ಕಾಂಗ್ರೆಸ್ಸಿನ ನಿಜವಾದ ಮಾನಸಿಕತೆಯನ್ನು ಅರಿತುಕೊಳ್ಳಿ !

೧. ದೇಶಾದ್ಯಂತ ಹೀಗೆ ಕ್ರಮ ಕೈಗೊಳ್ಳಬೇಕು !

ಪಂಜಾಬದಲ್ಲಿ ಭ್ರಷ್ಟಾಚಾರದ ಪ್ರಕರಣದಲ್ಲಿ ಕಳೆದ ೫ ತಿಂಗಳಲ್ಲಿ ೧೩೫ ಸರಕಾರಿ ಅಧಿಕಾರಿಗಳು ಸೇರಿದಂತೆ ಒಟ್ಟು ೨೦೦ ಜನರನ್ನು ಬಂಧಿಸಲಾಗಿದೆ. ಇದರಲ್ಲಿ ೨೫ ರಾಜಪತ್ರಾಂಕಿತ (ಗೆಜೆಟೆಡ್) ಮತ್ತು ೩೦ ಪೊಲೀಸ್ ಅಧಿಕಾರಿಗಳಿದ್ದಾರೆ.

೨. ಇದು ಹಿಂದೂಗಳಿಗೆ ಲಜ್ಜಾಸ್ಪದ !

ಗಯಾ(ಬಿಹಾರ)ದ ಪ್ರಸಿದ್ಧ ವಿಷ್ಣುಪದ ದೇವಸ್ಥಾನದಲ್ಲಿ ಹಿಂದೂಯೇತರರಿಗೆ ಪ್ರವೇಶ ನಿರ್ಬಂಧಿಸಿದ್ದರೂ ರಾಜ್ಯದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಮಹಮದ ಇಜರಾಯಿಲ್ ಇವರು ಮುಖ್ಯಮಂತ್ರಿ ನಿತೀಶ ಕುಮಾರ ಇವರೊಂದಿಗೆ ನೇರ ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರವೇಶಿಸಿದರು.

೩. ಅಂತಹ ಆದೇಶವನ್ನು ಏಕೆ ನೀಡಬೇಕಾಗುತ್ತದೆ ?

ಕರ್ನಾಟಕ ಉಚ್ಚ ನ್ಯಾಯಾಲಯವು ಮಸೀದಿಗಳ ಮೇಲಿನ ಧ್ವನಿವರ್ಧಕಗಳಿಗೆ ಸಂಬಂಧಿಸಿದ ಧ್ವನಿಮಾಲಿನ್ಯ ನಿಯಮಗಳ ಕುರಿತು ಕ್ರಮಕೈಗೊಂಡು ಅದರ ವರದಿಯನ್ನು ಸಲ್ಲಿಸುವಂತೆ ಪೊಲೀಸರಿಗೆ ಆದೇಶ ನೀಡಿದೆ.

೪. ಕಾಂಗ್ರೆಸನ ಮತಾಂಧ ಶಾಸಕರ `ಗಾಂಧಿಗಿರಿ !

`ಟಿ. ರಾಜಾಸಿಂಹ ಇವರು `ಮಹಮದ ಪೈಗಂಬರರು ಮುಸಲ್ಮಾನರ ನಾಯಕ ರಾಗಿದ್ದಾರೆ ಎಂದು ಹೇಳದಿದ್ದರೆ, ಮುಸಲ್ಮಾನರು ಅವರನ್ನು ಥಳಿಸಬೇಕು’, ಎಂದು ತೆಲಂಗಾಣದ ಕಾಂಗ್ರೆಸ ಶಾಸಕ ಫಿರೋಜ ಖಾನ ಕಿಡಿಕಾರಿದ್ದಾರೆ.

೫. ಮಹಾರಾಷ್ಟ್ರದ ಪಿಂಪ್ರಿ-ಚಿಂಚವಡ ಮಹಾನಗರಪಾಲಿಕೆಯ ಹಿಂದೂ ಧರ್ಮ ಶಾಸ್ತ್ರ ವಿರೋಧಿ ಮನವಿಯನ್ನು ತಿಳಿಯಿರಿ !

ಗಣೇಶೋತ್ಸವಕ್ಕೆ ಪಟಕಾರ ಅಥವಾ ಕಾಗದದ ತಿರುಳಿನಿಂದ ತಯಾರಿಸಿದ ಪರಿಸರ ಸ್ನೇಹಿ (ವಿಘಟನೀಯ) ಗಣೇಶ ವಿಗ್ರಹಗಳಿಗೆ ಪ್ರಾಧಾನ್ಯತೆ ನೀಡಬೇಕು, ಎಂದು ಮಹಾರಾಷ್ಟçದ ಪಿಂಪರಿ-ಚಿಂಚವಡ ಮಹಾನಗರಪಾಲಿಕೆಯ ಆಯುಕ್ತ ಶೇಖರ ಸಿಂಹ ಇವರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

೬. ಕಾಂಗ್ರೆಸ್ಸಿನ ನಿಜವಾದ ಮಾನಸಿಕತೆಯನ್ನು ಅರಿತುಕೊಳ್ಳಿ !

ಪಾಲಿ (ರಾಜಸ್ಥಾನ) ಇಲ್ಲಿನ `ಮಾರವಾಡ ಜಂಕ್ಶನ್ ಕಾಲೇಜ್’ನಲ್ಲಿ ನಡೆದ ವಿದ್ಯಾರ್ಥಿಗಳ ಚುನಾವಣೆಯಲ್ಲಿ  ಕಾಂಗ್ರೆಸ್ಸಿನ ವಿದ್ಯಾರ್ಥಿ ಶಾಖೆಯಾದ `ಎನ್.ಎಸ್.ಯೂ.ಐ.’ ಇದರ ಸದಸ್ಯ ಫಿಜಾ ಖಾನನು ಉಪಾಧ್ಯಕ್ಷನಾದನೆಂದು ವಿಜಯೋತ್ಸವ ಆಚರಿಸುವಾಗ `ಪಾಕಿಸ್ತಾನ ಜಿಂದಾಬಾದ್’ನ ಘೋಷಣೆ ಕೂಗಲಾಯಿತು.

೭. ಗಾಂಧಿವಾದಿ ಕಾಂಗ್ರೆಸ್ಸಿಗರ ಜಿಹಾದ್ !

ಭಾಗ್ಯನಗರದ (ತೆಲಂಗಾಣ) ಕಾಂಗ್ರೆಸ್ ನಾಯಕಿ ಆಯೇಷಾ ಫರ್ಹೀನ್  ಇವರು ಶಾಸಕ ಟಿ. ರಾಜಾ ಸಿಂಗ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. `ಯಾರೂ ಗುರುತಿಸಲಾಗದಂತೆ ಅವರ ಸ್ಥಿತಿ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ.