೧. ಭಾರತ ತನ್ನನ್ನು ಹಿಂದೂ ರಾಷ್ಟ್ರವೆಂದು ಯಾವಾಗ ಘೋಷಿಸುವುದು ?
‘ಯಾವ ದಿನ ಭಾರತ ತನ್ನನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದೋ ಅನಂತರ ಕೆಲವೇ ಕಾಲದಲ್ಲಿ ೧೪-೧೫ ದೇಶಗಳೂ ತಮ್ಮನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುವು’ – ಪುರಿ ಪೀಠದ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ
೨. ಶಾಂತಿವಾದಿ ಕ್ರೈಸ್ತರ ಮತಾಂಧತೆಯನ್ನು ತಿಳಿಯಿರಿ !
ಲಖಿಂಪುರದಲ್ಲಿ (ಅಸ್ಸಾಂ) ಕ್ರೈಸ್ತ ಯುವತಿಯನ್ನು ಪ್ರೀತಿಸುತ್ತಿದ್ದ ಹಿಂದೂ ಯುವಕ ಬಿಕಿ ಬಿಶಾಲ್ ಇವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಕಾರಣಕ್ಕಾಗಿ ಚರ್ಚಿನ ಕಾರ್ಯಕರ್ತರು ಬರ್ಬರವಾಗಿ ಥಳಿಸಿ ಕೊಂದಿದ್ದಾರೆ.
೩. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದವರಿಗೆ ಶಿಕ್ಷೆ ಯಾವಾಗ ?
ಆಗ್ರಾದ (ಉತ್ತರಪ್ರದೇಶ) ಬಾಲಾಜಿ ದೇವಸ್ಥಾನದಲ್ಲಿ ಮದ್ಯಪಾನ ಮಾಡುತ್ತಿದ್ದ ನಿಜಾಮ್ ಮತ್ತು ಗುಲಫಾಮ್ ಇವರಿಬ್ಬರನ್ನು ವಿರೋಧಿಸಿದಕ್ಕೆ ಅವರಿಬ್ಬರು ಸೇರಿ ದೇವಾಲಯವನ್ನು ಧ್ವಂಸಗೊಳಿಸಿದರು ಮತ್ತು ಅರ್ಚಕನನ್ನು ಥಳಿಸಿದರು. ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
೪. ಗಾಂಧಿ ಪರಿವಾರದಿಂದ ಕ್ರಾಂತಿಕಾರಿಗಳ ಅವಮಾನವನ್ನು ಅರಿತುಕೊಳ್ಳಿ !
ತಿರುವನಂತಪುರದಲ್ಲಿ ಕೇರಳದ ಕೆ.ಇ. ಮೆಮನ್ ಮತ್ತು ಪದ್ಮಶ್ರೀ ಪಿ. ಗೋಪಿನಾಥನ್ ನಾಯರ್ ಎಂಬ ಇಬ್ಬರು ಕ್ರಾಂತಿಕಾರರ ಸ್ಮಾರಕಗಳನ್ನು ಅನಾವರಣಗೊಳಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದ್ದರೂ ಅವರು ಉಪಸ್ಥಿತ ಇರಲಿಲ್ಲ. ಇದರಿಂದಾಗಿ ಕೇರಳ ಪ್ರದೇಶಾಧ್ಯಕ್ಷ ಸುಧಾಕರನ್ ಕ್ಷಮೆ ಕೇಳಬೇಕಾಯಿತು.
೫. ಇತರ ಧರ್ಮಗಳ ಧಾರ್ಮಿಕ ಸ್ಥಳಗಳಲ್ಲಿ ಹೀಗೆ ಎಂದಾದರೂ ನಡೆಯುತ್ತದೆಯೇ ?
ಪಾಕಿಸ್ತಾನವು ಪ್ರವಾಹದಿಂದ ತತ್ತರಿಸಿದೆ. ಪಾಕ್‌ನ ಜಲಾಲ ಖಾನ್ ಗ್ರಾಮದ ೧೦೦ ಕೋಣೆಗಳ ಬಾಬಾ ಮಧೋದಾಸ್ ದೇವಾಲಯವು ೨೦೦ ರಿಂದ ೩೦೦ ಪ್ರವಾಹ ಸಂತ್ರಸ್ತರಿಗೆ ಆಹಾರ, ನೀರು ಮತ್ತು ಆಶ್ರಯವನ್ನು ಒದಗಿಸಿದೆ. ಇದರಲ್ಲಿ ಹೆಚ್ಚಿನವರು ಮುಸಲ್ಮಾನರಿದ್ದಾರೆ.
೬. ಅಮೇಝಾನ್ ಇಂಡಿಯಾ ನಿಜವಾದ ಮುಖವಾಡವನ್ನು ಅರಿತುಕೊಳ್ಳಿ !
‘ಅಮೇಝಾನ್ ಇಂಡಿಯಾ’ ಕಂಪನಿಯು ಮತಾಂತರಿಸುವ ಕ್ರೈಸ್ತ ಸಂಸ್ಥೆಗೆ ದೇಣಿಗೆ ನೀಡಿದ್ದಕ್ಕಾಗಿ ರಾಷ್ಟ್ರೀಯ ಮಕ್ಕಳ ರಕ್ಷಣೆ ಮತ್ತು ಹಕ್ಕು ಆಯೋಗವು ನೋಟೀಸ್ ನೀಡಿದೆ.
೭. ಹಿಜಾಬ್‌ಗೆ ಇಸ್ಲಾಮಿ ದೇಶದಲ್ಲಾಗುತ್ತಿರುವ ವಿರೋಧವನ್ನು ತಿಳಿಯಿರಿ !
ಹಿಜಾಬ್‌ಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಪೊಲೀಸರು ಥಳಿಸಿದ್ದರಿಂದ ೨೨ ವರ್ಷ ವಯಸ್ಸಿನ ಮಹಸಾ ಅಮಿನಿ ಇವಳು ಮೃತಪಟ್ಟಿದ್ದಳು. ಅವಳ ಮೃತ್ಯುವನ್ನು ಖಂಡಿಸಿ ಇರಾನ್‌ನಲ್ಲಿ ಮಹಿಳೆಯರು ಹಿಜಾಬ್‌ಅನ್ನು ತೆಗೆದುಹಾಕಿ ಸರಕಾರದ ವಿರುದ್ಧ ತೀವ್ರ ಆಂದೋಲನ ಮಾಡಿದರು.