‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷೆ
‘ಭಾರತದಲ್ಲಿ ಪ್ರಾಚೀನ ಕಾಲದಿಂದ ವಾಸ್ತುಶಾಸ್ತ್ರ ಬಳಕೆಯಲ್ಲಿದೆ. ವ್ಯಕ್ತಿಯ ಮನಸ್ಸು, ಬುದ್ಧಿ ಮತ್ತು ಶರೀರದ ಮೇಲೆ ವಾಸ್ತುವಿನಲ್ಲಿನ ಸ್ಪಂದನಗಳ ಪ್ರಭಾವ ಬೀರುತ್ತದೆ; ಆದುದರಿಂದ ವಾಸ್ತುಶಾಸ್ತ್ರದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಮನೆಯನ್ನು ಕಟ್ಟಿದರೆ ಮನುಷ್ಯನಿಗೆ ಉತ್ತಮ ಆರೋಗ್ಯ, ಸುಖ ಮತ್ತು ಸಮೃದ್ಧಿ ಲಭಿಸುತ್ತದೆ. ಹಿಂದೆ ಅವಿಭಕ್ತ ಕುಟುಂಬಪದ್ಧತಿ ಪ್ರಚಲಿತವಿತ್ತು. ಅವಿಭಕ್ತ ಕುಟುಂಬದಲ್ಲಿ ಹಿರಿಯರು ಮತ್ತು ತಿಳಿದವರು ಯಾವಾಗಲೂ, ‘ತೊಲೆಯ (ಬೀಮ) ಕೆಳಗೆ ಕುಳಿತುಕೊಳ್ಳಬಾರದು, ಮುಸ್ಸಂಜೆ ಸಮಯದಲ್ಲಿ ದೇವರ ಮುಂದೆ ದೀಪವನ್ನು ಹಚ್ಚಿ ಸ್ತೋತ್ರವನ್ನು ಪಠಿಸಬೇಕು, ರಾತ್ರಿ ಬೇಗ ಮಲಗಬೇಕು ಮತ್ತು ಬೆಳಗ್ಗೆ ಬೇಗ ಏಳಬೇಕು, ಪೂರ್ವ ಪಶ್ಚಿಮವಾಗಿ ಮಲಗಬೇಕು,’ ಇತ್ಯಾದಿಗಳನ್ನು ಹೇಳುತ್ತಿದ್ದರು. ಇದರ ಹಿಂದೆ ವಾಸ್ತುಶಾಸ್ತ್ರವೇ ಅಡಗಿದೆ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ವಾಸ್ತುಶಾಸ್ತ್ರದ ಸಂದರ್ಭದಲ್ಲಿ ಬಹಳಷ್ಟು ಸಂಶೋಧನೆಗಳನ್ನು ಮಾಡಲಾಗುತ್ತಿದೆ. ಅವುಗಳಲ್ಲಿ ಒಂದು ಸಂಶೋಧನೆಯನ್ನು ಮುಂದೆ ಕೊಡಲಾಗಿದೆ.
ವಾಸ್ತುವಿನಲ್ಲಿ ಬೇರೆಬೇರೆ ಸ್ಥಳಗಳಲ್ಲಿ ಓಡಾಡುವಾಗ ಮನಸ್ಸಿಗೆ ಬೇರೆ ಬೇರೆ ಸಂವೇದನೆಗಳ ಅರಿವಾಗುವುದು
ಸಾಮಾನ್ಯವಾಗಿ ನಾವು ಯಾವ ಸ್ಥಳದಲ್ಲಿ ಓಡಾಡುತ್ತೇವೆಯೋ, ನಮಗೆ ತಿಳಿಯದೇ ನಮ್ಮ ಮೇಲೆ ಅದರ ಸೂಕ್ಷ್ಮ ಪರಿಣಾಮವಾಗುತ್ತಿರುತ್ತದೆ. ಮನೆಯಲ್ಲಿ ವಿವಿಧ ಕೋಣೆಗಳಿರುತ್ತವೆ, ಉದಾ. ಪಡಸಾಲೆ (ಕುಳಿತುಕೊಳ್ಳುವ ಕೋಣೆ), ನಡುಮನೆ, ಅಡುಗೆಮನೆ, ಮಲಗುವ ಕೋಣೆ ಇತ್ಯಾದಿ. ಪ್ರತಿಯೊಂದು ಕೋಣೆಯಲ್ಲಿ ಬೇರೆ ಬೇರೆ ಸ್ಪಂದನಗಳು ಕಾರ್ಯನಿರತವಿರುತ್ತವೆ. ಪಡಸಾಲೆಯಲ್ಲಿ ಕುಳಿತರೆ, ಯಾವುದಾದರೊಂದು ವಿಷಯದ ಚರ್ಚೆ ಮಾಡಬೇಕು ಎಂದು ಅನಿಸುತ್ತದೆ. ಅಡುಗೆಯ ಮನೆಗೆ ಹೋದರೆ ಮನಸ್ಸಿನಲ್ಲಿ ತಿನ್ನುವ ವಿಚಾರಗಳು ಬರತೊಡಗುತ್ತವೆ. ಮಲಗುವ ಕೋಣೆಗೆ ಹೋದರೆ ವಿಶ್ರಾಂತಿ ಪಡೆಯಬೇಕು ಎಂದೆನಿಸುತ್ತದೆ. ಕಿಟಕಿಯ ಹತ್ತಿರ ಕುಳಿತರೆ ಮನಸ್ಸಿಗೆ ಉತ್ಸಾಹವೆನಿಸುತ್ತದೆ, ಕಿಟಕಿಯಿಂದ ಹೊರಗೆ ಆಕಾಶದ ಕಡೆಗೆ ನೋಡಿದರೆ ಮನಸ್ಸಿಗೆ ಆನಂದದ ಅರಿವಾಗುತ್ತದೆ. ಈ ರೀತಿ ವಾಸ್ತುವಿನಲ್ಲಿ ವಿವಿಧ ಸ್ಥಳಗಳಲ್ಲಿ ಓಡಾಡುವಾಗ ಮನಸ್ಸಿಗೆ ಬೇರೆ ಬೇರೆ ಸಂವೇದನೆಗಳ ಅರಿವಾಗುತ್ತದೆ.
‘ವಾಸ್ತುವಿನಲ್ಲಿ (ಮನೆಯಲ್ಲಿ) ವಿವಿಧ ಸ್ಥಳಗಳಲ್ಲಿ ಕುಳಿತುಕೊಂಡರೆ ವ್ಯಕ್ತಿಯ ಸೂಕ್ಷ್ಮ-ಊರ್ಜೆಯ ಮೇಲಾಗುವ ಪರಿಣಾಮವನ್ನು ಅಧ್ಯಯನ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಒಂದು ಪ್ರಯೋಗವನ್ನು ಮಾಡಲಾಯಿತು. ಈ ಪ್ರಯೋಗದಲ್ಲಿ ಸಾಮಾನ್ಯ ವ್ಯಕ್ತಿಯನ್ನು ವಿವಿಧ ಸ್ಥಳಗಳಲ್ಲಿ ಕೂರಿಸಿ ಅವರ ಛಾಯಾಚಿತ್ರಗಳನ್ನು ತೆಗೆಯಲಾಯಿತು. ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಉಪಕರಣದ ಮೂಲಕ ಈ ಛಾಯಾಚಿತ್ರಗಳ ನಿರೀಕ್ಷಣೆಗಳನ್ನು ಮಾಡಲಾಯಿತು. ಅದನ್ನು ಮುಂದೆ ಕೊಡಲಾಗಿದೆ.
ಟಿಪ್ಪಣಿ _ ಈ ಪ್ರಯೋಗದಲ್ಲಿ ‘ಪಂಖಾದ (ಫ್ಯಾನಿನ) ಕೆಳಗೆ ಕುಳಿತುಕೊಂಡರೆ ವ್ಯಕ್ತಿಯ ಮೇಲೆ ಏನು ಪರಿಣಾಮವಾಗುತ್ತದೆ ?’, ಎಂಬುದನ್ನೂ ಅಧ್ಯಯನ ಮಾಡಲಾಯಿತು.
ಮೇಲಿನ ಕೋಷ್ಟಕದಿಂದ ಗಮನಕ್ಕೆ ಬಂದ ಅಂಶಗಳು
೧. ‘ವ್ಯಕ್ತಿಯು ಗೋಡೆಯ ಹತ್ತಿರ ಕುಳಿತುಕೊಳ್ಳುವುದು’, ಈ ಛಾಯಾಚಿತ್ರದಲ್ಲಿ ಸಕಾರಾತ್ಮಕ ಊರ್ಜೆ ಇರಲೇ ಇಲ್ಲ, ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಇತ್ತು.
೧ ಅ. ವಿಶ್ಲೇಷಣೆ – ‘ವ್ಯಕ್ತಿಯು ಗೋಡೆಯ ಹತ್ತಿರ ಕುಳಿತುಕೊಳ್ಳುವುದು’ ಈ ಛಾಯಾಚಿತ್ರದಿಂದ ಎಲ್ಲಕ್ಕಿಂತ ಹೆಚ್ಚು ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದರ ಹಿಂದಿನ ಕಾರಣ : ಗೋಡೆಯಲ್ಲಿ ಜಡತ್ವ ಇರುವುದರಿಂದ ಅಲ್ಲಿ ಕುಳಿತಾಗ ವ್ಯಕ್ತಿಯ ಮನಸ್ಸಿಗೆ ಜಡತ್ವದ ಅರಿವಾಗುತ್ತದೆ. ಅದರಿಂದ ಅವನ ಮೇಲೆ ತೊಂದರೆದಾಯಕ ಸ್ಪಂದನಗಳ ಆವರಣ ಬರುತ್ತದೆ ಅಥವಾ ಅದರಲ್ಲಿ ಹೆಚ್ಚಳವಾಗುತ್ತದೆ.
೨. ‘ಪಂಖಾ (ಫ್ಯಾನ್) ತಿರುಗುತ್ತಿರುವಾಗಿನ’ ಛಾಯಾಚಿತ್ರದ ತುಲನೆಯಲ್ಲಿ ‘ಪಂಖಾ ತಿರುಗದಿರುವಾಗಿನ’ ಛಾಯಾಚಿತ್ರದಲ್ಲಿ ನಕಾರಾತ್ಮಕ ಊರ್ಜೆಯ ಪ್ರಮಾಣವು ಕಡಿಮೆ ಇದೆ. ‘ಪಂಖಾ ತಿರುಗುತ್ತಿರುವಾಗಿನ’ ಛಾಯಾಚಿತ್ರದಲ್ಲಿ ಸಕಾರಾತ್ಮಕ ಊರ್ಜೆಯು ಇರಲೇ ಇಲ್ಲ; ಆದರೆ ‘ಪಂಖಾ ತಿರುಗದಿರುವಾಗಿನ’ ಛಾಯಾಚಿತ್ರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯು ಕಂಡುಬಂದಿತು.
೨ ಅ. ವಿಶ್ಲೇಷಣೆ – ‘ಪಂಖಾ ತಿರುಗದಿರುವಾಗಿನ’ ತುಲನೆಯಲ್ಲಿ ‘ಪಂಖಾ ತಿರುಗುತ್ತಿರುವಾಗಿನ’ ಛಾಯಾಚಿತ್ರದಲ್ಲಿ ಹೆಚ್ಚು ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವ ಕಾರಣ : ವಿದ್ಯುತ್ ಉಪಕರಣಗಳಿಂದ ನಿರ್ಮಾಣವಾಗುವ ತೊಂದರೆದಾಯಕ ನಾದದಿಂದ ಅಲ್ಲಿನ ವಾತಾವರಣ ಕಲುಷಿತಗೊಳ್ಳುತ್ತದೆ. ಇದರ ನಕಾರಾತ್ಮಕ ಪರಿಣಾಮವು ಅಲ್ಲಿ ಓಡಾಡುವವರ ಮೇಲಾಗುತ್ತದೆ.
೩. ಮೇಲಿನ ಮೂರೂ ಛಾಯಾಚಿತ್ರಗಳ ತುಲನೆಯಲ್ಲಿ ‘ವ್ಯಕ್ತಿಯು ಚಪ್ಪರದ ಕೆಳಗೆ ಕುಳಿತುಕೊಳ್ಳುವುದು’, ಈ ಛಾಯಾಚಿತ್ರದಲ್ಲಿ ನಕಾರಾತ್ಮಕ ಊರ್ಜೆಯ ಪ್ರಮಾಣ ಕಡಿಮೆಯಿದೆ
೩ ಅ. ವಿಶ್ಲೇಷಣೆ – ವಾಸ್ತುವಿನ ಚಪ್ಪರದಿಂದ (ಉರ್ಧ್ವ ದಿಶೆಯಿಂದ) ವಾಸ್ತುವಿನಲ್ಲಿ ಸಕಾರಾತ್ಮಕ ಸ್ಪಂದನಗಳು ಬರುತ್ತವೆ. ಕೋಣೆಯಲ್ಲಿನ ಚಪ್ಪರದ ಕೆಳಗೆ ಕುಳಿತುಕೊಳ್ಳುವುದರಿಂದ ವ್ಯಕ್ತಿಗೆ ಈ ಸಕಾರಾತ್ಮಕ ಸ್ಪಂದನಗಳಿಂದ ಲಾಭವಾಯಿತು. ಇದರಿಂದ ಆ ವ್ಯಕ್ತಿಯ ಸುತ್ತಲಿನ ನಕಾರಾತ್ಮಕ ಸ್ಪಂದನಗಳ ಆವರಣವು ಕಡಿಮೆಯಾಯಿತು.
೪. ಮೇಲಿನ ನಾಲ್ಕೂ ಛಾಯಾಚಿತ್ರಗಳ ತುಲನೆಯಲ್ಲಿ ‘ವ್ಯಕ್ತಿಯು ಕಿಟಕಿಯ ಹತ್ತಿರ ಕುಳಿತುಕೊಳ್ಳುವುದು’, ಈ ಛಾಯಾಚಿತ್ರದಲ್ಲಿ ನಕಾರಾತ್ಮಕ ಊರ್ಜೆಯ ಪ್ರಮಾಣ ಎಲ್ಲಕ್ಕಿಂತ ಕಡಿಮೆಯಿದೆ ಮತ್ತು ಸಕಾರಾತ್ಮಕ ಊರ್ಜೆಯ ಪ್ರಮಾಣ ಎಲ್ಲಕ್ಕಿಂತ ಹೆಚ್ಚಿದೆ.
೪ ಅ. ವಿಶ್ಲೇಷಣೆ – ತೇಜತತ್ತ್ವದ ಕಾರ್ಯ ಚೈತನ್ಯವನ್ನು ಪ್ರದಾನಿಸುವುದಾಗಿದೆ. ಸೂರ್ಯನಿಂದ ಪ್ರಕ್ಷೇಪಿತವಾಗುವ ತೇಜದಿಂದ ವಾತಾವರಣವು ಶುದ್ಧ ಮತ್ತು ಚೈತನ್ಯಮಯವಾಗುತ್ತದೆ. ಕಿಟಕಿಯ ಹತ್ತಿರ ಕುಳಿತುಕೊಂಡಿದ್ದರಿಂದ ವ್ಯಕ್ತಿಗೆ ಚೈತನ್ಯ ಸಿಕ್ಕಿದ್ದರಿಂದ ಆ ವ್ಯಕ್ತಿಯ ಸುತ್ತಲಿನ ತೊಂದರೆದಾಯಕ ಸ್ಪಂದನಗಳ ಆವರಣವು ತುಂಬಾ ಕಡಿಮೆಯಾಯಿತು ಮತ್ತು ಅವನ ಸಕಾರಾತ್ಮಕ ಸ್ಪಂದನಗಳಲ್ಲಿ ಬಹಳ ಹೆಚ್ಚಳವಾಯಿತು.
ಸಂಕ್ಷಿಪ್ತವಾಗಿ ಹೇಳುವುದಾದರೆ, ವಾಸ್ತುವಿನಲ್ಲಿ ಕಾರ್ಯನಿರತ ಸ್ಪಂದನಗಳ ಪರಿಣಾಮವು ವ್ಯಕ್ತಿಯ ಸೂಕ್ಷ್ಮ- ಊರ್ಜೆಯ ಮೇಲೆ ಆಗುತ್ತದೆ. ಇದರಿಂದ ವಾಸ್ತುವಿನಲ್ಲಿ ವಿವಿಧ ಸ್ಥಳಗಳಲ್ಲಿ ಓಡಾಡುವಾಗ ಅವನ ಮನಸ್ಸಿನ ಮೇಲೆ ಬೇರೆ ಬೇರೆ ಸಂವೇದನೆಗಳ ಅರಿವಾಗುತ್ತವೆ.’
ಕೋಣೆಯ ನಾಲ್ಕೂ ಸ್ಥಳಗಳಲ್ಲಿ (ಗೋಡೆಯ ಸಮೀಪ) ನಕಾರಾತ್ಮಕ ಸ್ಪಂದನಗಳು ಹೆಚ್ಚಿವೆ. ಹಾಗಾದರೆ ಕೋಣೆಯಲ್ಲಿ ಎಲ್ಲಿಯೂ ಕುಳಿತುಕೊಳ್ಳಬಾರದೇ ?
ಉತ್ತರ : ‘ಕೋಣೆಯಲ್ಲಿ ಆಯಾ ಸ್ಥಳಗಳಲ್ಲಿ ಕುಳಿತುಕೊಂಡರೆ ವ್ಯಕ್ತಿಯ ಮೇಲೆ ಏನು ಪರಿಣಾಮವಾಗುತ್ತದೆ ?’, ಎಂಬುದು ಈ ಪರೀಕ್ಷಣೆಯಿಂದ ಗಮನಕ್ಕೆ ಬಂದಿತು. ಇದರಿಂದ ವ್ಯಕ್ತಿಯು ಕೋಣೆಯಲ್ಲಿ ಯಾವುದೇ ಸ್ಥಳದಲ್ಲಿ ಕುಳಿತುಕೊಳ್ಳುವಾಗ ಅವನು ತನ್ನ ಮೇಲಾಗುವ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಆವಶ್ಯಕವಾಗಿರುವ ಕಾಳಜಿಯನ್ನು ಆಯಾ ಸಮಯದಲ್ಲಿ ತೆಗೆದುಕೊಳ್ಳಬೇಕು. ವ್ಯಕ್ತಿಯು ನಿರಾಶೆ ಅಥವಾ ದುಃಖಿತನಾಗಿರುವಾಗ ಅವನು ಗೋಡೆಯ ಸಮೀಪ ಕುಳಿತುಕೊಳ್ಳುವುದನ್ನು ಪ್ರಯತ್ನಪೂರ್ವಕವಾಗಿ ತಡೆಯಬೇಕು. ಅದರ ಬದಲು ಕಿಟಕಿಯ ಹತ್ತಿರ ಕುಳಿತುಕೊಳ್ಳಬೇಕು, ಹೊರಗಿನ ಆಕಾಶದ ಕಡೆಗೆ ನೋಡಬೇಕು, ಈಶ್ವರನು ನಿರ್ಮಿಸಿದ ಸುಂದರ ಸೃಷ್ಟಿಯ ಸೌಂದರ್ಯವನ್ನು ನೋಡಬೇಕು. ಇದರಿಂದ ಅವನಿಗೆ ಚೈತನ್ಯ ದೊರಕಿ ಅವನ ಸುತ್ತಲಿನ ತೊಂದರೆದಾಯಕ (ಕಪ್ಪು) ಆವರಣ ಕಡಿಮೆಯಾಗಿ ಅವನ ಮನಸ್ಸು ಹಗುರವಾಗುವುದು.
ಮನೆಯಲ್ಲಿ ವಿದ್ಯುತ್ ಉಪಕರಣಗಳು ಆವಶ್ಯಕ ಇರುವಷ್ಟೇ ಇರಬೇಕು, ಹಾಗೆಯೇ ಅವುಗಳನ್ನು ಆವಶ್ಯಕವಿದ್ದಾಗ ಮತ್ತು ಯೋಗ್ಯ ಸಮಯಕ್ಕಾಗಿ ಮಾತ್ರ ಉಪಯೋಗಿಸಬೇಕು. ವಿದ್ಯುತ್ ಉಪಕರಣಗಳನ್ನು ಬಳಸುವುದರಿಂದ ಆಗುವ ನಕಾರಾತ್ಮಕ ಪರಿಣಾಮವು ಕಡಿಮೆಯಾಗಬೇಕೆಂದು ಕೋಣೆಯೊಳಗೆ ದೇವತೆಯ ನಾಮಜಪ ಅಥವಾ ಸಂತರ ಭಜನೆಗಳನ್ನು ಹಾಕಿಡಬೇಕು. ಇದರಿಂದ ಕೋಣೆಯಲ್ಲಿನ ವಾತಾವರಣದಲ್ಲಿನ ತೊಂದರೆದಾಯಕ ಸ್ಪಂದನಗಳು ಕಡಿಮೆಯಾಗುವವು, ಹಾಗೆಯೇ ನಿಯಮಿತವಾಗಿ ಕೋಣೆಯ ಮತ್ತು ಸ್ವತಃದ ಶುದ್ಧಿಯನ್ನು ಮಾಡಬೇಕು.
ಸ್ವಲ್ಪದರಲ್ಲಿ ಹೇಳುವುದಾದರೆ ಸದ್ಯದ ವಿಜ್ಞಾನಯುಗದಲ್ಲಿ ಭೌತಿಕ ಸುಖಸೌಲಭ್ಯಗಳು ಬಹಳಷ್ಟಿವೆ; ಆದರೆ ಅದರಿಂದ ಮನುಷ್ಯನು ನಿಸರ್ಗದಿಂದ ಅಂದರೆ ಈಶ್ವರನಿಂದ ದೂರ ಹೋಗುತ್ತಿದ್ದಾನೆ, ಎಂಬುದು ಗಮನಕ್ಕೆ ಬರುತ್ತದೆ. ಹೀಗೆ ಆಗಬಾರದೆಂದು ಪ್ರತಿಯೊಂದು ವಿಷಯವನ್ನು ಅಗತ್ಯವಿದ್ದಷ್ಟೇ ಮತ್ತು ವಿಚಾರ ಮಾಡಿ ಉಪಯೋಗಿಸಬೇಕು, ಹಾಗೆಯೇ ಅದರೊಂದಿಗೆ ಪ್ರತಿ ದಿನ ಸಾಧನೆಯನ್ನು ಮಾಡಬೇಕು. ವ್ಯಕ್ತಿಯ ಸಾಧನೆಯು ಹೆಚ್ಚುತ್ತ ಹೋದಂತೆ, ಅವನು ಸತ್ತ್ವಪ್ರಧಾನನಾಗುವನು ಮತ್ತು ಅವನಲ್ಲಿ ಸಾತ್ತ್ವಿಕತೆಯ ಸಕಾರಾತ್ಮಕ ಪರಿಣಾಮವು ಅವನಿರುವ ವಾಸ್ತುವಿನಲ್ಲಿ ಆಗಿ ವಾಸ್ತು ಕೂಡ ಸಾತ್ತ್ವಿಕವಾಗುವುದು.’
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೯.೨.೨೦೨೨)
ವಿ-ಅಂಚೆ : [email protected]
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. |