ಜಗತ್ತಿನ ೧೮ ದೇಶಗಳಲ್ಲಿ ೨೦ ಲಕ್ಷ ರೋಹಿಂಗ್ಯಾ ಮುಸಲ್ಮಾನರ ನುಸುಳುವಿಕೆ !

ಪಾಕಿಸ್ತಾನವು ಭಯೋತ್ಪಾದನೆ ತರಬೇತಿ ನೀಡುತ್ತಿದ್ದರೇ ರೋಹಿಂಗ್ಯಾಗಳಿಂದ ಭಾರತದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಅಪಾಯ !

ನವ ದೆಹಲಿ – ಮ್ಯಾನಮಾರನಲ್ಲಿ ನಡೆದ ಹಿಂಸಾಚಾರದ ಬಳಿಕ ಅಲ್ಲಿಯ ರೋಹಿಂಗ್ಯಾ ಮುಸಲ್ಮಾನರು ಭಾರತ ಮತ್ತು ಬಾಂಗ್ಲಾದೇಶವಲ್ಲದೇ ಸೌದಿ ಅರೇಬಿಯಾ, ಮಲೇಶಿಯಾ, ಅಮೇರಿಕಾ, ಆಸ್ಟ್ರೇಲಿಯಾ, ಚೀನಾ, ಜಪಾನ, ಕೆನಡಾ, ಫಿನಲ್ಯಾಂಡ ಸಹಿತ ೧೮ ದೇಶಗಳಲ್ಲಿ ನುಸುಳಿದ್ದಾರೆ. ಇಂತಹ ನುಸುಳುಖೋರರ ಸಂಖ್ಯೆ ಒಟ್ಟು ಅಂದಾಜು ೨೦ಲಕ್ಷದಷ್ಟು ಇರಬಹುದು. ಪಾಕಿಸ್ತಾನದಲ್ಲಿಯೂ ರೋಹಿಂಗ್ಯಾ ಮುಸಲ್ಮಾನರು ದೊಡ್ಡ ಸಂಖ್ಯೆಯಲ್ಲಿ ತಲುಪಿದ್ದಾರೆ. ಪಾಕಿಸ್ತಾನದಲ್ಲಿ ರೋಹಿಂಗ್ಯಾಗಳಿಗೆ ಭಾರತದಲ್ಲಿ ನುಸುಳಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಪ್ರಶಿಕ್ಷಣ ನೀಡಲಾಗುತ್ತಿದೆ. ಏಶಿಯಾದ ವಿವಿಧ ದೇಶಗಳಿಗೆ ತಲುಪಿರುವ ರೋಹಿಂಗ್ಯಾದಿಂದ ಅಲ್ಲಿಯ ಸರಕಾರಕ್ಕೆ ತಲೆನೋವು ಉಂಟಾಗಿದೆ. ಭಾರತದಲ್ಲಿಯೂ ಅವರಿಂದ ಅನೇಕ ರೀತಿಯ ಸಮಸ್ಯೆ ನಿರ್ಮಾಣವಾಗಿದೆ. ರೋಹಿಂಗ್ಯಾಗಳ ವಾಸ್ತವ್ಯದಿಂದ ದೇಶದಲ್ಲಿ ಅಪರಾಧಗಳ ಸಂಖ್ಯೆಯಲ್ಲಿ ಹೆಚ್ಚಳ ಹಾಗೆಯೇ ಕಾನೂನು- ಸುವ್ಯವಸ್ಥೆಗೆ ಅಪಾಯ ನಿರ್ಮಾಣವಾಗಿದೆ.

೧. ಭಾರತದಲ್ಲಿ ಪಾಪ್ಯುಲರ ಫ್ರಂಟ ಆಫ್ ಇಂಡಿಯಾ ಸಂಘಟನೆಯು ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಮುಸಲ್ಮಾನ ನುಸುಳುಖೋರರಿಗೆ ಆಧಾರ ಕಾರ್ಡ ತಯಾರಿಸಿ ಕೊಡುತ್ತಿರುವುದು ಬಹಿರಂಗಗೊಂಡಿದೆ.

೨. ಭಾರತದ ಬಿಗಿ ಬಂದೋಬಸ್ತಿನಿಂದಾಗಿ ರೋಹಿಂಗ್ಯಾ ನೇಪಾಳದ ಕಡೆಗೆ ಹೊರಳಿದ್ದಾರೆ. ರೋಹಿಂಗ್ಯಾಗಳಿಗೆ ನೇಪಾಳದ ಜಿಹಾದಿ ಗುಂಪುಗಳಿಂದ ಆರ್ಥಿಕ ಸಹಾಯ ಮಾಡಲಾಗುತ್ತಿದೆಯೆಂದು ಹೇಳಲಾಗುತ್ತಿದೆ.

೩. ಮುಸ್ಲಿಂ ದೇಶವಾಗಿರುವ ಇಂಡೋನೇಶಿಯಾ ಅಪರಾಧಗಳಲ್ಲಿ ಭಾಗಿಯಾಗಿರುವ ರೋಹಿಂಗ್ಯಾಗಳಿಗೆ ಆಶ್ರಯ ನೀಡಲು ನಿರಾಕರಿಸಿದೆ. ಇಂಡೋನೇಶಿಯಾದಲ್ಲಿ ಹಡಗಿನ ಮೂಲಕ ಬರುವ ರೋಹಿಂಗ್ಯಾಗಳನ್ನು ಮರಳಿ ಕಳುಹಿಸುತ್ತಿದೆ.

೪. ‘ಬಾಂಗ್ಲಾದೇಶದಲ್ಲಿ ೯ ಲಕ್ಷ ೨೦ ಸಾವಿರ ರೋಹಿಂಗ್ಯಾ ಮುಸಲ್ಮಾನರು ಆಶ್ರಯದಲ್ಲಿದ್ದಾರೆ’, ಎಂದು ವಿಶ್ವಸಂಸ್ಥೆ ಹೇಳಿದೆ. ‘ರೋಹಿಂಗ್ಯಾ ಮಾದಕ ಪದಾರ್ಥ ಮತ್ತು ಮಹಿಳೆಯರ ಕಳ್ಳಸಾಗಣೆಗಳಂತಹ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ. ಈ ವಿಷಯ ಕಾನೂನು-ಸುವ್ಯವಸ್ಥೆಯ ದೃಷ್ಟಿಯಿಂದ ಒಂದು ಸವಾಲಾಗಿದೆ. ದೇಶದಲ್ಲಿ ಸುಮಾರು ೧೧ ಲಕ್ಷ ರೋಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ಸಮಸ್ಯೆ ನಿರ್ಮಾಣ ಮಾಡುತ್ತಿದ್ದಾರೆ’, ಎಂದು ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ ಹಸೀನಾ ಇವರು ಕೆನಡಾದ ಒಬ್ಬ ಅಧಿಕಾರಿಗೆ ಹೇಳಿದ್ದರು.

ಸಂಪಾದಕೀಯ ನಿಲುವು

ಮ್ಯಾನಮಾರನಲ್ಲಿ ಯಾವ ಕಾರಣಗಳಿಂದ ರೋಹಿಂಗ್ಯಾಗಳನ್ನು ಹೊರದೂಡಿದರೋ, ಅದೇ ಕಾರಣ ೧೮ ದೇಶಗಳಿಗೆ ಭವಿಷ್ಯದಲ್ಲಿ ಅನುಭವಿಸಬೇಕಾಗಲಿದೆ ಎನ್ನುವುದರಲ್ಲಿ ಸಂಶಯವಿಲ್ಲ ! ಮುಂದೆ ಈ
ರೋಹಿಂಗ್ಯಾಗಳು ಈ ದೇಶದಲ್ಲಿ ದೇಶವಿರೋಧಿ ಕೃತ್ಯ ಮತ್ತು ಕಾನೂನು-ಸುವ್ಯವಸ್ಥೆಗೆ ಅಪಾಯ ನಿರ್ಮಾಣ ಮಾಡಲಿದ್ದಾರೆ. ಆದ್ದರಿಂದ ಈ ಎರಡೂ ದೇಶಗಳು ಈಗಲೇ ಅದರ ಮೇಲೆ ಕಠಿಣ ಉಪಾಯವನ್ನು ಕಂಡು ಹಿಡಿಯುವುದು ಆವಶ್ಯಕ !