ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಸಿಗುವ ಸೌಲಭ್ಯ ಹಾಗೂ ಅವರಿಂದ ಆಗುವ ನ್ಯಾಯದಾನ ಇವುಗಳೊಳಗೆ ಇರುವ ವ್ಯತ್ಯಾಸ

‘ಉಚ್ಚ ನ್ಯಾಯಾಲಯದ ಎಲ್ಲಾ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ರಾಜ್ಯಸರಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು, ಅಂದರೆ ಐಷರಾಮೀ ಬಂಗಲೆ, ವಾಹನ, ಇಂಧನ, ಚಾಲಕ ಹಾಗೂ ಕೆಲಸಗಾರರು ಮುಂತಾದವುಗಳನ್ನು ಅಧಿಕೃತವಾಗಿ ನೀಡಲಾಗುತ್ತದೆ. ಇಷ್ಟು ಸೌಲಭ್ಯಗಳು ಲಭಿಸಿಯೂ ನಿಕ್ಷಪಕ್ಷಪಾತಿ ನ್ಯಾಯದಾನವಾಗುವುದು ಕಡಿಮೆಯೇ. ನ್ಯಾಯಮೂರ್ತಿಗಳು ವಾಸ್ತವಿಕತೆಯಿಂದ ಹಾಗೂ ಜನತೆಯಿಂದ ದೂರವಿರುತ್ತಾರೆ ಎಂಬುದು ನ್ಯಾಯದಾನದ ಸಮಯದಲ್ಲಿ ಗಮನಕ್ಕೆ ಬರುತ್ತದೆ ಭಾರತೀಯ ಪುರಾವೆ ಕಾಯಿದೆಯ ಪ್ರಮಾಣದಲ್ಲಿ ಪುರಾವೆಗೆ ಮಹತ್ವವಿದೆ. ಆದರೆ ನ್ಯಾಯದೇವತೆಯ ಕಣ್ಣಿಗೆ ಪಟ್ಟಿಯನ್ನು ಕಟ್ಟಲಾಗಿದೆ. ಆದರೆ ಲಭಿಸಿರುವ ಪುರಾವೆ, ನಡೆದ ಘಟನೆಯ ಪ್ರತ್ಯಕ್ಷ ಪುರಾವೆ, ಸುಳ್ಳನ್ನು ಸಿದ್ಧ ಮಾಡಿದ ಪುರಾವೆ ಹಾಗೂ ಸುಳ್ಳು ಸಾಕ್ಷಿದಾರ ಈ ವಿಷಯಗಳನ್ನು ನೋಡಿದರೆ ನ್ಯಾಯದಾನವು ನಿಜಸ್ಥಿತಿಯೊಂದಿಗೆ ವಿರುದ್ಧವಾಗಿರುವುದು ಅನೇಕ ಸಲ ಕಂಡು ಬರುತ್ತದೆ. ನ್ಯಾಯಮೂರ್ತಿಗಳು ನಿವಾಸವಿರುವ ನಗರದ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ಅಲ್ಲಿಯ ರೈಲ್ವೆನಿಲ್ದಾಣ, ಸಾರ್ವಜನಿಕ ಉದ್ಯಾನ, ಸಾರ್ವಜನಿಕ ಆಸ್ಪತ್ರೆ, ಚಲನಚಿತ್ರ ಮಂದಿರ, ಮಾಲ್ಸ, ವಿವಿಧ ಮಾರಾಟ ಸ್ಥಳಗಳು, ಪೋಲೀಸಠಾಣೆ, ಗ್ಯಾಸ್ ಸ್ಟೇಷನ್, ಪೆಟ್ರೋಲ್ ಪಂಪ್, ತೆರಿಗೆ ವಿಭಾಗ ಇವುಗಳಿಂದ ಹಿಡಿದು ಎಲ್ಲಾ ಪ್ರಕಾರದ ಸರಕಾರಿ ಕಾರ್ಯಾಲಯಗಳು, ಮಂತ್ರಿಮಂಡಳ, ರಸ್ತೆಯ ಮೇಲಿನ ವಾಹನ ದಟ್ಟಣೆಯ ನಿಜವಾದ ಮಾಹಿತಿಯಿರುತ್ತದೆಯೇ ? ಪ್ರತ್ಯಕ್ಷವಾದ ಅನುಭವವಿರುತ್ತದೆಯೇ ? ಗೊತ್ತಿಲ್ಲದಿದ್ದರೆ ಸಾಮಾನ್ಯ ಜನತೆಗೆ ಅವರು ನ್ಯಾಯವನ್ನು ಹೇಗೆ ನೀಡಬಲ್ಲರು ?

– ಓರ್ವ ಮಾಜಿ ಪೋಲೀಸ ಅಧಿಕಾರಿ