ಆಂಧ್ರಪ್ರದೇಶ ಸರಕಾರದ ಸಾಹುಕಾರವೃತ್ತಿ

ಅಂದ್ರಪ್ರದೇಶದಲ್ಲಿ ಹಿಂದೂದ್ವೇಷಿ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಮೇಲಿನ ದಾಳಿಗಳ ಸರಣಿ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಅಲ್ಲಿ ದೇವಸ್ಥಾನಗಳ ಮೇಲಿನ ದಾಳಿಯಿಂದ ಹಿಡಿದು ಹಿಂದೂಗಳೊಂದಿಗೆ ತಾರತಮ್ಯ ಮಾಡುವ ತನಕ ಅನೇಕ ದಾಳಿಗಳು ಸತತವಾಗಿ ನಡೆಯುತ್ತಿವೆ. ಈಗಲೂ ಈ ಹಿಂದೂದ್ವೇಷಿ ಸರಕಾರವು ‘ರಾಜ್ಯದಲ್ಲಿನ ದೇವ ಸ್ಥಾನಗಳು ತಮ್ಮ ಸ್ಥಿರ ಠೇವಣಿ (ಫಿಕ್ಸೆಡ್ ಡಿಪಾಸಿಟ್) ಮುರಿಸಿ ಧಾರ್ಮಿಕ ದತ್ತಿ ಇಲಾಖೆಯ ಬಾಕಿಯಿರುವ ಹಣವನ್ನು ತುಂಬ ಬೇಕು’, ಎಂಬ ಫತ್ವಾವನ್ನು ಹೊರಡಿಸಿದೆ. ಅದಕ್ಕೂ ಮುಂದೆ ಹೋಗಿ ‘ಈ ಶುಲ್ಕವನ್ನು ತುಂಬದಿದ್ದರೆ ಶಿಸ್ತುಭಂಗ ಕ್ರಮವನ್ನು ಕೈಗೊಳ್ಳಲಾಗುವುದು’, ಎಂಬ ಎಚ್ಚರಿಕೆಯನ್ನೂ ಸರಕಾರವು ದೇವಸ್ಥಾನಗಳಿಗೆ ನೀಡಿದೆ. ಈ ಸರಕಾರವು ಈ ರೀತಿ ‘ಝಿಝಿಯಾ ತೆರಿಗೆ’ಯನ್ನು ಎಂದಿಗಾದರೂ ಮಸೀದಿ ಅಥವಾ ಚರ್ಚ್‌ಗಳಿಗೆ ವಿಧಿಸಿದೆಯೇ ? ಇದು ಸರಕಾರದ ಸಾಹುಕಾರವೃತ್ತಿಯಲ್ಲದೇ ಇನ್ನೇನು ?

ಜಗನ್ಮೋಹನ ರೆಡ್ಡಿ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ, ಅಂದರೆ ೩೦ ಮೇ ೨೦೧೯ ರ ನಂತರದ ೧೯ ತಿಂಗಳುಗಳಲ್ಲಿ ರಾಜ್ಯದಲ್ಲಿ ದೇವಸ್ಥಾನಗಳ ಮೇಲೆ ೧೨೦ ದಾಳಿಗಳಾಗಿವೆ. ಈ ಅಂಕಿಅಂಶಗಳು ಕಳೆದ ವರ್ಷದವರೆಗಿನದ್ದಾಗಿವೆ. ಅದರಲ್ಲಿ ನಿಶ್ಚಿತವಾಗಿಯೂ ಏರಿಕೆ ಕಂಡುಬಂದಿದೆ. ದೇವಸ್ಥಾನಗಳ ಮೇಲಿನ ಹೆಚ್ಚುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗುದೇಶಮ್‌ನ ಅಧ್ಯಕ್ಷ  ಚಂದ್ರಬಾಬು ನಾಯ್ಡು ಇವರು ‘ಜಗನ್ಮೋಹನ ಸರಕಾರದ ರಾಜ್ಯದಲ್ಲಿ ದೇವರೂ ಸುರಕ್ಷಿತರಾಗಿಲ್ಲ’, ಎಂಬ ಶಬ್ದಗಳಲ್ಲಿ ಪ್ರಸ್ತುತ ಸರಕಾರವನ್ನು ಟೀಕಿಸಿದರು. ಇಷ್ಟೇ ಅಲ್ಲದೇ, ಅಲ್ಲಿನ ನಟ ಪವನ ಕಲ್ಯಾಣ ಇವರು ‘ದೇವಸ್ಥಾನಗಳ ಮೇಲಿನ ದಾಳಿಗಳ ಹೆಚ್ಚುತ್ತಿರುವ ಘಟನೆಗಳ ಬಗ್ಗೆ ಸಿಬಿಐ ತನಿಖೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ. ಇದರಿಂದ ರೆಡ್ಡಿಯವರ ನಿಜವಾದ ಸ್ವರೂಪವು ಬಹಿರಂಗವಾಯಿತು. ದೇವಸ್ಥಾನಗಳ ಧ್ವಂಸ ಪ್ರಕರಣಗಳಿಗೆ ಸಂಬಂಧಿಸಿದಂತೆ ರೆಡ್ಡಿ ವಿರುದ್ಧ ಅವರದೇ ಪಕ್ಷದ ಸಂಸದ ರಘುರಾಮ ಕೃಷ್ಣಮ್ ರಾಜು ಇವರು ಗಂಭೀರವಾಗಿ ಆರೋಪಿಸಿದಾಗ ಜಗನಮ್ಮೋಹನ ರೆಡ್ಡಿಯವರು ತೀವ್ರ ಸಂಕಷ್ಟಕ್ಕೆ ಒಳಗಾದರು. ೨೦೨೧ ನೇ ಇಸವಿಯಲ್ಲಿ ಆಂಧ್ರಪ್ರದೇಶದಲ್ಲಿ ಅನೇಕ ದೇವಸ್ಥಾನಗಳಲ್ಲಿ ಮೂರ್ತಿಗಳ ಧ್ವಂಸ ಮತ್ತು ಕಳ್ಳತನದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಸರಕಾರಿ ಗುತ್ತಿಗೆಗಳ ಮೂಲಕ ಅಲ್ಲಿ ಅನೇಕ ಚರ್ಚ್‌ಗಳನ್ನು ನಿರ್ಮಿಸುವ ಹೊಂಚನ್ನು ಹಾಕಲಾಗಿತ್ತು. ಇವುಗಳಿಗೆ ರಾಜು ಇವರು ತೀವ್ರ ವಿರೋಧ ವ್ಯಕ್ತಪಡಿಸಿ ನೇರ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಇವೆಲ್ಲವನ್ನು ತಡೆಯಲು ಕ್ರಮಕೈಗೊಳ್ಳುವಂತೆ ವಿನಂತಿ ಸಿದರು. ಇಷ್ಟೇ ಅಲ್ಲದೇ ಒಂದು ಸಂದರ್ಶನದಲ್ಲಿ ರಾಜು ಇವರು ‘ಆಂಧ್ರಪ್ರದೇಶದಲ್ಲಿ ದಾಖಲೆಗನುಸಾರ ಕೇವಲ ಶೇ. ೨ ರಷ್ಟು ಕ್ರೈಸ್ತರಿದ್ದರು; ಆದರೆ ಇಂದು ಇಲ್ಲಿನ ಶೇ. ೨೫ ರಷ್ಟು, ಅಂದರೆ ಒಂದೂವರೆ ಕೋಟಿ ಜನಸಂಖ್ಯೆ ಕ್ರೈಸ್ತರಿದ್ದಾರೆ. ಇದಕ್ಕೆ ಪ್ರಸ್ತುತ ರೆಡ್ಡಿ ಸರಕಾರವೇ ಹೊಣೆಯಾಗಿದೆ’ ಎಂದು ಹೇಳಿದರು. ಆಂಧ್ರ ಪ್ರದೇಶದ ಭೀಕರತೆಯನ್ನು ಬಯಲಿಗೆಳೆಯಲು ಇನ್ನೇನು ಬೇಕು ?

ಕ್ರೈಸ್ತೀಕರಣದ ಕಡೆಗೆ ಶೀಘ್ರ ಮಾರ್ಗಕ್ರಮಣ !

ಮೂಲದಲ್ಲಿ ಜಗನ್ಮೋಹನ ರೆಡ್ಡಿಯವರು ಮೂಲತಃ ಕ್ರೈಸ್ತರಾಗಿದ್ದಾರೆ. ಅವರ ವಿಶಾಲವಾದ ಬಂಗಲೆಯ ಕಟ್ಟಡದ ಮೇಲೆ ಕ್ರೈಸ್ತರ ದೊಡ್ಡ ‘ಕ್ರಾಸ್’ ಹಾಕಲಾಗಿದೆ. ಅವರ ಹೆಚ್ಚಿನ ನಿರ್ಣಯಗಳು ಹಿಂದೂವಿರೋಧಯಾಗಿರುತ್ತದೆ, ಇದಕ್ಕೆ ಅವರು ಕ್ರೈಸ್ತರಾಗಿರುವುದೇ ಮುಖ್ಯ ಕಾರಣವಾಗಿದೆ. ಕಳೆದ ವರ್ಷ ಕೇಂದ್ರ ಸರಕಾರವು ‘ಪರಿಶಿಷ್ಟ ಜಾತಿ ಮತ್ತು ಪಂಗಡದಲ್ಲಿನ ಯಾರಾದರೂ ಮತಾಂತರವಾದರೆ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕಾಗಿ ಇರುವ ಯೋಜನೆಗಳ ಲಾಭವು ದೊರಕಲಾರದು’ ಎಂದು ಸಂಸತ್ತಿನಲ್ಲಿ ಹೇಳಿದ್ದರು. ಇದರ ನಂತರ ಜಗನ್ಮೋಹನ ಸರಕಾರವು ೩೦ ಜುಲೈ ೨೦೨೧ ಈ ದಿನದಂದು ತರಾತುರಿಯಿಂದ ಆದೇಶಗಳನ್ನು ಹೊರಡಿಸಿ ‘ಪರಿಶಿಷ್ಟ ಜಾತಿ ಮತ್ತು ಪಂಗಡ (ಅಂದರೆ ಹಿಂದೂಗಳಲ್ಲಿನ) ವ್ಯಕ್ತಿಗಳಿಗೆ ನೀಡಲಾಗುವ ಸೌಲಭ್ಯಗಳನ್ನು ಕ್ರೈಸ್ತರು ಮತ್ತು ಬೌದ್ಧ ಧರ್ಮವನ್ನು ಸ್ವೀಕರಿಸಿದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೂ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು. ಅವರ ಅಧಿಕಾರವನ್ನು ಮೆರೆಸುವ ಹಿಂದಿನ ಉದ್ದೇಶವನ್ನು ಗಮನಕ್ಕೆ ತರಲು ಈ ಉದಾಹರಣೆಯು ಸ್ಪಷ್ಟವಾಗಿದೆ. ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿಯವರು ಕ್ರೈಸ್ತರಾಗಿರುವುದಿಂದಲೇ ಈ ರೀತಿಯ ಆದೇಶ ಹೊರಡಿಸಿ ಅದರ ಕಾರ್ಯಾಚರಣೆಯಾಯಿತು’, ಎಂದು ಹೇಳಲು ಅವಕಾಶ ಸಿಕ್ಕಿತು. ಜಾತ್ಯತೀತ ಭಾರತಕ್ಕೆ ಇದು ಲಜ್ಜಾಸ್ಪದ ವಿಷಯವಾಗಿದೆ. ‘ಒಬ್ಬ ಜಾತ್ಯತೀತನೂ ಈ ಸಮಯದಲ್ಲಿ ಬಾಯಿ ಬಿಚ್ಚುವುದಿಲ್ಲ’, ಎಂಬುದನ್ನು ಗಮನಿಸಬೇಕಿದೆ. ರೆಡ್ಡಿ ಸರಕಾರವು ಮುಸ್ಲಿಮ್‌ರನ್ನು ಉತ್ತೇಜಿಸುವಲ್ಲಿ ಹಿಂದೆ ಬಿದ್ದಿಲ್ಲ. ಸರಕಾರವು ಎಪ್ರಿಲ್ ೨೦೨೨ ರಲ್ಲಿ ‘ರಾಜ್ಯದಲ್ಲಿನ ಎಲ್ಲ ಮುಸಲ್ಮಾನ್ ಸರಕಾರಿ ಸಿಬ್ಬಂದಿಗಳು, ಶಿಕ್ಷಕರು ಮತ್ತು ಗುತ್ತಿಗೆದಾರರು ರಮಝಾನ್ ತಿಂಗಳ ಕಾಲದಲ್ಲಿ ನಿಯೋಜಿತ ಕಚೇರಿಯ ಸಮಯಕ್ಕಿಂತ ೧ ಗಂಟೆ ಮೊದಲು ಮನೆಗೆ ಹೋಗಬಹುದು’, ಎಂಬ ಆದೇಶವನ್ನು ನೀಡಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸರಕಾರಿ ಸಿಬ್ಬಂದಿಗಳಿಗೆ ಜನರ ಹಣದಿಂದ ವೇತನವನ್ನು ನೀಡಲಾಗುತ್ತದೆ. ಅದರಲ್ಲಿಯೂ ಮುಸ್ಲಿಮ್ ಸಿಬ್ಬಂದಿಗಳು ೧ ತಿಂಗಳು ಪ್ರತಿದಿನ ೧ ಗಂಟೆ ಕಡಿಮೆ ಕೆಲಸ ಮಾಡುವವರಾಗಿದ್ದರೆ, ಸರಕಾರ ಈ ಹಣವನ್ನು ಅವರ ವೇತನದಿಂದ ಕಡಿತ ಮಾಡಬೇಕು. ಹಾಗೆ ಮಾಡದೇ ಇದ್ದ ಕಾರಣ ಅದರ ಭಾರ ಬಹುಸಂಖ್ಯಾತ ಹಿಂದೂಗಳ ಮೇಲೆಯೇ ಬಿದ್ದಿತು. ಇನ್ನೊಂದು ಎಂದರೆ ಜಗನ್ಮೋಹನ ಸರಕಾರವು ಇಂತಹ ರಿಯಾಯಿತಿಯನ್ನು ಶ್ರೀರಾಮನವಮಿ, ಹನುಮಂತ ಜಯಂತಿ ಮುಂತಾದ ಹಬ್ಬಗಳ ಸಮಯದಲ್ಲಿ ಎಂದಿಗಾದರೂ ನೀಡಿರುವರೇ ? ಇದರಿಂದ ಈ ಸರಕಾರವು ಹಿಂದೂದ್ವೇಷಿ ಇರುವುದಾಗಿ ಪುನಃ ಸಿದ್ಧವಾಗುತ್ತದೆ.

ದೇಶವಿರೋಧಿ ವಿಭಜನೆಗೆ ಆಗ್ರಹ !

ರೆಡ್ಡಿಯವರು ಅಧಿಕಾರಕ್ಕೆ ಬಂದಾಗಿನಿಂದ ಮತಾಂಧ ಕ್ರೈಸ್ತರ ಜೀವನ ಅನುಕೂಲಕರವಾಗಿದೆ. ಅವರ ವಿಷಕಾರಿ ವಿಚಾರ ಕೇವಲ ಹಿಂದೂ ಧರ್ಮಕ್ಕಷ್ಟೇ ಅಲ್ಲದೇ ದೇಶದ ಅಖಂಡತೆಗೂ ಸವಾಲೊಡ್ಡುವಂತಿದೆ. ಮಧ್ಯಂತರದಲ್ಲಿ ಆಂಧ್ರಪ್ರದೇಶದ ‘ಆಲ್ ಇಂಡಿಯಾ ಟ್ರು ಕ್ರಿಶ್ಚಿಯನ್ ಕೌನ್ಸಿಲ್’ನ ವತಿಯಿಂದ ಪಾದ್ರಿ ಉಪೇಂದ್ರ ರಾವ್ ಇವರು ‘ಭಾರತವನ್ನು ೨ ಭಾಗಗಳಲ್ಲಿ ವಿಭಜನೆ ಮಾಡಿ ಕ್ರೈಸ್ತರಿಗೆ ಅರ್ಧ ಭಾಗವನ್ನು ‘ಪ್ರತ್ಯೇಕ ದೇಶ’ ಎಂದು ನೀಡಬೇಕು. ವಿಭಜನೆಯಾದ ನಂತರ ನಾವು ನಿಮಗೆ ತೊಂದರೆ ಕೊಡುವುದಿಲ್ಲ’, ಎಂಬ ಪ್ರತ್ಯೇಕತಾವಾದಿ ಹೇಳಿಕೆಯನ್ನು ನೀಡಿದ್ದರು. ಇದರಿಂದ ‘ಕ್ರೈಸ್ತರ ಉದ್ದೇಶ ಎಲ್ಲಿಯವರೆಗೆ ತಲುಪಿದೆ ಎಂದು ಗಮನಕ್ಕೆ ಬರುತ್ತದೆ. ‘ಮತಾಂತರ’ವೆಂದರೆ ‘ರಾಷ್ಟ್ರಾಂತರ’ವೆಂದು ಸ್ವಾತಂತ್ರ್ಯವೀರ ಸಾವರಕರರು ಯಾವಾಗಲೂ ಹೇಳುತ್ತಿದ್ದರು, ಅದೇ ಇದಾಗಿದೆ. ಒಟ್ಟಾರೆ ಜಗನಮ್ಮೋಹನ ರೆಡ್ಡಿಯವರಿಗೆ ಈ ಹಿಂದೂದ್ವೇಷದ ಪರಂಪರೆಯು ಅಧಿಕಾರದಿಂದ ಪ್ರಾಪ್ತವಾಗಿದೆ; ಏಕೆಂದರೆ ಜಗನ್ಮೋಹನರ ತಂದೆ ವೈ. ಸ್ಯಾಮ್ಯುಅಲ್ ರಾಜಶೇಖರ ರೆಡ್ಡಿ ಇವರು ಇಡೀ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಿರುವಾಗ ೨೦೦೫ ನೇ ಇಸವಿಯಲ್ಲಿ ಅವರು ಹಿಂದೂಗಳ ಜಗತ್‌ಪ್ರಸಿದ್ಧ ತಿರುಮಲ ತಿರುಪತಿ ಈ ತೀರ್ಥಕ್ಷೇತ್ರದಲ್ಲಿ ದೊಡ್ಡ ಚರ್ಚ್‌ಅನ್ನು ನಿರ್ಮಿಸುವ ಹೊಂಚು ಹಾಕಿದ್ದರು. ಇದರಲ್ಲಿ ಜಗತ್ತಿನಾದ್ಯಂತದ ಹಿಂದೂಗಳಿಂದ ತೀವ್ರ ವಿರೋಧವಾದಾಗ ಅವರಿಗೆ ಹಿಂದೆ ಸರಿಯಬೇಕಾಯಿತು. ಅವರ ಅಧಿಕಾರ ಕಾಲದಲ್ಲಿ ತಿರುಮಲದ ೭ ಗುಡ್ಡಗಳ ಪವಿತ್ರ ಕ್ಷೇತ್ರದಲ್ಲಿನ ಅಮಾಯಕ ಹಿಂದೂಗಳನ್ನು ಮತಾಂತರಿಸುವ ಪ್ರಯತ್ನವಾಗಿತ್ತು.

ಒಟ್ಟಾರೆ ಆಂಧ್ರಪ್ರದೇಶದಲ್ಲಿ ಹೆಚ್ಚುತ್ತಿರುವ ಹಿಂದೂದ್ವೇಷ ಮತ್ತು ಅವರ ವೇಗದಿಂದ ಆಗುತ್ತಿರುವ ಕ್ರೈಸ್ತೀಕರಣ, ಇದು ಹಿಂದೂಗಳಿಗೆ ಮತ್ತು ರಾಷ್ಟ್ರಪ್ರೇಮಿಗಳಿಗೆ ಅಪಾಯದ ಕರೆಗಂಟೆಯಾಗಿದೆ. ಇದು ದೇಶದದುರು ದೊಡ್ಡ ಸವಾಲಾಗಿದೆ. ಇದರ ವಿರುದ್ಧ ಸಮಸ್ತ ಹಿಂದೂಗಳಲ್ಲಿ ಜಾಗೃತಿಯಾಗಿ ಅವರು ಸಂಘಟಿತರಾಗಬೇಕು ಇಲ್ಲದಿದ್ದರೆ ಪಾದ್ರಿ ಉಪೇಂದ್ರ ರಾವ್ ಇವರ ದೇಶದ್ರೋಹಿ ಕನಸು ಪೂರ್ಣಗೊಳ್ಳಲು ಸಮಯ ತಗಲಲಾರದು.