ಅತಿ ಕಡಿಮೆ ಖರ್ಚಿನಲ್ಲಿ, ಹಾಗೆಯೇ ಸಹಜವಾಗಿ ಸಿಗುವ ವಸ್ತುಗಳಿಂದ ಮನೆಯಲ್ಲಿಯೇ ತರಕಾರಿಗಳನ್ನು ಬೆಳೆಸಿ !

ಕೃಷಿ ವಿಚಾರ

ಮನೆಮನೆಗಳಲ್ಲಿ ಸನಾತನದ ‘ಕೈದೋಟ’ ಅಭಿಯಾನ

ಸೌ. ರಾಘವಿ ಕೋನೆಕರ

೧. ಮನೆಯಲ್ಲಿಯೇ ತರಕಾರಿಗಳನ್ನು ಬೆಳೆಸಲು ಬೇಕಾಗುವ ಸಾಹಿತ್ಯಗಳು

ಪ್ಲಾಸ್ಟಿಕ್ ಚೀಲಗಳು (ಗ್ರೋ-ಬ್ಯಾಗ್)

೧ ಅ. ಕುಂಡ ಅಥವಾ ಚೀಲಗಳು ಗ್ರೋ-ಬ್ಯಾಗ್) : ಮನೆಯಲ್ಲಿ ಪ್ಲಾಸ್ಟಿಕ್ ಅಥವಾ ಮಣ್ಣಿನ ಕುಂಡ ಗಳು ಲಭ್ಯವಿದ್ದರೆ, ಅವುಗಳಲ್ಲಿ ಗಿಡಗಳನ್ನು ಬೆಳೆಸಬಹುದು. ಕುಂಡ ಗಳಿಲ್ಲದಿದ್ದರೆ, ಹಳೆಯ ಟಬ್, ಡ್ರಮ್, ಟಯರ್ ಇಂತಹ ಪರ್ಯಾಯಗಳನ್ನು ಬಳಸಬಹುದು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ವಿಶೇಷವಾಗಿ ಕೃಷಿಗಾಗಿ ತಯಾರಿಸಲಾದ ವಿವಿಧ ಆಕಾರದ ಚೀಲ ಗಳು (ಗ್ರೋ-ಬ್ಯಾಗ್) ಸಿಗುತ್ತವೆ. ಅವುಗಳನ್ನೂ ಬಳಸಬಹುದು.

೧ ಆ. ಇಟ್ಟಿಗೆ : ಗಿಡಗಳನ್ನು ಬೆಳೆಸಲು ವಿಶಿಷ್ಟ ಆಕಾರದ ಕಟ್ಟೆಗಳನ್ನು ತಯಾರಿಸಲು ಇಟ್ಟಿಗೆಗಳನ್ನು ಬಳಸಲಾಗುತ್ತದೆ. ಕೇವಲ ಒಂದು ಇಟ್ಟಿಗೆಯ ಎತ್ತರದ ಕಟ್ಟೆಯಲ್ಲಿಯೂ ಉತ್ತಮವಾಗಿ ತರಕಾರಿಗಳನ್ನು ಬೆಳೆಸಬಹುದು. ಒಂದು ಸಲ ತಂದ ಇಟ್ಟಿಗೆಗಳು ಅನೇಕ ವರ್ಷಗಳ ಕಾಲ ಬಳಸಬಹುದು.

ಇಟ್ಟಿಗೆಗಳಿಂದ ತಯಾರಿಸಿದ ಕಟ್ಟೆ

೧ ಇ. ವಿಂಗಡನಾಶೀಲ ಕಸ : ಒಣಗಿದ ಎಲೆಗಳ ಕಸಕಡ್ಡಿ, ರಸ ತೆಗೆದ ಮೇಲೆ ಉಳಿದ ಕಬ್ಬಿನ ಸಿಪ್ಪೆ, ಗಿಡಗಳ ಒಣಗಿದ ಕಡ್ಡಿಗಳು, ತೆಂಗಿನ ಗರಿಗಳು, ತೆಂಗಿನ ಜುಟ್ಟು, ಮನೆಯಲ್ಲಿನ ತರಕಾರಿಗಳ ಮತ್ತು ಹಣ್ಣುಗಳ ಸಿಪ್ಪೆಗಳು, ದಂಟುಗಳು ಇತ್ಯಾದಿ ವಿಂಗಡಿಸುವ ಕಸವನ್ನು ಕುಂಡಗಳನ್ನು ಅಥವಾ ಕಟ್ಟೆಗಳನ್ನು ತುಂಬಲು, ಹಾಗೆಯೇ ಆಚ್ಛಾದನೆಗಾಗಿ (ನೆಲವನ್ನು ಮುಚ್ಚಲು) ಬಳಸಲು ಬರುತ್ತದೆ. ಮಣ್ಣು ಸಿಗದಿದ್ದರೆ ಇಂತಹ ವಿಘಟನಶೀಲ ಕಸವನ್ನು ಕೊಳೆಸಿ ಅದರಿಂದ ಫಲವತ್ತಾದ ಮಣ್ಣನ್ನು (ಹ್ಯೂಮಸ್) ತಯಾರಿಸಿ ಅದರಿಂದ ಗಿಡಗಳನ್ನು ಬೆಳೆಸಲು ಬರುತ್ತದೆ.

೧ ಈ. ಜೀವಾಮೃತವನ್ನು ತಯಾರಿಸಲು ಬಕೇಟು : ನಮ್ಮ ತೋಟಕ್ಕಾಗಿ ಆವಶ್ಯಕತೆಗನುಸಾರ ಎಷ್ಟು ಲೀಟರ್ ಜೀವಾ ಮೃತವನ್ನು ತಯಾರಿಸಬೇಕಾಗಿದೆಯೋ ಅದಕ್ಕಿಂತ ಸ್ವಲ್ಪ ಹೆಚ್ಚು ಲೀಟರ್ ಕ್ಷಮತೆಯ ಬಕೇಟ್‌ಅನ್ನು ತೆಗೆದುಕೊಳ್ಳಬೇಕು. ಈ ಬಕೇಟು ಧಾತುವಿನದ್ದಾಗಿರಬಾರದು. ಬಕೇಟಿನ ಬದಲು ಮಣ್ಣಿನ ಮಡಿಕೆಯನ್ನೂ ಬಳಸಬಹುದಾಗಿದೆ. ಬಕೇಟಿನಲ್ಲಿನ ಜೀವಾ ಮೃತವನ್ನು ಹತ್ತಿ ಬಟ್ಟೆ ಅಥವಾ ಗೋಣಿತಟ್ಟಿನಿಂದ ಮುಚ್ಚಬೇಕು. (‘ಜೀವಾಮೃತ’ವೆಂದರೆ ದೇಶಿ ಆಕಳ ಸೆಗಣಿ, ಗೋಮೂತ್ರ, ಕಡಲೆ ಹಿಟ್ಟು ಮತ್ತು ಬೆಲ್ಲ ಇವುಗಳನ್ನು ಬಳಸಿ ತಯಾರಿಸಿದ ನೈಸರ್ಗಿಕ ಗೊಬ್ಬರ. – ಸಂಕಲನಕಾರರು)

೧ ಉ. ಬೀಜಾಮೃತವನ್ನು ತಯಾರಿಸಲು ಡಬ್ಬಗಳು : ಮನೆಯಲ್ಲಿ ಕೃಷಿ ಮಾಡುವುದಿದ್ದರೆ ಬೀಜಾಮೃತವು ಕಡಿಮೆ ಪ್ರಮಾಣದಲ್ಲಿ ಬೇಕಾಗುತ್ತದೆ. ಆದುದರಿಂದ ಸಾಧಾರಣ ಅರ್ಧದಿಂದ ಒಂದು ಲೀಟರ್ ಕ್ಷಮತೆಯ ಪ್ಲಾಸ್ಟಿಕಿನ ಡಬ್ಬವು ಸಾಕಾಗುತ್ತದೆ. (‘ಬೀಜಾಮೃತ’ವೆಂದರೆ ದೇಶಿ ಆಕಳ ಸೆಗಣಿ, ಗೋಮೂತ್ರ, ಸುಣ್ಣ ಇತ್ಯಾದಿಗಳನ್ನು ಬಳಸಿ ಬೀಜಗಳ ಮೇಲೆ ಸಂಸ್ಕಾರ ಮಾಡಲು ಮಾಡಲಾದ ನೈಸರ್ಗಿಕ ಮಿಶ್ರಣ. – ಸಂಕಲನಕಾರರು)

೧ ಊ. ನೀರಿನ ವ್ಯವಸ್ಥೆ : ಮನೆಯ ಸುತ್ತಲೂ ಅಥವಾ ಮೇಲ್ಛಾವಣಿಯಲ್ಲಿ ಗಿಡಗಳನ್ನು ಬೆಳೆಸುವ ಹತ್ತಿರವೇ ನೀರಿನಲ್ಲಿ ಇರಬೇಕು. ನೀರನ್ನು ಹಾಕಲು ಸಣ್ಣ ಛಿದ್ರಪಾತ್ರೆ ಅಥವಾ ಪೈಪ್ ಇರಬೇಕು. ನಲ್ಲಿಯಿಂದ ನೀರನ್ನು ಹಾಕುವಾಗ ಒಂದೇ ಜಾಗದಲ್ಲಿ ಹೆಚ್ಚು ನೀರು ಬೀಳದಂತೆ ಅದಕ್ಕೆ ‘ಶವರ್’ ಅಳವಡಿಸಬಹುದು.

೧ ಎ. ತರಕಾರಿಗಳ ಬೀಜಗಳು : ಮನೆಯಲ್ಲಿ ದೊರಕುವ ಮೆಂತೆಕಾಳುಗಳು, ಧನಿಯಾ, ಸಾಸಿವೆ, ಅಲಸಂಡೆ ಮುಂತಾದ ಪದಾರ್ಥಗಳನ್ನು ಬೀಜಗಳೆಂದು ಉಪಯೋಗಿಸಿ ಕೃಷಿಯನ್ನು ಆರಂಭಿಸಬೇಕು. ಮುಂದೆ ನಮ್ಮ ಕುಟುಂಬವರ ಅಭಿರುಚಿಗನುಸಾರ ತರಕಾರಿಗಳ ಪಟ್ಟಿಯನ್ನು ತಯಾರಿಸಿ, ಹಾಗೆಯೇ ಜಾಗದ ಲಭ್ಯತೆಯ ಬಗ್ಗೆ ವಿಚಾರ ಮಾಡಿ ತರಕಾರಿಗಳ ಬೀಜಗಳನ್ನು ತರ ಬೇಕು. ಬೀಜಗಳು ಸಾಧ್ಯವಿದ್ದಷ್ಟು ದೇಶಿ ಇರಬೇಕು. ಆದರೆ ಅವು ಸಿಗದಿದ್ದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೀಜಗಳನ್ನು ಬಳಸಬೇಕು.

೧ ಏ. ಹಣ್ಣಿನ ಗಿಡಗಳು ಮತ್ತು ಹೂವುಗಳ ಗಿಡಗಳ ಕಸಿಗಳು ಅಥವಾ ರೆಂಬೆಗಳು : ಸರಕಾರದ ಮಾನ್ಯತೆ ಇರುವ ಕೃಷಿ ಸೇವಾಕೇಂದ್ರಗಳು ಅಥವಾ ನಂಬಿಕೆಯಿರುವ ನರ್ಸರಿಗಳಲ್ಲಿ (ಸಸ್ಯಶಾಲೆಗಳಲ್ಲಿ) ಹಣ್ಣಿನ ಮರದ ಉತ್ತಮ ಗುಣಮಟ್ಟದ ಸಸಿಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಕೆಲವು ಹೂವಿನ ಗಿಡಗಳ ರೆಂಬೆಗಳನ್ನು ನೆಟ್ಟು ಹೊಸ ಸಸಿಗಳನ್ನು ತಯಾರಿಸಲು ಬರುತ್ತದೆ.

೧ ಐ. ದೇಶಿ ಹಸುವಿನ ಸೆಗಣಿ ಮತ್ತು ಗೋಮೂತ್ರ : ಜೀವಾಮೃತದ ಬಳಕೆಯನ್ನು ನಿಯಮಿತವಾಗಿ ಮಾಡಲು ಸಾಧ್ಯವಾಗಬೇಕೆಂದು ಇವುಗಳು ಯಾವಾಗಲೂ ಸಿಗಬೇಕು ಎಂಬ ರೀತಿಯಲ್ಲಿ ಪರ್ಯಾಯ ಕಂಡು ಹಿಡಿಯಬೇಕು. ಕನಿಷ್ಠ ೧೫ ದಿನಗಳಿಗೊಮ್ಮೆ ದೇಶಿ ಹಸುವಿನ ೧೦೦ ಗ್ರಾಮ್ ತಾಜಾ ಸೆಗಣಿ ಮತ್ತು ೧೦೦ ಮಿ.ಲೀ. ಗೋಮೂತ್ರ (ಎಷ್ಟು ಹಳೆಯದಾಗಿದ್ದರೂ ನಡೆಯುತ್ತದೆ.) ಸಿಗುವಂತೆ ನೋಡಬೇಕು. ಇದು ಸಹಜಸಾಧ್ಯವಿದೆ.

೧ ಒ. ಇತರ ಸಾಹಿತ್ಯಗಳು : ಚಿಕ್ಕ ಹುಲ್ಲು ಕೊಯ್ಯುವ ಕುಡಗೋಲು, ಗಿಡಗಳನ್ನು ಕತ್ತರಿಸುವ ಕತ್ತರಿ, ಸಣಬಿನ ದಾರ, ಗಿಡಗಳಿಗೆ ಆಧಾರ ನೀಡಲು ಚಿಕ್ಕ ಕೋಲುಗಳು, ತುಷಾರ ಸಿಂಪಡಿಸುವ (ಸ್ಪ್ರೇಯ) ಚಿಕ್ಕ ಬಾಟಲಿ ಇತ್ಯಾದಿ ಸಾಹಿತ್ಯಗಳ ಆವಶ್ಯಕತೆಯೂ ಇದೆ.

೨. ತರಕಾರಿಗಳ ಕೃಷಿಯಲ್ಲಿ ಗಮನದಲ್ಲಿಡುವ ಅಂಶಗಳು

ಅ. ಸಾಕಷ್ಟು ಸೂರ್ಯಪ್ರಕಾಶ ಬೀಳುವ ಜಾಗದಲ್ಲಿಯೇ ಕೃಷಿ ಯನ್ನು ಮಾಡಬೇಕು.

ಆ. ನೈಸರ್ಗಿಕ ಪದ್ಧತಿಯಲ್ಲಿ ಕೃಷಿಯನ್ನು ಮಾಡುವಾಗ ಅಂತರ ಬೆಳೆಗಳ ಕಾರ್ಯವು ಮಹತ್ವದ್ದಾಗಿರುತ್ತದೆ. ಕುಂಡಗಳಿಗಿಂತ ಕಟ್ಟೆಗಳು ಅಥವಾ ಚೀಲಗಳಲ್ಲಿ (ಗ್ರೋ ಬ್ಯಾಗ್) ಒಂದಕ್ಕಿಂತ ಹೆಚ್ಚು ಬೆಳೆಗಳ ಕೃಷಿಯನ್ನು ಮಾಡಿದರೆ ಹೆಚ್ಚು ಉತ್ಪನ್ನ ಸಿಗುತ್ತದೆ.

ಇ. ಸಾತತ್ಯ, ಜಿಗುಟುತನ, ನಿರೀಕ್ಷಣಾ ಕ್ಷಮತೆ, ಕಲಿಯುವ ವೃತ್ತಿ ಇಂತಹ ಗುಣಗಳ ಆಧಾರದಲ್ಲಿ ತರಕಾರಿಗಳ ಕೃಷಿ ಮಾಡುವುದು ಸಹಜಸಾಧ್ಯವಿದೆ.

ಮುಂಬರುವ ಭೀಕರ ಆಪತ್ಕಾಲದಲ್ಲಿ ಎಲ್ಲರಿಗೂ ಕಡಿಮೆಪಕ್ಷ ತಮ್ಮ ಕುಟುಂಬಕ್ಕಾಗಿಯಾದರೂ ವಿಷಮುಕ್ತ ತರಕಾರಿಗಳು ಸಿಗಬೇಕೆಂದು, ಸನಾತನವು ‘ಮನೆಮನೆಗಳಲ್ಲಿ ಕೈದೋಟ ಅಭಿಯಾನ’ವನ್ನು ಆರಂಭಿಸಿದೆ. ಈ ಬಗೆಗಿನ ಅನೇಕ ಲೇಖನಗಳು, ಛಾಯಾ ಚಿತ್ರಗಳು, ವಿಡಿಯೋಗಳು ಸನಾತನದ ಜಾಲತಾಣದಲ್ಲಿ ಲಭ್ಯವಿವೆ. ಅವುಗಳ ಅಧ್ಯಯನ ಮಾಡಿ ಪ್ರತಿಯೊಬ್ಬರು ಸ್ವಲ್ಪ ಪ್ರಮಾಣದಲ್ಲಿಯಾದರೂ ಕೃಷಿಯನ್ನು ಆರಂಭಿಸಬೇಕು.’ (೨೩.೮.೨೦೨೨)

– ಸೌ. ರಾಘವಿ ಮಯೂರೇಶ ಕೊನೇಕರ, ಢವಳಿ, ಫೋಂಡಾ, ಗೋವಾ.