‘ಬೇಬಿ ಬಂಪ್ ಫ್ಲೌಂಟಿಂಗ್’ ಹೆಸರಿನಲ್ಲಿ ಅರೆನಗ್ನ ಮತ್ತು ಅಶ್ಲೀಲ ಛಾಯಾಚಿತ್ರಗಳನ್ನು ಪ್ರಸಾರ ಮಾಡುವ ಬಾಲಿವುಡ್ ನಟಿಯರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ !

ಹಿಂದೂ ಜನಜಾಗೃತಿ ಸಮಿತಿಯ ಮಹಿಳಾ ಶಾಖೆ ‘ರಣರಾಗಿಣಿ’ಯಿಂದ ಆಗ್ರಹ

ಹೀಗೇಕೆ ಆಗ್ರಹಿಸಬೇಕಾಗುತ್ತದೆ ? ಸಂಸ್ಕೃತಿವಿರೋಧಿ ಚಟುವಟಿಕೆಗಳನ್ನು ತಡೆಯಲು ಸರಕಾರೀ ವ್ಯವಸ್ಥೆಗಳು ಏಕೆ ಕೃತಿ ಮಾಡುವುದಿಲ್ಲ ?- ಸಂಪಾದಕರು 

(‘ಬೇಬಿ ಬಂಪ್ ಫ್ಲೌಂಟಿಂಗ್’ ಅಂದರೆ ಸ್ವತಃ ಗರ್ಭಿಣಿಯಾಗಿರುವ ಬಗ್ಗೆ ಅಶ್ಲೀಲ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಬಿತ್ತರಿಸುವ ಪ್ರವೃತ್ತಿ)

ಚಂದೀಗಡ – ಪ್ರಸ್ತುತ ಭಾರತದಲ್ಲಿ ‘ಬೇಬಿ ಬಂಪ ಫ್ಲೌಂಟಿಂಗ್’ ಹೆಸರಿನಲ್ಲಿ ‘ಬಾಲಿವುಡ್’ನಲ್ಲಿ ಅನೇಕ ಗರ್ಭಿಣಿ ನಟಿಯರು ತಮ್ಮ ಅರೆನಗ್ನ ಮತ್ತು ಅಶ್ಲೀಲ ಛಾಯಾಚಿತ್ರಗಳನ್ನು ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಈ ಕೃತ್ಯಗಳು ಸಮಾಜದ ಸಾಮಾನ್ಯ ಮಹಿಳೆಯರಿಗೆ ಲಜ್ಜೆಯುಂಟು ಮಾಡುವಂತಿವೆ. ನಟಿಯರಾದ ಅನುಷ್ಕಾ ಶರ್ಮಾ, ಕರೀನಾ ಕಪೂರ್‌ನಿಂದ ಹಿಡಿದು ಬಿಪಾಶಾ ಬಸುವರೆಗೆ ಈ ನಟಿಯರೆಲ್ಲರು ತಮ್ಮ ಗರ್ಭಿಣಿ ಹೊಟ್ಟೆಯನ್ನು ತೋರಿಸುತ್ತಿದ್ದಾರೆ. ಭಾರತೀಯ ದಂಡಸಂಹಿತೆಯ ಸೆಕ್ಷನ್ ೨೯೨ ಮತ್ತು ೨೯೩ ರ ಅಡಿಯಲ್ಲಿ ‘ಅಶ್ಲೀಲತೆಯ ಪ್ರಸಾರ’ ಇದು ಶಿಕ್ಷಾರ್ಹ ಅಪರಾಧವಾಗಿದೆ. ದಂಡ ಸಂಹಿತೆಯ ಸೆಕ್ಷನ್ ೨೯೪ ರ ಅಡಿಯಲ್ಲಿ, ‘ಸಾರ್ವಜನಿಕವಾಗಿ ಅಶ್ಲೀಲ ಕೃತಿ ಮಾಡುವುದು’ ದಂಡನೀಯ ಅಪರಾಧವಾಗಿದೆ. ಇದರಿಂದಾಗಿ ಈ ನಟಿಯರ ವಿರುದ್ಧ ಹಾಗೂ ಅವರ ಛಾಯಾಚಿತ್ರಗಳನ್ನು ಬಿತ್ತರಿಸಿದ ಮಾಧ್ಯಮಗಳ ವಿರುದ್ಧವೂ ಅಪರಾಧವನ್ನು ದಾಖಲಿಸುವಂತೆ ಹಿಂದೂ ಜನಜಾಗೃತಿ ಸಮಿತಿಯ ‘ರಣರಾಗಿಣಿ’ ಶಾಖೆಯ ಸೌ. ಸಂದೀಪ ಮುಂಜಾಲ ಇವರು ಆಗ್ರಹಿಸಿದ್ದಾರೆ.

‘ರಣರಾಗಿಣಿ’ಯ ವತಿಯಿಂದ ಸೌ. ಸಂದೀಪ ಮುಂಜಾಲ ಇವರು ಪ್ರಧಾನಮಂತ್ರಿ ಸನ್ಮಾನ್ಯ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಅಮಿತ ಶಾಹ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಸನ್ಮಾನ್ಯ ಅನುರಾಗ ಠಾಕೂರ, ಮಹಾರಾಷ್ಟ್ರ ಮುಖ್ಯಮಂತ್ರಿ ಮಾನ್ಯ ಏಕನಾಥ ಶಿಂದೆ, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಾದ ಮಾನ್ಯ ದೇವೇಂದ್ರ ಫಡಣವೀಸ್, ರಾಷ್ಟ್ರೀಯ ಮಹಿಳಾ ಆಯೋಗ ಅಧ್ಯಕ್ಷೆ ಸುಶ್ರೀ. ರೇಖಾ ಶರ್ಮಾ ಹಾಗೂ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ಈ ದೂರಿನಲ್ಲಿ ಮುಂದಿನ ಅಂಶಗಳನ್ನು ಆಗ್ರಹಿಸಲಾಗಿದೆ

೧. ‘ಬೇಬಿ ಬಂಪ ಫ್ಲೌಂಟಿಂಗ್’ನ ಹೆಸರಿನಡಿಯಲ್ಲಿ ಗರ್ಭಾವಸ್ಥೆಯ ದೊಡ್ಡದಾದ ಹೊಟ್ಟೆಯನ್ನು ಜಗತ್ತಿಗೆ ತೋರಿಸಲು ಹೊಸಹೊಸ ಪದ್ದತಿಗಳನ್ನು ಉಪಯೋಗಿಸಿ ಛಾಯಾಚಿತ್ರವನ್ನು ತೆಗೆದು ಅಂಗಪ್ರದರ್ಶನ ಮಾಡುವ ಚಟ ಈ ನಟಿಯರಲ್ಲಿ ನಿರ್ಮಾಣವಾಗಿದೆ. ಈ ಕೃತ್ಯ ಸಾಮಾನ್ಯ ಕುಟುಂಬದ ಗರ್ಭಿಣಿ ಸ್ತ್ರೀಯರ ಮನಸ್ಸಿನಲ್ಲಿ ಲಜ್ಜೆಯುಂಟು ಮಾಡುವ ಹಾಗೂ ಸಮಾಜದಲ್ಲಿ ಸಹಜವಾಗಿ ವಿಹರಿಸಲು ಕಷ್ಟವಾಗುತ್ತದೆ.

೨. ವಾಸ್ತವದಲ್ಲಿ, ಗರ್ಭಾವಸ್ಥೆಯು ಸ್ತ್ರೀಯರ ಜೀವನದಲ್ಲಿನ ಮಾತೃತ್ವದ ಕಡೆಗೆ ಪ್ರಯಾಣಿಸುವ ಮತ್ತು ಅತ್ಯಂತ ಸೂಕ್ಷ್ಮ ಮತ್ತು ಹೆಚ್ಚು ವೈಯಕ್ತಿಕ ಕಾಲವಾಗಿದೆ; ಆದರೆ ಬಾಲಿವುಡ್ ನಟಿಯರು ತಮ್ಮ ಗರ್ಭಿಣಿ ಅವಸ್ಥೆಯನ್ನು ಕೇವಲ ವ್ಯಾವಸಾಯಿಕ ಲಾಭ ಮತ್ತು ಪ್ರಚಾರಕ್ಕಾಗಿ ಪ್ರದರ್ಶಿಸುವುದು ಇದು ಭಾರತೀಯ ಸಂಸ್ಕೃತಿಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಇದು ವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಹೀಗೆ ಮಾಡಿದರೂ ಸಮಾಜದ ಹಿತಕ್ಕೆ ಧಕ್ಕೆ ತರುವಂತಹದ್ದಾಗಿದೆ ಅದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನಲಾಗದು ಎಂದು ಹೇಳಿದೆ.