ಕ್ರೈಸ್ತಧರ್ಮೀಯರ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ೫ ದಿನಗಳ `ಪ್ರಾಯಶ್ಚಿತ್ತ ತೀರ್ಥಯಾತ್ರೆ’ಗಾಗಿ ಕೆನಡಾಕ್ಕೆ ಹೋಗಿದ್ದರು. `ಕೆನಡಾದ ನಿವಾಸಿ ಶಾಲೆಗಳಲ್ಲಿ ಕ್ರೈಸ್ತ ಮಿಶನರಿಗಳು ಬಾಲಕರ ಮೇಲೆ ನಡೆಸಿದ ದೌರ್ಜನ್ಯಕ್ಕಾಗಿ ಪೋಪ್ ಫ್ರಾನ್ಸಿಸ್‌ರು ಮೂಲ ನಿವಾಸಿ ಸಮುದಾಯದ ಬಳಿ ಕ್ಷಮಾ ಯಾಚನೆ ಮಾಡಬಹುದು’, ಎಂದು ಹೇಳಲಾಗುತ್ತದೆ. ಇಲ್ಲಿ ಮೂಲನಿವಾಸಿ ಸಮುದಾಯದೊಂದಿಗೆ ಸಾಮರಸ್ಯವನ್ನು ಪ್ರಸ್ಥಾಪಿಸುವುದು ಹಾಗೂ ತಾತ್ಕಾಲಿಕ ದುಃಖದಿಂದ ಹೊರಗೆ ಬರಲು ಸಹಾಯ ಮಾಡುವುದು ಕ್ಯಾಥೋಲಿಕ್ ಚರ್ಚ್ನ ಒಂದು ಮಹತ್ವದ ಹೆಜ್ಜೆಯೆಂದು ನೋಡಲಾಗುತ್ತದೆ; ಆದರೆ ಪೋಪ್ ಫ್ರಾನ್ಸಿಸ್ ಇವರ ಕೇವಲ ಕ್ಷಮಾಯಾಚನೆಯಿಂದ ಮೂಲನಿವಾಸಿ ಸಮುದಾಯ ಹಾಗೂ ಅವರ ಬಾಲಕರ ಮೇಲೆ ಕ್ರೈಸ್ತ ಮಿಶನರಿಗಳು ನಡೆಸಿದ ಕುಕೃತ್ಯಗಳು ಕ್ಷಮಾ ಯಾಚನೆಯ ಆಚೆಯದ್ದಾಗಿದ್ದು ಮೂಲನಿವಾಸಿ ಸಮುದಾಯದ ಸಂಸ್ಕೃತಿಯನ್ನೇ ಹೊಸಕಿ ಹಾಕುವಂತಹದ್ದಾಗಿದೆ.
೧. ಕೆನಡಾದಲ್ಲಿ ಕ್ರೈಸ್ತ ಮಿಶನರಿಗಳು ಬಾಲಕರಿಗಾಗಿ ಶಾಲೆಗಳನ್ನು ನಿರ್ಮಿಸಿ ಅವುಗಳನ್ನು ಕ್ರೈಸ್ತಸ್ತೀಕರಣ ಮಾಡಲು ಅತ್ಯಾಚಾರ ಮಾಡುವುದು
೧೮೦೦ ರಿಂದ ೧೯೯೦ ಈ ಅವಧಿಯಲ್ಲಿ ಕ್ರೈಸ್ತ ಮಿಶನರಿಗಳಿಂದ ಸಂಪೂರ್ಣ ಕೆನಡಾದಲ್ಲಿ ಕ್ಯಾಥೋಲಿಕ್ ಚರ್ಚ್ಗಳ ೧೩೯ ನಿವಾಸಿ ಶಾಲೆಗಳಲ್ಲಿ `ಮೂಲನಿವಾಸಿ’, `ಮೆಟಿಸ್’ (ಅಮೇರಿಕಾದ ಮಹಾದ್ವೀಪಗಳಲ್ಲಿನ ಮೂಲನಿವಾಸಿ ಅಂದರೆ ಬ್ರಿಟನ್ ಹಾಗೂ ಫ್ರಾನ್ಸ್ನಲ್ಲಿನ ಪುರುಷ-ಆದಿವಾಸಿ ಮಹಿಳೆಯರಿಂದ ಜನಿಸಿದ ಮಿಶ್ರ ಜಾತಿಯ ವಂಶದವರು) ಹಾಗೂ `ಇನುಯಿಟ್’ (ಉತ್ತರ ಕೆನಡಾದಲ್ಲಿ ಮಂಜುಗಡ್ಡೆಯ ಪ್ರದೇಶದಲ್ಲಿ ವಾಸಿಸುವ ಸಮುದಾಯ) ಸಮುದಾಯದ ಒಂದುವರೆ ಲಕ್ಷ ಬಾಲಕರನ್ನು ಭರ್ತಿ ಮಾಡಲಾಗಿತ್ತು. ಈ ಬಾಲಕರ ಮನಸ್ಸಿನಲ್ಲಿ ಕ್ಯಾಥೋಲಿಕ್ ರೀತಿ ನೀತಿಯನ್ನು ಬಿತ್ತುವುದು ಇದರ ಹಿಂದಿನ ಉದ್ದೇಶವಾಗಿತ್ತು. ಹಿಂದೂಗಳ ಸಹಿತ ಜಗತ್ತಿನಾದ್ಯಂತದ ಮೂಲನಿವಾಸಿ ಸಮುದಾಯಗಳಲ್ಲಿ ಚಿಕ್ಕಬಾಲಕರನ್ನು ದೇವರ ಮನೆಯ ಹೂವು ಎಂದು ನಂಬಲಾಗುತ್ತದೆ; ಏಕೆಂದರೆ ಅವರ ಮನಸ್ಸು ಅತ್ಯಂತ ಮುಗ್ಧವಾಗಿರುತ್ತದೆ. ಅವರ ಮನಸ್ಸಿನಲ್ಲಿ ನಮ್ಮ-ಪರಕೀಯರ, ಸ್ವಜಾತಿಯ-ಪರಜಾತಿಯ, ಸ್ವಧರ್ಮದ-ಪರಧರ್ಮ, ಇಂತಹ ಯಾವುದೇ ವಿಚಾರ ಇರುವುದಿಲ್ಲ. ಕ್ರೈಸ್ತ ಮಿಶನರಿಗಳಿಗೆ ಮಾತ್ರ ಅದು ಒಪ್ಪಿಗೆಯಿರಲಿಲ್ಲ. ಈ ಬಾಲಕರನ್ನು `ಮತಾಂತರ ಉದ್ಯೋಗದ ಕಚ್ಚಾ ಮಾಲು ಎಂದು ತಿಳಿಯುವ’, ಮಾನಸಿಕತೆಯಿಂದ ಕ್ರೈಸ್ತ ಮಿಶನರಿಗಳು ಅವರನ್ನು ವಶಪಡಿಸಿಕೊಂಡರು. ಅದಕ್ಕಾಗಿ ನಿವಾಸಿ ಶಾಲೆಗಳನ್ನು ಸ್ಥಾಪಿಸಿದರು ಹಾಗೂ ಆ ಮೂಲಕ ಆ ಬಾಲಕರನ್ನು ಅವರ ಮೂಲ ಸಂಸ್ಕೃತಿಯಿಂದ ನೂರಾರು ಮೈಲು ದೂರ ಒಯ್ಯುವ ಕಾರ್ಯವನ್ನು ಮಾಡಿದ್ದಾರೆ.
ಅವರಿಗೆ ಅವರ ಮಾತೃಭಾಷೆಯಲ್ಲಿ ಮಾತನಾಡಲು ಕೂಡ ನಿರ್ಬಂಧ ಹೇರಲಾಯಿತು. ಆ ಬಾಲಕರ ಮನಸ್ಸಿನಲ್ಲಿ ಕ್ರೈಸ್ತತ್ವವನ್ನು ಬಿಂಬಿಸಲಾಯಿತು. ಇದರಿಂದ `ಅವರು ದೊಡ್ಡವರಾದ ಮೇಲೆ ಪಕ್ಕಾ ಕ್ರೈಸ್ತಾನುಯಾಯಿ ಆಗುವರು ಹಾಗೂ ಅವರ ಮುಂದಿನ ಪೀಳಿಗೆಯೂ ಕ್ರೈಸ್ತರೆಂದೆ ಜನ್ಮತಾಳುವುದು, ಅದರಿಂದ ಕ್ರೈಸ್ತಸ್ತರ ಜನ ಸಂಖ್ಯೆಯೂ ಹೆಚ್ಚುತ್ತಾ ಇರುವುದು. ಈ ಮೂಲಕ ಜಗತ್ತಿನಾದ್ಯಂತ ಕ್ರೈಸ್ತ ಪಂಥದ ವರ್ಚಸ್ಸು ನಿರ್ಮಾಣವಾಗುವುದು’, ಎಂಬುದು ಈ ಕ್ರೈಸ್ತ ಮಿಶನರಿಗಳ ಉದ್ಯೋಗದ ಹಿಂದಿನ ಉದ್ದೇಶವಾಗಿತ್ತು. ಆದ್ದರಿಂದ ಆದೇಶವನ್ನು ಒಪ್ಪದಿರುವ ಕ್ರೈಸ್ತ ಪಂಥವನ್ನು ಸ್ವೀಕರಿಸದಿರುವ ಬಾಲಕರ ಮೇಲೆ ಮಿಶನರಿಗಳು ಅಪಾರ ಅತ್ಯಾಚಾರ ಮಾಡಿದರು. ಆ ಅತ್ಯಾಚಾರದಿಂದ ಒಂದುವರೆ ಲಕ್ಷ ಬಾಲಕರಲ್ಲಿ ಸುಮಾರು ೬ ಸಾವಿರ ಬಾಲಕರು ಜೀವ ಕಳೆದು ಕೊಂಡರು. ಆದ್ದರಿಂದಲೇ ಈಗ ಪೋಪ್ ಫ್ರಾನ್ಸಿಸ್ ಕ್ಷಮೆಯಾಚಿಸಲು ಬಂದಿದ್ದರೂ, `ಶಾಲೆಯಿಂದ ಮನೆಗೆ ಬಾರದಿರುವ ನಮ್ಮ ಬಾಲಕರು ನಿಜವಾಗಿಯೂ ಎಲ್ಲಿಗೆ ಹೋದರು ?’, ಎಂಬ ಪ್ರಶ್ನೆಯ ಉತ್ತರವೂ ಮೂಲನಿವಾಸಿ ಸಮುದಾಯದವರಿಗೆ ಪೋಪ್ ಫ್ರಾನ್ಸಿಸ್ ಇವರಿಂದ ಬೇಕಾಗಿದೆ.
೨. ಕ್ರೈಸ್ತರಾಗದಿರುವವರನ್ನು ಜಗತ್ತಿನಾದ್ಯಂತ ಅತ್ಯಂತ ಕ್ರೌರ್ಯದಿಂದ ಹಿಂಸಿಸಿದ ಕ್ರೈಸ್ತರು
ನಿಜವಾಗಿಯೂ ಪೋಪ್ ಫ್ರಾನ್ಸಿಸ್ ಕ್ಷಮೆಯಾಚನೆ ಮಾಡಲು ಕೇವಲ ಕೆನಡಾಕ್ಕೆ ಏಕೆ ಹೋದರು ? ಏಕೆಂದರೆ ಕ್ರೈಸ್ತ ಮಿಶನರಿಗಳು ಕೇವಲ ಅದೇ ದೇಶದಲ್ಲಿ ಮೂಲನಿವಾಸಿ ಸಮುದಾಯದ ಮೇಲೆ ಅತ್ಯಾಚಾರ ಮಾಡಿದ್ದಲ್ಲ; ಜಗತ್ತಿನಾದ್ಯಂತ ಎಲ್ಲೆಲ್ಲಿ ಕ್ರೈಸ್ತ ಪಂಥದ ಪ್ರಸಾರವಾಗಿದೆಯೋ, ಅಲ್ಲೆಲ್ಲ ಅದು ಸ್ಥಳೀಯ ಮೂಲನಿವಾಸಿಗಳನ್ನು ಅತ್ಯಾಚಾರ ಮಾಡಿಯೇ ನಡೆಸಿದೆ. ಉತ್ತರ ಮತ್ತು ದಕ್ಷಿಣ ಅಮೇರಿಕಾ, ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಏಶೀಯಾದ ದೇಶಗಳಲ್ಲಿ ಕ್ರೈಸ್ತ ಪಂಥ ಹರಡಿರುವುದು ಅಲ್ಲಿನ ಮೂಲನಿವಾಸಿಗಳನ್ನು ಮತಾಂತರಗೊಳಿಸುವುದರಿಂದಲೆ ! ಕೆನಡಾದ ಮೂಲನಿವಾಸಿಗಳು ಪ್ರಾರಂಭದಿAದಲೇ ನಿಸರ್ಗಪೂಜಕರು, ಅಗ್ನಿ ಪೂಜಕರು ಹಾಗೂ ಮೂರ್ತಿಪೂಜಕರಾಗಿದ್ದರು; ಆದರೆ ಕ್ರೈಸ್ತ ಮಿಶನರಿಗಳು ಅವರೆಲ್ಲರ ಪೂಜಾಪದ್ಧತಿಯ ಮೇಲೆ ಆಕ್ರಮಣ ಮಾಡಿ ಅವರನ್ನು ಕ್ರೈಸ್ತರನ್ನಾಗಿ ಮಾಡಿಕೊಂಡರು. ಯಾರು ಕ್ರೈಸ್ತರಾಗಲು ನಿರಾಕರಿಸಿದರೋ, ಅವರನ್ನು ಅತ್ಯಂತ ಕ್ರೌರ್ಯದಿಂದ ಹಿಂಸಿಸಿದರು, ಅವರಿಗೆ ನರಕಯಾತನೆಯನ್ನು ನೀಡಿದರು.
೩. ಗೋವಾದಲ್ಲಿ ಫ್ರಾನ್ಸಿಸ್ ಝೇವಿಯರ್ `ಇನ್ಕಿ÷್ವಝಿಶನ್’ನ (ಧರ್ಮಹಿಂಸೆಯ) ಮೂಲಕ ಹಿಂದೂಗಳ ಮೇಲೆ ಅತ್ಯಾಚಾರ ನಡೆಸುವುದು ಪೋರ್ಚುಗೀಸರ ಕಾಲದಲ್ಲಿ ಗೋಮಂತಕೀಯರಿಗಾದ ಹಿಂಸೆಹಾಗೂ ಯಾರು ಕ್ರೈಸ್ತರಾದರೋ, ಅವರ ಮೇಲೆಯೂ ಅತ್ಯಾಚಾರ ಮಾಡಲಾಯಿತು, ಚರ್ಚ್ನಲ್ಲಿನ ನನ್‌ಗಳನ್ನು ಬಲಾತ್ಕರಿಸುವುದು ಇತ್ಯಾದಿ ಅನೇಕ ಉದಾಹರಣೆಗಳಿವೆ. ಪೋಪ್ ಫ್ರಾನ್ಸಿಸ್ ಇವರ ಬಳಿಯೂ ಕ್ಷಮೆಯಾಚಿಸುವರೆ ? ಅದರ ಜೊತೆಗೆ ಭಾರತದಲ್ಲಿಯೂ ಕ್ರೈಸ್ತ ಮಿಶನರಿಗಳು ಗೋವಾದಲ್ಲಿ ಹಿಂದೂಗಳನ್ನು ಮತಾಂತರಿಸಲು ಮಾಡದಂತಹ ಹಿಂಸೆಯೇ ಇಲ್ಲ. ಫ್ರಾನ್ಸಿಸ್ ಝೇವಿಯರ್ ೬ ಮೇ ೧೫೪೨ ರಂದು ಗೋವಾಗೆ ಬಂದಿದ್ದು ಮೂಲ ಭಾರತದ ಮಣ್ಣಿನಿಂದ ಮೂರ್ತಿಪೂಜಕರನ್ನು ಕಿತ್ತೆಸೆದು ಕ್ರೈಸ್ತ ಪಂಥವನ್ನು ಹೆಚ್ಚಿಸುವ ದುಷ್ಟ ಉದ್ದೇಶದಿಂದಲೇ ಆಗಿತ್ತು ! ಅವನ ಮಾರ್ಗದರ್ಶನದಲ್ಲಿಯೇ ಬಲವಂತವಾಗಿ ಅಥವಾ ಮೋಸಗಾರಿಕೆಯಿಂದ ಮತಾಂತರಿಸುವುದು, ಹಿಂದೂ ಮಂದಿರಗಳನ್ನು ಹಾಗೂ ಮೂರ್ತಿಗಳನ್ನು ಭಗ್ನಗೊಳಿಸುವುದು ಇತ್ಯಾದಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಯಿತು. ಇಷ್ಟೇ ಅಲ್ಲ, ಕ್ರೈಸ್ತ ಪಂಥವನ್ನು ಸ್ವೀಕರಿಸದಿರುವ ಹಿಂದೂಗಳ ಕಿವಿಗಳನ್ನು ಕತ್ತರಿಸುವುದು, ಅವರ ಕೈಕಾಲು ಮುರಿಯುವುದು, ಸ್ತಿçಯರ ಸ್ತನವನ್ನು ಕತ್ತರಿಸುವುದು, ಇತ್ಯಾದಿ ಮಿತಿಮೀರಿದ ಕ್ರೌರ್ಯಗಳನ್ನು ಕೇವಲ ಹಿಂದೂಗಳನ್ನು ಮತಾಂತರಿಸಲು ಕ್ರೈಸ್ತ ಮಿಶನರಿಗಳು ಗೋವಾದಲ್ಲಿ ಆರಂಭಿಸಿದರು. ಇಂದು ಕೂಡ ಗೋವಾದಲ್ಲಿ `ಇನ್ಕಿ÷್ವಝಿಶನ್’ನ ಸಾಕ್ಷಿಗಳನ್ನು ನೀಡಲಾಗುತ್ತದೆ. ಆದ್ದರಿಂದ ಪೋಪ್ ಫ್ರಾನ್ಸಿಸ್ ಕೆನಡಾದ ಹೊರತು ಇತರ ದೇಶಗಳಲ್ಲಿ ಕ್ರೈಸ್ತ ಮಿಶನರಿಗಳು ಮಾಡಿರುವ ಅತ್ಯಾಚಾರ ಹಾಗೂ ಗೋವಾದಲ್ಲಿನ ಇನ್ಕಿ÷್ವಝಿಶನ್‌ಗಾಗಿ ಕ್ಷಮೆಯಾಚನೆಯನ್ನು ಮಾಡುವರೆ ?
೪. ಹಿಂದೂಗಳನ್ನು ಮತಾಂತರಿಸಲು ಕ್ರೈಸ್ತರು ಆಮಿಷ ತೋರಿಸಿ ಮೋಸ ಮಾಡುವುದು ಇಂದಿನ ಸ್ಥಿತಿಯಲ್ಲಿ ಕ್ರೈಸ್ತ ಮಿಶನರಿಗಳು ಹಿಂದೂ ಹಾಗೂ ಇತರ ಧರ್ಮೀಯರನ್ನು ಮತಾಂತರಿಸಲು ಬೇರೆಯೇ ಮಾರ್ಗವನ್ನು ಉಪಯೋಗಿಸುವುದು ಕಾಣಿಸುತ್ತದೆ. `ನಮ್ಮ ಯೇಸು ಶಕ್ತಿಶಾಲಿ ಆಗಿದ್ದು ನಿಮ್ಮ ಎಲ್ಲ ದುಃಖಗಳನ್ನು ದೂರ ಮಾಡುವ ಸಾಮರ್ಥ್ಯ ಕೇವಲ ಅವನಲ್ಲಿಯೇ ಇದೆ. ನೀವು ಕೇವಲ ಯೇಸುವಿಗೆ ಶರಣಾದರೆ ಸಾಕು, ನಿಮ್ಮ ಎಲ್ಲ ಯಾತನೆಗಳು ದೂರವಾಯಿತೆಂದು ತಿಳಿಯಿರಿ’, ಈ ರೀತಿಯಲ್ಲಿ ಕ್ರೈಸ್ತ ಮಿಶನರಿಗಳು ಮುಗ್ಧ ಜನರನ್ನು ತಮ್ಮ ಜಾಲದಲ್ಲಿ ಎಳೆದುಕೊಳ್ಳಲು ಪ್ರಯತ್ನಿಸುತ್ತಾರೆ. ಮುಂಬಯಿಯಿಂದ ಪೂರ್ವೋತ್ತರ ರಾಜ್ಯಗಳು, ಪಂಜಾಬ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಡ, ಒಡಿಶಾ ಮುಂತಾದೆಡೆಗಳಲ್ಲಿ ಮಿಶನರಿಗಳ `ಚಂಗಾಯಿ ಸಭೆ’ಗಳ (ಪಾದ್ರಿಗಳಿಂದ ಪ್ರಾರ್ಥನೆಯ ಮೂಲಕ ಕಾಯಿಲೆಗಳನ್ನು ಗುಣಪಡಿಸುವ) ಆಯೋಜನೆ ಮಾಡಲಾಗುತ್ತದೆ. ಅದರಲ್ಲಿ `ಯೇಸು ಎಲ್ಲ ಪ್ರಕಾರದ ಕಾಯಿಲೆಗಳನ್ನು ಗುಣಪಡಿಸುತ್ತಾನೆ’, `ಆರ್ಥಿಕ ಸ್ಥಿತಿ ಚೆನ್ನಾಗಿರದಿದ್ದರೆ, ಅದನ್ನು ಸುಧಾರಿಸಲಾಗುತ್ತದೆ’, `ಮನೆಯಲ್ಲಿ ಸಂಬಂಧ ಕೆಟ್ಟು ಹೋಗಿದ್ದರೆ, ಅದು ಸುಧಾರಣೆಯಾಗುತ್ತದೆ’, ಇಂತಹ ವಿವಿಧ ಆಮಿಷಗಳನ್ನು ತೋರಿಸಲಾಗುತ್ತದೆ. ಕ್ರೈಸ್ತ ಮಿಶನರಿಗಳ ದಾವೆ ನಿಜವಾಗಿದ್ದರೆ, ಕ್ರೈಸ್ತ ಬಹುಸಂಖ್ಯಾತ ಅಮೇರಿಕಾ, ಯುರೋಪ್ ಇತ್ಯಾದಿ ದೇಶಗಳಲ್ಲಿ ಇದುವರೆಗೂ ಬಡತನ ಯಾಕಿದೆ ? ಅಲ್ಲಿಯೂ `ಕೊರೋನಾ’ ಇರಲಿ ಅಥವಾ `ಮಂಕೀಪಾಕ್ಸ್’ ಅಥವಾ ಇನ್ಯಾವುದೇ ಕಾಯಿಲೆಗಳು ಏಕೆ ಬರುತ್ತಿವೆ ? ಪೋಪ್ ಫ್ರಾನ್ಸಿಸ್ ಇವರು ಕೂಡ `ವೀಲ್‌ಚಯರ್’ನಲ್ಲಿ ಏಕೆ ತಿರುಗಾಡುತ್ತಾರೆ ? ಇಂತಹ ಪ್ರಶ್ನೆಗಳನ್ನು ಯಾರೂ ಕೇಳುವುದಿಲ್ಲ; ಏಕೆಂದರೆ, `ಚಂಗಾಯಿ ಸಭೆ’ಗಳಿಗೆ ಬರುವವರನ್ನಷ್ಟೇ ದಾರಿ ತಪ್ಪಿಸಲಾಗುತ್ತದೆ. ಲಾಲಸೆ ನೀಡಲಾಗುತ್ತದೆ, ಆದ್ದರಿಂದಲೇ ಭಾರತದಲ್ಲಿಯೂ ಅಲ್ಲಲ್ಲಿ ಕ್ರೈಸ್ತರ ಸಂಖ್ಯೆ ಹೆಚ್ಚಾಗುತ್ತಿದೆ.
೫. ಕೇವಲ ಕ್ಷಮಾಯಾಚನೆಯಷ್ಟೆ ಅಲ್ಲ, ಮತಾಂತರಿತರನ್ನು ಸ್ವಧರ್ಮಕ್ಕೆ ವಾಪಾಸು ಕಳಿಸಬೇಕು !
ಪೋಪ್ ಫ್ರಾನ್ಸಿಸ್ ಇವರು ಕ್ಷಮೆಯಾಚಿಸಲಿಕ್ಕಾಗಿಯೇ ಬಂದಿದ್ದರೆ, ಕೇವಲ ಭಾರತದಲ್ಲಿಯೇ ಕ್ರೈಸ್ತಮಿಶನರಿಯರು ಮಾಡಿರುವಂತಹ ಅಸಂಖ್ಯಾತ ಕುಕೃತ್ಯಗಳು ಕೊನೆಗೊಳ್ಳುವುದಿಲ್ಲ. ಆದ್ದರಿಂದ ಪೋಪ್ ಫ್ರಾನ್ಸಿಸ್ ಇವರು ಕೇವಲ ಕೆನಡಾಕ್ಕೆ ಹೋಗದೆ ಭಾರತಕ್ಕೂ ಬಂದು ಕ್ಷಮಾಯಾಚನೆ ಮಾಡಬೇಕು ಹಾಗೂ ಕ್ರೈಸ್ತ ಮಿಶನರಿಗಳು ಬಲವಂತದಿಂದ ಮತಾಂತರಿಸಿದವರನ್ನು ಕೂಡ ಅವರ ಮೂಲ (ಹಿಂದೂ) ಧರ್ಮಕ್ಕೆ ವಾಪಾಸ್ಸು ಕಳಿಸಲು ಮುಂದಾಳತ್ವ ವಹಿಸಬೇಕು. ಅದರಿಂದ ಪೋಪ್ ಫ್ರಾನ್ಸಿಸ್ ಇವರ ಪ್ರಾಮಾಣಿಕತೆಯು ನೋಡಲು ಸಿಗುವುದು. ಮುಖವಾಡದ ಕ್ಷಮಾಯಾಚನೆಯಿಂದ ಏನೂ ಆಗಲಿಕ್ಕಿಲ್ಲ. ಅದು ಭಾರತ ಇರಲಿ ಅಥವಾ ಕೆನಡಾ ! (ಆಧಾರ : ದೈನಿಕ `ಮುಂಬಯಿ ತರುಣ ಭಾರತ’)