ಬಾಂಗ್ಲಾದೇಶದ ನೆರೆಗೆ ಭಾರತ ಕಾರಣವಂತೆ !

ಬಾಂಗ್ಲಾದೇಶದಲ್ಲಿ ಭಾರತದ ವಿರುದ್ಧ ಪ್ರತಿಭಟನೆ

ಢಾಕಾ (ಬಾಂಗ್ಲಾದೇಶ) / ನವದೆಹಲಿ – ಬಾಂಗ್ಲಾದೇಶದಲ್ಲಿನ ಪೂರ್ವ ಮತ್ತು ದಕ್ಷಿಣ ಪೂರ್ವ ಪ್ರದೇಶದಲ್ಲಿನ ಅನೇಕ ಜಿಲ್ಲೆಗಳಲ್ಲಿ ನೆರೆ ಬಂದಿದೆ. ಈ ಸ್ಥಿತಿಗೆ ಭಾರತ ಕಾರಣ ಎಂದು ಹೇಳುತ್ತಾ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆ ಆರಂಭವಾಗಿದೆ. ತ್ರಿಪುರದಲ್ಲಿನ ಗೋಮತಿ ನದಿಯ ಮೇಲಿನ ಆಣೆಕಟ್ಟಿನ ಗೇಟ್ ಅನ್ನು ಭಾರತ ತೆರೆದಿರುವುದರಿಂದ ಬಾಂಗ್ಲಾದೇಶದಲ್ಲಿ ನೆರೆ ಬಂದಿದೆ ಎಂದು ಆರೋಪಿಸಲಾಗಿದೆ. ಭಾರತದ ‘ನೆರೆ ಬಾಂಬ್’ ನಿಂದಾಗಿ ನಮ್ಮಲ್ಲಿ ನೆರೆ ಬಂದಿದೆ ಎಂದು ಆರೋಪಿಸಲಾಗಿದೆ. ಢಾಕಾ ವಿದ್ಯಾಪೀಠದಲ್ಲಿ ಆಗಸ್ಟ್ ೨೧ ರ ರಾತ್ರಿ ಸಭೆ ಆಯೋಜನೆ ಮಾಡಿ ಭಾರತಕ್ಕೆ ಎಚ್ಚರಿಕೆ ನೀಡಲಾಯಿತು. ಭಾರತದಿಂದ ಬಾಂಗ್ಲಾದೇಶದಲ್ಲಿ ನೈಸರ್ಗಿಕ ಮತ್ತು ರಾಜಕೀಯ ನೆರೆ ಸೃಷ್ಟಿಸಿಲಾಗಿದೆ. ನಾವು ೧೯೭೧ ರಲ್ಲಿ ಹೇಗೆ ಯುದ್ಧ ಮಾಡಿದೆವೊ ಅದೇ ರೀತಿ ಈಗ ೨೦೨೪ ರಲ್ಲಿ ಕೂಡ ಸ್ವತಂತ್ರಕ್ಕಾಗಿ ಹೋರಾಡುವೆವು, ಎಂದು ಬೆದರಿಕೆ ನೀಡಲಾಗಿದೆ. ಇನ್ನೊಂದೆಡೆ ನೆರೆಯ ಅಂಶದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯದಿಂದ ಯಾವುದೇ ಟಿಪ್ಪಣಿ ಮಾಡಲಾಗಿಲ್ಲ.

ಮೀಸಲಾತಿ ವಿರೋಧಿ ಪ್ರತಿಭಟನೆಯ ಸಮನ್ವಯ ವಿದ್ಯಾರ್ಥಿ ಹಸನತ್ ಅಬ್ದುಲ್ಲ ಇವನ ಸುಳ್ಳು ಆರೋಪ – ನೆರೆಯ ಹಿಂದೆ ಭಾರತದ ಷಡ್ಯಂತ್ರವಂತೆ !

ಬಾಂಗ್ಲಾದೇಶದಲ್ಲಿ ನಡೆದಿರುವ ಮೀಸಲಾತಿ ವಿರೋಧಿ ಪ್ರತಿಭಟನೆಯ ಸಮನ್ವಯ ಮಾಡುವ ವಿದ್ಯಾರ್ಥಿ ಹಸನತ ಅಬ್ದುಲ್ಲ ಇವನು, ಭಾರತವು ಆಣೆಕಟ್ಟಿನಲ್ಲಿನ ನೀರು ಬಿಟ್ಟಿರುವುದರಿಂದಲೇ ನೆರೆ ಬಂದಿದೆ. ನಾವು ಒಂದು ಹೊಸ ರಾಜ್ಯದ ಸ್ಥಾಪನೆಯ ಕೆಲಸ ಮಾಡುತ್ತಿದ್ದೇವೆ. ಒಂದು ನೆರೆಯ ದೇಶವಾಗಿ ನಮಗೆ ಸಹಾಯ ಮಾಡುವ ಬದಲು ಭಾರತ ಇಂತಹ ಷಡ್ಯಂತ್ರ ರೂಪಿಸುತ್ತಿದೆ ಎಂದು ಆರೋಪಿಸಿದರು.

ಸೂಚನೆ ನೀಡದೆ ಆಣೆಕಟ್ಟಿನ ನೀರು ಬಿಟ್ಟಿರುವುದರಿಂದ ನೆರೆ ! – ಮಧ್ಯಂತರ ಸರಕಾರದ ಮಾಹಿತಿ ಸಲಹೆಗಾರ ನಾಹಿದ್ ಇಸ್ಲಾಂ

ಮಧ್ಯಂತರ ಸರಕಾರದ ಮಾಹಿತಿ ಸಲಹೆಗಾರ ನಾಹಿದ್ ಇಸ್ಲಾಂ ಅವರು ಈ ಬಗ್ಗೆ ಮಾತನಾಡಿ, ಆಣೆಕಟ್ಟಿನಿಂದ ಬಿಟ್ಟಿರುವ ನೀರು ಬಾಂಗ್ಲಾದೇಶದವರೆಗೆ ತಲುಪಿರುವುದರಿಂದ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಸೂಚನೆ ನೀಡದೆ ಆಣೆಕಟ್ಟಿನ ನೀರು ಬಿಡಲಾಗಿದೆ ಎಂದರು.

ನೀರು ಬಿಟ್ಟಿರುವುದರಿಂದ ನೆರೆ ಬಂದಿದೆ ಎಂಬ ದಾವೆ ತಪ್ಪಾಗಿದೆ ! – ಭಾರತ

ಬಾಂಗ್ಲಾದೇಶದ ಆರೋಪದ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ್ದು, ತ್ರಿಪುರಾದಲ್ಲಿನ ಡಾಬೂರು ಆಣೆಕಟ್ಟು ತೆರೆದಿರುವುದರಿಂದ ನೆರೆ ಬಂದಿರುವ ವದಂತಿಗಳು ಬಾಂಗ್ಲಾದೇಶದಲ್ಲಿ ಹಬ್ಬಿದೆ. ಭಾರತ ಮತ್ತು ಬಾಂಗ್ಲಾದೇಶದ ನಡುವೆ ಗೋಮತಿ ನದಿಯ ಅಕ್ಕಪಕ್ಕದ ಪ್ರದೇಶದಲ್ಲಿ ಈ ವರ್ಷ ಎಲ್ಲಕ್ಕಿಂತ ಹೆಚ್ಚು ಮಳೆ ಆಗಿದೆ. ಆದ್ದರಿಂದ ಎರಡು ಕಡೆಯಲ್ಲಿ ಅಡಚಣೆಗಳು ನಿರ್ಮಾಣವಾಗಿದೆ. ಎರಡು ದೇಶದಲ್ಲಿನ ನದಿಗಳಿಗೆ ನೆರೆ ಬರುವುದು ಒಂದು ಸಾಮಾನ್ಯ ಸಮಸ್ಯೆ ಆಗಿದೆ. ಇದಕ್ಕಾಗಿ ಎರಡು ದೇಶದಲ್ಲಿನ ಜನರು ಸಂಘರ್ಷ ಮಾಡಬೇಕಾಗುತ್ತದೆ. ಇದನ್ನು ಎದುರಿಸಲು ಎರಡು ದೇಶದ ಸಹಕಾರ ಆವಶ್ಯಕವಾಗಿದೆ. ಬಾಂಗ್ಲಾದೇಶ ಗಡಿಯಿಂದ ದಾಬೂರು ಆಣೆಕಟ್ಟು ೧೨೦ ಕಿಲೋಮೀಟರ್ ಗಿಂತಲೂ ಹೆಚ್ಚು ದೂರದಲ್ಲಿದೆ. ಅದು ಕಡಿಮೆ ಎತ್ತರದ (ಸುಮಾರು ೩೦ ಮೀಟರ್) ಆಣೆಕಟ್ಟಾಗಿದೆ. ಅಲ್ಲಿ ವಿದ್ಯುತ್ ತಯಾರಿಸಲಾಗುತ್ತದೆ ಮತ್ತು ಆ ವಿದ್ಯುತ್ ಗ್ರೀಡ್ ನಲ್ಲಿ ಹೋಗಿ ಅಲ್ಲಿಂದ ತ್ರಿಪುರದಿಂದ ಬಾಂಗ್ಲಾದೇಶಕ್ಕೆ ೪೦ ಮೆಗಾ ವ್ಯಾಟ್ ವಿದ್ಯುತ್ ದೊರೆಯುತ್ತದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಯಾವ ರೀತಿ ಪಾಕಿಸ್ತಾನ ತನ್ನ ಎಲ್ಲಾ ಸಮಸ್ಯೆಗೆ ಭಾರತವನ್ನೇ ದೂಷಿಸುತ್ತದೆ ಅದೇ ರೀತಿ ಈಗ ಬಾಂಗ್ಲಾದೇಶ ಕೂಡ ನಡೆದುಕೊಳ್ಳುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಭಾರತದ ಮೇಲಿನ ಕೋಪವನ್ನು ತೋರಿಸಲು ಅಲ್ಲಿನ ಹಿಂದುಗಳ ಮೇಲೆ ಇನ್ನಷ್ಟು ದೌರ್ಜನ್ಯ ಹೆಚ್ಚಾಗುವುದು ಎಂಬುದನ್ನು ನಿರಾಕರಿಸಲಾಗದು.