ಜಗತ್ತಿನಾದ್ಯಂತದ ತಾಪಮಾನದಲ್ಲಿನ ಹೆಚ್ಚಳ ಮತ್ತು ಅದರ ಪರಿಣಾಮ !

ಸದ್ಯ ಜಗತ್ತಿನಾದ್ಯಂತದ ಹೆಚ್ಚಿನ ನಗರಗಳಲ್ಲಿನ ತಾಪಮಾನ ೪೦ ಕ್ಕಿಂತಲೂ ಹೆಚ್ಚಾಗಿದೆ. ಹೆಚ್ಚುತ್ತಿರುವ ತ್ಯಾಜ್ಯವಾಯುವಿನ ಉತ್ಸರ್ಗದಿಂದ ಜಗತ್ತಿನಾದ್ಯಂತದ ತಾಪಮಾನ ಹೆಚ್ಚಾಗಿದೆ. `ನಾಸಾ’ವು (ನ್ಯಾಶನಲ್ ಎರೋನಾಟಿಕ್ಸ್ ಎಂಡ್ ಸ್ಪೇಸ್ ಎಡ್ಮಿನಿಸ್ಟ್ರೇಶನ್’ವು) ಕೆಲವು ವರ್ಷಗಳ ಹಿಂದೆ ಅಂತರಿಕ್ಷದಿಂದ ತೆಗೆದುಕೊಂಡ ಪೃಥ್ವಿಯ ಛಾಯಾಚಿತ್ರಗಳಲ್ಲಿಯೂ ತುಂಬಾ ದೊಡ್ಡ ಬದಲಾವಣೆ ಕಾಣಿಸುತ್ತಿದೆ. ಇತ್ತೀಚೆಗೆ ತೆಗೆದುಕೊಂಡ ಛಾಯಾಚಿತ್ರಗಳಲ್ಲಿ ಈ ವಸುಂಧರೆಯ (ಪೃಥ್ವಿಯ) ಬಣ್ಣ ಅತೀ ಉಷ್ಣತೆಯಿಂದ ಕೆಂಪಾಗಿರುವುದು ಕಾಣಿಸುತ್ತಿದೆ. ಈ ವಿಷಯದಲ್ಲಿ ಪರಿಸರತಜ್ಞರು ಕಾಲಕಾಲಕ್ಕೆ ಚಿಂತೆಯನ್ನು ವ್ಯಕ್ತಪಡಿಸುತ್ತಾ ಎಚ್ಚರಿಕೆಯನ್ನು ನೀಡುತ್ತಿದ್ದಾರೆ; ಆದರೂ ಜಗತ್ತಿನಾದ್ಯಂತದ ದೇಶಗಳು ಪೃಥ್ವಿಯ ತಾಪಮಾನ ಹೆಚ್ಚಳದ ಕಡೆಗೆ ಸಾಕಷ್ಟು ಗಮನ ಕೊಡುತ್ತಿಲ್ಲ ಎಂದೆನಿಸುತ್ತದೆ. ವಿಜ್ಞಾನಿಗಳ ಅಭಿಪ್ರಾಯಕ್ಕನುಸಾರ ಈ ದಶಮಾನದಲ್ಲಿ ಪೃಥ್ವಿಯ ಮೇಲಿನ ತಾಪಮಾನ ಹೆಚ್ಚಳವನ್ನು ನಿಯಂತ್ರಿಸಲು ಏನೆಲ್ಲ ಉಪಾಯಯೋಜನೆಗಳನ್ನು ಮಾಡಲಾಗುವುದೊ, ಅವುಗಳ ಪರಿಣಾಮವು ಈ ಶತಮಾನದ ಕೊನೆಗೆ ಸಿಗಬಹುದು. ಭಾರತದ ವಿವಿಧ ನಗರಗಳಲ್ಲಿಯೂ ಕಳೆದ ಕೆಲವು ವರ್ಷಗಳಿಂದ ತಾಪಮಾನದ ಹೆಚ್ಚಳವು ತನ್ನ ಮಿತಿಯನ್ನು ಮೀರುತ್ತಿದೆ.

ಶ್ರೀ. ಅನಿಲ್ ಸಾಖರೆ

೧. ಉಷ್ಣತೆಯಿಂದ ಜಗತ್ತಿನಾದ್ಯಂತ ಆಗಿರುವ ಹಾನಿ !

ಯುರೋಪ್-ಅಮೇರಿಕಾಗಳಲ್ಲಿ ಈಗ ಉಷ್ಣತೆಯ ತೀವ್ರತೆ ಯಿಂದ ಜನರ ದೇಹದ ಉಷ್ಣತೆ ತುಂಬಾ ಹೆಚ್ಚುತ್ತಿದೆ. ಕೆಲವೆಡೆ ಉಷ್ಮಾಘಾತದಿಂದ ಮರಣದ ಪ್ರಮಾಣವೂ ಹೆಚ್ಚಾಗಿದೆ. ಇಂದು ಯುರೋಪ್, ಚೀನಾ ಮತ್ತು ಅಮೇರಿಕಾಗಳಲ್ಲಿಯೂ ಉಷ್ಣಾಂಶವು ೪೦ ಕ್ಕಿಂತ ಮುಂದೆ ಹೋಗುತ್ತಿದ್ದು ಅಲ್ಲಿನ ತಂಪು ತಾಪಮಾನದ ಅಭ್ಯಾಸವಿರುವ ಜನರಿಗೆ ಇಷ್ಟು ಉಷ್ಣತೆಯನ್ನು ಸಹಿಸಿಕೊಳ್ಳಲು ಅಸಾಧ್ಯವಾಗಿದೆ. ಜನರಿಗೆ ಹೊರಗೆ ಹೋಗಲು ಕಷ್ಟವಾಗುತ್ತಿದ್ದು ಬ್ರಿಟನ್ ಅತೀ ಉಷ್ಣತೆಯಿಂದ ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ. ಅದರಲ್ಲಿಯೂ ಅಮೇರಿಕಾ, ಸ್ಪೇನ್, ಪೋರ್ಚ್ಯುಗಲ್, ಜರ್ಮನ್, ಫ್ರಾನ್ಸ್, ಚೀನಾ ಮುಂತಾದ ಸ್ಥಳಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅರಣ್ಯಗಳಿಗೆ ಬೆಂಕಿ ತಾಗಿದ್ದರಿಂದ ಸಾವಿರಾರು ಹೆಕ್ಟರ್ ಭೂಮಿ ಮತ್ತು ಅರಣ್ಯಸಂಪತ್ತು ಸುಟ್ಟು ಬೂದಿಯಾಗಿದೆ. ಅದೇ ರೀತಿ ಪಶುಪಕ್ಷಿ ಮತ್ತು ಕಾಡುಪ್ರಾಣಿಗಳು ದೊಡ್ಡ ಪ್ರಮಾಣದಲ್ಲಿ ನಾಡಿಗೆ ನುಗ್ಗುತ್ತಿವೆ.

೨. `ತಾಪಮಾನ ಹೆಚ್ಚಾದಾಗ ಅದನ್ನು ಕಡಿಮೆ ಮಾಡಲು ಇಂಧನವನ್ನು ಹೆಚ್ಚು ಉಪಯೋಗಿಸುವುದು’ ಇದೊಂದು ದುಷ್ಟಚಕ್ರವಾಗಿದೆ !

ತಾಪಮಾನವು ತನ್ನ ಮಿತಿಯನ್ನು ಬಿಟ್ಟು ಮುಂದೆ ಹೋಗಿದೆ. ಇದರಿಂದ ಉಷ್ಣತೆ ಹೆಚ್ಚಾದಾಗ ಅದನ್ನು ಕಡಿಮೆಗೊಳಿಸಲು ಇಂಧನದ ಬೇಡಿಕೆ ಹೆಚ್ಚಾಗುತ್ತದೆ. ಆಗ ಹೆಚ್ಚು ಇಂಧನಕ್ಕಾಗಿ ಪುನಃ ಹೆಚ್ಚು ಕಲ್ಲಿದ್ದಲು ಮತ್ತು ಪಳೆಯುಳಿಕೆ (fossil fuels) ಇಂಧನವನ್ನು ಉಪಯೋಗಿಸಲಾಗುತ್ತದೆ. ಇದರಿಂದ ಹೆಚ್ಚು ತ್ಯಾಜ್ಯ ವಾಯು (ಕಾರ್ಬನ್) ಉತ್ಸರ್ಗವಾಗಿ ಪೃಥ್ವಿಯ ತಾಪಮಾನ ಇನ್ನೂ ಹೆಚ್ಚಾಗುತ್ತದೆ. ಇಂತಹ ದ್ವಿಮುಖ ಚಕ್ರವ್ಯೂಹದಲ್ಲಿ ಸದ್ಯ ಪೃಥ್ವಿಯ ಮೇಲಿನ ಪರಿಸರ ಸಿಲುಕಿದೆ. ಈ ಚಕ್ರವ್ಯೂಹವನ್ನು ಭೇದಿಸಿ ಎಲ್ಲರೂ ಪ್ರಾಮಾಣಿಕತೆಯಿಂದ ತಾಪಮಾನವನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಬೇಕಾಗುವುದು, ಇಲ್ಲದಿದ್ದರೆ ಇನ್ನು ಮುಂದೆ ಮಾನವರು ಇನ್ನೂ ಭೀಕರ ಪ್ರಸಂಗಗಳನ್ನು ಎದುರಿಸಬೇಕಾಗುವುದು !

೩. ಯುದ್ಧದಿಂದಾಗಿ ಹವಾಮಾನದಲ್ಲಿ ಬದಲಾವಣೆಯಾಗುವುದು ಸದ್ಯ ನಡೆದ ರಶಿಯಾ-ಯುಕ್ರೇನ್ ಯುದ್ಧದಲ್ಲಿ ಪ್ರತಿದಿನ ನೂರಾರು ಟನ್ ಸ್ಫೋಟಕಗಳು, ವಿನಾಶಕಾರಿ ಕ್ಷಿಪಣಿಗಳು ಮತ್ತು ಮದ್ದುಗುಂಡುಗಳನ್ನು ದೊಡ್ಟ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತಿದೆ. `೫ ತಿಂಗಳುಗಳ ನಂತರವೂ ಈ ಯದ್ಧ ನಿಲ್ಲುವ ಯಾವುದೇ ಕುರುಹು ಕಾಣಿಸದಿರುವುದರಿಂದ ಮುಂಬರುವ ಕಾಲದಲ್ಲಿ ಯುರೋಪಿನ ಹವಾಮಾನದಲ್ಲಿ ದೊಡ್ಡ ಅಸಮತೋಲನ ಆಗಬಹುದು’, ಎಂಬುದು ಅಲ್ಲಿನ ತಜ್ಞರ ಅಭಿಪ್ರಾಯ ವಾಗಿದೆ. ಹಾಗೆಯೇ ಮಧ್ಯ ಏಶಿಯಾ, ಚೀನಾ, ರಶಿಯಾದಂತಹ ತೈಲ ಉತ್ಪಾದಕ ದೇಶಗಳಿಂದ ಪಳೆಯುಳಿಕೆ ಇಂಧನದ ಉಪಯೋಗವನ್ನು ಕಡಿಮೆ ಮಾಡಲು ವಿರೋಧವಿದೆ, ಅದೊಂದು ಬೇರೆ ವಿಷಯ.

೪. ಪ್ರತಿಯೊಂದು ದೇಶದಲ್ಲಿ ಪರಿಸರದ ವಿಷಯ ರಾಜಕೀಯ ವಿಷಯವಾಗುವುದು ಆವಶ್ಯಕ !

ಸದ್ಯದ ಸ್ಥಿತಿಯಲ್ಲಿ ಜಗತ್ತಿನ ಕಾರ್ಬನವಾಯು (ಕಾರ್ಬನ ಡೈಆಕ್ಸೆöÊಡ್ಡ್) ಉತ್ಸರ್ಗ ೪೦ ಗಿಗಾ ಟನ್ (೧ ಅಬ್ಜ ಟನ್‌ನ ತುಲನೆಯಲ್ಲಿ ಸ್ಫೋಟಕ ಶಕ್ತಿಗೆ ಸಮಾನ ಅಣುಶಕ್ತಿಯ ಅಳತೆ) ಆಗಿದೆ ಮತ್ತು ೨೦೩೦ ರ ವರೆಗೆ ವಿಜ್ಞಾನಿಗಳಿಗೆ ಅದನ್ನು ೧೮ ಗಿಗಾ ಟನ್‌ಗಳವರೆಗೆ ತರಲಿಕ್ಕಿದೆ, ಹಾಗಾದರೆ ಮಾತ್ರ ಜಗತ್ತಿನ ತಾಪಮಾನದ ಹೆಚ್ಚಳವನ್ನು ೧.೫ ಅಂಶ ಸೆಲ್ಸಿಯಸ್‌ನ ವರೆಗೆ ತಡೆಯಬಹುದು. ಈ ತ್ಯಾಜ್ಯವಾಯು (ಕಾರ್ಬನವಾಯುವನ್ನು ಶೂನ್ಯಕ್ಕೆ ಒಯ್ಯಲು ವಿವಿಧ ರಾಷ್ಟçಗಳು ೨೦೩೦ ರಿಂದ ೨೦೭೦ ರ ವರೆಗಿನ ಕಾಲಮಿತಿಯನ್ನು ಕಳೆದ ವರ್ಷ ನಡೆದಿರುವ `ಗ್ಲಾಸಗೋ ಪರಿಷತ್ತು’ನಲ್ಲಿ ನಿರ್ಧರಿಸಿವೆ. ಸಂಯುಕ್ತ ರಾಷ್ಟçದ ಮಹಾಸಚಿವ ಆಂತಿನಿಯೋ ಗುಟರೇಸ್ ಇವರು ಕೂಡ ಜಗತ್ತಿನಾದ್ಯಂತದ ನೇತಾರರಿಗೆ ಪಳೆಯುಳಿಕೆ ಇಂಧನದ ಉಪಯೋಗದ ವಿಷಯದಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ. ಆದ್ದರಿಂದ ಪರಿಸರದ ರಕ್ಷಣೆಗಾಗಿ ಸ್ಥಳೀಯರಿಂದ ಹಿಡಿದು ಜಾಗತಿಕ ಸ್ತರದವರೆಗಿನ ಜನಾಭಿಪ್ರಾಯವನ್ನು ಬಲಗೊಳಿಸಬೇಕು. ಪರಿಸರದ ವಿಷಯವು ಈಗ ಪ್ರತಿಯೊಂದು ದೇಶದ ರಾಜಕೀಯ ವಿಷಯವಾಗಬೇಕು. ಯುರೋಪ್-ಅಮೇರಿಕಾದಲ್ಲಿ ಇದು ಈಗಾಗಲೇ ಪ್ರಾರಂಭವಾಗಿದೆ.

೫. ಮಾನವನು ಸದ್ಯದ ನೈಸರ್ಗಿಕ ಆಪತ್ತುಗಳನ್ನು ನಿಸರ್ಗದ ಎಚ್ಚರಿಕೆ ಎಂದು ತಿಳಿದು ಜಾಗರೂಕನಾಗಬೇಕು !

ಕಳೆದ ಕೆಲವು ವರ್ಷಗಳಿಂದ ಜಗತ್ತಿನ ವಿವಿಧ ಭಾಗಗಳಲ್ಲಿ ನಿರಂತರವಾಗಿ ಆಗುವ ಬಿರುಗಾಳಿ, ಅಲ್ಪಾವಧಿಯಲ್ಲಿ ತುಂಬಾ ಮಳೆಯಾಗುವುದು ಮತ್ತು ಅದರಿಂದ ಉದ್ಭವಿಸುವ ನೆರೆಹಾವಳಿ, ಧ್ರುವಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಮ ಕರಗುವುದರಿಂದ ಸಮುದ್ರದ ನೀರಿನ ಮಟ್ಟ ಹೆಚ್ಚಾಗಿ ಸಮುದ್ರತೀರದಲ್ಲಿರುವ ನಾಗರಿಕರ ಜೀವನ ಅಪಾಯಕ್ಕೀಡಾಗುವುದು, ಅದರ ಜೊತೆಗೆ ಅರಣ್ಯಗಳಿಗೆ ತಾಗುವ ಬೆಂಕಿ, ಬರಗಾಲದ ಪರಿಸ್ಥಿತಿ ಅಥವಾ ಅತೀಉಷ್ಣತೆಯಿಂದ ಕೃಷಿ ಉತ್ಪನ್ನಗಳಲ್ಲಿ ಆಗುವ ಕುಸಿತ, ವಾತಾವರಣ ದಲ್ಲಿ ಆಗಿರುವ ಅಸಮತೋಲನ ಇವು ಮಾನವನಿಗೆ ನಿಸರ್ಗದಿಂದ `ಟೆಲಿಕಾಸ್ಟ್’ (ಪ್ರಸಾರಿತ) ಆಗುವ ಎಚ್ಚರಿಕೆಗಳಾಗಿವೆ ಮನುಕುಲದ ಸೃಷ್ಟಿಯ ಈ ಎಚ್ಚರಿಕೆಯನ್ನು ಯೋಗ್ಯ ರೀತಿಯಲ್ಲಿ ಪರಿಗಣಿಸಿ ಪರಿಸರದ ರಕ್ಷಣೆಗಾಗಿ ಈಗ ದೊಡ್ಡಚಳುವಳಿ ಯನ್ನು ಹಮ್ಮಿಕೊಳ್ಳುವುದು ಆವಶ್ಯಕವಾಗಿದೆ; ಇಲ್ಲದಿದ್ದರೆ ಮುಂಬರುವ ಕಾಲದಲ್ಲಿ ನಿಸರ್ಗ ಇದಕ್ಕಿಂತಲೂ ಹೆಚ್ಚು ಕ್ರೂರವಾಗ ಬಹುದು; ಆ ಮೇಲೆ ಯಾವುದೇ ದಯೆದಾಕ್ಷಿಣ್ಯವನ್ನು ತೋರಿಸದೆ ದೊಡ್ಡ ಪ್ರಮಾಣದಲ್ಲಿ ಅರ್ಥ ಮತ್ತು ಜೀವ ಹಾನಿಯನ್ನು ಮಾಡುವುದು ಮತ್ತು ಮಾನವನಿಗೆ ತುಂಬಾ ದೊಡ್ಡ ಸಂಕಟವನ್ನು ಎದುರಿಸಬೇಕಾಗುವುದು !

೬. ಪ್ರಾಣಿ ಮತ್ತು ನಿಸರ್ಗಕ್ಕೆ ದೇವತ್ವವನ್ನು ಪ್ರದಾನಿಸಿ ಅವುಗಳ ಪೂಜೆಯನ್ನು ಮಾಡುವ ಭಾರತೀಯ ಸಂಸ್ಕೃತಿ !

ಇಂದು `ಗ್ಲೋಬಲ್ ವಾರ್ಮಿಂಗ್’ನಿಂದಾಗಿ (ಜಾಗತಿಕ ತಾಪಮಾನ ಹೆಚ್ಚಳದಿಂದ), ಜಗತ್ತಿನಾದ್ಯಂತದ ಪರಿಸರತಜ್ಞರ ಗಮನವು ಪರಿಸರರಕ್ಷಣೆ ಮತ್ತು ಸಂವರ್ಧನೆಯ ಕಡೆಗಿದೆ; ಆದರೆ ನಮ್ಮ ಋಷಿಮುನಿಗಳು ಸೃಷ್ಟಿಯನ್ನು `ನಮ್ಮ ಭೋಗದ ಸಾಧನ ಅಥವಾ ಭೋಗಕ್ಕಾಗಿ ಉಪಯೋಗ’, ಎಂಬ ಭೌತಿಕ ದೃಷ್ಟಿಕೋನದಿಂದ ಎಂದಿಗೂ ನೋಡಲಿಲ್ಲ. ನಮ್ಮ ಪ್ರಾಚೀನ ಋಷಿ ಮುನಿಗಳು ನಮ್ಮ ಸುತ್ತಮುತ್ತಲಿನ ಸೃಷ್ಟಿಯನ್ನು ಒಂದು ದೈವೀ ದೃಷ್ಟಿಯಿಂದ ನೋಡುವ ಆರೋಗ್ಯವಂತ ದೃಷ್ಟಿಕೋನವನ್ನು ನಮ್ಮ ಸಂಸ್ಕೃತಿಯಲ್ಲಿ ಬೆಳೆಸಿದ್ದಾರೆ. ವೃಕ್ಷ, ವನಸ್ಪತಿಗಳಲ್ಲಿಯೂ ದೇವತ್ವತ್ತ್ವವನ್ನು ನೋಡುವುದು ನಮ್ಮ ಸಂಸ್ಕೃತಿಯಾಗಿದೆ. ನಮ್ಮ ಸಂಸ್ಕೃತಿಯಲ್ಲಿ ಗೋಪೂಜೆ, ನಾಗಪೂಜೆಯನ್ನು ಮಾಡಲಾಗುತ್ತದೆ. ಆನೆಯನ್ನು ಲಕ್ಷಿಯ ಪ್ರತೀಕ ಎಂದು ತಿಳಿಯಲಾಗುತ್ತದೆ, ದುರ್ಗಾ ದೇವಿಯು ಹುಲಿಗೆ ತನ್ನ ವಾಹನವೆಂದು ಸನ್ಮಾನವನ್ನು ನೀಡಿದ್ದಾಳೆ. ಜಗತ್ತಿನ ಶೇ. ೭೦ ರಷ್ಟು ಸ್ಥಳವನ್ನು ವ್ಯಾಪಿಸಿರುವ ಸಮುದ್ರ ದೇವತೆಗೆ ನೂಲಹುಣ್ಣಿಮೆಯಂದು ಶ್ರೀಫಲವನ್ನು ಅರ್ಪಿಸಿ ಪೂಜಿಸಲಾಗುತ್ತದೆ. ಮನೆಮನೆಗಳಲ್ಲಿ ತುಳಸಿಯ ಪೂಜೆಯಾಗುತ್ತದೆ.

ಮುಂಬರುವ ಕಾಲದಲ್ಲಿಯೂ ಸಂಪೂರ್ಣ ಮನುಕುಲವು ಭಕ್ತಿಮಯ ದೃಷ್ಟಿಕೋನದಿಂದ ಪ್ರಾಣಿ ಮತ್ತು ವನಸ್ಪತಿಗಳ ರಕ್ಷಣೆ ಮತ್ತು ಸಂವರ್ಧನೆಯನ್ನು ಮಾಡಬೇಕಾಗುವುದು, ಹಾಗೆ ಮಾಡಿದರೆ ಮಾತ್ರ ಮುಂದಿನ ಕಾಲದಲ್ಲಿ ಸೃಷ್ಟಿಯ ಮೇಲಿನ ಮಾನವನ ಜೀವನವು ಸುಖಕರವಾಗುವುದು. ಮುಂಬರುವ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ನೈಸರ್ಗಿಕ ಆಪತ್ತುಗಳು ಬರಲಿಕ್ಕಿವೆ ಎಂದು ಅನೇಕ ದಾರ್ಶನಿಕ ಸಂತರು ಹೇಳಿದ್ದಾರೆ. ವಾತಾ ವರಣದಲ್ಲಿನ ರಜತಮದ ಪ್ರಮಾಣ ಹೆಚ್ಚಾಗುವುದು ಕೂಡ ನೈಸರ್ಗಿಕ ಆಪತ್ತಿನ ಒಂದು ಮಹತ್ವದ ಕಾರಣವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನೈಸರ್ಗಿಕ ಆಪತ್ತುಗಳ ಸಂಕಟಗಳನ್ನು ಸಹಿಸಿಕೊಳ್ಳುವ ಹಾಗೆ ಮಾಡಲು ಮತ್ತು ಅವುಗಳಿಂದ ಬದುಕುಳಿಯಲು ಪಂಚಮಹಾಭೂತಗಳಿಗೆ ಶರಣಾಗಿ ಭಗವಂತನ ಭಕ್ತರಾಗುವುದು ಆವಶ್ಯಕವಾಗಿದೆ; ಏಕೆಂದರೆ ಭಗವಂತನೇ ಎಲ್ಲ ಸಂಕಟಗಳಿಂದ ಭಕ್ತರ ರಕ್ಷಣೆಯನ್ನು ಮಾಡುತ್ತಾನೆ !

– ಶ್ರೀ. ಅನಿಲ ದತ್ತಾತ್ರೇಯ ಸಾಖರೆ, ಕೋಪರೀ ಠಾಣೆ