|
ನವ ದೆಹಲಿ – ಭಾರತದಿಂದ ವಿರೋಧದ ಹೊರತಾಗಿಯೂ ಶ್ರೀಲಂಕಾವು ಬೆಹುಗಾರಿಕೆ ಮಾಡುವ ಚೀನಾದ ನೌಕೆಗೆ ಅದರ ಹಂಬನಟೋಟಾ ಬಂದರಿಗೆ ಬರಲು ಅನುಮತಿ ನೀಡಿತ್ತು. ಒಂದು ವಾರ ಈ ನೌಕೆ ಬಂದರಿನಲ್ಲಿ ನಿಂತು ಈಗ ಅದು ಹಿಂತಿರುಗಿದೆ. ಈ ಸಂದರ್ಭದಲ್ಲಿ ಭಾರತವು ಶ್ರೀಲಂಕಾವನ್ನು ನಿಷೇಧಿಸಿತ್ತು. ಇದರ ಬಗ್ಗೆ ಚೀನಾದ ಶ್ರೀಲಂಕಾದಲ್ಲಿನ ವಿದೇಶಾಂಗ ಸಚಿವರು ಕಿ ಝೇನಹೊಂಗ್ ಇವರು ಭಾರತವನ್ನು ಟೀಕಿಸಿದ್ದರು. ‘ಶ್ರೀಲಂಕಾದ ರಾಷ್ಟ್ರೀಯ ಸಾರ್ವಭೌಮತ್ವ, ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಅಖಂಡತೆಯ ಉಲ್ಲಂಘನೆ ಸಹಿಸಲಾಗುವುದಿಲ್ಲ. ಭಾರತ ಶ್ರೀಲಂಕಾದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ’, ಎಂದು ಆರೋಪಿಸುತ್ತಾ ಭಾರತದ ಹೆಸರು ತೆಗೆದುಕೊಳ್ಳದೆ ಹೇಳಿತ್ತು. (ಶ್ರೀಲಂಕಾದ ಸಂದರ್ಭದಲ್ಲಿ ಚೀನಾ ಬಹಿರಂಗವಾಗಿ ಭಾರತಕ್ಕೆ ಈ ರೀತಿ ಹೇಳುತ್ತದೆ, ಇದು ಭಾರತದ ವಿದೇಶಾಂಗ ನೀತಿಯ ವೈಫಲ್ಯವಾಗಿದೆ. ಚೀನಾಗೆ ತಲ್ಲ ಪ್ರತ್ಯುತ್ತರ ನೀಡುವ ಅವಶ್ಯಕತೆ ಇದೆ ! – ಸಂಪಾದಕರು)
➡️We have noted the remarks of the Chinese Ambassador. His violation of basic diplomatic etiquette may be a personal trait or reflecting a larger national attitude.(1/3)
— India in Sri Lanka (@IndiainSL) August 27, 2022
ಇದರ ಬಗ್ಗೆ ಈಗ ಭಾರತ ಚೀನಾಗೆ ಪ್ರತ್ಯುತ್ತರ ನೀಡಿದೆ. ಕೋಲಂಬೋದಲ್ಲಿನ ಭಾರತೀಯ ಉಚ್ಚಾಯುಕ್ತರು, ‘ಶ್ರೀಲಂಕಾಗೆ ಅನಾವಶ್ಯಕ ಒತ್ತಡ ಅಲ್ಲ, ಬದಲಾಗಿ ಬೆಂಬಲದ ಅವಶ್ಯಕತೆ ಇದೆ. ಚೀನಾದ ರಾಯಭಾರಿಯ ಹೇಳಿಕೆ ರಾಜಕೀಯ ಶಿಷ್ಟಾಚಾದ ಉಲ್ಲಂಘನೆಯಾಗಿದೆ. ಶ್ರೀಲಂಕಾದ ಉತ್ತರದ ನೆರೆ ರಾಷ್ಟ್ರದ (ಭಾರತ) ಬಗ್ಗೆ ಅದರ ದೃಷ್ಟಿಕೋನ ಇದು ಅವರ ದೇಶದ ವರ್ತನೆಯ ಪ್ರತಿಬಿಂಬ ಇರಬಹುದು.’ (ಇಂತಹ ನಿರಸ ಉತ್ತರದಿಂದ ಚೀನಾದ ಮೇಲೆ ಪರಿಣಾಮ ಆಗುವುದಿಲ್ಲ ! – ಸಂಪಾದಕರು)