ಮತಾಂಧನು ಸುಳ್ಳು ಹೇಳಿ ಹಿಂದೂ ಯುವತಿಯೊಂದಿಗೆ ವಿವಾಹವಾದನು !

ಮತಾಂತರ ಮಾಡಲು ಒತ್ತಡ ಹೇರಲಾಯಿತು

ನೀಮಚ (ಮಧ್ಯಪ್ರದೇಶ) – ಮಧ್ಯಪ್ರದೇಶದ ನೀಮಚ ಜಿಲ್ಲೆಯಲ್ಲಿ ಅಶರಫ ಖಾನ ಎಂಬ ಹೆಸರಿನ ಯುವಕನು ಸುಳ್ಳು ಹೇಳಿ ಓರ್ವ ಹಿಂದೂ ಹುಡುಗಿಯೊಂದಿಗೆ ವಿವಾಹ ಮಾಡಿಕೊಂಡನು ಹಾಗೂ ನಂತರ ಆಕೆಯ ಮೇಲೆ ಮತಾಂತರ ಮಾಡಲು ಒತ್ತಡ ಹೇರಿದನು. ಸಂತ್ರಸ್ಥೆಯು ನೀಡಿದ ಮಾಹಿತಿಗನುಸಾರ, ಅಶರಫ ಖಾನನು ತನ್ನನ್ನು ವಿಚ್ಛೇದನ ಹೊಂದಿದವನು ಎಂದು ಹೇಳಿ ವಿವಾಹವಾದನು. ನನಗೆ ೨ ತಿಂಗಳಲ್ಲಿ ಅವನು ವಿವಾಹಿತ ಎಂಬುದು ತಿಳಿಯಿತು. ಅನಂತರ ಅವನು ನನ್ನ ಮೇಲೆ ಮತಾಂತರ ಮಾಡುವಂತೆ ಒತ್ತಡ ಹೇರಲು ಹಾಗೂ ಈ ವಿಷಯಕ್ಕಾಗಿ ನನ್ನನ್ನು ಥಳಿಸಲು ಆರಂಭಿಸಿದನು. ಅವನು ನನಗೆ ೩ ಬಾರಿ ಗರ್ಭಪಾತ ಮಾಡಿಸಿದ್ದಾನೆ.

ಅಶರಫನ ಅತ್ಯಾಚಾರಗಳಿಂದ ಬೇಸತ್ತು ಸಂತ್ರ್ಥೆಯು ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸತ್ಯನಾರಾಯಣ ಪಾಟೀದಾರ ಹಾಗೂ ಮಾತೃಶಕ್ತಿ ಜಿಲ್ಲಾ ಸಮನ್ವಯಕರಾದ ರೇಖಾ ವರ್ಮಾರವರ ಸಹಾಯದಿಂದ ಮಹಿಳಾ ಪೊಲೀಸ ಠಾಣೆಯಲ್ಲಿ ಆರೋಪಿಯ ವಿರುದ್ಧ ದೂರನ್ನು ದಾಖಲಿಸಿದ್ದಾಳೆ. ಅಶರಫನ ವಿರುದ್ಧ ಅಪರಾಧವನ್ನು ದಾಖಲಿಸಲಾಗಿದೆ. ‘ಶೀಘ್ರವೇ ಆತನನ್ನು ಬಂಧಿಸಿ ಸಂತ್ರಸ್ಥೆಗೆ ನ್ಯಾಯ ದೊರಕಿಸಿಕೊಡಲಾಗುವುದು, ಎಂದು ಮಹಿಳಾ ಪೊಲೀಸ ಠಾಣೆಯ ಪ್ರಭಾರಿಗಳಾದ ಅನುರಾಧಾ ಗಿರವಾಲರವರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಲವ್‌ ಜಿಹಾದಿನ ವಿರುದ್ಧ ಕಾನೂನು ಇರುವಾಗಲೂ ಮತಾಂಧರಲ್ಲಿ ಕಾನೂನಿ ಬಗ್ಗೆ ಸ್ವಲ್ಪವೂ ಭಯ ಕಂಡುಬರುತ್ತಿಲ್ಲ. ಮತಾಂಧರಿಗೆ ಬುದ್ಧಿಕಲಿಸಲು ಸರಕಾರವು ಕಾರ್ಯಾಚರಣೆ ಮಾಡುವುದು ಆವಶ್ಯಕವಾಗಿದೆ !