‘ಡಿಸೆಂಬರ್ ೨೦೧೯ ರಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ಸಮನ್ವಯಕರಾದ ಸುಶ್ರೀ (ಕು.) ತೇಜಲ ಪಾತ್ರೀಕರ (ಆಧ್ಯಾತ್ಮಿಕ ಸ್ತರ ಶೇ. ೬೨, ಸಂಗೀತ ವಿಶಾರದ) ಇವರು ಡಾ. (ಸೌ.) ಸಹನಾ ಭಟ್ ಇವರನ್ನು ಅವರ ಹುಬ್ಬಳ್ಳಿಯ ನಿವಾಸಸ್ಥಾನದಲ್ಲಿ ಭೇಟಿಯಾದರು. ಆ ಸಮಯದಲ್ಲಿ ಅವರ ನೃತ್ಯಕ್ಕೆ ಸಂಬಂಧಿಸಿದ ಸಾಧನಾಪ್ರವಾಸ, ಅವರ ನೃತ್ಯದ ಬಗ್ಗೆ ಇರುವ ಸಮರ್ಪಿತಭಾವ ಮತ್ತು ನೃತ್ಯವನ್ನು ಮಾಡುವಾಗ ಅವರಿಗೆ ಬಂದ ಅನುಭೂತಿಯನ್ನು ಇಲ್ಲಿ ನೀಡಲಾಗಿದೆ.
ಸಂಗೀತವು ಆಕಾಶ ತತ್ತ್ವಕ್ಕೆ ಸಂಬಂಧಿಸಿದೆ; ಪೃಥ್ವಿ, ಆಪ, ತೇಜ ಮತ್ತು ವಾಯು ತತ್ತ್ವಗಳೊಂದಿಗೆ ಸಂಬಂಧಿಸಿದ ಕಲೆಗಳಿಗಿಂತ ಸಂಗೀತಕ್ಕೆ ಸಂಬಂಧಿಸಿದ ಅನುಭೂತಿಯು ಮೇಲಿನ ಸ್ತರದ್ದಾಗಿರುತ್ತದೆ !’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ |
೧. ಡಾ. (ಸೌ.) ಸಹನಾ ಭಟ್ ಇವರ ಪರಿಚಯ
ಡಾ. (ಸೌ.) ಸಹನಾ ಭಟ್ ಇವರು ಅಭಿಯಂತರು (ಇಂಜಿನಿಯರ್) ಆಗಿದ್ದಾರೆ. ಅವರು ‘ನಾನು ನೃತ್ಯಕ್ಷೇತ್ರಕ್ಕೆ ಬರುವೆನು’ ಎಂದು ಎಂದಿಗೂ ವಿಚಾರ ಮಾಡಿರಲಿಲ್ಲ. ಅಭಿಯಂತರ ಶಿಕ್ಷಣವನ್ನು ಪಡೆಯುತ್ತಿರುವಾಗ ಅವರು ಚೆನ್ನೈಗೆ ಹೋಗುತ್ತಿದ್ದರು. ಒಮ್ಮೆ ಚೆನ್ನೈಗೆ ಹೋದಾಗ ‘ಕಲಾ ಕ್ಷೇತ್ರ’ ಈ ಸಂಸ್ಥೆಯನ್ನು ನೋಡಿ ಅವರು ಪ್ರಭಾವಿತರಾದರು. ಅವರಿಗೆ ‘ಈ ಕ್ಷೇತ್ರವು ಎಷ್ಟು ಚೆನ್ನಾಗಿದೆ. ಈ ಕ್ಷೇತ್ರಕ್ಕೆ ಬರಬೇಕು’, ಎಂದು ಅನಿಸಿತು.
ಶಿವಮೊಗ್ಗದ (ದಿ.) ರವಿ ದಾತಾರ ಇವರ ಬಳಿ ಸೌ. ಸಹನಾ ಅಕ್ಕನವರು ನೃತ್ಯದ ಪ್ರಾಥಮಿಕ ಶಿಕ್ಷಣ ಪಡೆದರು. ಅವರು ಮೈಸೂರು ವಿದ್ಯಾಪೀಠದಲ್ಲಿ ನೃತ್ಯದಲ್ಲಿ ‘ಪಿಎಚ್.ಡಿ.’ ಪದವಿಯನ್ನು ಪಡೆದಿದ್ದು ಅದಕ್ಕಾಗಿ ಅವರಿಗೆ ಡಾ. ಕೆ. ಕುಮಾರ ಇವರ ಮಾರ್ಗದರ್ಶನ ಲಭಿಸಿತು. ನೃತ್ಯಸಾಧನೆಗಾಗಿ ಅವರು ಚೆನ್ನೈನ ‘ಕಲಾಕ್ಷೇತ್ರ’ದ ಸೌ. ನಿರ್ಮಲಾ ನಾಗರಾಜ ಇವರ ಮಾರ್ಗದರ್ಶನವನ್ನೂ ಪಡೆಯುತ್ತಾರೆ. ಅವರು ‘ನಾಟ್ಯಾಂಜಲಿ ನೃತ್ಯ ಕಲಾಕೇಂದ್ರ’ದ ಸಂಸ್ಥಾಪಕಿಯಾಗಿದ್ದಾರೆ. ಅವರು ನೃತ್ಯಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದ್ದು ಅವರಿಗೆ ಈ ಕಾರ್ಯಕ್ಕೆ ಅನೇಕ ಪ್ರಶಸ್ತಿಗಳು ಸಿಕ್ಕಿವೆ. ಅವರ ೪೫ ವಿದ್ಯಾರ್ಥಿನಿಯರು ಈಗ ವಿವಿಧ ಸ್ಥಳಗಳಲ್ಲಿ ಭರತನಾಟ್ಯಮ್ ಕಲಿಸುತ್ತಿದ್ದು ಅವರು ತಮ್ಮ ಪ್ರದೇಶದ ಪ್ರಸಿದ್ಧ ನೃತ್ಯಾಂಗನೆಯರಾಗಿದ್ದಾರೆ.
೨. ಡಾ. (ಸೌ.) ಸಹನಾ ಭಟ್ ಇವರ ನೃತ್ಯಸಾಧನೆ ಆರಂಭ
೨ ಅ. ಆಧ್ಯಾತ್ಮಿಕ ಹಿನ್ನೆಲೆ ಮತ್ತು ನೃತ್ಯಕ್ಕಾಗಿ ದೊರಕಿದ ಕೌಟುಂಬಿಕ ಸಹಾಯ : ಸೌ. ಸಹನಾ ಅಕ್ಕನವರ ತವರುಮನೆಯಲ್ಲಿ ಧಾರ್ಮಿಕ ವಾತಾವರಣವಿದ್ದುದರಿಂದ ಅವರಲ್ಲಿ ಚಿಕ್ಕಂದಿನಿಂದಲೇ ಭಗವದ್ಭಕ್ತಿ ಅಂಕುರಿಸಿತು. ಅವರ ಕುಟುಂಬದವರಲ್ಲಿ ‘ನಮ್ಮ ಜೀವನದಲ್ಲಿ ಏನೆಲ್ಲ ಘಟಿಸುತ್ತದೆಯೋ, ಅದೆಲ್ಲವೂ ದೇವರ ಕೃಪೆಯಿಂದಲೇ ! ಅವರೇ ನಮ್ಮಿಂದ ಎಲ್ಲವನ್ನೂ ಮಾಡಿಸಿಕೊಳ್ಳುತ್ತಾರೆ’ ಎಂಬ ಭಾವವಿರುತ್ತದೆ. ವಿವಾಹದ ನಂತರ ‘ಸೌ. ಸಹನಾಅಕ್ಕನವರು ನೃತ್ಯ ಕ್ಷೇತ್ರಕ್ಕೆ ಬರಬೇಕು’, ಎಂಬುದಕ್ಕಾಗಿ ಅವರ ಕುಟುಂಬದವರು ‘ಸಹನಾ ಅಕ್ಕ ನೃತ್ಯಕ್ಷೇತ್ರದಲ್ಲಿ ಕೊಡುಗೆ ನೀಡಬೇಕು’, ಎಂದು ಸಹಾಯ ಮಾಡಿದರು.
೩. ಕಲಿಯುವ ವೃತ್ತಿ
೩ ಅ. ವಿದ್ಯಾರ್ಥಿಗಳಿಗೆ ನೃತ್ಯ ಕಲಿಸುವಾಗ ತಾವು ಸಹ ನೃತ್ಯದಲ್ಲಿನ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿಯುವುದು : ಸಹನಾ ಅಕ್ಕನವರು, ”ವರ್ಗದ ವಿದ್ಯಾರ್ಥಿಗಳಿಗೆ ನೃತ್ಯ ಕಲಿಸುವಾಗ ದೇವರು ಸೂಕ್ಷ್ಮ ವಿಷಯ ಕಲಿಸುತ್ತಾನೆ. ನಾನು ಪರಿಪೂರ್ಣಳಲ್ಲ. ‘ಕಲೆ’ ಇದೊಂದು ಆಳವಾದ ಸಾಗರವಾಗಿದ್ದು ಕಲೆಯನ್ನು ಕಲಿಯಲು ಏಳು ಜನ್ಮಗಳೂ ಕಡಿಮೆ ಬೀಳುತ್ತವೆ ಅಷ್ಟು ಅದರಲ್ಲಿ ಅಪಾರ ಜ್ಞಾನವಿದೆ. ಅದರ ಒಂದೊಂದು ಹನಿಯಷ್ಟು ಕಲಿಯುತ್ತಿರುತ್ತೇವೆ” ಎನ್ನುತ್ತಾರೆ.
೩ ಆ. ತಾವು ಸ್ವತಃ ಗುರುಸ್ಥಾನದಲ್ಲಿದ್ದರೂ ಅಂತರ್ಮುಖರಾಗಿದ್ದು ನೃತ್ಯಕ್ಷೇತ್ರದಲ್ಲಿನ ದಿಗ್ಗಜರ ಮಾರ್ಗದರ್ಶನ ಪಡೆಯುವುದು : ನೃತ್ಯದಲ್ಲಿನ ಹೊಸ ಹೊಸ ವಿಷಯಗಳನ್ನು ಕಲಿಯಲು ಸಹನಾ ಅಕ್ಕನವರು ನೃತ್ಯಕ್ಷೇತ್ರದಲ್ಲಿನ ದಿಗ್ಗಜರ ಮಾರ್ಗದರ್ಶನ ಪಡೆಯುತ್ತಾರೆ. ಇದರೊಂದಿಗೆ ‘ನನ್ನದೇನಾದರೂ ತಪ್ಪುತ್ತಿಲ್ಲವಲ್ಲ ?’, ಎಂಬುದರ ಕಡೆಗೂ ಅವರ ಗಮನವಿರುತ್ತದೆ. ಅವರು ಹಿರಿಯ ಶಿಕ್ಷಕರ ಶಿಬಿರಗಳಲ್ಲಿ ಉಪಸ್ಥಿತರಿರುತ್ತಾರೆ. ಅಲ್ಲಿಗೆ ಹೋಗಿ ಆ ನೃತ್ಯದಲ್ಲಿನ ವಿವಿಧ ವಿಷಯಗಳ ಅಧ್ಯಯನ ಮಾಡುತ್ತಾರೆ.
೪. ಡಾ. (ಸೌ.) ಸಹನಾ ಭಟ್ ಇವರ ನೃತ್ಯಸಾಧನೆಯ ಬಗ್ಗೆ ಇರುವ ಆಧ್ಯಾತ್ಮಿಕ ದೃಷ್ಟಿಕೋನ !
೪ ಅ. ‘ದೇವರಿಗೆ ಸಮರ್ಪಿಸಿಕೊಂಡು ನೃತ್ಯ ಮಾಡುವುದು’, ಇದುವೇ ನೃತ್ಯಸಾಧನೆಯ ಬುನಾದಿಯಾಗಿರುವುದು : ಸಹನಾ ಅಕ್ಕ ನವರು, ”ಶೇ. ೧೦೦ ರಷ್ಟು ಮನಃಪೂರ್ವಕ ಮತ್ತು ದೇವರಿಗೆ ಸಂಪೂರ್ಣ ಸಮರ್ಪಿತರಾಗಿ ನೃತ್ಯ ಮಾಡಿದರೆ ನೃತ್ಯಕಲಾವಿದನು ನೃತ್ಯದೊಂದಿಗೆ ಏಕರೂಪನಾಗುತ್ತಾನೆ ಮತ್ತು ಆಗಲೇ ಅವನ ಕೋಶ ಕೋಶಗಳು ನೃತ್ಯ ಮಾಡುತ್ತವೆ. ಯಾವಾಗ ನೃತ್ಯಕಲಾವಿದನ ಪ್ರತಿಯೊಂದು ಶ್ವಾಸವು ನೃತ್ಯದೊಂದಿಗೆ ಜೋಡಿಸಲ್ಪಡುತ್ತದೆಯೋ, ಆಗಲೇ ಅವನಿಗೆ ನೃತ್ಯಕಲೆಯಿಂದ ಸಮಾಧಾನ ಸಿಗುತ್ತದೆ ಮತ್ತು ಇದೇ ನೃತ್ಯಸಾಧನೆಯ ಬುನಾದಿಯಾಗಿದೆ”, ಎನ್ನುತ್ತಾರೆ. ಅವರು ತಮ್ಮ ವಿದ್ಯಾರ್ಥಿಗಳಿಗೆ ಇದೇ ತತ್ತ್ವದ ಆಧಾರದಲ್ಲಿ ಕಲಿಸುತ್ತಾರೆ.
೪ ಆ. ನೃತ್ಯಕಲಾವಿದನು ಪ್ರಸ್ತುತಪಡಿಸಿದ ನೃತ್ಯದಲ್ಲಿನ ಭಾವವು ಪ್ರೇಕ್ಷಕರ ಮುಖದ ಮೇಲೆ ಮೂಡುವುದು, ಎಂದರೆ ನೃತ್ಯ ಕಲಾವಿದನಿಗೆ ಆಗುತ್ತಿರುವ ಭಗವಂತನ ಭೇಟಿ ! : ‘ಆನಂದ ವರ್ತನಾ’ ಹೆಸರಿನ ಒಂದು ಸಿದ್ಧಾಂತಕ್ಕನುಸಾರ ನೃತ್ಯ ಕಲಾವಿದನು ನೃತ್ಯದಿಂದ ಯಾವ ರಸ ಅಥವಾ ಭಾವವನ್ನು ಪ್ರಸ್ತುತಪಡಿಸುವನೋ, ಆ ಭಾವ, ಆ ಆನಂದ ಅಥವಾ ಆ ಸಮಾಧಾನ ಪ್ರೇಕ್ಷಕರ ಮುಖದ ಮೇಲೆಯೂ ಮೂಡಬೇಕು. ಆ ನೃತ್ಯದಿಂದ ಪ್ರೇಕ್ಷಕರಿಗೆ ಆನಂದ ದೊರಕುವುದು ಎಂದರೆ ನೃತ್ಯ ಕಲಾವಿದನಿಗೆ ಭಗವಂತನ ಭೇಟಿ ಆದಂತೆ ! ಇದಕ್ಕೇ ‘ನೃತ್ಯದ ಮೂಲಕ ಭಗವಂತನನ್ನು ಸ್ಪರ್ಶಿಸುವುದು’, ಎನ್ನುತ್ತಾರೆ. ಸಹನಾಅಕ್ಕನವರು, ”ನೃತ್ಯಕಲಾವಿದನು ನೃತ್ಯ ಮಾಡುವಾಗ ‘ಭಗವಂತನು ಎದುರಿಗೆ ನಿಂತಿದ್ದು ಅವನಿಗಾಗಿ ಈ ನೃತ್ಯವನ್ನು ಪ್ರಸ್ತುತ ಪಡಿಸುತ್ತಿದ್ದೇವೆ’ ಎಂಬ ಭಾವವಿಡುವುದು ಆವಶ್ಯಕವಾಗಿದೆ” ಎಂದು ಹೇಳುತ್ತಾರೆ.
೫. ಡಾ. (ಸೌ.) ಸಹನಾ ಭಟ್ ಇವರಿಗೆ ನೃತ್ಯವನ್ನು ಮಾಡುವಾಗ ಬಂದ ಅನುಭೂತಿ !
೫ ಅ. ನಟರಾಜನ ಚರಣಗಳಲ್ಲಿ ಸಮರ್ಪಿತಭಾವದಿಂದ ನೃತ್ಯಾರಾಧನೆಯನ್ನು ಮಾಡುವುದರಿಂದ ನೃತ್ಯಕ್ಕೆ ಆವಶ್ಯಕವಿರುವ ರಸ ಭಾವವು ನೃತ್ಯದಿಂದ ಪ್ರಕಟವಾಗುವುದು : ಸಹನಾ ಅಕ್ಕನವರು ತಮ್ಮ ನೃತ್ಯವನ್ನು ನಟರಾಜನಿಗೆ (ಶಿವನಿಗೆ) ಸಮರ್ಪಿಸುತ್ತಾರೆ. ಅವರು ‘ಆರಂಭದಿಂದಲೇ ನೃತ್ಯದಲ್ಲಿ ಸಮರ್ಪಿತಭಾವವು ಹೇಗೆ ಉಳಿಯಬಹುದು ? ಎಂಬುದಕ್ಕಾಗಿ ಪ್ರಯತ್ನಿಸುತ್ತಾರೆ. ಅವರ ಈ ಪ್ರಯತ್ನಗಳಿಂದಲೇ ಅಗತ್ಯವಿರುವ ಎಲ್ಲ ರಸಭಾವಗಳು ಅವರ ನೃತ್ಯದಲ್ಲಿ ಸಹಜವಾಗಿ ಇಳಿಯುತ್ತವೆ, ಉದಾ. ತಾಂಡವ ನೃತ್ಯದ ಸಮಯದಲ್ಲಿ (ಶಿವನು ಮಾಡಿದ ವೀರರಸಯುಕ್ತ ನೃತ್ಯದ ಸಮಯದಲ್ಲಿ) ರೌದ್ರಭಾವ ಅಥವಾ ಲಾಸ್ಯ (ಪಾರ್ವತಿಯು ಮಾಡಿದ ಸುಕೋಮಲ ನೃತ್ಯ) ನೃತ್ಯದ ಸಮಯದಲ್ಲಿ ಆನಂದಿ ಭಾವ ! ಅವರ ನೃತ್ಯವನ್ನು ನೋಡುವಾಗ ಪ್ರೇಕ್ಷಕರಿಗೆ ಇದು ಯೋಗಾಯೋಗವೆನಿಸುತ್ತದೆ. ಇದಕ್ಕೆ ಸಹನಾ ಅಕ್ಕನವರು, ”ನೃತ್ಯದಲ್ಲಿ ಸಮರ್ಪಿತಭಾವ ಎಷ್ಟು ಹೆಚ್ಚು ಇರುತ್ತದೆಯೋ ಅಷ್ಟೇ ನೃತ್ಯದ ಪರಿಣಾಮ ಹೆಚ್ಚಾಗಿ ಅದರಿಂದ ಸಮಾಧಾನ ಲಭಿಸುತ್ತದೆ. ಇದು ಕೇವಲ ದೇವರ ಕೃಪೆಯಿಂದಲೇ ಸಾಧ್ಯವಿದೆ. ‘ನಾನು ಏನಾದರೂ ಮಾಡಿದ್ದೇನೆ’, ಎಂಬುದು ಏನೂ ಇಲ್ಲ ಎಂಬುದು ತೀವ್ರವಾಗಿ ಗಮನಕ್ಕೆ ಬರುತ್ತದೆ”, ಎಂದು ಹೇಳುತ್ತಾರೆ.
೫ ಆ. ‘ದೇವರಿಗೆ ಸಂಪೂರ್ಣವಾಗಿ ಸಮರ್ಪಿತರಾಗಿ ನೃತ್ಯ ಮಾಡಿದರೆ ಅನೇಕ ಬಾರಿ ಆಶೀರ್ವಾದ ಸ್ವರೂಪ ಮಳೆ ಬೀಳುತ್ತದೆ’, ಎಂದು ಸಹನಾ ಅಕ್ಕನವರು ಅನುಭವಿಸುವುದು : ಸಹನಾ ಅಕ್ಕನವರು, ”ಇತಿಹಾಸದಲ್ಲಿ ರಾಗ ಮೇಘಮಲ್ಹಾರ’ ಹಾಡಿದಾಗ ಮಳೆ ಬಿದ್ದಿತು ಅಥವಾ ‘ದೀಪ’ ರಾಗವನ್ನು ಹಾಡಿದಾಗ ದೀಪಗಳು ಪ್ರಜ್ವಲಿತಗೊಂಡವು, ಈ ರೀತಿಯ ಅನುಭೂತಿಗಳು ಇಂದಿಗೂ ಕೆಲವು ಪ್ರಮಾಣದಲ್ಲಿ ಬರುತ್ತವೆ”, ಎನ್ನುತ್ತಾರೆ. ಸಹನಾ ಅಕ್ಕನವರು ‘ದೇವರಿಗೆ ಸಂಪೂರ್ಣ ಸಮರ್ಪಿತರಾಗಿ ನೃತ್ಯ ಮಾಡಿದಾಗ ಮಳೆ ಬಿದ್ದಿತು’ ಎಂದು ಅನೇಕ ಬಾರಿ ಅನುಭವಿಸಿದ್ದಾರೆ.
– ಸುಶ್ರೀ (ಕು.) ತೇಜಲ ಪಾತ್ರೀಕರ (ಆಧ್ಯಾತ್ಮಿಕ ಮಟ್ಟ ಶೇ. ೬೨, ಸಂಗೀತ ವಿಶಾರದ), ಸಂಗೀತ ಸಮನ್ವಯಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ. (೩೦.೭.೨೦೨೨)