ಹಲಾಲ್ ಪ್ರಮಾಣಪತ್ರದ ಮೂಲಕ ‘ಹಲಾಲ್ ಜಿಹಾದ್’ ?

‘ಹಲಾಲ್ ಜಿಹಾದ್ ?’ ಈ ಗ್ರಂಥವನ್ನು ‘ಆನ್‌ಲೈನ್’ ಖರೀದಿ ಮಾಡಲು SanatanShop.com ಗೆ ಭೇಟಿ ಕೊಡಿರಿ !
೨೩/೫೧ ರ ಸಂಚಿಕೆಯಲ್ಲಿನ ಲೇಖನದಲ್ಲಿ ನಾವು ‘ಹಲಾಲ್ ಪ್ರಮಾಣಪತ್ರ’ಕ್ಕೆ ದೇಶ ವಿದೇಶಗಳಲ್ಲಾಗುವ ವಿರೋಧ, ಇಸ್ಲಾಮಿಕ್ ಆಡಳಿತದಲ್ಲಿ ಹಲಾಲ್‌ನ ಉಲ್ಲೇಖ ಇಲ್ಲದಿರುವುದು, ಜನರ ವಿರೋಧದ ನಂತರ ಹಲಾಲ್ ಪ್ರಮಾಣಪತ್ರ ನಿರಾಕರಿಸಿದ ಗ್ರಾಹಕರಿಗಾಗಿ ಕಂಪನಿಗಳು ತಮ್ಮ ನಿಯಮಗಳನ್ನು ಬದಲಾಯಿಸಿದ ಬಗ್ಗೆ ನೋಡಿದೆವು. ಅದರ ಅಂತಿಮ ಭಾಗವನ್ನು ನಾವೀಗ ಈ ಸಂಚಿಕೆಯಲ್ಲಿ ನೀಡುತ್ತಿದ್ದೇವೆ.
ಈ ಲೇಖನದ ಹಿಂದಿನ ಭಾಗವನ್ನು ಓದಲು ಈ ಲಿಂಕಿನ ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/70115.html
ಶ್ರೀ.ರಮೇಶಶಿಂದೆ

೧೫. ‘ಹಲಾಲ್ ಅರ್ಥವ್ಯವಸ್ಥೆ’ ವಿರುದ್ಧ ‘ಹಿಂದೂ ಜನಜಾಗೃತಿ ಸಮಿತಿ’ಯ ಹೋರಾಟ ಮತ್ತು ಯಶಸ್ಸು !

೧೫ ಅ. ‘ಹಲಾಲ್ ಅರ್ಥವ್ಯವಸ್ಥೆ’ಯ ವಿರುದ್ಧ ಜನಜಾಗೃತಿ : ‘ಹಲಾಲ್ ಅರ್ಥವ್ಯವಸ್ಥೆ’ಯ ಸಮಸ್ಯೆಯು ಹೊಸತಾಗಿರುವುದರಿಂದ ಆ ವಿಷಯದಲ್ಲಿ ಜನಸಾಮಾನ್ಯರಿಗೆ ಎಲ್ಲ ಮಾಹಿತಿಯನ್ನು ನೀಡಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಅದಕ್ಕಾಗಿ ‘ಹಿಂದೂ ಜನಜಾಗೃತಿ ಸಮಿತಿ’ಯ ವತಿಯಿಂದ ವಿವಿಧ ಕ್ಷೇತ್ರಗಳ ವ್ಯಕ್ತಿ ಹಾಗೂ ಸಂಘಟನೆಗಳಿಗೆ ವ್ಯಾಖ್ಯಾನಗಳು, ‘ಪವರ್ ಪಾಯಿಂಟ್ ಪ್ರಸ್ತುತಿ’, ಹಾಗೂ ಜಾಗೃತಿ ಬೈಠಕ್‌ಗಳನ್ನು ಆಯೋಜಿಸಲಾಯಿತು. ಈ ಮೂಲಕ ಜನರು ಮತ್ತು ವ್ಯಾಪಾರಿಗಳಲ್ಲಿ ಜಾಗೃತಿ ಮೂಡಿ ಅವರು ಮುಂದಿನ ಕೃತಿಗಳನ್ನು ತಾವಾಗಿಯೇ ಆರಂಭಿಸಿದರು.

೧೫ ಅ ೧. ಜನರು ಮಾಡಿರುವ ಕೃತಿ : ಅನೇಕ ಜನರು ಮಾರುಕಟ್ಟೆಯಲ್ಲಿ ಮತ್ತು ‘ಮಾಲ್’ಗಳಲ್ಲಿ ವಸ್ತುಗಳನ್ನು ಖರೀದಿಸುವಾಗ ಉತ್ಪಾದನೆಯ ಮೇಲೆ ‘ಹಲಾಲ್’ ಚಿಹ್ನೆಯನ್ನು ನೋಡಿ ಬೇರೆ ಉತ್ಪಾದನೆಯನ್ನು ಖರೀದಿಸಲು ಪ್ರಾಧಾನ್ಯತೆಯನ್ನು ನೀಡಿದರು.

೧೫ ಅ ೨. ವ್ಯಾಪಾರಿಗಳು ಮಾಡಿದ ಕೃತಿ : ಹೋಲಸೇಲ್(ಸಗಟು) ಮಾರಾಟಗಾರರು ಯಾವುದೇ ‘ಹಲಾಲ್’ ಚಿಹ್ನೆ ಇರುವ ವಸ್ತುವನ್ನು ಕೊಟ್ಟರೆ ವ್ಯಾಪಾರಿಗಳು ಅವರಲ್ಲಿ ಬೇರೆ ಕಂಪನಿಯ ಉತ್ಪಾದನೆಯ ಬೇಡಿಕೆ ಮಾಡಲು ಪ್ರಾರಂಭಿಸಿದರು.

೧೫ ಅ ೩. ‘ಝಟಕಾ’ ಮಾಂಸದ ಅಂಗಡಿಗಳನ್ನು ಆರಂಭಿಸುವುದು : ‘ಹಲಾಲ್’ ಅರ್ಥವ್ಯವಸ್ಥೆ’ಯ ವಿಷಯದಲ್ಲಿ ಮಾಹಿತಿ ಸಿಕ್ಕಿದ ನಂತರ ಅನೇಕ ಸ್ಥಳಗಳಲ್ಲಿ ‘ಝಟಕಾ’ ಮಾಂಸವನ್ನು ಮಾರಾಟ ಮಾಡುವ ಅಂಗಡಿಗಳನ್ನು ಆರಂಭಿಸಲಾಯಿತು.

೧೫ ಆ. ‘ಟ್ವಿಟರ್ ಟ್ರೆಂಡ್’ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮಾಡುವುದು : ‘ಹಲಾಲ್ ಅರ್ಥವ್ಯವಸ್ಥೆ’ಯ ವಿರುದ್ಧ ಟ್ವಿಟರ್’ನ ಮೂಲಕ ಅನೇಕ ‘ಟ್ರೆಂಡ್’ ನಡೆಸಲಾಯಿತು. ೨೦೨೦ ರಲ್ಲಿ ‘#BoycottHalalProducts’ (‘ಹಲಾಲ್ ಉತ್ಪಾದನೆಗಳನ್ನು ಬಹಿಷ್ಕರಿಸಿರಿ !’) ಎಂಬ ಹ್ಯಾಶ್‌ಟ್ಯಾಗ್ ‘ಟ್ವಿಟರ್ ಟ್ರೆಂಡ್’ನಲ್ಲಿ ರಾಷ್ಟ್ರೀಯ ಸ್ತರದಲ್ಲಿ ಮೊದಲ ಕ್ರಮಾಂಕದಲ್ಲಿತ್ತು. ಹಾಗೂ ಅದು ಸತತ ೨ ದಿನ ರಾಷ್ಟ್ರೀಯ ಸ್ತರದಲ್ಲಿ ಚರ್ಚೆಯಲ್ಲಿತ್ತು. ಆದ್ದರಿಂದ ರಾಷ್ಟ್ರೀಯ ದೂರಚಿತ್ರವಾಹಿನಿಗಳು ಅದನ್ನು ಅವಲೋಕಿಸಿ ಆ ವಿಷಯದಲ್ಲಿ ವಾರ್ತೆಯನ್ನು ಪ್ರಸಾರ ಮಾಡಿದವು ಹಾಗೂ ಚರ್ಚೆಯನ್ನು ಆಯೋಜಿಸಿದವು.

೧೫ ಇ. ‘ಹಲಾಲ್ ಅರ್ಥವ್ಯವಸ್ಥೆ’ಯ ವಿಷಯದಲ್ಲಿ ಮನವಿಯನ್ನು ನೀಡುವುದು : ಕೆಲವು ಕಡೆಗಳಲ್ಲಿ ಹಿಂದುತ್ವನಿಷ್ಠ ಸಂಘಟನೆಗಳು ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳಿಗೆ ಭೇಟಿಯಾಗಿ ‘ಹಲಾಲ್ ಅರ್ಥವ್ಯಸ್ಥೆ’ಯ ವಿರುದ್ಧ ಮನವಿಪತ್ರವನ್ನು ಸಲ್ಲಿಸಲಾಯಿತು. ‘ಹಿಂದೂ ವಿಧಿಜ್ಞ ಪರಿಷತ್ತು’ ಭಾರತದ ಪ್ರಧಾನಮಂತ್ರಿ ಮತ್ತು ಗೃಹಸಚಿವರಿಗೆ ಈ ವಿಷಯದಲ್ಲಿ ಮನವಿಪತ್ರವನ್ನು ಕಳುಹಿಸಿತು.

೧೫ ಈ. ‘ಅಪೇಡಾ’ಗೆ ರಫ್ತು ಪರವಾನಿಗೆಗಾಗಿ ‘ಹಲಾಲ್ ಪ್ರಮಾಣ ಪತ್ರ’ವನ್ನು ಕಡ್ಡಾಯಗೊಳಿಸದಂತೆ ಮಾಡುವುದು ! : ಭಾರತ ಸರಕಾರದ ‘ಕೃಷಿ ಹಾಗೂ ಪ್ರಕ್ರಿಯೆಯುಕ್ತ ಖಾದ್ಯ ಉತ್ಪಾದನಾ ರಫ್ತು ವಿಕಾಸ ಪ್ರಾಧಿಕರಣ (APEDA-ಅಪೇಡಾ)’ ಈ ವಿಭಾಗವು ರಫ್ತು ಪರವಾನಿಗೆಗಾಗಿ ‘ಹಲಾಲ್ ಪ್ರಮಾಣಪತ್ರ’ವನ್ನು ತೆಗೆದುಕೊಂಡಿತ್ತು ಹಾಗೂ ಕಾರ್ಖಾನೆಯಲ್ಲಿ ಒಬ್ಬ ಮುಸಲ್ಮಾನ ನಿರೀಕ್ಷಕನನ್ನು ನೇಮಕವನ್ನು ಕಡ್ಡಾಯಗೊಳಿಸಿತ್ತು. ಪ್ರತ್ಯಕ್ಷವಾಗಿ ಭಾರತದಿಂದ ರಫ್ತಾಗುವ ಈ ಮಾಂಸದಲ್ಲಿ ಶೇ. ೪೬ ರಷ್ಟು ಮಾಂಸ (೬ ಲಕ್ಷ ಟನ್, ಅಂದರೆ ವಾರ್ಷಿಕ ೨೩ ಸಾವಿರದ ೬೪೬ ಕೋಟಿ ರೂಪಾಯಿಗಳ ಮಾಂಸ) ವಿಯೇಟ್ನಾಮ್‌ಗೆ ಅಂದರೆ ಮುಸ್ಲಿಮೇತರ ದೇಶಕ್ಕೆ ರಫ್ತಾಗುತ್ತದೆ. ಆದ್ದರಿಂದ ವಿಯೇಟ್ನಾಮ್ ದೇಶಕ್ಕೆ ಮಾಂಸ ರಫ್ತು ಮಾಡುವವರು ಅನಾವಶ್ಯಕ ‘ಹಲಾಲ್ ಪ್ರಮಾಣಪತ್ರ’ವನ್ನು ತೆಗೆದುಕೊಳ್ಳಬೇಕಾಗುತ್ತಿತ್ತು. ಕೇಂದ್ರ ಸರಕಾರದ ಈ ಪಕ್ಷಪಾತ ಧೋರಣೆಯನ್ನು ‘ಹಿಂದೂ ಜನಜಾಗೃತಿ ಸಮಿತಿ’ಯು ವಿರೋಧಿಸಿತು. ಅನಂತರ ‘ಹಿಂದೂ ವಿಧಿಜ್ಞ ಪರಿಷತ್ತು’ ಕೇಂದ್ರೀಯ ಗೃಹಸಚಿವ ಹಾಗೂ ವಾಣಿಜ್ಯ ಸಚಿವರಿಗೆೆ ಲಿಖಿತ ದೂರು ನೀಡಿತು. ಈ ದೂರಿನಿಂದ ದೊಡ್ಡ ಪರಿಣಾಮವಾಯಿತು ಹಾಗೂ ಕೇಂದ್ರ ಸರಕಾರದ ವಾಣಿಜ್ಯ ಸಚಿವಾಲಯವು ೫ ಜನವರಿ ೨೦೨೧ ರಂದು ‘ಅಪೇಡಾ’ದ ನಿಯಮಾವಳಿಯಿಂದ ಈ ನಿಯಮವನ್ನು ರದ್ದು ಪಡಿಸಿತು.

೧೫ ಉ. ಜನಪ್ರತಿನಿಧಿಗಳಿಗೆ ನೀಡಿರುವ ಮನವಿಪತ್ರಗಳಿಗೆ ಸಕಾರಾತ್ಮಕ ಪ್ರೋತ್ಸಾಹ ಸಿಗುವುದು ! : ‘ಹಲಾಲ್ ಅರ್ಥವ್ಯವಸ್ಥೆ’ಯ ವಿಷಯದಲ್ಲಿ ಉತ್ತರಪ್ರದೇಶದ ಪ್ರಸ್ತುತ ಉಪಮುಖ್ಯಮಂತ್ರಿ ಶ್ರೀ. ಬ್ರಜೇಶ ಪಾಠಕ್ ಇವರಿಗೆ ಮನವಿಪತ್ರವನ್ನು ನೀಡಲಾಯಿತು. ಅವರು ತಕ್ಷಣ ಅದನ್ನು ಅವಲೋಕಿಸಿ ಕೇಂದ್ರ ಸರಕಾರಕ್ಕೆ ‘ತ್ರಯಸ್ಥ ಖಾಸಗಿ ಸಂಸ್ಥೆಯು ‘ಹಲಾಲ್ ಪ್ರಮಾಣಪತ್ರ’ ಕೊಡುತ್ತಿರುವುದರಿಂದ ಅದರ ವಿರುದ್ಧ ವಿಚಾರಣೆ ಮಾಡಿ ಕ್ರಮ ತೆಗೆದುಕೊಳ್ಳಬೇಕೆಂದು’, ವಿನಂತಿಸುವ ಪತ್ರವನ್ನು ಕಳುಹಿಸಿದರು.

೧೫ ಊ. ಅಲ್ಲಲ್ಲಿ ‘ಹಲಾಲ್’ ವಿರೋಧಿ ಕೃತಿ ಸಮಿತಿ’ಗಳ ಸ್ಥಾಪನೆ ! : ‘ಹಲಾಲ್ ಅರ್ಥವ್ಯವಸ್ಥೆ’ಗೆ ವಿರೋಧಿಸಲು ಪ್ರತಿಯೊಂದು ಜಿಲ್ಲಾ ಸ್ತರದಲ್ಲಿ ‘ಹಲಾಲ್’ ವಿರೋಧಿ ಕೃತಿ ಸಮಿತಿ’ಯ ಸ್ಥಾಪನೆಯಾಗಲು ಆರಂಭವಾಗಿದೆ. ಇದರಲ್ಲಿ ಸಮಾಜದ ಎಲ್ಲ ಸ್ತರದಲ್ಲಿನ ರಾಷ್ಟ್ರನಿಷ್ಠ ವ್ಯಕ್ತಿಗಳನ್ನು ಹಾಗೂ ಸಂಘಟನೆಗಳನ್ನು ಸೇರಿಸಿಕೊಂಡು ‘ಹಲಾಲ್’ ವಿರೋಧಿ ಅರ್ಥವ್ಯವಸ್ಥೆ’ಯ ವಿರುದ್ಧ ಆಂದೋಲನವನ್ನು ಹಮ್ಮಿಕೊಳ್ಳುವ ನಿಯೋಜನೆಯಿದೆ.

೧೬. ‘ಹಲಾಲ್’ ಮೂಲಕ ನಡೆಯುತ್ತಿರುವ ‘ಆರ್ಥಿಕ ಜಿಹಾದ್’ನ ವಿರುದ್ಧ ಹೋರಾಡಿರಿ !

‘ಹಲಾಲ್ ಜಿಹಾದ್’ ಇದು ಆರ್ಥಿಕ ಸ್ತರದಲ್ಲಿನ ಯುದ್ಧವಾಗಿದೆ. ಆದ್ದರಿಂದ ಈ ‘ಆರ್ಥಿಕ ಜಿಹಾದ್’ಗೆ ಪ್ರತಿಕಾರ ಮಾಡುವುದು ಆವಶ್ಯಕವಾಗಿದೆ. ಈ ದೃಷ್ಟಿಯಿಂದ ಉದಾಹರಣೆಗಾಗಿ ಮುಂದೆ ಕೆಲವು ಪ್ರಯತ್ನಗಳನ್ನು ಕೊಡಲಾಗಿದೆ.

೧೬ ಅ. ವೈಯಕ್ತಿಕ ಸ್ತರದಲ್ಲಿ ಮಾಡುವ ಕೃತಿಗಳು

೧. ಹಿಂದೂಗಳ ಧಾರ್ಮಿಕ ಅಧಿಕಾರವೆಂದು ‘ಹಲಾಲ್’ ಮಾಂಸ ವನ್ನು ಖರೀದಿಸುವುದನ್ನು ನಿಲ್ಲಿಸಿರಿ !

೨. ಮಾಂಸಾಹಾರಿಗಳು ‘ಜಟಕಾ’ ಮಾಂಸವೇ ಬೇಕೆಂದು ಆಗ್ರಹಿಸಬೇಕು ಹಾಗೂ ಅದನ್ನೇ ಖರೀದಿಸಬೇಕು !

೩. ‘ಹಲಾಲ್’ ಮಾಂಸ ಹಾಗೂ ಉತ್ಪಾದನೆಯನ್ನು ಕಡ್ಡಾಯ ಮಾಡುವವರ ವಿರುದ್ಧ ಗ್ರಾಹಕ ಅಧಿಕಾರಗಳ ಭಂಗ, ಧಾರ್ಮಿಕ ಸ್ವಾತಂತ್ರ್ಯ ನಿರಾಕರಣೆ ಹಾಗೂ ಧಾರ್ಮಿಕ ಭಾವನೆಯನ್ನು ನೋಯಿಸುವುದು, ಈ ಬಗ್ಗೆ ದೂರನ್ನು ದಾಖಲಿಸಿರಿ !

೪. ‘ಹಲಾಲ್ ಪ್ರಮಾಣಪತ್ರ’ವನ್ನು ತೆಗೆದುಕೊಳ್ಳುವ ಉತ್ಪಾದಕರ ಉತ್ಪಾದನೆ ಹಾಗೂ ‘ಹಲಾಲ್’ ಮುದ್ರೆ ಇರುವ ಉತ್ಪಾದನೆಗಳನ್ನು ಖರೀದಿಸುವ ಮೊದಲು ರಾಷ್ಟ್ರಹಿತದ ದೃಷ್ಟಿಯಲ್ಲಿ ವಿಚಾರ ಮಾಡಿ ಇತರ ಪರ್ಯಾಯವಿದ್ದರೆ ಅವುಗಳಿಗೆ ಪ್ರಾಧಾನ್ಯವನ್ನು ನೀಡಿರಿ !

೫. ‘ಹಲಾಲ್ ಅರ್ಥವ್ಯವಸ್ಥೆ’ಯ ವಿಷಯದಲ್ಲಿ ಜನಜಾಗೃತಿಯ ಉದ್ದೇಶದಿಂದ ‘ಹಲಾಲ್ ಜಿಹಾದ್ ?’ ಈ ಗ್ರಂಥವನ್ನು ತಾವು ಓದಿರಿ, ಇತರರಿಗೂ ಉಡುಗೊರೆಯನ್ನಾಗಿ ಕೊಡಿರಿ ಹಾಗೂ ವ್ಯಾಪಕ ಜಾಗೃತಿಗಾಗಿ ದೊಡ್ಡ ಪ್ರಮಾಣದಲ್ಲಿ ಪ್ರಾಯೋಜಿಸಿರಿ !

೧೬ ಆ. ಸಂಘಟಿತರಾಗಿ ಮಾಡಬೇಕಾದ ಕೃತಿ

೧. ‘ಹಲಾಲ್’ ಮುಕ್ತ ಉತ್ಪಾದನೆಗಳ ಪಟ್ಟಿಯನ್ನು ಮಾಡಿ ಅದನ್ನು ಸ್ಥಳೀಯ ವ್ಯಾಪಾರಿಗಳಿಗೆ ಒದಗಿಸಿರಿ !

೨. ನಗರ ಪಾಲಿಕೆಯ ಮೂಲಕ ನಡೆಸಲ್ಪಡುವ ಪಶುವಧಗೃಹಗಳಲ್ಲಿ ಕೇವಲ ‘ಹಲಾಲ್’ ಮಾಂಸ ಮಾತ್ರ ಲಭ್ಯವಾಗುತ್ತಿದೆ ಎಂದಾದರೆ ಅದರ ವಿರುದ್ಧ ದೂರನ್ನು ದಾಖಲಿಸಿರಿ !

೩. ಸರಕಾರಿ ಕಂಪನಿಗಳಲ್ಲಿ ಕೇವಲ ‘ಹಲಾಲ್’ ಖಾದ್ಯಪದಾರ್ಥಗಳನ್ನು ಪೂರೈಸುತ್ತಿದ್ದರೆ ಅದನ್ನು ವಿರೋಧಿಸಿರಿ !

೪. ಭಾರತ ಸರಕಾರದ ‘FSSAI’ ಮತ್ತು ‘FDA’ ಈ ಸಂಸ್ಥೆಗಳ ಹೊರತು ಇತರ ತ್ರಯಸ್ಥ ಖಾಸಗಿ ಮುಸಲ್ಮಾನ ಸಂಸ್ಥೆಗಳು ‘ಹಲಾಲ್ ಪ್ರಮಾಣಪತ್ರ’ವನ್ನು ಕೊಡದಂತೆ ನಿರ್ಬಂಧ ಹೇರಬೇಕೆಂದು ಮನವಿಪತ್ರ, ವಿ-ಅಂಚೆ, ಫ್ಯಾಕ್ಸ್ ಇತ್ಯಾದಿ ಮೂಲಕ ವಿನಂತಿಸಿ !

೫. ‘ಹಲಾಲ್ ಪ್ರಮಾಣಪತ್ರ’ಗಳನ್ನು ನೀಡುವ ಸಂಸ್ಥೆಗಳ ಆರ್ಥಿಕ ವ್ಯವಹಾರದ ವಿಚಾರಣೆ ಮಾಡಬೇಕೆಂದು ಕೇಂದ್ರೀಯ ಗೃಹಸಚಿವಾಲಯಕ್ಕೆ ವಿನಂತಿಸಿರಿ !

೬. ಸಮವಿಚಾರಿ ವಕೀಲರೊಂದಿಗೆ ‘ಹಲಾಲ್ ಅರ್ಥವ್ಯವಸ್ಥೆ’ಯ ವಿಷಯದಲ್ಲಿ ಜಾಗೃತಿ ಬೈಠಕ್ ಆಯೋಜಿಸಿ ಅವರ ಮೂಲಕ ‘ಮಾಹಿತಿ ಅಧಿಕಾರ’ವನ್ನು ಉಪಯೋಗಿಸಿ ಈ ವಿಷಯದಲ್ಲಿ ಕಾನೂನು ಪ್ರಕಾರ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಿರಿ !

೭. ‘ಹಲಾಲ್ ಅರ್ಥವ್ಯವಸ್ಥೆ’ಯ ವಿರುದ್ಧ ಮನವಿಪತ್ರವನ್ನು ತಯಾರಿಸಿ ಅದನ್ನು ವ್ಯಾಪಾರಿ ಸಂಘಟನೆಗಳಿಗೆ, ‘ಚೇಂಬರ್ ಆಫ್ ಕಾಮರ್ಸ್’ ಮುಂತಾದವರ ‘ಲೆಟರ್ ಹೆಡ್’ನಲ್ಲಿ ‘ಅನ್ನ ಸುರಕ್ಷಾ ಹಾಗೂ ಔಷಧ ಆಡಳಿತ’ (SSI), ‘ಪ್ರಧಾನಮಂತ್ರಿ ಕಾರ್ಯಾಲಯ’ಗಳಿಗೆ ಕಳುಹಿಸಿರಿ !

೮. ತಮ್ಮ ಪರಿಸರದಲ್ಲಿನ ಹಿಂದುತ್ವನಿಷ್ಠ ರಾಜಕೀಯ ನೇತಾರರಿಗೆ ಈ ಸಂಕಟದ ಮಾಹಿತಿಯನ್ನು ನೀಡಿರಿ ! ಅವರಿಗೆ ‘ಹಲಾಲ್ ಅರ್ಥವ್ಯವಸ್ಥೆ’ಯ ವಿಷಯದಲ್ಲಿ ವಿಧಾನಸಭೆಯಲ್ಲಿ ಹಾಗೂ ಸಂಸತ್ತಿನಲ್ಲಿ ಸರಕಾರಕ್ಕೆ ಪ್ರಶ್ನೆಯನ್ನು ಕೇಳಲು ಉತ್ತೇಜಿಸಿರಿ !

೯. ಹಿಂದೂಗಳಿಗೆ ‘ಹಲಾಲ್’ ಪದಾರ್ಥವನ್ನೇ ತಿನ್ನಿಸುವ ‘ಮ್ಯಾಕ್‌ಡೊನಾಲ್ಡ್’, ‘ಕೆ.ಎಫ್.ಸಿ.’ ಇತ್ಯಾದಿ ಕಂಪನಿಗಳ ವಿರುದ್ಧ ದೂರನ್ನು ದಾಖಲಿಸಿ ಅವರನ್ನು ಬಹಿಷ್ಕರಿಸುವ ಕರೆ ನೀಡಿರಿ. ಇಂದು ‘ಎಲ್ಲ ದೃಷ್ಟಿಯಲ್ಲಿ ಪ್ರಯತ್ನ ಮಾಡಿ ‘ಹಲಾಲ್ ಅರ್ಥವ್ಯವಸ್ಥೆ’ಯಿಂದ ನಿರ್ಮಾಣವಾಗುವ ರಾಷ್ಟ್ರದ ಮೇಲಿನ ಸಂಕಟವನ್ನು ತಡೆಗಟ್ಟಲು ಹೋರಾಟವನ್ನು ಆರಂಭಿಸುವುದು’, ಕಾಲದ ಅವಶ್ಯಕತೆಯಾಗಿದೆ. ಈ ಹೋರಾಟದಲ್ಲಿ ಭಾಗವಹಿಸಿರಿ.            (ಮುಕ್ತಾಯ)

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.