವನ್ನು ಎದುರಿಸಬಹುದಾಗಿದೆ ಮತ್ತು ಈ ಭಾರತದಲ್ಲಿ ಬೆದರಿಕೆ, ಪ್ರಚೋದನೆ, ಹಿಂಸಕ ಕರೆಗಳ ಧ್ವನಿಗಳು ಶಾಶ್ವತವಾಗಿ ನಾಶವಾಗಿ ಕೇವಲ ಮತ್ತು ಕೇವಲ ಭಾರತಭೂಮಿಯ ಗೌರವವನ್ನೇ ವೈಭವೀಕರಿಸಲಾಗುವುದು. ಆ ದಿನಗಳು ದೂರವಿಲ್ಲವೆಂದು ಭಾರತದ್ವೇಷಿಗಳು ಗಮನದಲ್ಲಿಡಬೇಕು !