‘ಮನುಸ್ಮೃತಿ’ಯ ಸತ್ಯದ ವಿಸ್ಮೃತಿ !

ಮಂಗನಿಗೇನು ಗೊತ್ತು ಮಾಣಿಕ್ಯದ ಬೆಲೆ, ಎಂಬ ಗಾದೆ ಮಾತಿದೆ ಅಂದರೆ ಮಾಣಿಕ್ಯದ ಬೆಲೆ ಅಕ್ಕ ಸಾಲಿಗನಿಗಷ್ಟೇ ಗೊತ್ತಿರುತ್ತದೆ. ದೆಹಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪ್ರತಿಭಾ ಎಮ್. ಸಿಂಹ ಇವರು ‘ಮನುಸ್ಮೃತಿ’ ಈ ಹಿಂದೂಗಳ ಪವಿತ್ರ ಗ್ರಂಥದ ಬಗೆಗಿನ ಗೌರವೋದ್ಗಾರದ ಹೇಳಿಕೆಯಿಂದ ಅದರ ಅನುಭವವಾಯಿತು. ಪ್ರಗತಿಪರರು ಮತ್ತು ಸಾಮ್ಯವಾದಿಗಳು ‘ಗೊಬೆಲ್ಸ್’ ನೀತಿಯ ಮೂಲಕ ಮನುಸ್ಮೃತಿಯ ಬಗ್ಗೆ ಸಾಧ್ಯವಾದಷ್ಟು ಅಪಪ್ರಚಾರ ಮಾಡಿದರು. ‘ವಾಸ್ತವದಲ್ಲಿ ಅವರ ವಿರೋಧ ಕೇವಲ ಮನುಸ್ಮೃತಿಗಲ್ಲ, ಆದರೆ ಅದರ ಮರೆಯಲ್ಲಿ ಹಿಂದೂ ಧರ್ಮಕ್ಕೆ ವಿರೋಧವಿದೆ’, ಎಂದು ನಾವು ತಿಳಿದುಕೊಳ್ಳಬೇಕು. ಈ ದೃಷ್ಟಿಕೋನದಿಂದ ಮನುಸ್ಮೃತಿಗಾಗುವ ವಿರೋಧ ನೋಡಿದರೆ ಎಲ್ಲ ಘಟನಾವಳಿಗಳು ಬೆಳಕಿಗೆ ಬರುತ್ತಾ ಹೋಗುತ್ತವೆ. ದೆಹಲಿಯ ಒಂದು ಕಾರ್ಯಕ್ರಮದಲ್ಲಿ ದೆಹಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಪ್ರತಿಭಾ ಎಮ್. ಸಿಂಹ ಇವರು, “ಭಾರತೀಯ ಸ್ತ್ರೀಯರು ಭಾಗ್ಯವಂತರಿದ್ದಾರೆ. ಏಕೆಂದರೆ ಮನುಸ್ಮೃತಿಯಂತಹ ಧರ್ಮಗ್ರಂಥಗಳು ಸ್ತ್ರೀಯರಿಗೆ ಗೌರವದ ಸ್ಥಾನವನ್ನು ನೀಡಿವೆ. ಮನುಸ್ಮೃತಿಯಲ್ಲಿ, ‘ಮಹಿಳೆಯರಿಗೆ ಗೌರವ ಮತ್ತು ಸನ್ಮಾನ ನೀಡದ ವ್ಯಕ್ತಿಯು ಪೂಜೆ-ಅರ್ಚನೆ ಮತ್ತು ಪ್ರಾರ್ಥನೆ ಮಾಡಿದರೂ ಅದಕ್ಕೆ ಯಾವುದೇ ಅರ್ಥವಿಲ್ಲ ಎಂದು ಹೇಳಲಾಗಿದೆ”, ಎಂದು ಹೇಳಿದರು. ಅವರ ಈ ಹೇಳಿಕೆಯಿಂದ ಪ್ರಗತಿಪರರು ಮತ್ತು ಸಾಮ್ಯವಾದಿಗಳ ಡೊಂಬರಾಟ ಆರಂಭವಾಯಿತು. ಅವರು ‘ಟ್ವಿಟರ್’ನಲ್ಲಿ ‘ಮನುಸ್ಮೃತಿ’ ಹೇಗೆ ಸ್ತ್ರೀವಿರೋಧಿ ಇದೆ ?’, ಎಂದು ಹೇಳಲು ಹೆಣಗಾಡತೊಡಗಿದರು. ಇಂತಹ ಸ್ತ್ರೀಹಕ್ಕುವಾದಿಗಳು ಎಂದಿಗೂ ಇತರ ಪಂಥಗಳ ಬುರಖಾ ಅಥವಾ ಹಲಾಲ್ ಪದ್ಧತಿ, ಚರ್ಚ್‌ಗಳಲ್ಲಿ ನನ್‌ಗಳ ಮೇಲಾಗುವ ಬಲಾತ್ಕಾರದ ಪ್ರಕರಣಗಳು ಮುಂತಾದವುಗಳ ಬಗ್ಗೆ ಚಕಾರವೆತ್ತುವುದಿಲ್ಲ, ಎನ್ನುವುದು ಒಂದು ವಿಶೇಷ ! ಈ ಬಗ್ಗೆ ಅವರಿಗೆ ಕಾನೂನು ಮಾರ್ಗದಿಂದ ಉತ್ತರವನ್ನು ಕೇಳಬೇಕು. ಪ್ರಗತಿ (ಅಧೋಗತಿ)ಪರರ ಮನುಸ್ಮೃತಿಯ ಬಗೆಗಿನ ಆರೋಪಗಳಲ್ಲಿ ತಿರುಳಿಲ್ಲ. ಮನುಸ್ಮೃತಿ ಒಂದು ವೇಳೆ ನಿಜವಾಗಿಯೂ ಸ್ತ್ರೀವಿರೋಧಿಯಾಗಿದ್ದರೆ, ಇಂದು ಹಿಂದೂ ಧರ್ಮದಲ್ಲಿ ಅನೇಕ ಮಹತ್ತರವಾದ ಸಾಧನೆಗೈದ ವೇದಪಾರಂಗತರಾದ ಗಾರ್ಗಿ, ಮೈತ್ರೇಯಿ ಇವರಿಂದ ಹಿಡಿದು ವೀರಾಂಗನೆಯರಾದ ಜೀಜಾಮಾತಾ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಅಹಿಲ್ಯಾಬಾಯಿ ಹೋಳಕರ ಮುಂತಾದ ಅನೇಕ ಸಮರ್ಥ ಸ್ತ್ರೀಯರೇ ಇರುತ್ತಿರಲಿಲ್ಲ. ಅವರು ಕೇವಲ ಪರಾಕ್ರಮ ಮೆರೆದರಷ್ಟೇ ಅಲ್ಲ ರಾಜಧರ್ಮವನ್ನೂ ಕಲಿಸಿದರು. ಇಂದಿಗೂ ಅನೇಕ ಹಿಂದೂ ಸ್ತ್ರೀಯರು ಉನ್ನತ ಸ್ಥಾನದಲ್ಲಿದ್ದಾರೆ. ನ್ಯಾಯಮೂರ್ತಿ ಪ್ರತಿಭಾ ಎಮ್. ಸಿಂಹ ಇವರು ಅವರ ಪೈಕಿ ಒಬ್ಬರಾಗಿದ್ದು ಅವರೇ ಮನುಸ್ಮೃತಿಯ ಮಹತ್ವವನ್ನು ವಿಶದ ಪಡಿಸಿದ್ದಾರೆ. ಇದರಿಂದ ‘ಮನುಸ್ಮೃತಿ’ಯು ಸ್ತ್ರೀವಿರೋಧಿ ಎಂಬ ಪ್ರಗತಿಪರರ ಮತ್ತು ಸಾಮ್ಯವಾದಿಗಳ ಸುಳ್ಳುತನ ಬಹಿರಂಗವಾಗುತ್ತದೆ. ಇಂತಹ ಸಾಮರ್ಥ್ಯಶಾಲಿ ಸ್ತ್ರೀಯರ ಉದಾಹರಣೆಗಳನ್ನು ಅವರು ಎಂದಿಗೂ ನೀಡುವುದಿಲ್ಲ; ಏಕೆಂದರೆ ಅವು ಅವರಿಗೆ ಅಡಚಣೆಗಳಾಗಿವೆ. ಇಷ್ಟೇ ಅಲ್ಲದೇ ಮನುಸ್ಮೃತಿಯಲ್ಲಿ ‘ಮಾತೆಯನ್ನು ಅವಮಾನಿಸಬೇಡಿ’, ಯಾವುದೇ ಧರ್ಮಕಾರ್ಯವು ಸ್ತ್ರೀಯರಿಲ್ಲದೇ ಪೂರ್ಣಗೊಳ್ಳುವುದಿಲ್ಲ’, ಈ ರೀತಿಯಲ್ಲಿ ಸ್ತ್ರೀಯರಿಗೆ ಅದ್ವಿತೀಯ ಸ್ಥಾನವನ್ನು ನೀಡುವ ಎಷ್ಟೋ ವಿಷಯಗಳನ್ನು ಹೇಳಲಾಗಿದೆ. ಹಾಗಾದರೆ ಇಂತಹ ‘ಮನುಸ್ಮೃತಿ’ಯು ಸ್ತ್ರೀವಿರೋಧಿ ಹೇಗೆ ಆಗಬಹುದು ? ಆದರೆ ಮನುಸ್ಮೃತಿಯಲ್ಲಿ ಉಲ್ಲೇಖಿಸಲಾದ ಈ ವಿಷಯಗಳನ್ನು ಹೇಳದೇ ವಿರುದ್ಧ ಅರ್ಥ ತೆಗೆದು ಹೇಳಲಾಗುತ್ತದೆ. ಇದರಿಂದ ‘ಮನು ಸ್ಮೃತಿಯ ಮರೆಯಲ್ಲಿ ಹಿಂದೂ ಧರ್ಮವನ್ನು ಗುರಿಪಡಿಸಲಾಗುತ್ತಿದೆ’, ಎಂಬ ಉಲ್ಲೇಖ ಯೋಗ್ಯವಿದೆ ಎಂದು ಸ್ಪಷ್ಟವಾಗುತ್ತದೆ.

‘ಮನುಸ್ಮೃತಿ’ಯನ್ನು ಓದಿದ್ದೀರಾ ?

ಪ್ರಗತಿಪರರು ಮತ್ತು ಸಾಮ್ಯವಾದಿಗಳು ಮನುಸ್ಮೃತಿಯನ್ನು ವಿರೋಧಿಸುವಾಗ ಡಾ. ಬಾಬಾ ಸಾಹೇಬ ಆಂಬೇಡಕರ ಇವರ ಹೆಸರನ್ನು ತಮ್ಮ ಅನುಕೂಲಕ್ಕನುಸಾರ ಉಪಯೋಗಿಸುತ್ತಾರೆ. ನ್ಯಾಯಮೂರ್ತಿ ಪ್ರತಿಭಾ ಇವರ ಹೇಳಿಕೆಯನ್ನು ವಿರೋಧಿಸುವಾಗಲೂ ಇದನ್ನು ಬಳಸಲಾಯಿತು. ‘ಡಾ ಅಂಬೇಡಕರರು ‘ಹಿಂದೂ ಕೋಡ್ ಬಿಲ್’ ತಯಾರಿಸಿದುದರಿಂದ ಹಿಂದೂ ಮಹಿಳೆಯರಿಗೆ ಅಧಿಕಾರ ದೊರಕಿತು’, ಎಂಬುದು ಅದರಲ್ಲಿನ ಒಂದು ಸಮರ್ಥನೆಯಾಗಿದೆ. ಆದುದರಿಂದ ಅವರು ಡಾ. ಅಂಬೇಡಕರರು ತಮ್ಮ ಹಿಂದಿನ ಜೀವನದಲ್ಲಿ ಮನುಸ್ಮೃತಿಯನ್ನು ಸುಟ್ಟಿದ್ದರು ಇದು ನಿಜವಾಗಿದ್ದರೂ, ಮುಂದೆ ಅದೇ ಡಾ. ಅಂಬೇಡಕರರು ಅದರ ಬಗ್ಗೆ ಗೌರವೋದ್ಗಾರ ಮಾಡಿ ಅದರ ಆಧಾರ ಪಡೆದು ‘ಹಿಂದೂ ಕೋಡ್ ಬಿಲ್’ ತಯಾರಿಸಿದರು ಎಂಬುದನ್ನು ತಮ್ಮ ಅನುಕೂಲತೆಗನುಸಾರ ಮರೆತುಬಿಡುತ್ತಾರೆ. ಡಾ. ಅಂಬೇಡಕರ ಇವರು ೨೫ ಡಿಸೆಂಬರ್ ೧೯೫೨ ಈ ದಿನದಂದು ರಾಜಾರಾಮ ಸಿನೆಮಾಗೃಹದಲ್ಲಿ ಮಾತನಾಡುವಾಗ, “ನನ್ನ ‘ಬಿಲ್’ಅನ್ನು ಟೀಕಿಸುವವರು ‘ಬಿಲ್ ಹಿಂದೂ ಧರ್ಮ ಶಾಸ್ತ್ರವನ್ನು ಬಿಟ್ಟು ಇದೆ’, ಎಂದು ಟೀಕಿಸಿದರು; ಆದರೆ ಹೀಗೆ ಹೇಳುವವರು, ಮನುಸ್ಮೃತಿಯ ಆಧಾರವಿಲ್ಲದಂತಹ ಯಾವ ಕಲಮ್ ಬಿಲ್‌ನಲ್ಲಿದೆ ಎಂದು ತೋರಿಸಲಿ”, ಎಂದು ಸವಾಲೊಡ್ಡಿದರು. ಇದರೊಂದಿಗೆ ೧೧ ಜನವರಿ ೧೯೫೦ ಈ ದಿನದಂದು ಮುಂಬಯಿಯ ಸಿದ್ಧಾರ್ಥ ವಿಶ್ವವಿದ್ಯಾಲಯದ ಸಂಸತ್ತಿನೆದುರು ಡಾ. ಬಾಬಾಸಾಹೇಬ ಅಂಬೇಡಕರ ಇವರು, ನಾನು ಜಾತಿನಿರ್ಣಯಕ್ಕಾಗಿ ಮನುವಿನ, ವಿವಾಹವಿಚ್ಛೇದನೆಗಾಗಿ ಪರಾಶರ-ಸ್ಮೃತಿಯ ಮತ್ತು ಸ್ತ್ರೀಯರ ಹಕ್ಕುಗಳಿಗಾಗಿ ಬೃಹಸ್ಪತಿ ಸ್ಮೃತಿಯ ಆಧಾರ ಪಡೆದಿದ್ದೇನೆ. ದಾಯಭಾಗ (ಆಸ್ತಿಯ ಪಾಲು) ಪದ್ಧತಿಯ ಆಸ್ತಿ-ಹಕ್ಕುಗಳಿಗಾಗಿ ಮನುಸ್ಮೃತಿಯ ಆಧಾರ ಪಡೆದಿದ್ದೇನೆ ಎಂದು ಹೇಳಿದ್ದರು. (ಆಧಾರ : ‘ಬಾಬಾಸಾಹೇಬ ಆಂಬೇಡಕರಾಂಚಿ ಸಮಗ್ರ ಭಾಷಣೆ, ಖಂಡ ೮, ಪುಟ ಕ್ರ. ೧೭-೧೮’ (ಮರಾಠಿ) ಮತ್ತು ಸಾಪ್ತಾಹಿಕ ‘ಜನತಾ’, ೧೪.೧.೧೯೫೦) ‘ಮನುಸ್ಮೃತಿ’ ಇದು ಸ್ತ್ರೀವಿರೋಧಿ, ಶೂದ್ರರನ್ನು ಕೀಳಾಗಿ ಕಾಣುವ ಮತ್ತು ಸಮಾಜದಲ್ಲಿ ಕಲಹವನ್ನುಂಟು ಮಾಡುವ ಗ್ರಂಥವಾಗಿದೆ’, ಎಂಬ ವಿಷಕಾರಿ ಪ್ರಸಾರ ಮಾಡುವವರಿಗೆ ಇದು ಕಪಾಳಮೋಕ್ಷವೇ ಆಗಿದೆ ! ಮನುಸ್ಮೃತಿಯನ್ನು ಸುಟ್ಟ ನಂತರವೂ ಕಾಲಾಂತರದಲ್ಲಿ ಡಾ. ಬಾಬಾಸಾಹೇಬರು ಅದರ ಆಧಾರ ಪಡೆಯುವ ಔದಾರ್ಯ ತೋರಿಸಿದರು. ಅದು ಇಂದಿನ ‘ಆಧುನಿಕ ವಿರೋಧಿಗಳಿಗೆ ಗೋಚರಿಸುವುದಿಲ್ಲ. ಭಾರತದಲ್ಲಿ ಇಂದಿಗೂ ೨೫ ಡಿಸೆಂಬರ್ ನಂದು ‘ಮನುಸ್ಮೃತಿ ದಹನ ದಿನ’ ಎಂಬ ಹೆಸರಿನಿಂದ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ದಿನವನ್ನು ಆಚರಿಸಲು ಹಿಂದೂದ್ರೋಹಿಗಳು ಕರೆ ನೀಡುತ್ತಾರೆ. ‘ಮನುಸ್ಮೃತಿಯನ್ನು ೨ ಸಾವಿರದ ೩೦೦ ವರ್ಷಗಳ ಹಿಂದೆ ಬರೆಯಲಾಗಿದೆ. ಈ ಗ್ರಂಥ ಸುಟ್ಟವರು ಅದರ ಅಧ್ಯಯನವಿರಲಿ ಅದನ್ನು ಓದಲು ಪ್ರಯತ್ನಿಸಿದ್ದಾರೆಯೇ ?’, ಎಂಬುದು ಸಂಶೋಧನೆಯ ವಿಷಯವಾಗಿದೆ.

ಮನುಸ್ಮೃತಿಯ ಮಹತ್ವವನ್ನು ಹೇಳಿದವರಲ್ಲಿ ನ್ಯಾಯಾಂಗ ಕ್ಷೇತ್ರದ ನ್ಯಾಯಮೂರ್ತಿ ಪ್ರತಿಭಾ ಎಮ್. ಸಿಂಹ ಇವರು ಏಕೈಕರಾಗಿದ್ದಾರೆ, ಎಂದೇನಿಲ್ಲ. ಈ ಮೊದಲು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ್ ನಾಝಿರ್ ಇವರು ಡಿಸೆಂಬರ್ ೨೦೨೧ ರಲ್ಲಿ ‘ಮನು, ಚಾಣಕ್ಯ ಮತ್ತು ಬೃಹಸ್ಪತಿ ಇವರು ವಿಕಸನಗೊಳಿಸಿದ ಪುರಾತನ ಭಾರತೀಯ ನ್ಯಾಯವ್ಯವಸ್ಥೆಯೇ ಭಾರತಕ್ಕೆ ಯೋಗ್ಯವಾಗಿದೆ’, ಎಂಬ ವಿಚಾರವನ್ನು ವ್ಯಕ್ತಪಡಿಸಿದ್ದರು.

ಆಗಲೂ ವಿರೋಧಿಗಳು ಟೀಕಿಸಿದ್ದರು. ಒಟ್ಟಾರೆ ಮನುಸ್ಮೃತಿಗೆ ಎಷ್ಟೇ ವಿರೋಧವಾದರೂ ಅದರ ಮಹತ್ವವು ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಅದು ಕೆಲವೊಮ್ಮೆ ನ್ಯಾಯಾಧೀಶ ಅಬ್ದುಲ್ ನಾಝಿರ್ ಇವರಂತಹ ಮತ್ತು ಕೆಲವೊಮ್ಮೆ ನ್ಯಾಯಮೂರ್ತಿ ಪ್ರತಿಭಾ ಎಮ್. ಸಿಂಹ ಇವರಂತಹವರಿಂದ ಕಾಲಕಾಲಕ್ಕೆ ರೇಖಾಂಕಿತಗೊಳ್ಳುತ್ತಲೇ ಇರುತ್ತದೆ ಮತ್ತು ವಿರೋಧಕರ ನಿಜಸ್ವರೂಪ ಬಹಿರಂಗವಾಗುತ್ತಲೇ ಇರುತ್ತದೆ, ಇದು ತ್ರಿವಾರ ಸತ್ಯ !