ಹಿಂದೂ ಧರ್ಮವನ್ನು ಕಳಂಕಿತಗೊಳಿಸಿದಷ್ಟು ಪ್ರಮಾಣದಲ್ಲಿ ಇನ್ಯಾವುದೇ ಧರ್ಮವನ್ನು ಕಳಂಕಿತಗೊಳಿಸಿಲ್ಲ ! – ಮಾರಿಯಾ ವರ್ಥ್, ಹಿಂದೂ ಧರ್ಮದ ಅಧ್ಯಯನಕಾರರು ಮತ್ತು ಚಿಂತಕರು

ಮಾರಿಯಾ ವರ್ಥ

೧. ಹಿಂದೂ ಧರ್ಮವನ್ನು ಕಳಂಕಿತಗೊಳಿಸುವಲ್ಲಿ ಕ್ರೈಸ್ತ ಧರ್ಮಪ್ರಚಾರಕರು ಮುಂಚೂಣಿಯಲ್ಲಿರುವುದು

ನಾನು ಪೋಪ್ ಫ್ರಾನ್ಸಿಸ್ ಇವರಿಗೆ ಕಳುಹಿಸಿದ ಬಹಿರಂಗ ಪತ್ರದ ಈ ವಿಷಯವು ಮುಸಲ್ಮಾನ ಮೌಲ್ವಿಗಳಿಗೂ ಅನ್ವಯಿಸುತ್ತದೆ. ‘ಬಹುಶಃ ಮಾನ್ಯ ಪೋಪ್‌ರಿಗೆ ಹೀಗೊಂದು ತಿಳುವಳಿಕೆ ಇರಬಹುದು, ‘ಹಿಂದೂ ಧರ್ಮವು ನೀತಿ ಭ್ರಷ್ಟವಾಗಿದೆ ಮತ್ತು ಹಿಂದೂಗಳು ತಮ್ಮ ಧರ್ಮದಲ್ಲಿರುವ ಅನೇಕ ದೇವತೆಗಳ ಬದಲು ಕ್ರೈಸ್ತ ಧರ್ಮದಲ್ಲಿನ ಒಂದೇ ದೇವರನ್ನು ಸ್ವೀಕರಿಸುವರು.’ ಆದರೆ ಅವರಿಗೆ ಹೀಗೆ ಅನಿಸುತ್ತಿದ್ದರೆ ಅದು ಸಂಪೂರ್ಣ ತಪ್ಪಾಗಿದೆ. ಹಿಂದೂ ಧರ್ಮವನ್ನು ಬಿಟ್ಟು ಬೇರೆ ಯಾವುದೇ ಧರ್ಮವನ್ನು ಇಷ್ಟೊಂದು ಕಳಂಕಿತಗೊಳಿಸಿಲ್ಲ ಮತ್ತು ಅವುಗಳ ಮೇಲೆ ಅನ್ಯಾಯವೂ ಆಗಿಲ್ಲ. ಹಿಂದೂ ಧರ್ಮಕ್ಕೆ ಕಳಂಕ ತರುವಲ್ಲಿ ಕ್ರೈಸ್ತ ಧರ್ಮಪ್ರಚಾರಕರು (ಕ್ಯಾಥೋಲಿಕ್ ಧರ್ಮಪ್ರಚಾರಕರನ್ನು ಸೇರಿಸಿ) ಮುಂಚೂಣಿಯಲ್ಲಿದ್ದಾರೆ, ಎಂದು ಹೇಳಲು ನನಗೆ ಬಹಳ ಖೇದವೆನಿಸುತ್ತದೆ.

೨. ಹಿಂದೂ ಧರ್ಮದ ವಿಚಾರಗಳು ಸತ್ಯದ ಮೇಲೆ ಮತ್ತು ಕ್ರೈಸ್ತ ಧರ್ಮದ ವಿಚಾರಗಳು ಮೂಲಭೂತವಾದ ಮತ್ತು ಅಸತ್ಯದ ಮೇಲೆ ಆಧರಿಸಿವೆ

ಭಾರತೀಯ ಪ್ರಾಚೀನ ಪರಂಪರೆ ಎಷ್ಟು ಮಹಾನ ಆಗಿದೆ ಎಂಬುದು ಕೆಲವು ಪಾಶ್ಚಿಮಾತ್ಯರಿಗೆ ಗೊತ್ತಿದೆ. ಈಗ ನಮಗೆ ಯಾವ ಧರ್ಮಗಳು ತಿಳಿದಿವೆಯೋ, ಅವುಗಳ ಎಷ್ಟೋ ಮೊದಲು ಪ್ರಾಚೀನ ಭಾರತದಲ್ಲಿ ನಮ್ಮ ಅಸ್ತಿತ್ವದ ಬಗೆಗಿನ ತತ್ತ್ವಜ್ಞಾನ, ಹಾಗೆಯೇ ಅರ್ಥಪೂರ್ಣ ಜೀವನವನ್ನು ಜೀವಿಸುವ ಬಗೆಗಿನ ಸಿದ್ಧಾಂತಗಳು ತಿಳಿದಿದ್ದವು.

ಕ್ರೈಸ್ತರು ಪೂರ್ಣ ಅಸತ್ಯದ ಮೇಲೆ ಆಧರಿಸಿದ, ಪರಿಶೀಲಿಸಲು ಆಗದ ಮೂಲಭೂತ ವಿಚಾರಗಳನ್ನು ತಂದರು. ಯಾವುದಾದರೊಂದು ಘಟನೆಯು ಪೂರ್ಣ ಸತ್ಯದ ಮೇಲೆ ಪರಿಣಾಮ ಬೀರಬಹುದೇ ? ಬಾಪ್ತಿಸ್ಮಾ ತೆಗೆದುಕೊಂಡ ಮತ್ತು ತೆಗೆದುಕೊಳ್ಳದ ಜನರು ಹೀಗೆ ಸತ್ಯವು ಭೇದಭಾವ ಮಾಡಬಹುದೇ? ಚರ್ಚ್ ಇಲ್ಲದೇ ಮೋಕ್ಷ ಸಿಗುವುದಿಲ್ಲವೇ ? ನಾನು ಇಂತಹ ಕಠೋರ ಭಾಷೆಯನ್ನು ಬಳಸಿದ ಬಗ್ಗೆ ನನ್ನನ್ನು ಕ್ಷಮಿಸಬೇಕು.

೩. ಕ್ರೈಸ್ತರಿಗಿಂತ ಎಷ್ಟೋ ಯುಗಗಳ ಮೊದಲು ಋಷಿಗಳು ಹಿಂದೂ ಧರ್ಮದಲ್ಲಿನ ಅನೇಕ ಸಿದ್ಧಾಂತಗಳನ್ನು ಶೋಧಿಸಿದ್ದರು ಮತ್ತು ಅವುಗಳನ್ನು ಅನ್ವಯಿಸಿದ್ದರು

ಎಷ್ಟೋ ಯುಗಗಳ ಹಿಂದೆ ಎಲ್ಲ ಕಡೆಗೆ ವ್ಯಾಪಿಸಿರುವುದು, ವಿಶ್ವದ ತಿರುಳಾಗಿದೆ, ಅದನ್ನು ವರ್ಣಿಸಲು ಬರದಿದ್ದರೂ, ಅದನ್ನು ಸಂಪೂರ್ಣ ಅರಿವು ಅಥವಾ ಶುದ್ಧಿ ಎಂದು ವರ್ಣಿಸಬಹುದು, ಎಂಬುದನ್ನು ಭಾರತದಲ್ಲಿನ ಋಷಿಗಳು ಕಂಡು ಹಿಡಿದರು. ‘ಬಿತ್ತಿದ್ದೇ ಬೆಳೆಯುತ್ತದೆ’, ಎಂಬ ಕ್ರೈಸ್ತರ ಹೇಳಿಕೆಯ ಎಷ್ಟೋ ಯುಗಗಳ ಮೊದಲು ಹಿಂದೂ ಧರ್ಮದಲ್ಲಿ ಇದೇ ಕರ್ಮದ ಸಿದ್ಧಾಂತವಿತ್ತು. ಕ್ರೈಸ್ತ ಪರಿಷತ್ತು ಪುನರ್ಜನ್ಮದ ಮೇಲೆ ವಿಶ್ವಾಸವನ್ನಿಡಲು ಕ್ರೈಸ್ತರನ್ನು ತಡೆಯಿತು. ನಿಜ ಹೇಳಬೇಕೆಂದರೆ ಇದರಿಂದ (ಪುನರ್ಜನ್ಮದ ಸಿದ್ಧಾಂತದಿಂದ) ಅವರಿಗೆ ತೊಂದರೆದಾಯಕವಾಗಿರುವ ಎಷ್ಟೋ ವಿಷಯಗಳು ಸ್ಪಷ್ಟವಾಗುತ್ತಿದ್ದವು, ಉದಾ. ಜನ್ಮದ ಸಮಯದಲ್ಲಿಯೇ ಅನ್ಯಾಯವಾಗುತ್ತದೆಯೇ ? ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯುವಾಗ ಯಾವುದಾದರೊಬ್ಬ ಪರಿಪೂರ್ಣ ಮನುಷ್ಯನನ್ನು ಮಿತ್ರ ಅಥವಾ ಮಾರ್ಗದರ್ಶಕನೆಂದು ಸ್ವೀಕರಿಸುವುದರ ಲಾಭವು ಭಾರತದ ಜನರಿಗೆ ಗೊತ್ತಿತ್ತು. ೫ ಸಾವಿರ ವರ್ಷಗಳ ಹಿಂದೆ ‘ಕೇವಲ ಶ್ರೀಕೃಷ್ಣ ಅಥವಾ ಶ್ರೀರಾಮ ಅಥವಾ ಬುದ್ಧನೇ ಮೋಕ್ಷವನ್ನು ನೀಡಬಲ್ಲನು ಮತ್ತು ಅವರನ್ನು ನಂಬದವರು ನರಕಕ್ಕೆ ಹೋಗುತ್ತಾರೆ’, ಎಂದು ಹಿಂದೂ ಧರ್ಮದಲ್ಲಿ ಯಾರೂ ಹೇಳಿಲ್ಲ. ಸತ್ಯವು ಒಂದೇ ಆಗಿದ್ದು ಜ್ಞಾನಿ ಜನರು ಅದನ್ನು ಅನೇಕ ಹೆಸರುಗಳಿಂದ ಕರೆಯುತ್ತಾರೆ.

ಭಾರತದಲ್ಲಿನ ಋಷಿಗಳು ವಿವಿಧ ದೇವತೆಗಳ ಹೆಸರುಗಳನ್ನು ಹೇಳಿದರು. ಆ ಸಮಯದಲ್ಲಿ ಕ್ರೈಸ್ತ ಧರ್ಮ ಎಲ್ಲಿಯೂ ಕಾಣಿಸುತ್ತಿರಲಿಲ್ಲ, ಇಲ್ಲದಿದ್ದರೆ. ಬಹುಶಃ ಅವರು ‘ಗಾಡ್’ ಎಂದು ಇನ್ನೊಂದು ಹೆಸರು ಮತ್ತು ‘ಜಿಸಸ್ ಇವನು ಅವತಾರ’ ಎಂಬುದನ್ನು ಅದರಲ್ಲಿ ಸೇರಿಸುತ್ತಿದ್ದರು. ಸತ್ಯವನ್ನು ಕೇವಲ ಒಂದೇ ಹೆಸರಿನಿಂದ ಗುರುತಿಸಿದರು ಮತ್ತು ಅದರ ವರ್ಣನೆಯು ಕೇವಲ ಒಂದೇ ಪುಸ್ತಕದಲ್ಲಿದೆ. ಆ ಸತ್ಯವೆಂದರೆ ‘ಗಾಡ್’ ಎಂದು ಘೋಷಿಸಿ ಅವರು ಅವರ ಅನುಯಾಯಿಗಳ ಬೆನ್ನಿಗೆ ಚೂರಿ ಹಾಕುವುದು, ಋಷಿಗಳಿಗೆ ಅಪೇಕ್ಷಿತವಿರಲಿಲ್ಲ.

೪. ಕ್ರೈಸ್ತರು ಹಿಂದೂ ದೇವತೆಗಳಿಗೆ ಸೈತಾನ ಎಂದು ಹೇಳಿ ಅವಮಾನಿಸುವುದು

ಹಿಂದೂ ಧರ್ಮದಲ್ಲಿನ ಅನೇಕ ದೇವತೆಗಳು ಶಕ್ತಿಗಳಾಗಿದ್ದಾರೆ, ಅವರು ನಮ್ಮಲ್ಲಿರುವ ನಿರ್ಗುಣ ಮತ್ತು ಹೆಸರಿಲ್ಲದ ಈಶ್ವರೀ ತತ್ತ್ವವನ್ನು ಶೋಧಿಸಲು ಸಹಾಯ ಮಾಡುತ್ತಾರೆ. ಭಾರತದಲ್ಲಿನ ಕ್ರೈಸ್ತರಿಗೆ ‘ಹಿಂದೂ ದೇವತೆಗಳು ಸೈತಾನರಾಗಿದ್ದಾರೆ’, ಎಂದು ಯಾವ ಆಧಾರದಲ್ಲಿ ಹೇಳಲಾಗುತ್ತದೆ ? ಹಾಗಾಗಿ ಇದು ಸ್ವೀಕರಿಸಲು ಆಗದಿರುವ ಅವಮಾನವಾಗಿದೆ. ಆದರೂ ಕ್ರೈಸ್ತ ಧರ್ಮದಲ್ಲಿ (ಹಿಂದೂ ಧರ್ಮದಿಂದ ಪ್ರೇರಣೆ ಪಡೆದು) ದೇವ ದೂತರ ಮೇಲೆ ವಿಶ್ವಾಸವನ್ನಿಡಲಾಗುತ್ತದೆ; ಏಕೆಂದರೆ ಕೆಲವು ಪ್ರತಿಮೆಗಳ ಆಧಾರದಲ್ಲಿ ನಿರ್ಗುಣ ನಿರಾಕಾರ ಈಶ್ವರನ ಭಕ್ತಿಯನ್ನು ಮಾಡಲು ಬರುತ್ತದೆ.

೫. ‘ಪ್ರತಿಯೊಬ್ಬರಲ್ಲಿ ಈಶ್ವರನಿದ್ದಾನೆ’, ಈ ವೈಜ್ಞಾನಿಕ ದೃಷ್ಟಿಕೋನಕ್ಕೆ ಚರ್ಚಿನಿಂದಾಗುವ ವಿರೋಧದ ಕಾರಣವು ತಿಳಿಯದಂತಾಗಿದೆ !

ಹಿಂದೂ ಧರ್ಮವು ಕೇವಲ ವಿಶ್ವಾಸದ ಮೇಲಲ್ಲ, ಅದು ಜ್ಞಾನದ ಮೇಲೆ ಆಧರಿಸಿದೆ. ನಮ್ಮೊಂದಿಗೆ ಜಗತ್ತಿನ ಬಗ್ಗೆ ಏನು ಸತ್ಯವಿದೆ, ಎಂಬುದರ ನಿಜವಾದ ಶೋಧವನ್ನು ಈ ಧರ್ಮದಲ್ಲಿ ಮಾಡಲಾಗಿದೆ. ಯಾವುದಕ್ಕೆ ಏನೂ ಅರ್ಥವಿಲ್ಲವೋ ಮತ್ತು ಯಾವುದರ ಪರಿಶೀಲನೆಯನ್ನು ಮಾಡಲು ಬರುವುದಿಲ್ಲವೋ, ಅಂತಹವುಗಳ ಮೇಲೆ ವಿಶ್ವಾಸವನ್ನಿಡುವ ಆವಶ್ಯಕತೆ ಹಿಂದೂಗಳಿಗಿಲ್ಲ. ಅವರಿಗೆ ಪೂರ್ಣ ಸ್ವಾತಂತ್ರ್ಯವಿದೆ. ಹೆಚ್ಚಿನ ಹಿಂದೂಗಳಿಗೆ ಪುನರ್ಜನ್ಮದ ಮೇಲೆ ವಿಶ್ವಾಸವಿದೆ ಮತ್ತು ಅದಕ್ಕೆ ಏನಾದರೂ ಅರ್ಥವಿದೆ. ಹೆಚ್ಚಿನ ಹಿಂದೂಗಳಿಗೆ ಎಲ್ಲಕಡೆಗೆ ವ್ಯಾಪಿಸಿರುವ ಬ್ರಹ್ಮನ ಮೇಲೆ (ಇದಕ್ಕೆ ಬೇರೆ ಹೆಸರುಗಳೂ ಇವೆ) ವಿಶ್ವಾಸವಿದೆ. ಎಲ್ಲ ಕಡೆಗೆ ವ್ಯಾಪಿಸಿರುವ, ಅಂದರೆ ಎಲ್ಲ ಮನುಷ್ಯರಲ್ಲಿಯೂ ಇರುವ ಬ್ರಹ್ಮ ! ಮನುಷ್ಯನು ಭಕ್ತಿಯೊಂದಿಗೆ ಕೆಲವು ನಿಯಮಗಳನ್ನು ಪಾಲಿಸಿದರೆ ಆ ಈಶ್ವರೀ ತತ್ತ್ವವನ್ನು ತನ್ನಲ್ಲಿಯೇ ಅನುಭವಿಸಬಹುದು, ಎಂದು ಕೆಲವು ಜನರ ವಿಶ್ವಾಸವಿದೆ. ಈ ವಿಶ್ವಾಸ ಅಥವಾ ಶ್ರದ್ಧೆಯು ಅಂಧಶ್ರದ್ದೆಯಾಗಿಲ್ಲ, ಅದನ್ನು ಪರೀಕ್ಷಿಸಲಾಗಿದೆ. ಅನೇಕ ಋಷಿಗಳು ಬ್ರಹ್ಮನೊಂದಿಗೆ ಏಕರೂಪವಾಗುವ ಅನುಭೂತಿಯನ್ನು ಪಡೆದಿದ್ದಾರೆ. ಕ್ರೈಸ್ತ ಧರ್ಮದಲ್ಲಿಯೂ ಕೆಲವು ಗೂಢವಾದಿಗಳಿದ್ದರು, ಅವರು ಬ್ರಹ್ಮನೊಂದಿಗೆ ಏಕರೂಪವಾಗುವ ಅನುಭೂತಿಯನ್ನು ಪಡೆದಿದ್ದರು. ಉದಾ. ಮೆಸ್ಟರ್ ಎಕಹಾರ್ಟ್, ಹೀಗಿದ್ದರೂ ಖೇದದ ವಿಷಯವೆಂದರೆ ಚರ್ಚ್ ಅವರನ್ನು ಬಹಿಷ್ಕರಿಸಿತು. ‘ಪ್ರತಿಯೊಬ್ಬರಲ್ಲಿ ಈಶ್ವರನ ಅಸ್ತಿತ್ವವಿದೆ’, ಈ ವಿಷಯದ ವೈಜ್ಞಾನಿಕ ದೃಷ್ಟಿಕೋನವನ್ನು ಚರ್ಚುಗಳು ಏಕೆ ವಿರೋಧಿಸುತ್ತಿವೆ ? ಮತ್ತು ಇಷ್ಟು ಕಾಲ ಕಳೆದರೂ ಮಾನವನ ದೀರ್ಘ ಇತಿಹಾಸದಲ್ಲಿ ಸತ್ಯದ ಮಾರ್ಗವನ್ನು ತೋರಿಸುವ ಅನೇಕ ವ್ಯಕ್ತಿತ್ವಗಳಿದ್ದರು ಎಂಬುದನ್ನು ಸ್ವೀಕರಿಸುವುದು ಏಕೆ ಕಠಿಣವಾಗುತ್ತಿದೆ ?

– ಮಾರಿಯಾ ವರ್ಥ್, ಹಿಂದೂ ಧರ್ಮದ ಅಧ್ಯಯನಕಾರರು ಮತ್ತು ಚಿಂತಕರು

ಹಿಂದೂಗಳನ್ನು ಅಲ್ಪಸಂಖ್ಯಾತರನ್ನಾಗಿ ಮಾಡಲು ಕ್ರೈಸ್ತ ಮಿಶನರಿಗಳು ಪ್ರಯತ್ನಿಸುತ್ತಿವೆ ! – ಈಸ್ಟರ್ ಧನರಾಜ , ಅಧ್ಯಯನಕಾರರು, ಕ್ರಿಶ್ಚಿಯನ್ ಸ್ಟಡಿಸ್, ತೆಲಂಗಾಣ

ಭಾರತಕ್ಕೆ ಬಂದ ಈಸ್ಟ್ ಇಂಡಿಯಾ ಕಂಪನಿಯ ಕಾಲದಿಂದ ಇಲ್ಲಿಯವರೆಗೆ ಕ್ರೈಸ್ತ ಮಿಶನರಿಗಳು ಸ್ಥಾಪಿಸಿದ ಕಾನ್ವೆಂಟ್ ಶಾಲೆಗಳಲ್ಲಿ ಹಿಂದೂ ವಿದ್ಯಾರ್ಥಿಗಳ ಮತಾಂತರಿಸುವುದೊಂದೇ ಗುರಿಯಾಗಿದೆ. ಹಿಂದೂ ವಿದ್ಯಾರ್ಥಿಗಳನ್ನು ಮತಾಂತರಿಸಿ ಕ್ರೈಸ್ತರ ಜನಸಂಖ್ಯೆ ಹೆಚ್ಚಿಸುವುದು, ಹಿಂದೂಗಳನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವುದು, ಈ ರೀತಿ ಕೇರಳದಲ್ಲಿರುವಂತಹ ಸ್ಥಿತಿಯನ್ನು ದೇಶದಲ್ಲಿ ಎಲ್ಲೆಡೆಗಳಲ್ಲಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ.