ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯದ ಮಾಹಿತಿ ಪಡೆದ ಪ್ರಸಿದ್ಧ ಭರತನಾಟ್ಯಮ್ ನೃತ್ಯಾಂಗನೆ ಡಾ. (ಸೌ.) ಸಹನಾ ಭಟ್ !

ಗೋವಾದ ರಾಮನಾಥಿಯ ಸನಾತನದ ಆಶ್ರಮಕ್ಕೆ ಡಾ. (ಸೌ.) ಸಹನಾ ಭಟ್ ಭೇಟಿ

ಡಾ. (ಸೌ.) ಸಹನಾ ಭಟ್

ಫೋಂಡಾ (ಗೋವಾ) – ಹುಬ್ಬಳ್ಳಿಯ ಪ್ರಸಿದ್ಧ ಭರತನಾಟ್ಯಮ್ ನೃತ್ಯಾಂಗನೆ ಮತ್ತು ‘ನಾಟ್ಯಾಂಜಲಿ ನೃತ್ಯ ಕಲಾಕೇಂದ್ರ’ದ ಸಂಸ್ಥಾಪಕಿ ಡಾ. (ಸೌ.) ಸಹನಾ ಭಟ್ ಇವರು ೨ ಆಗಸ್ಟ್ ೨೦೨೨ ಈ ದಿನದಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಸಾಧಕರನ್ನು ಭೇಟಿಯಾದರು. ಅವರೊಂದಿಗೆ ಅವರ ವಿದ್ಯಾರ್ಥಿನಿಯರಾದ ಕು. ನಿಸರ್ಗಾ ದಯನ್ನವರ ಮತ್ತು ಕು. ಪೂಜಾ ಹೆಗಡೆ ಇವರು ಸಹ ಉಪಸ್ಥಿತರಿದ್ದರು. ಡಾ. (ಸೌ.) ಸಹನಾ ಭಟ್ ಮತ್ತು ತಮ್ಮ ವಿದ್ಯಾರ್ಥಿನಿಯರೊಂದಿಗೆ ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯದ ನೃತ್ಯ ಅಧ್ಯಯನಕಾರರಾದ ಸೌ. ಸಾವಿತ್ರಿ ವೀರೇಂದ್ರ ಇಚಲಕರಂಜೀಕರ ಇವರು ಸಂವಾದ ನಡೆಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ-ನೃತ್ಯ ವಿಭಾಗದ ಸಮನ್ವಯಕರಾದ ಸುಶ್ರೀ (ಕು.) ತೇಜಲ ಪಾತ್ರೀಕರ (ಸಂಗೀತ ವಿಶಾರದ, ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರು ಅವರಿಗೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಇಲ್ಲಿಯವರೆಗೆ ಮಾಡಿದ ಸಂಶೋಧನಾ ಕಾರ್ಯದ ಬಗ್ಗೆ ಮಾಹಿತಿಯನ್ನು ನೀಡಿದರು. ಡಾ. (ಸೌ.) ಭಟ್ ಇವರು ಆ ಬಗ್ಗೆ ಜಿಜ್ಞಾಸೆಯಿಂದ ತಿಳಿದುಕೊಂಡರು.
ಡಾ. (ಸೌ.) ಭಟ್ ಮತ್ತು ಅವರ ಇಬ್ಬರೂ ವಿದ್ಯಾರ್ಥಿನಿಯರು ಭರತನಾಟ್ಯಮ್‍ಗೆ ಸಂಬಂಧಿಸಿದಂತೆ ವಿವಿಧ ಸಂಶೋಧನಾತ್ಮಕ ಪ್ರಯೋಗಗಳ ಬಗ್ಗೆ ಸೂಚಿಸಿದರು, ಹಾಗೆಯೇ ವಿಶ್ವವಿದ್ಯಾಲಯದ ವತಿಯಿಂದ ನಡೆಯುವ ಸಂಗೀತ-ನೃತ್ಯದ ಸಂಶೋಧನಾತ್ಮಕ ಪ್ರಯೋಗಗಳಲ್ಲಿ ಪಾಲ್ಗೊಳ್ಳುವ ಇಚ್ಛೆಯನ್ನೂ ವ್ಯಕ್ತಪಡಿಸಿದರು.

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯದ ಬಗ್ಗೆ ತಿಳಿದುಕೊಳ್ಳಲು ಬಂದ ಡಾ. (ಸೌ.) ಸಹನಾ ಭಟ್ ಇವರು ಗೋವಾದ ರಾಮನಾಥಿಯ ಸನಾತನ ಆಶ್ರಮಕ್ಕೂ ಭೇಟಿ ನೀಡಿ ಅಲ್ಲಿನ ಕಾರ್ಯದ ಬಗ್ಗೆ ತಿಳಿದುಕೊಂಡರು. ಆಶ್ರಮದಲ್ಲಿ ಸೌ. ಭಟ್ ಇವರಿಗೆ ಅರಿವಾದ ವೈಶಿಷ್ಟ್ಯ ಪೂರ್ಣ ಅಂಶಗಳನ್ನು ಮತ್ತು ಬಂದ ಅನುಭೂತಿಗಳನ್ನು ಇಲ್ಲಿ ನೋಡೋಣ.

೧. ಸನಾತನದ ಆಶ್ರಮದಲ್ಲಿ ಪ್ರವೇಶಿಸಿದ ಕೂಡಲೇ ‘ಈ ಸ್ಥಳದಲ್ಲಿ ವಿಭಿನ್ನವಾದ ಸಂವೇದನೆಯ ಅರಿವಾಗುತ್ತಿದೆ’, ಎಂದು ಡಾ. ಭಟ್ ಇವರು ಹೇಳಿದರು.

೨. ಆಶ್ರಮವನ್ನು ನೋಡುವಾಗ ಸ್ವಾಗತ ಕಕ್ಷೆಯಲ್ಲಿ ಸನಾತನ-ನಿರ್ಮಿತ ಶ್ರೀಕೃಷ್ಣನ ಸಾತ್ವಿಕ ಚಿತ್ರವನ್ನು ನೋಡಿ ಅವರಿಗೆ ಅದರಲ್ಲಿ ‘ಮಾರಕ ಭಾವವಿರುವುದಾಗಿ ಅರಿವಾಯಿತು ಮತ್ತು ಆ ಚಿತ್ರವು ಹೆಚ್ಚು ಸಜೀವವಾಗಿದೆ’ ಎಂದು ಅರಿವಾಯಿತು.

೩. ಧ್ಯಾನಮಂದಿರದಲ್ಲಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಛಾಯಾಚಿತ್ರವನ್ನು ನೋಡಿ ಡಾ. (ಸೌ.) ಸಹನಾ ಭಟ್ ಇವರಿಗೆ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಮಾನ್ಯ ಮಾನವರಲ್ಲ. ಅವರ ನಗು ಶ್ರೀಕೃಷ್ಣನಂತಿದೆ. ಅವರ ರೂಪದಲ್ಲಿ ಶ್ರೀಕೃಷ್ಣನೇ ಇಲ್ಲಿಗೆ ಬಂದಿದ್ದಾನೆ’, ಎಂದು ಅರಿವಾಯಿತು. ವಿಶೇಷವೆಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಅವರಿಗೆ ಯಾವುದೇ ಮಾಹಿತಿಯನ್ನು ನೀಡಿರದಿದ್ದರೂ ಅವರಿಗೆ ಆ ವೈಶಿಷ್ಟ್ಯದ ಅರಿವಾಯಿತು ಮತ್ತು ಅವರು ಸ್ವಯಂಪ್ರೇರಿತರಾಗಿ ಆ ಭಾವನೆಯನ್ನು ವ್ಯಕ್ತಪಡಿಸಿದರು.

ಡಾ. (ಸೌ.) ಸಹನಾ ಭಟ್ ಇವರು ಭಗವಾನ ಶ್ರೀಕೃಷ್ಣನ ಭಕ್ತರಾಗಿದ್ದು ‘ನಾನು ಶ್ರೀಕೃಷ್ಣನೊಂದಿಗೆ ಸೂಕ್ಷ್ಮದಿಂದ ಸತತವಾಗಿ ಮಾತನಾಡುತ್ತಿರುತ್ತೇನೆ’, ಎಂದು ಅವರು ಹೇಳಿದರು.

೪. ‘ಧ್ಯಾನಮಂದಿರದಲ್ಲಿನ ಶ್ರೀ ದುರ್ಗಾದೇವಿಯ ಹಿತ್ತಾಳೆಯ ಮೂರ್ತಿಯಿಂದ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯವು ಪ್ರಕ್ಷೇಪಿತವಾಗುತ್ತಿದೆ’ ಎಂದು ಅವರಿಗೆ ಅರಿವಾಯಿತು.

– ಸೌ. ಸಾವಿತ್ರಿ ಇಚಲಕರಂಜೀಕರ