ಹಿಂದುತ್ವನಿಷ್ಠ ಸಂಘಟನೆಗಳು ಮಾಡಿರುವ ವಿರೋಧದ ಪರಿಣಾಮ
ನವದೆಹಲಿ – ರಾಷ್ಟ್ರೀಯ ರಾಜಧಾನಿಯಲ್ಲಿ ನಡೆಯಲಿದ್ದ ಹಿಂದೂದ್ವೇಷಿ ಹಾಸ್ಯ ಕಲಾವಿದ ಮುನ್ನವರ ಫಾರೂಕಿಯ ‘ಡೊಂಗರೀ ಟೂ ನೋವ್ಹೇರ’ ಎಂಬ ವಿಶೇಷ ಹಾಸ್ಯ ಕಾರ್ಯಕ್ರಮಕ್ಕೆ ಕಾನೂನು ಹಾಗೂ ಸುವ್ಯವಸ್ಥೆಯ ಕಾರಣವನ್ನು ನೀಡಿ ದೆಹಲಿ ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದಾರೆ. ಕಾರ್ಯಕ್ರಮವನ್ನು ಆಯೋಜಿಸಿದರೆ ಅದನ್ನು ವಿರೋಧಿಸುವುದಾಗಿ ವಿಶ್ವ ಹಿಂದೂ ಪರಿಷತ್ತು ಎಚ್ಚರಿಕೆ ನೀಡಿತ್ತು.
ವಿಶ್ವ ಹಿಂದೂ ಪರಿಷತ್ತಿನ ದೆಹಲಿ ಶಾಖೆಯ ಪ್ರಮುಖರಾದ ಸುರೇಂದ್ರಕುಮಾರ ಗುಪ್ತಾರವರು ಮುನ್ನವರ ಫಾರೂಕಿಯ ವಾದಗ್ರಸ್ತ ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಗಿ ದೆಹಲಿಯ ಪೊಲೀಸ ಆಯುಕ್ತರಾದ ಸಂಜಯ ಅರೋರಾರವರ ಬಳಿ ಮನವಿ ನೀಡಿದ್ದರು. ‘ಮುನ್ನವರ ಫಾರೂಕಿಯ ‘ಡೊಂಗರೀ ಟೂ ನೋವ್ಹೇರ’ ಈ ಕಾರ್ಯಕ್ರಮವು ಹಿಂದೂಗಳ ದೇವತೆಗಳ ವಿಡಂಬನೆಗಾಗಿಆಯೋಜಿಸಲಾದ ಪ್ರಚಾರವಾಗಿದೆ. ಈ ಮನವಿಯಲ್ಲಿ ದ್ವೇಷಯುಕ್ತ ಭಾಷಣ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವುದು ಗಂಭೀರವಾದ ಸಂಗತಿಗಳಾಗಿವೆ’ ಎಂದು ಹೇಳಲಾಗಿತ್ತು. ಈ ಹಿಂದೆ ಮುನ್ನವರ ಫಾರೂಕಿಯ ಬೆಂಗಳೂರಿನಲ್ಲಿ ನಡೆಯಲಿದ್ದ ಕಾರ್ಯಕ್ರಮವನ್ನು ‘ಜಯ ಶ್ರೀ ರಾಮ ಸೇನಾ’ ಎಂಬ ಹಿಂದೂ ಸಂಘಟನೆಯು ನೀಡಿದ್ದ ದೂರಿನ ಮೇರೆಗೆ ರದ್ದುಗೊಳಿಸಲಾಗಿತ್ತು.
ಹಿಂದೂ ಜನಜಾಗೃತಿ ಸಮಿತಿಯಿಂದಲೂ ಕಾರ್ಯಕ್ರಮವನ್ನು ರದ್ದುಗೊಳಿಸಲು ಪೊಲೀಸರಿಗೆ ಮನವಿ ನೀಡಲಾಗಿತ್ತು !
ದೆಹಲಿ – ಹಿಂದೂದ್ವೇಷಿ ಹಾಸ್ಯ ಕಲಾವಿದ ಮುನವ್ವರ ಫಾರೂಕಿಯ ಹಿಂದೂದ್ವೇಷಿ ಹಾಗೂ ಆಕ್ಷೇಪಾರ್ಹ ಹೇಳಿಕೆಗಳ ಹಿನ್ನೆಲೆಯನ್ನು ನೋಡುತ್ತ, ಸಾಮಾಜಿಕ ಹಾಗೂ ಧಾರ್ಮಿಕ ಸಾಮರಸ್ಯವನ್ನು ಕಾಯ್ದಿಡಲು ಆಗಸ್ಟ ೨೮ ರಂದು ಆಯೋಜಿಸಲಾದ ಕಾರ್ಯಕ್ರಮವನ್ನು ರದ್ದುಗೊಳಿಸುವ ಬೇಡಿಕೆಯಿರುವ ಮನವಿಯನ್ನು ಹಿಂದೂ ಜನಜಾಗೃತಿ ಸಮಿತಿಯು ಕಮಲಾ ಮಾರ್ಕೆಟ್ ಪೊಲೀಸ ಠಾಣೆಯಲ್ಲಿ ನೀಡಿತ್ತು. ಈ ಸಮಯದಲ್ಲಿ ಬ್ರಾಹ್ಮಣ ಸ್ವಾಭಿಮಾನ ಸಭೆಯ ಅಧ್ಯಕ್ಷರಾದ ಪಂಡಿತ ಬ್ರಿಜೇಶ ಶರ್ಮಾ ಹಾಗೂ ಇಲ್ಲಿನ ದೇವಸ್ಥಾನದ ಅರ್ಚಕ ಶಾಖೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಕಾರ್ಯಕ್ರಮ ನಡೆಯುವ ಕೇದಾರನಾಥ ಆಡಿಟೋರಿಯಮ್’ಗೂ ಭೇಟಿ ನೀಡಿ ಸ್ಥಳಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಈ ಸಮಯದಲ್ಲಿ ಅವರು ಆಡಿಟೋರಿಯಮ್‌ನ ವತಿಯಿಂದ ಕಾರ್ಯಕ್ರಮವನ್ನು ರದ್ದುಗೊಳಿಸಿರುವ ಬಗ್ಗೆ ಹೇಳಿದರು.
ಸಂಪಾದಕೀಯ ನಿಲುವುಹಿಂದೂಗಳು ಸಂಘಟಿತರಾದರೆ ಧರ್ಮಹಾನಿಯನ್ನು ತಡೆಯಬಹುದು, ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ ! |