ವ್ಯಾಯಾಮದಲ್ಲಿ ಸಾತತ್ಯವಿರಲು ಮಾಡಬೇಕಾದ ಸುಲಭ ಉಪಾಯ

ವೈದ್ಯ ಮೇಘರಾಜ ಪರಾಡಕರ್

‘ವ್ಯಾಯಾಮದ ಮಹತ್ವ ತಿಳಿದ ನಂತರ ಬಹಳಷ್ಟು ಜನರು ಉತ್ಸಾಹದಿಂದ ವ್ಯಾಯಾಮವನ್ನು ಪ್ರಾರಂಭಿಸುತ್ತಾರೆ; ಆದರೆ ಆ ಉತ್ಸಾಹ ೩-೪ ದಿನಗಳಲ್ಲಿ ಕಡಿಮೆಯಾಗತೊಡಗುತ್ತದೆ ಮತ್ತು ಉತ್ಸಾಹಕ್ಕಿಂತ ಆಲಸ್ಯ ಪ್ರಬಲವಾಗುತ್ತದೆ ಮತ್ತು ‘ಇಂದು ಇರಲಿ. ನಾಳೆ ಮಾಡೋಣ ಎಂಬ ವಿಚಾರ ಬರುತ್ತದೆ. ವ್ಯಾಯಾಮದಲ್ಲಿ ಸಾತತ್ಯವನ್ನಿಡಲು ಕೃತಿಯ ಸ್ತರದಲ್ಲಿ ಒಂದು ಸುಲಭವಾದ ಉಪಾಯವೆಂದರೆ ‘೫ ನಿಮಿಷಗಳ ನಿಯಮ’ವನ್ನು ಬಳಸುವುದು. ‘ಯಾವುದೇ ಕೃತಿಯನ್ನು ಸ್ವಲ್ಪವೂ ಮಾಡದೇ ಇರುವುದಕ್ಕಿಂತ ೫ ನಿಮಿಷಗಳ ವರೆಗೆ ಮಾಡೋಣ; ಎಂದು ಆರಂಭಿಸುವುದು’, ಅಂದರೆ ‘೫ ನಿಮಿಷಗಳ ನಿಯಮವನ್ನು ಬಳಸುವುದು’. ಯಾವಾಗ ಇಂದು ವ್ಯಾಯಾಮ ಮಾಡುವುದು ಬೇಡ ಎಂಬ ವಿಚಾರ ಮನಸ್ಸಿನಲ್ಲಿ ಬರುತ್ತದೆಯೋ, ಆಗ ೫ ನಿಮಿಷಗಳ ವ್ಯಾಯಾಮ ಮಾಡೋಣ ಎಂದು ವ್ಯಾಯಾಮವನ್ನು ಆರಂಭಿಸಬೇಕು. ವ್ಯಾಯಾಮವನ್ನು ಆರಂಭಿಸಿದ ನಂತರ ತಾನಾಗಿಯೇ ಉತ್ಸಾಹ ಬರುತ್ತದೆ ಮತ್ತು ಯಾವಾಗ ಅರ್ಧ ಗಂಟೆ ವ್ಯಾಯಾಮವಾಯಿತು ಎಂಬುದು ತಿಳಿಯುವುದೂ ಇಲ್ಲ. ಅದರಲ್ಲಿಯೂ ಆಲಸ್ಯ ಪ್ರಬಲವಾಗಿದ್ದರೆ ನಾವು ೫ ನಿಮಿಷಗಳ ನಂತರ ನಿಲ್ಲೋಣ; ಅಂದರೆ ನಾವು ಏನೂ ಮಾಡಿಯೇ ಇಲ್ಲ ಎಂದಾದರೂ ಆಗುವುದಿಲ್ಲ. ವ್ಯಾಯಾಮದ ಸುಪರಿಣಾಮಗಳು ಕಾಣಿಸತೊಡಗಿದ ನಂತರ ವ್ಯಾಯಾಮದ ಬಗ್ಗೆ ಆಸಕ್ತಿ ನಿರ್ಮಾಣವಾಗುವುದು ಮತ್ತು ನಂತರ ತಾನಾಗಿಯೇ ವ್ಯಾಯಾಮದಲ್ಲಿ ಸಾತತ್ಯ ಉಳಿಯುವುದು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧.೮.೨೦೨೨)