ಆಯುರ್ವೇದದ ಪ್ರಾಥಮಿಕ ಚಿಕಿತ್ಸೆ

ವೈದ್ಯ ಮೇಘರಾಜ ಪರಾಡಕರ್

ತಲೆನೋವು

‘ಸೂತಶೇಖರ ರಸ’ ಈ ಔಷಧದ ಒಂದು ಗುಳಿಗೆಯನ್ನು ಸಣ್ಣದಾಗಿ ಪುಡಿ ಮಾಡಬೇಕು. (ಒಂದು ತಟ್ಟೆಯಲ್ಲಿ ಗುಳಿಗೆಯನ್ನಿಟ್ಟು ಅದರ ಮೇಲೆ ಲೋಟದಿಂದ ಅಥವಾ ಬಟ್ಟಲಿನಿಂದ ಒತ್ತಿದರೆ ಗುಳಿಗೆಯು ಪುಡಿಯಾಗುತ್ತದೆ.) ಈ ಚೂರ್ಣವನ್ನು ನಾಶಿ ಪುಡಿಯನ್ನು ಸೆಳೆಯುವಂತೆ ಮೂಗಿನಲ್ಲಿ ಸೆಳೆಯಬೇಕು. ಹೀಗೆ ಮಾಡಲು ಸಾಧ್ಯವಾಗದಿದ್ದರೆ ಚಮಚದಷ್ಟು ತೆಳುವಾದ ತುಪ್ಪದಲ್ಲಿ ಈ ಗುಳಿಗೆಯ ಪುಡಿಯನ್ನು ಸೇರಿಸಬೇಕು. ಅಂಗಾತ ಮಲಗಿ ಈ ತುಪ್ಪದಲ್ಲಿ ಮಿಶ್ರಣಗೊಂಡ ಔಷಧಿಯ ೨ – ೨ ಹನಿಗಳನ್ನು ಮೂಗಿನ ಎರಡೂ ಹೊಳ್ಳೆಗಳಲ್ಲಿ ಹಾಕಿ ೨ ನಿಮಿಷ ಮಲಗಬೇಕು. ಅನಂತರ ಎದ್ದು ತುಪ್ಪದಲ್ಲಿ ಮಿಶ್ರಿತಗೊಂಡ ಉಳಿದ ಔಷಧವನ್ನು ನೆಕ್ಕಿ ತಿನ್ನಬೇಕು.’

ಸನಾತನದ ‘ಸೂತಶೇಖರ ರಸ’ ಈ ಔಷಧಿಯು ಈಗ ಲಭ್ಯವಿದೆ. ಇತರ ರೋಗಗಳಲ್ಲಿ ಇದರ ವಿವರವಾದ ಬಳಕೆಯ ಬಗ್ಗೆ ಅದರ ಡಬ್ಬದ ಜೊತೆಗಿರುವ ಕರಪತ್ರದಲ್ಲಿ ನೀಡಲಾಗಿದೆ. ಔಷಧಿಯನ್ನು ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು.

ಮಲಬದ್ಧತೆ

‘ಮಲಬದ್ಧತೆಗಾಗಿ ಗಂಧರ್ವ ಹರಿತಕಿ ವಟಿ’ ಈ ಔಷಧದ ೨ ರಿಂದ ೪ ಗುಳಿಗೆಗಳನ್ನು ರಾತ್ರಿ ಮಲಗುವ ಮೊದಲು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಬೇಕು. ಇದರೊಂದಿಗೆ ಹಸಿವಾಗದಿರುವುದು, ಭೋಜನ ಬೇಡವೆನಿಸುವುದು, ಅಪಚನವಾಗುವುದು, ಹೊಟ್ಟೆಯಲ್ಲಿ ವಾಯು (ಗ್ಯಾಸ್) ಆಗುವುದು, ಈ ಲಕ್ಷಣಗಳಿದ್ದರೆ ‘ಲಶುನಾದಿ ವಟಿ’ ಈ ಔಷಧದ ೧-೨ ಗುಳಿಗೆಗಳನ್ನು ಎರಡು ಬಾರಿಯ ಭೋಜನದ ೧೫ ನಿಮಿಷಗಳ ಮೊದಲು ಜಗಿದು ತಿನ್ನಬೇಕು. ಇದರಿಂದ ಪಾಚಕ ಸ್ರಾವವು ನಿರ್ಮಾಣವಾಗುತ್ತದೆ. ಮಲಬದ್ಧತೆಯಲ್ಲಿ ಈ ಚಿಕಿತ್ಸೆಯನ್ನು ೧೫ ದಿನ ಮಾಡಬೇಕು.’

ಸನಾತನದ ‘ಗಂಧರ್ವ ಹರಿತಕಿ ವಟಿ’ ಮತ್ತು ‘ಲಶುನಾದಿ ವಟಿ’ ಈ ಔಷಧಿಗಳು ಈಗ ಲಭ್ಯವಿವೆ. ಈ ಔಷಧಿಗಳ ವಿವರವಾದ  ಬಳಕೆಯ ಬಗ್ಗೆ ಔಷಧದ ಡಬ್ಬದ ಜೊತೆಯಲ್ಲಿರುವ ಕರಪತ್ರದಲ್ಲಿ ನೀಡಲಾಗಿದೆ. ಕರಪತ್ರವನ್ನು ಕಾಳಜಿಪೂರ್ವಕ ಇಡಬೇಕು. ಔಷಧಿಗಳನ್ನು ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು.

ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೭.೭.೨೦೨೨)