ಬಾಂಗ್ಲಾದೇಶ ಸರಕಾರಕ್ಕೆ 8 ಬೇಡಿಕೆಗಳು
ಚಿತ್ತಗಾಂವ (ಬಾಂಗ್ಲಾದೇಶ) – ‘ಸನಾತನ ಜಾಗರಣ ಮಂಚ’ ಈ ಸಂಘಟನೆಯು ಅಕ್ಟೋಬರ್ 26 ರಂದು ಅಲ್ಪಸಂಖ್ಯಾತರ ರಕ್ಷಣೆ ಮತ್ತು ಹಕ್ಕುಗಳಿಗಾಗಿ ಒಂದು ಬೃಹತ್ ಮೆರವಣಿಗೆಯನ್ನು ನಡೆಸಿತು. ಇಲ್ಲಿನ ಐತಿಹಾಸಿಕ ಲಾಲ್ ದಿಘಿ ಮೈದಾನದಲ್ಲಿ ಸಭೆಯೂ ನಡೆಯಿತು. ಅಲ್ಪಸಂಖ್ಯಾತ ಹಿಂದೂಗಳು 8 ಪ್ರಮುಖ ಬೇಡಿಕೆಗಳ ಬಗ್ಗೆ ಧ್ವನಿ ಎತ್ತಿದರು. ‘ಎಲ್ಲಿಯವರೆಗೆ ಬಾಂಗ್ಲಾದೇಶ ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವುದಿಲ್ಲವೋ ಅಲ್ಲಿಯವರೆಗೆ ಚಳವಳಿ ಮುಂದುವರಿಯುತ್ತದೆ’, ಎಂದು ಹಿಂದೂಗಳು ಪಟ್ಟು ಹಿಡಿದಿದ್ದಾರೆ.
ಹಿಂದೂಗಳು ಮಾಡಿದ ಬೇಡಿಕೆಗಳು –
1. ಅಲ್ಪಸಂಖ್ಯಾತರ ವಿರುದ್ಧದ ಅಪರಾಧಗಳಲ್ಲಿ ಭಾಗಿಯಾಗಿರುವವರನ್ನು ವಿಚಾರಣೆಗೆ ಒಳಪಡಿಸಲು ನ್ಯಾಯಮಂಡಳಿ ಸ್ಥಾಪಿಸಬೇಕು.
2. ಸಂತ್ರಸ್ತರಿಗೆ ಪರಿಹಾರ ನೀಡಿ ಅವರಿಗೆ ಪುನರ್ವಸತಿ ಕಲ್ಪಿಸಬೇಕು.
3. ಅಲ್ಪಸಂಖ್ಯಾತರ ಸಂರಕ್ಷಣಾ ಕಾನೂನು ಜಾರಿಗೆ ತರಬೇಕು.
4. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ಸ್ಥಾಪಿಸಬೇಕು.
5. ಶೈಕ್ಷಣಿಕ ಸಂಸ್ಥೆಗಳು ಮತ್ತು ವಸತಿಗೃಹಗಳಲ್ಲಿ ಅಲ್ಪಸಂಖ್ಯಾತರಿಗೆ ಪ್ರಾರ್ಥನಾ ಸ್ಥಳಗಳು ಮತ್ತು ಪ್ರಾರ್ಥನಾ ಕೊಠಡಿಗಳನ್ನು ನಿರ್ಮಿಸಬೇಕು.
6. ಹಿಂದೂ, ಬೌದ್ಧ ಮತ್ತು ಕ್ರೈಸ್ತ ವೆಲ್‌ಫೆರ್ ಟ್ರಸ್ಟ್ ಗಳಿಗೆ ಆದ್ಯತೆ ನೀಡಬೇಕು.
7. ಆಸ್ತಿ ವರ್ಗಾವಣೆ ಕಾನೂನು ಜಾರಿಗೆ ತರಬೇಕು.
8. ಪಾಲಿ ಮತ್ತು ಸಂಸ್ಕೃತ ಬೋಧನಾ ಮಂಡಳಿಯ ಆಧುನೀಕರಣಕ್ಕಾಗಿ ಶ್ರೀ ದುರ್ಗಾ ಪೂಜೆಯ ಸಮಯದಲ್ಲಿ 5 ದಿನಗಳ ರಜೆ ನೀಡಬೇಕು.
ದುರ್ಗಾ ಪೂಜೆಗೆ 2 ದಿನ ರಜೆ !
ಬಾಂಗ್ಲಾದೇಶದ ಮಧ್ಯಂತರ ಸರಕಾರದ ಪರಿಸರ ಸಚಿವ ಸೈಯದ ರಿಜ್ವಾನಾ ಹಸನ್ ಅವರು ಹಿಂದೂ ಸಮಾಜದ ಬೇಡಿಕೆಗಳಿಗೆ ಸ್ಪಂದಿಸಿ, ಶ್ರೀ ದುರ್ಗಾ ಪೂಜೆಗೆ ಮೊದಲ ಬಾರಿಗೆ 2 ದಿನಗಳ ರಜೆ ಘೋಷಿಸಿದರು. ಶೇಖ್ ಹಸೀನಾ ಅವರು ಆಗಸ್ಟ್ 5 ರಂದು ಹುದ್ದೆಯಿಂದ ಕೆಳಗಿಳಿದ ನಂತರದ ಬಾಂಗ್ಲಾದೇಶದಲ್ಲಿ ಹಿಂದೂಗಳ ಅತ್ಯಂತ ದೊಡ್ಡ ಚಳುವಳಿ ಇದಾಗಿದೆ. ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಮಧ್ಯಂತರ ಸರಕಾರ ಭರವಸೆ ನೀಡಿದ್ದರೂ, ಅಲ್ಪಸಂಖ್ಯಾತರ ಆಸ್ತಿ ಲೂಟಿ, ದೈಹಿಕ ಹಲ್ಲೆ, ಅಲ್ಪಸಂಖ್ಯಾತರ ಆಸ್ತಿ-ಪಾಸ್ತಿಗಳ ಧ್ವಂಸಗೊಳಿಸುವ ಘಟನೆಗಳು ಹೆಚ್ಚಾಗಿವೆ.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೆ ತಮ್ಮ ರಕ್ಷಣೆಗಾಗಿ ತಮ್ಮನ್ನು ತಾವು ಸಂಘಟಿಸಿ ಪ್ರಯತ್ನಗಳನ್ನು ಮಾಡುವುದು ಆವಶ್ಯಕವೆಂದು ಅರಿತುಕೊಂಡಿದ್ದಾರೆ. ತಮ್ಮ ಸುರಕ್ಷತೆಗೆ ಭಾರತದಿಂದ ಅಥವಾ ಬೇರೆ ಯಾವುದೇ ದೇಶದವರು ಸಹಾಯ ಮಾಡುವುದಿಲ್ಲ ಎನ್ನುವುದು ಅವರ ಗಮನಕ್ಕೆ ಬಂದಿದೆ. ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಂದ ಪ್ರಪಂಚದಾದ್ಯಂತ ಇರುವ ಹಿಂದೂಗಳು ಕಲಿಯುವುದು ಅವಶ್ಯಕವಾಗಿದೆ ! |