ಸಮಯದ ಮಹತ್ವಆಂಗ್ಲ ಭಾಷೆಯಲ್ಲಿ ‘ಮನುಷ್ಯ ಜೀವನದಲ್ಲಿ ಸಮಯದಷ್ಟು ಅಮೂಲ್ಯವಾದುದು ಯಾವುದೂ ಇಲ್ಲ’, ಎಂಬ ಒಂದು ಮಾತಿದೆ. ‘ಟೈಮ್ ಇಸ್ ಮನಿ’, ಅಂದರೆ ‘ಸಮಯವೇ ಧನವಾಗಿದೆ’. ಹಣದ ಕೊರತೆಯನ್ನು ಪ್ರಯತ್ನಗಳಿಂದ ಸರಿದೂಗಿಸಬಹುದು; ಆದರೆ ಕಳೆದುಹೋದ ಇಂದಿನ ಅಮೂಲ್ಯ ಸಮಯವು ಪುನಃ ಎಂದಿಗೂ ಹಿಂದಿರುಗಿ ಸಿಗುವುದಿಲ್ಲ. ನಮ್ಮ ಕಳೆದು ಹೋದ ಜೀವನವು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದರೂ ಹಿಂದಿರುಗಿ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಗಮನದಲ್ಲಿಡಿ ! |
ಸಮಯವನ್ನು ಸದುಪಯೋಗಿಸಲು ಮಾಡಬೇಕಾದ ಪ್ರಯತ್ನಗಳು !
೧. ಖಾಲಿ ಸಮಯವನ್ನು ಉಪಯೋಗಿಸಿಕೊಳ್ಳುವುದು
ನಿತ್ಯದ ಜೀವನದಲ್ಲಿ ನಮಗೆ ಸ್ವಲ್ಪ ಪ್ರಮಾಣದಲ್ಲಿ ಖಾಲಿ ಸಮಯ ಸಿಗುತ್ತದೆ. ‘ಈ ಖಾಲಿ ಸಮಯವನ್ನು ಹೇಗೆ ಬಳಸಬೇಕು’ ಎಂಬುದು ಆ ವ್ಯಕ್ತಿಯ ಮೇಲೆ ಹಾಗೆಯೇ ಕಾಲದ ಪ್ರಾಪ್ತ ಪರಿಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ. ಕಾಲದ ಪ್ರಾಪ್ತ ಪರಿಸ್ಥಿತಿಯು ಯಾವಾಗಲೂ ಬದಲಾಗುತ್ತಿರುತ್ತದೆ. ಆದರೆ ವ್ಯಕ್ತಿಯ ಮೇಲೆ ಅವಲಂಬಿತ ಖಾಲಿ ಸಮಯವನ್ನು ನಾವು ಬಳಸಬಹುದು. ಯಾವ ವ್ಯಕ್ತಿ ಉತ್ಸಾಹಿ, ಧ್ಯೇಯನಿಷ್ಠ ಮತ್ತು ಸಕಾರಾತ್ಮಕನಾಗಿರುತ್ತಾನೆಯೋ, ಅವನು ಖಾಲಿ ಸಮಯದ ಸರ್ವೋತ್ತಮವಾಗಿ ಉಪಯೋಗಿಸಿಕೊಳ್ಳುತ್ತಾನೆ. ಇದರ ವಿರುದ್ಧ ಚಿಂತಾಗ್ರಸ್ತ, ಆಲಸಿ ಮತ್ತು ನಕಾರಾತ್ಮಕ ವಿಚಾರವಿರುವ ವ್ಯಕ್ತಿಯ ಖಾಲಿ ಸಮಯವು ದುರುಪಯೋಗವಾಗುತ್ತದೆ. ಖಾಲಿ ಸಮಯವು ಆಸ್ತಿಯಾಗಿದೆ. ಅದರಲ್ಲಿನ ಒಂದೂ ಕ್ಷಣವೂ ವ್ಯರ್ಥ ಆಗಬಾರದು ಏಕೆಂದರೆ ಆ ಸಮಯವನ್ನು ಕಳೆದುಕೊಳ್ಳುವುದು ಎಂದರೆ ಸಾಮರ್ಥ್ಯವನ್ನು ಕಳೆದುಕೊಂಡಂತೆ.
೨. ನಿಯೋಜಿತ ಕಾರ್ಯವನ್ನು ಸಕಾಲದಲ್ಲಿ ಮಾಡುವುದು
ನಿತ್ಯದ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಬೇಕು. ತಡವಾದರೆ ಅದು ದುಬಾರಿಯಾಗಬಹುದು. ಇಂದಿನ ಮಹತ್ವದ ಕೆಲಸವನ್ನು ಮರುದಿನಕ್ಕೆ ಮುಂದೂಡಿದರೆ ಅದು ಹೆಚ್ಚು ಕಠಿಣವೆನಿಸುತ್ತದೆ. ಈ ರೀತಿ ಕೆಲಸಗಳನ್ನು ಮುಂದೂಡುವ ಪ್ರವೃತ್ತಿಯಿಂದ ಆ ಕೆಲಸಗಳು ಎಂದಿಗೂ ಸಕಾಲದಲ್ಲಿ ಪೂರ್ಣ ಆಗುವುದಿಲ್ಲ. ಇಂತಹವರಿಗೆ ಯಶಸ್ಸೂ ಮರೀಚಿಕೆಯಾಗಿಬಿಡುತ್ತದೆ.
೩. ಗಡಿಯಾರದ ಕಡೆಗೆ ಗಮನವಿಡುವುದು
ಗಡಿಯಾರದ ಕಡೆಗೆ ದೃಷ್ಟಿಯನ್ನು ತಿರುಗಿಸಿ ನಮ್ಮ ಕಾರ್ಯದೊಂದಿಗೆ ಸಂಬಂಧಿಸಿದ ಸಮಯದ ಪ್ರಗತಿಯ ಬಗ್ಗೆ ವರದಿಯನ್ನು ತೆಗೆದುಕೊಳ್ಳಬೇಕು. ಗಡಿಯಾರವನ್ನು ನಮ್ಮ ಸಹಾಯಕನೆಂದು ತಿಳಿದು ನಮ್ಮ ಕಾರ್ಯವನ್ನು ಮಾಡಿದರೆ, ಸಮಯದ ಆಯೋಜನೆಯು ಸಹಜವಾಗಿ ಸಾಧ್ಯವಾಗುತ್ತದೆ.
೪. ವೇಳಾಪಟ್ಟಿ ತಯಾರಿಸಿ ಮಾಡುವುದು
ಪೂರ್ವನಿಯೋಜಿತ ಸ್ಥಳದಲ್ಲಿ, ಪೂರ್ವನಿಯೋಜಿತ ಸಮಯದಲ್ಲಿ, ಪೂರ್ವನಿಯೋಜಿತ ಪದ್ಧತಿಯಿಂದ ಮತ್ತು ಪೂರ್ವ ನಿಯೋಜಿತ ಜನರ ಸಹಾಯದಿಂದ ಪೂರ್ಣ ನಿಯೋಜಿತ ಕೆಲಸಗಳನ್ನು ಮಾಡುವುದು, ಈ ವಿವರಣೆಗೆ ‘ವೇಳಾಪಟ್ಟಿ’ ಎಂದು ಹೇಳಲಾಗುತ್ತದೆ. ನಿರ್ಧರಿಸಿದ ಕೆಲಸವು ಎಷ್ಟು ಮಹತ್ವದ್ದಾಗಿದೆಯೋ, ‘ಅದನ್ನು ಯಾವ ಸ್ಥಳದಲ್ಲಿ ಮತ್ತು ಯಾವ ಪದ್ಧತಿಯಿಂದ ಮಾಡಬೇಕು ?’, ಎಂಬುದಕ್ಕೆ ಸಹ ಅಷ್ಟೇ ಮಹತ್ವವಿದೆ. ಉದಾಹರಣೆಗಾಗಿ ಸರಕಾರಿ ಕಚೇರಿಯಲ್ಲಿ ಯಾವುದಾದರೊಂದು ಕೆಲಸವಿದ್ದರೆ ‘ಆ ಕೆಲಸಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಎಂಬ ವಿವರಣೆ ಎಷ್ಟು ಮಹತ್ವದ್ದಾಗಿದೆಯೋ, ಅಷ್ಟೇ ಆ ಸರಕಾರಿ ಕಚೇರಿ ಮನೆಯಿಂದ ಎಷ್ಟು ದೂರವಿದೆ ಎಂಬ ವಿವರಣೆಯೂ ಮಹತ್ವದ್ದಾಗಿದೆ. ಪ್ರತಿಯೊಬ್ಬರು ತಮ್ಮ ಅನುಕೂಲಕ್ಕನುಸಾರ ತಮ್ಮ ಸ್ವತಂತ್ರ ವೇಳಾಪತ್ರಿಕೆಯನ್ನು ತಯಾರಿಸಬೇಕು. ಅದರಲ್ಲಿ ಪ್ರತಿ ದಿನ ವೇಳೆಗನುಸಾರ ಯಾವ ಕೃತಿ ಮಾಡುತ್ತೇವೆ ಎಂದು ನಮೂದಿಸಬೇಕು.
೫. ಕೌಟುಂಬಿಕ, ಕಚೇರಿಯ ಸಮಯವನ್ನು ಯೋಗ್ಯವಾಗಿ ಬಳಸುವುದು, ಸಂದೇಶವನ್ನು ಬರೆದಿಟ್ಟುಕೊಳ್ಳುವುದು, ಕೃತಿಗಳ ವ್ಯಾಪ್ತಿ ತೆಗೆಯುವುದು, ಕೃತಿಯನ್ನು ಮಾಡುವಾಗ ಪಟ್ಟಿಯನ್ನು ಪ್ರಾಧಾನ್ಯತೆಯನ್ನು ನಿಶ್ಚಯಿಸುವುದು, ಇತರರ ಸಹಾಯ ಪಡೆಯುವುದು, ಒಂದೇ ಸಲಕ್ಕೆ ವಿವಿಧ ಕೃತಿಗಳನ್ನು ಮಾಡುವುದು, ಪರ್ಯಾಯಗಳ ವಿಚಾರ ಮಾಡುವುದು ಇವುಗಳಿಂದ ಕೃತಿಯು ಪರಿಣಾಮಕಾರಿಯಾಗಿ ಆಗುತ್ತದೆ. ವೈಯಕ್ತಿಕ ತಯಾರಿ ಮಾಡಿಕೊಳ್ಳುವಾಗ ಪ್ರಾರ್ಥನೆ, ನಾಮಜಪ ಅಥವಾ ಸ್ವಯಂಸೂಚನಾ ಸತ್ರಗಳನ್ನು ಮಾಡುವುದು, ದೂರವಾಣಿಯಲ್ಲಿ ಮಾತನಾಡುವಾಗ ಕಸ ಗುಡಿಸುವುದು ಅಥವಾ ಇತರ ಕೆಲಸಗಳನ್ನು ಮಾಡುವುದು, ಇಂತಹ ಕೃತಿಗಳಿಂದ ಸಮಯದ ಸದುಪಯೋಗವಾಗುತ್ತದೆ.
ಸಮಯವನ್ನು ಸದುಪಯೋಗಿಸುತ್ತಿದ್ದ ಸ್ವಾತಂತ್ರ್ಯವೀರ ಸಾವರಕರ !ಸ್ವಾತಂತ್ರ್ಯವೀರ ಸಾವರಕರಸ್ವಾತಂತ್ರ್ಯವೀರ ಸಾವರಕರರು ಜೂನ್ ೧೯೦೬ ರಲ್ಲಿ ‘ಬ್ಯಾರಿಸ್ಟರ್’ ಆಗಲು ಇಂಗ್ಲೆಂಡಗೆ ಹೋದರು. ಈ ಕಾಲಾವಧಿಯಲ್ಲಿ ಅವರು ಅಧ್ಯಯನವನ್ನು ಪೂರ್ಣಗೊಳಿಸಿ ‘ಬ್ಯಾರಿಸ್ಟರ್’ ಆದರು. ಈ ಅಧ್ಯಯನ ನಡೆದಿರುವಾಗಲೇ ‘ಮ್ಯಝ ನೀಚೆ ಚರಿತ್ರೆ’ ಮತ್ತು ‘೧೮೫೭ ರ ಸ್ವಾತಂತ್ರ್ಯಸಂಗ್ರಾಮ’ ಈ ಗ್ರಂಥಗಳನ್ನು ಬರೆದು ಪೂರ್ಣಗೊಳಿಸಿದರು. ಇದೇ ವೇಳೆ ಪುಣೆಯ ‘ಕಾಳ’ ದಿನಪತ್ರಿಕೆಯ ಪರ್ತಕರ್ತನೆಂದು ಅವರು ಲಂಡನ್‌ನಿಂದ ಸುದ್ದಿಪತ್ರಗಳನ್ನು ಕಳುಹಿಸುತ್ತಿದ್ದರು. ಅವರು ಇದೇ ಕಾಲದಲ್ಲಿ ‘ಇಂಡಿಯಾ ಹೌಸ್’ನ ಅಟ್ಟದ ಮೇಲೆ ಸೇನಾಪತಿ ಬಾಪಟ ಇವರೊಂದಿಗೆ ಬಾಂಬ್ ವಿದ್ಯೆಯ ಯಶಸ್ವಿ ಪ್ರಯೋಗವನ್ನು ಮಾಡಿದರು ಮತ್ತು ‘ಅಭಿನವ ಭಾರತ’ ಈ ಕ್ರಾಂತಿಕಾರಿ ಸಂಘಟನೆಗಾಗಿ ಯುವಕರನ್ನು ಸಂಘಟಿಸಿದರು. ಈ ಯುವಕರ ಪೈಕಿ ಒಬ್ಬರಾದ ಮದನಲಾಲ ಧಿಂಗ್ರಾ ಇವರು ಮುಂದೆ ಕರ್ಝನ್ ವಾಯಲಿ ಇವರನ್ನು ಕೊಂದರು. ವಯಸ್ಸಿನ ೨೩ ರಿಂದ ೨೬ ಈ ಕಾಲಾವಧಿಯಲ್ಲಿ ಸ್ವಾತಂತ್ರ್ಯವೀರ ಸಾವರಕರ ಇವರು ಒಂದೇ ಸಲಕ್ಕೆ ಮೇಲಿನ ಅನೇಕ ಕಾರ್ಯಗಳನ್ನು ಮಾಡಿ ಮುಗಿಸಿದರು. ನೀವು ಸಹ ನಿರ್ಧರಿಸಿದರೆ ಮತ್ತು ಧ್ಯೇಯನಿಷ್ಠರಾಗಿದ್ದರೆ, ನಿಮ್ಮಿಂದಲೂ ಸಮಯದ ಸದುಪಯೋಗವಾಗುವುದು ಮತ್ತು ಭವ್ಯದಿವ್ಯ ಕಾರ್ಯವೂ ನೆರವೇರುವ ಬಗ್ಗೆ ಸಂದೇಹ ಬೇಡ ! |
ಸಮಯ ವ್ಯರ್ಥವಾಗಲು ಕಾರಣವಾಗಿರುವ ದೋಷಗಳು ಮತ್ತು ಅವುಗಳ ಮೇಲಿನ ಪರಿಹಾರಗಳು
೧. ಸಮಯದ ಗಾಂಭೀರ್ಯ ಇಲ್ಲದಿರುವುದು
ನಿಸರ್ಗದಲ್ಲಿನ ಗಾಳಿ, ನೀರು ಇತ್ಯಾದಿ ಹೆಚ್ಚಿನ ವಿಷಯಗಳು ಉಚಿತವಾಗಿ ಸಿಗುತ್ತವೆ. ಆದುದರಿಂದ ಅವುಗಳು ಮಹತ್ವದ್ದೆನಿಸುವುದಿಲ್ಲ. ವೇಳೆಯ ಗಾಂಭೀರ್ಯವಿಲ್ಲದಿರುವುದರಿಂದ ತಮ್ಮ ಸಮಯವು ವ್ಯರ್ಥ ಕಳೆದುಹೋದ ಬಗ್ಗೆ ಅಥವಾ ಇತರರು ಸಮಯವನ್ನು ವ್ಯರ್ಥ ಕಳೆಯುವ ಬಗ್ಗೆ ಏನೂ ಅನಿಸುವುದಿಲ್ಲ. ಯಾರು ಸಮಯವನ್ನು ಗೌರವಿಸುವರೋ ಮತ್ತು ಯೋಗ್ಯ ಬಳಕೆ ಮಾಡುವರೋ ಅವರನ್ನು ಸಮಯ ಮತ್ತು ಜನರೂ ಗೌರವಿಸುತ್ತಾರೆ.
೨. ನಿರರ್ಥಕ ಕೃತಿ ಸುಖಮಯವೆನಿಸುವುದು
ಕೆಲವು ಜನರು ಮನೋರಂಜನೆ ಅಥವಾ ಸುಖಪ್ರಾಪ್ತಿಗಾಗಿ ಖಾಲಿ ಸಮಯದಲ್ಲಿ ‘ಇಂಟರ್‌ನೆಟ್’ನಲ್ಲಿ ಮುಳುಗಿ ಹೋಗುತ್ತಾರೆ ಅಥವಾ ‘ವಿಡಿಯೋ ಗೇಮ್’ ಆಡುವಲ್ಲಿ ಮಗ್ನರಾಗುತ್ತಾರೆ. ಇದರಲ್ಲಿ ಅವರ ಬಹಳಷ್ಟು ಸಮಯ ವ್ಯರ್ಥ ಹೋಗುತ್ತದೆ. ಎಷ್ಟೋ ಜನರು ಅನಾವಶ್ಯಕ ಹರಟೆ ಹೊಡೆಯುತ್ತಾ ಅಥವಾ ಪಕ್ಕದವರೊಂದಿಗೆ ಜಗಳವಾಡುತ್ತಾ ಸಮಯ ವ್ಯರ್ಥ ಕಳೆಯುತ್ತಾರೆ.
ಸಮಯದ ಮಹತ್ವವನ್ನು ಮನಸ್ಸಿನ ಮೇಲೆ ಬಿಂಬಿಸಲು ನಾವು ಮನಸ್ಸಿಗೆ ಮುಂದಿನಂತೆ ಸ್ವಯಂಸೂಚನೆಯನ್ನು ನೀಡಬಹುದು.
‘ಸಮಯದ ಮಹತ್ವವಿಲ್ಲದಿರುವುದು, ಈ ದೋಷದಿಂದ ಯಾವಾಗ ನಾನು … (ತಮ್ಮ ಸಮಯವನ್ನು ವ್ಯರ್ಥ ಮಾಡುವ ಕೃತಿಯನ್ನು ಬರೆಯಬೇಕು.) ಈ ಕೃತಿಯಲ್ಲಿ ನಿರರ್ಥಕ ಸಮಯವನ್ನು ವ್ಯರ್ಥ ಕಳೆಯುತ್ತಿರುವೆನೋ, ಆಗ ನನಗೆ ಅದರ ತೀವ್ರತೆಯಿಂದ ಅರಿವಾಗುವುದು ಮತ್ತು ನಾನು ತಕ್ಷಣವೇ —– (ನಿಯೋಜಿತ ಕೃತಿಯನ್ನು ಬರೆಯಬೇಕು.) ಮಾಡುವೆನು.’
೩. ಆಲಸ್ಯ
ಸಮಯದ ಪಾಲನೆ ಮತ್ತು ಅದರ ಸದುಪಯೋಗವಾಗದಿರುವ ಹಿಂದೆ ಆಲಸ್ಯ ದೋಷವೂ ಕಾರಣವಾಗಿರುತ್ತದೆ. ಆಲಸ್ಯದಿಂದ ಸಮಯದ ಪಾಲನೆ ಅಥವಾ ಸದುಪಯೋಗಿಸುವ ಬಗ್ಗೆ ಉತ್ಸಾಹ ಕಡಿಮೆಯಾಗುತ್ತದೆ ಮತ್ತು ವ್ಯಕ್ತಿಯು ಅಕಾರ್ಯಕ್ಷಮವಾಗಿರಲು ಅಥವಾ ಮಂಚದ ಮೇಲೆ ಯಾವಾಗಲೂ ಉರುಳಾಡುವುದನ್ನು ಸುಖವೆಂದು ತಿಳಿದುಕೊಳ್ಳುತ್ತಾನೆ. ಹೆಚ್ಚಿನ ಬಾರಿ ನಿತ್ಯದ ಕೆಲಸಗಳನ್ನು ಮಾಡಲು ಆಲಸ್ಯ ಮಾಡಿದುದರಿಂದ ನಂತರ ಆ ಕೆಲಸಗಳು ಮಹತ್ವದ ಕೆಲಸಗಳಲ್ಲಿ ಮತ್ತು ಆ ಸಮಯದಲ್ಲಿ ಅಡಚಣೆಯನ್ನು ತರುತ್ತವೆ ಅಥವಾ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಉದಾಹರಣೆಗಾಗಿ ವಾಹನದಲ್ಲಿ ಪೆಟ್ರೋಲ್ ತುಂಬಿಸಲು ಆಲಸ್ಯ ಮಾಡಿದುದರಿಂದ ನಂತರ ಕುಟುಂಬದವರನ್ನು ಆಕಸ್ಮಾತ್ತಾಗಿ ಆಸ್ಪತ್ರೆಗೆ ಕರೆದೊಯ್ಯುವಾಗ ವಾಹನದಲ್ಲಿನ ಪೆಟ್ರೋಲ್ ತುಂಬಿಸಲು ಮಹತ್ವದ ಸಮಯವನ್ನು ನೀಡಬೇಕಾಗುತ್ತದೆ. ಹಾಗೆಯೇ ವಾಹನದಲ್ಲಿ ಸಕಾಲದಲ್ಲಿ ಪೆಟ್ರೋಲ್ ತುಂಬಿಸದ ಕಾರಣ ಅದು ಮಧ್ಯದಲ್ಲಿಯೇ ನಿಂತು ಬಿಡುತ್ತದೆ. ಇಂತಹ ಸಮಯದಲ್ಲಿ ಅದನ್ನು ರಸ್ತೆಯ ಪಕ್ಕದಲ್ಲಿಟ್ಟು ಪೆಟ್ರೋಲ್‌ಪಂಪ್ ವರೆಗೆ ರಿಕ್ಷಾದಿಂದ ಹೋಗುವುದು, ಪೆಟ್ರೋಲ್ ಖರೀದಿಸಿ ನಂತರ ಪುನಃ ವಾಹನದ ಬಳಿಗೆ ಬರುವುದು, ಇದರಲ್ಲಿ ಸಮಯ ಮತ್ತು ರಿಕ್ಷಾದ ಬಾಡಿಗೆ ಖರ್ಚಾಗುತ್ತದೆ.
ಆಲಸ್ಯ ಈ ದೋಷ ನಿವಾರಣೆಗೆ ನಾವು ಮನಸ್ಸಿಗೆ ಮುಂದಿನ ಸ್ವಯಂಸೂಚನೆಯನ್ನು ನೀಡಬಹುದು.
‘ಯಾವಾಗ ಆಲಸ್ಯದಿಂದ ನಾನು ವಾಹನಕ್ಕೆ ಪೆಟ್ರೋಲ್ ಅನ್ನು ತುಂಬಿಸಲು ಪೆಟ್ರೋಲ್ ಪಂಪ್‌ಗೆ ಹೋಗುವುದನ್ನು ತಪ್ಪಿಸುತ್ತಿರುವೆನೋ, ಆಗ ನನಗೆ ಅದರ ತೀವ್ರವಾಗಿ ಅರಿವಾಗುವುದು ಮತ್ತು ನಾನು ತಕ್ಷಣ ವಾಹನಕ್ಕೆ ಪೆಟ್ರೋಲ್ ತುಂಬಿಸಲು ಹೋಗುವೆನು.’
ಈ ರೀತಿ ಸ್ವಯಂಸೂಚನೆಯನ್ನು ದಿನದಲ್ಲಿ ೧೫ ಸಲ ನೀಡುವುದು ಅಪೇಕ್ಷಿತವಿದೆ.
ಜೀವನದ ವಾಸ್ತವಿಕತೆಯನ್ನು ಎದುರಿಸಲು ಗುಣಗಳು ಆವಶ್ಯಕ !
ಮಾನವನ ಗುಣಗಳು ಕಾಲದ ಪ್ರವಾಹದಲ್ಲಿ ತಮ್ಮ ಗುರುತನ್ನು ಮೂಡಿಸುತ್ತವೆ !
ಕಾಲದ ಅಖಂಡ ಮಹಾಪ್ರವಾಹದಲ್ಲಿ ಯಾವುದು ವಿವಾದವಿಲ್ಲದೇ ತನ್ನ ಅವಿಸ್ಮರಣೀಯ ಗುರುತನ್ನು ಬಿಟ್ಟು ಹೋಗುತ್ತದೆಯೋ, ಅದೆಂದರೆ ಮನುಷ್ಯನ ಗುಣ ! ವಿಚಾರಗಳ ಪ್ರಾಮಾಣಿಕತನ, ಅದಕ್ಕನುಸಾರ ಆಚರಣೆ, ಎಲ್ಲರ ಹಿತವನ್ನು ಗಮನದಲ್ಲಿಟ್ಟುಕೊಂಡು ವಿಷಯಗಳನ್ನು ನಿರ್ಧರಿಸುವುದು, ‘ಶಿಷ್ಟಾಚಾರ’ದ ಮೇಲೆ ದೃಢ ನಿಷ್ಠೆ ಮತ್ತು ನೈತಿಕ ಅಧಃಪತನದಂತಹ ಪ್ರವೃತ್ತಿಗಳ ವಿರುದ್ಧ ಸತತವಾಗಿ ಹೋರಾಡುವ ವೃತ್ತಿ ಈ ಗುಣಗಳು ಯಾವ ಮನುಷ್ಯನಲ್ಲಿ ಒಟ್ಟಿಗೆ ಇರುತ್ತವೆಯೋ, ಅಲ್ಲಿ ಓರ್ವ ನಿಜವಾದ ಮನುಷ್ಯನು ಸಾಕಾರವಾಗುತ್ತಾನೆ ! ಅವನಲ್ಲಿ ತನ್ನ ವ್ಯಕ್ತಿತ್ವವಿರುತ್ತದೆ ಮತ್ತು ಆ ವ್ಯಕ್ತಿತ್ವದಲ್ಲಿ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯವಿರುತ್ತದೆ !
ಒಳ್ಳೆಯ ಗುಣಗಳಿರುವವನು ಸವಾಲುಗಳನ್ನು ಸಹಜವಾಗಿ ಸಹಿಸಬಹುದು
ಈ ವ್ಯಕ್ತಿತ್ವವನ್ನು ಸಂಪಾದಿಸಿದ ಯುವಕರು ರಾಜಕಾರಣದಲ್ಲಿ ಪ್ರವೇಶಿಸಿದರೂ ಅವರು ಸ್ವಾರ್ಥಿಗಳಾಗುವುದಿಲ್ಲ. ಸಮಾಜಕರಣದಲ್ಲಿ ಅವರ ನಾಟಕತನ (ಸೋಗು) ಇರುವುದಿಲ್ಲ. ಅವರ ಕಾರ್ಯಕ್ರಮಗಳು ಗಾಳಿಯಲ್ಲಿನ ಗೋಪುರಗಳಾಗುವುದಿಲ್ಲ. ನಿಜವಾದ ಕಳವಳದಿಂದ ಮಾಡಿದ ಮಾನವನ ಸೇವೆಯು ಅವನಿಗೆ ಉದಾತ್ತ ಸ್ವರೂಪವನ್ನು ಪ್ರಾಪ್ತಮಾಡಿಕೊಳ್ಳಲು ಸಮಯ ತಾಗಲಾರದು.
ಈ ವ್ಯಕ್ತಿತ್ವವನ್ನು ಸಂಪಾದಿಸಿದವನು ತನ್ನ ಕ್ಷಮತೆಗನುಸಾರ ಜೀವನದಲ್ಲಿನ ವಾಸ್ತವವನ್ನು ಎದುರಿಸುವನು. ತನ್ನ ಮಹತ್ವವನ್ನು ತಿಳಿದುಕೊಳ್ಳುವನು, ತನ್ನ ಕ್ಷಮತೆ ಅರಿತುಕೊಳ್ಳುವನು, ತನ್ನ ಮಿತಿಯನ್ನು ಗಮನದಲ್ಲಿಟ್ಟು ಜೀವನದ ಕಡೆಗೆ ಹೆಚ್ಚು ವಿಚಾರಗಳನ್ನು ಮಾಡಿ ನೋಡುವನು.’ – ಶ್ರೀ. ರವೀಂದ್ರ ಪರೆತಕರ