ನವ ದೆಹಲಿ – ‘ಹಿಂದುತ್ವ’ ಈ ಪದದ ಬದಲು `ಭಾರತೀಯ ಸಂವಿಧಾನ’ ಎಂಬ ಪದವನ್ನು ಬಳಸುವಂತೆ ಕೋರಿ ದೆಹಲಿಯ ವಿಕಾಸಪುರಿ ನಿವಾಸಿ ಡಾ.ಎಸ್.ಎನ್. ಕುಂದ್ರಾ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು. ಈ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ನ್ಯಾಯಾಲಯವು `ಇದು ಪ್ರಕ್ರಿಯೆಯ ಸಂಪೂರ್ಣ ದುರುಪಯೋಗವಾಗಿದೆ. ನಾವು ಅದರ ವಿಚಾರಣೆ ಮಾಡುವುದಿಲ್ಲ’. ಈ ಮೊದಲೂ ಸರ್ವೋಚ್ಚ ನ್ಯಾಯಾಲಯವು `ಹಿಂದುತ್ವ’ ಸಂಕಲ್ಪನೆಯ ವಿಷಯದಲ್ಲಿ ವಿವಿಧ ಪ್ರಕರಣಗಳಲ್ಲಿ ವಿವರಣೆಯನ್ನು ನೀಡಿದೆ.
1995 ರಲ್ಲಿ, ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ ಠಾಕ್ರೆ ಅವರು ಮಾಡಿದ ಭಾಷಣದ ಸಂದರ್ಭದಲ್ಲಿ ಒಂದು ಪ್ರಕರಣದ ತೀರ್ಪು ನೀಡುವಾಗ ಸರ್ವೋಚ್ಚ ನ್ಯಾಯಾಲಯವು ಹಿಂದುತ್ವದ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ‘ಹಿಂದುತ್ವ ಒಂದು ಜೀವನ ಪದ್ಧತಿಯಾಗಿದೆ’ ಎಂದು ಹೇಳಿತ್ತು. ಹಿಂದುತ್ವವಾದ ಅಥವಾ ಹಿಂದುತ್ವ ಎಂಬ ಪದಗಳನ್ನು ತಿಳಿದುಕೊಳ್ಳಬೇಕು ಎಂದೇನಿಲ್ಲ. ಅದರ ಸಂಕ್ಷಿಪ್ತ ಅರ್ಥವನ್ನು ನೀಡುವುದು ಅನಿವಾರ್ಯವಲ್ಲ. ಇದು ಕೇವಲ ಭಾರತೀಯರ ಸಂಸ್ಕೃತಿಯನ್ನು ಮತ್ತು ಜನರ ಜೀವನಶೈಲಿಗೆ ಸಂಬಂಧಿಸದ ಕಠಿಣ ಧಾರ್ಮಿಕ ಪರಂಪರೆಗೆ ಸೀಮಿತವಾಗಿದೆ. ಅದು ಭಾರತೀಯ ಜನರ ಜೀವನಶೈಲಿಯ ಚಿತ್ರಣವಾಗಿದೆಯೆಂದು, ಸರ್ವೋಚ್ಚ ನ್ಯಾಯಾಲಯವು ಹೇಳಿತ್ತು.
1995ರ ತೀರ್ಪಿನ ಮರುಪರಿಶೀಲನೆ ಮಾಡಬೇಕು, ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆ ಸಮಯದಲ್ಲಿ ನ್ಯಾಯಾಲಯವು ಈ ಅರ್ಜಿಯ ವಿಚಾರಣೆ ಮಾಡಲು ನಿರಾಕರಿಸಿತ್ತು.