೨೦೨೪ ರ ಮಕರ ಸಂಕ್ರಾಂತಿಗೆ ಶ್ರೀರಾಮ ಮಂದಿರ ಭಕ್ತರಿಗಾಗಿ ತೆರೆಯಲಾಗುವುದು !

ಅಯೋಧ್ಯೆಯಲ್ಲಿನ ಭವ್ಯ ಶ್ರೀರಾಮ ಮಂದಿರಕ್ಕಾಗಿ ೧ ಸಾವಿರದ ೮೦೦ ಕೋಟಿ ರೂಪಾಯಿ ಖರ್ಚ ತಗಲಿದೆ !

ಅಯೋಧ್ಯ (ಉತ್ತರಪ್ರದೇಶ) – ಇಲ್ಲಿಯ ಭವ್ಯ ಶ್ರೀರಾಮ ಮಂದಿರದ ಕಟ್ಟಡ ನಿರ್ಮಾಣ ಸಮರೋಪಾದಿಯಲ್ಲಿ ನಡೆಯುತ್ತಿದೆ. ‘೨೦೨೪ ರ ಮಕರ ಸಂಕ್ರಾಂತಿಗೆ ಹಿಂದೂಗಳಿಗಾಗಿ ಮಂದಿರ ತೆರೆಯಲಾಗುವುದು’, ಎಂದು ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ಹೇಳಲಾಗಿದೆ. ‘ಈ ದೇವಸ್ಥಾನಕ್ಕಾಗಿ ಸುಮಾರು ೧ ಸಾವಿರದ ೮೦೦ ಕೋಟಿ ರೂಪಾಯಿ ಖರ್ಚು ಬರಲಿದೆ’, ಎಂದು ಸಹ ಟ್ರಸ್ಟ್ ನಿಂದ ಹೇಳಲಾಗಿದೆ. ಈ ಮೊದಲು ಮಂದಿರ ಕಟ್ಟುವುದಕ್ಕಾಗಿ ೧ ಸಾವಿರ ೧೦೦ ಕೋಟಿ ರೂಪಾಯಿ ಖರ್ಚು ಬರುವುದರ ಬಗ್ಗೆ ಅಂದಾಜು ವ್ಯಕ್ತಪಡಿಸಲಾಗಿತ್ತು.

ಶ್ರೀರಾಮ ಮಂದಿರ ಸಹಿತ ಈ ಪರಿಸರದಲ್ಲಿ ಮಹರ್ಷಿ ವಾಲ್ಮೀಕಿ, ವಸಿಷ್ಠ, ವಿಶ್ವಾಮಿತ್ರ, ಅಗಸ್ತ್ಯ ಹಾಗೂ ನಿಷಾದ ರಾಜ, ಶಬರಿ ಮತ್ತು ಜಟಾಯು ಇವರ ಮಂದಿರಗಳು ಕೂಡ ಕಟ್ಟಲಾಗುವುದು. ಮಂದಿರದ ಎಲ್ಲಾ ಬಾಗಿಲುಗಳು ಸಾಗುವಾನಿ ಮರದಿಂದ ಮಾಡಲಾಗುವುದು, ಎಂದು ಇತ್ತಿಚೆಗೆ ನಡೆದ ಟ್ರಸ್ಟನ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.