ಉಗ್ರವಾದ ಮತ್ತು ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ‘ಯುದ್ಧ ಸೇವಾ ಪದಕ (ವೈ.ಎಸ್.ಎಮ್.)’ ಪಡೆದ ನಿವೃತ್ತ ಬ್ರಿಗೇಡಿಯರ್ ಹೇಮಂತ್ ಮಹಾಜನ್!

ಪುಣೆಯ ‘ಯುದ್ಧ ಸೇವಾ ಪದಕ (ವೈ.ಎಸ್.ಎಮ್.)’ ಪಡೆದ ನಿವೃತ್ತ ಬ್ರಿಗೇಡಿಯರ್ ಹೇಮಂತ್ ಮಹಾಜನ್ ಅವರು ಭಾರತೀಯ ಸೇನೆಯ ‘೭ನೇ ಮರಾಠಾ ಲೈಟ್ ಇನ್‌ಫೆಂಟ್ರಿ’ಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಭಾರತ-ಚೀನಾ ಗಡಿ, ಭಾರತ-ಪಾಕಿಸ್ತಾನ ಗಡಿ ಮತ್ತು ಈಶಾನ್ಯ ಭಾರತದ ಉಗ್ರವಾದ ಮತ್ತು ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಅವುಗಳನ್ನು ನಿರ್ಮೂಲನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಲೇಖನದ ಮೂಲಕ ಅವರ ಸಾಧನೆ, ಅವರಿಗೆ ದೊರೆತ ಪದಕಗಳು ಮತ್ತು ಅವರು ಬರೆದ ಪುಸ್ತಕಗಳ ಪರಿಚಯ ಮಾಡಿಕೊಳ್ಳೋಣ.

೧. ಮಿಲಿಟರಿ ಸೇವೆ ಮತ್ತು ಶೈಕ್ಷಣಿಕ ಸಾಧನೆ

ಅ. ನಿವೃತ್ತ ಬ್ರಿಗೇಡಿಯರ್ ಹೇಮಂತ್ ಮಹಾಜನ್ ಅವರು ರಕ್ಷಣಾ ಅಧ್ಯಯನದಲ್ಲಿ ‘ಮಾಸ್ಟರ್ ಆಫ್ ಸೈನ್ಸ್’ (ಎಂ.ಎಸ್ಸಿ. – ಸ್ನಾತಕೋತ್ತರ ಪದವಿ) ಮತ್ತು ‘ಮಾಸ್ಟರ್ ಆಫ್ ಫಿಲಾಸಫಿ’ (ಎಂ.ಫಿಲ್.) ಪದವಿಗಳನ್ನು ಪಡೆದಿದ್ದಾರೆ. ಅವರು ಜುಲೈ ೧೯೭೩ ರಲ್ಲಿ ಡೆಹ್ರಾಡೂನ್‌ನ ‘ಇಂಡಿಯನ್ ಮಿಲಿಟರಿ ಅಕಾಡೆಮಿ’ (ಐ.ಎಂ.ಎ.) ಯಲ್ಲಿ ತಮ್ಮ ಮಿಲಿಟರಿ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ೧೫ ಜೂನ್ ೧೯೭೫ ರಂದು ‘೭ನೇ ಮರಾಠಾ ಲೈಟ್ ಇನ್‌ಫೆಂಟ್ರಿ’ಯಲ್ಲಿ ಅಧಿಕಾರಿಯಾಗಿ ನೇಮಕಗೊಂಡರು.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ (ಎಡದಿಂದ ಮೂರನೆಯವರು) ಡಾ. ಪಾಂಡುರಂಗ ಬಾಲಕವಡೆ, ಅವರ ಪಕ್ಕದಲ್ಲಿ ನಿವೃತ್ತ ಬ್ರಿಗೇಡಿಯರ್ ಹೇಮಂತ್ ಮಹಾಜನ್ ಮತ್ತು (ಬಲದಿಂದ ಎರಡನೆಯವರು) ನಿವೃತ್ತ ಲೆಫ್ಟಿನೆಂಟ್ ಜನರಲ್ ಡಾ. ಡಿ.ಬಿ. ಶೇಕಟ್ಕರ್

ಆ. ಅವರು ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಭಾರತ-ಚೀನಾ ಗಡಿ, ಭಾರತ-ಪಾಕಿಸ್ತಾನ ಗಡಿ ಮತ್ತು ಈಶಾನ್ಯ ಸೇರಿದಂತೆ ಭಾರತದ ಕೆಲವು ಅತ್ಯಂತ ಅಶಾಂತ ಪ್ರದೇಶಗಳಲ್ಲಿ ಉಗ್ರವಾದ ಮತ್ತು ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಭಾರತ-ಚೀನಾ ಗಡಿಯಲ್ಲಿ ‘ಪ್ಯಾಟ್ರೋಲಿಂಕ್’ (ಗಸ್ತು ತಂಡ) ಸಹ ಮಾಡಿದರು. ೧೯೭೫ ರಿಂದ ಅವರು ಭಾರತೀಯ ಸೇನೆಯು ನಡೆಸಿದ ಎಲ್ಲಾ ಪ್ರಮುಖ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದಾರೆ.

೨. ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಲ್ಲಿ ಪ್ರಮುಖ ಸಾಧನೆ

ಅ. ಭಯೋತ್ಪಾದನೆಯ ಉತ್ತುಂಗದಲ್ಲಿದ್ದ ಪೂಂಚ್ ಮತ್ತು ರಜೌರಿಯಂತಹ ಸವಾಲಿನ ಪ್ರದೇಶದಲ್ಲಿ ‘ಆಪರೇಷನ್ ರಕ್ಷಕ್’ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅವರು ತಮ್ಮ ಬೆಟಾಲಿಯನ್, ಅಂದರೆ ‘೭ನೇ ಮರಾಠಾ ಲೈಟ್ ಇನ್‌ಫೆಂಟ್ರಿ’ಯನ್ನು ಮುನ್ನಡೆಸಿದರು. ಪಾಕಿಸ್ತಾನದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಭಯೋತ್ಪಾದಕರ ನುಸುಳುವಿಕೆಯನ್ನು ತಡೆಯುವಲ್ಲಿ ಅವರ ಕೊಡುಗೆ ಮಹತ್ವದ್ದಾಗಿತ್ತು. ಅವರ ನಾಯಕತ್ವದಲ್ಲಿ ಅವರ ಘಟಕವು ‘ಯುನಿಟ್ ಪ್ರಶಸ್ತಿ ಪತ್ರ’ ಮತ್ತು ೧೮ ‘ಶೌರ್ಯ ಪ್ರಶಸ್ತಿ’ಗಳನ್ನು ಪಡೆದರು. ಅದರಲ್ಲಿ ಬ್ರಿಗೇಡಿಯರ್ ಮಹಾಜನ್ ಅವರಿಗೆ ದೊರೆತ ‘ಯುದ್ಧ ಸೇವಾ ಪದಕ’ (ವೈ.ಎಸ್.ಎಮ್.) ಕೂಡ ಸೇರಿದೆ.


ವಿಶೇಷ ಮಾಲಿಕೆ


ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು

ಆ. ಭಾರತೀಯ ಸೇನೆಯ ಅತಿದೊಡ್ಡ ಮಿಲಿಟರಿ ಜಮಾವಣೆಯಾದ ‘ಆಪರೇಷನ್ ಪರಾಕ್ರಮ’ದ ಅವಧಿಯಲ್ಲಿ, ಇದು ಪಾಕಿಸ್ತಾನದೊಂದಿಗೆ ಯುದ್ಧಕ್ಕೆ ಕಾರಣವಾಗುವ ಹಂತ ತಲುಪಿತ್ತು, ಬ್ರಿಗೇಡಿಯರ್ ಮಹಾಜನ್ ಅವರು ಸೈನ್ಯದ ಚಲನೆ ಮತ್ತು ಆಡಳಿತದಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರ ಕೊಡುಗೆಯನ್ನು ‘ಆರ್ಮಿ ಕಮಾಂಡರ್’ ಅವರ ‘ಪ್ರಶಂಸಾ ಪ್ರಶಸ್ತಿ’ಯಿಂದ ಗುರುತಿಸಲಾಗಿದೆ.

ಇ. ನಂತರ ‘ಆಪರೇಷನ್ ರಕ್ಷಕ್’ನಲ್ಲಿ ಬ್ರಿಗೇಡ್ ಕಮಾಂಡರ್ ಆಗಿ ಅವರು ಜಮ್ಮು ಮತ್ತು ಕಾಶ್ಮೀರದ ಪೂಂಚ್, ಕೃಷ್ಣ ಘಾಟಿ, ಸುರನ್‌ಕೋಟ್ ಮತ್ತು ರಜೌರಿಯ ಭಯೋತ್ಪಾದನೆ ಪೀಡಿತ ಪ್ರದೇಶಗಳಲ್ಲಿನ ಕಾರ್ಯಾಚರಣೆಗಳನ್ನು ಮುನ್ನಡೆಸಿದರು. ಅವರ ಆಜ್ಞೆಯಲ್ಲಿ ಗಡಿ ಭದ್ರತಾ ಪಡೆಯ (‘ಬಿ.ಎಸ್.ಎಫ್.’) ೨ ಬೆಟಾಲಿಯನ್‌ಗಳು ಇದ್ದವು. ಒಂದು ಘಟಕವು ಯುನಿಟ್ ಪ್ರಶಸ್ತಿ ಪತ್ರವನ್ನು ಪಡೆಯಿತು. ೨೦೦೬ ರಲ್ಲಿ ‘ಬಿ.ಎಸ್.ಎಫ್.’ನ ಒಂದು ಬೆಟಾಲಿಯನ್ ದೇಶದ ‘ಅತ್ಯುತ್ತಮ ಬೆಟಾಲಿಯನ್’ ಎಂದು ಗುರುತಿಸಲ್ಪಟ್ಟಿತು. ಆ ವರ್ಷದ ಅತ್ಯುನ್ನತ ಶೌರ್ಯ ಪ್ರಶಸ್ತಿ ‘ಅಶೋಕ ಚಕ್ರ’ ಅವರ ಆಜ್ಞೆಯಡಿಯ ಅಧಿಕಾರಿಗೆ ನೀಡಲಾಯಿತು.

೩. ದೊರೆತಿರುವ ಅನೇಕ ಶೌರ್ಯ ಪ್ರಶಸ್ತಿಗಳು

ಅ. ‘ಜಿಒಸಿ-ಇನ್-ಸಿ ಸೆಂಟ್ರಲ್ ಕಮಾಂಡ್ ಪ್ರಶಂಸಾ ಪತ್ರ’

ಆ. ಯುದ್ಧ ಸೇವಾ ಪದಕ (ವೈ.ಎಸ್.ಎಮ್.)

ಇ. ಅವರ ಕಮಾಂಡ್ ಅವಧಿಯಲ್ಲಿ ‘೭ನೇ ಮರಾಠಾ ಲೈಟ್ ಇನ್‌ಫೆಂಟ್ರಿ’ಗೆ ‘ಲಷ್ಕರ್ ಪ್ರಮುಖ ಯುನಿಟ್ ಪ್ರಶಸ್ತಿ ಪತ್ರ (Chief of Army Staff Unit Citation)’

ಈ. ಅವರ ಕಮಾಂಡ್ ಅವಧಿಯಲ್ಲಿ ‘ಜಿಒಸಿ-ಇನ್-ಸಿ ನಾರ್ಥರ್ನ್ ಕಮಾಂಡ್ ಯುನಿಟ್ ಪ್ರಶಂಸಾ ಪತ್ರ’

ಉ. ಬ್ರಿಗೇಡ್ ಕಮಾಂಡರ್ ಆಗಿ ಒಂದು ಯುನಿಟ್‌ಗೆ ‘ಸಿ.ಒ.ಎ.ಎ.ಎಸ್.’ ಯುನಿಟ್ ಪ್ರಶಸ್ತಿ ಪತ್ರ

೪. ‘ಆರ್ಮಿ ವಾರ್ ಕಾಲೇಜ್’ನಲ್ಲಿ ಪ್ರಾಧ್ಯಾಪಕರ ಪಾತ್ರ

ಫೆಬ್ರವರಿ ೨೦೦೬ ರಲ್ಲಿ ಬ್ರಿಗೇಡಿಯರ್ ಮಹಾಜನ್ ಅವರು ‘ಆರ್ಮಿ ವಾರ್ ಕಾಲೇಜ್’ನ ‘ಹೈಯರ್ ಕಮಾಂಡ್ ವಿಂಗ್’ನ ವಿದ್ಯಾ ಶಾಖೆಯಲ್ಲಿ ೩ ವರ್ಷಗಳ ಕಾಲ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದರು. ‘ಡೈರೆಕ್ಟಿಂಗ್ ಸ್ಟಾಫ್’ (ಸಿಬ್ಬಂದಿಗೆ ಮಾರ್ಗದರ್ಶನ) ಆಗಿ ಅವರು ಮೂರೂ ಪಡೆಗಳ ಹಿರಿಯ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಅವರು ತಜ್ಞ ನಿರ್ವಹಣೆ, ಅಣ್ವಸ್ತ್ರ ಜೈವಿಕ-ರಾಸಾಯನಿಕ ಯುದ್ಧ, ಕಾಶ್ಮೀರ ಮತ್ತು ಈಶಾನ್ಯದ ಉಗ್ರವಾದ, ಸಾಮ್ಯವಾದಿ ಸಿದ್ಧಾಂತದ ತೀವ್ರತೆ, ಭಯೋತ್ಪಾದನೆ, ಕಡಲ ನುಸುಳುವಿಕೆಗಳ ಬಗ್ಗೆ ಮಾರ್ಗದರ್ಶನ ನೀಡಿದರು.


ನಾಗರಿಕರಿಗೆ ಕರೆ

ಛತ್ರಪತಿ ಶಿವಾಜಿ ಮಹಾರಾಜರು, ಮಹಾರಾಣಾ ಪ್ರತಾಪ್, ಬಾಜಿರಾವ್ ಪೇಶ್ವೆ ಇವರೆಲ್ಲ ಯೋಧರು ಮಹಾನರೇ; ಆದರೆ ಸಾಮಾನ್ಯ ಮನುಷ್ಯ ದೇಶಕ್ಕಾಗಿ ಏನಾದರೂ ಮಾಡುವವರೆಗೆ ದೇಶವು ಮಹಾನಾಗುವುದಿಲ್ಲ. – ಬ್ರಿಗೇಡಿಯರ್ ಹೇಮಂತ್ ಮಹಾಜನ್ (ನಿವೃತ್ತ)

೫. ನಿವೃತ್ತಿಯ ನಂತರದ ಕೊಡುಗೆ

೫ ಅ. ಶೈಕ್ಷಣಿಕ ಮತ್ತು ಸಲಹಾ ಪಾತ್ರ

೫ ಅ ೧. ಬ್ರಿಗೇಡಿಯರ್ ಮಹಾಜನ್ ಅವರು ಮುಂಬಯಿನ ‘ರಾಷ್ಟ್ರೀಯ ಸ್ವಾತಂತ್ರ್ಯವೀರ ಸಾವರ್ಕರ್ ಸ್ಮಾರಕ’ದಲ್ಲಿನ ‘ಸ್ಟ್ರಾಟೆಜಿಕ್ ಸ್ಟಡಿ ಸೆಂಟರ್’ (रणनैतिक अभ्यास केंद्राचे) ಮುಖ್ಯಸ್ಥರಾಗಿದ್ದಾರೆ.

೫ ಅ ೨. ಅವರು ೨೦೧೮ ರಿಂದ ೨೦೨೧ ರವರೆಗೆ ಪುಣೆ ವಿಶ್ವವಿದ್ಯಾಲಯದಲ್ಲಿ ‘ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸುರಕ್ಷಾ ಅಧ್ಯಾಯನ’ದ ಅಧ್ಯಕ್ಷರು ಮತ್ತು ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು.

೫ ಅ ೩. ಅವರು ೨೦೧೭ ರಿಂದ ೨೦೧೯ ರವರೆಗೆ ದಮನ್ ಮತ್ತು ದೀವ್ ಸರಕಾರದ ‘ಸುರಕ್ಷಾ ಸಲಹೆಗಾರ’ರಾಗಿದ್ದರು.

೫ ಆ. ಬರಹ ಮತ್ತು ಮಾಧ್ಯಮದ ಸಹಭಾಗಿತ್ವ

೫ ಆ ೧. ಅವರು ನಿವೃತ್ತಿಯ ನಂತರವೂ ಬರವಣಿಗೆಯ ಮೂಲಕ ರಾಷ್ಟ್ರೀಯ ಭದ್ರತಾ ಉಪನ್ಯಾಸಗಳಲ್ಲಿ ಕೊಡುಗೆ ನೀಡುತ್ತಿದ್ದಾರೆ. ಅವರು ೫ ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ, ಅವು ‘ಸಕಾಳ್’, ‘ಲೋಕಸತ್ತಾ’, ‘ಮಹಾರಾಷ್ಟ್ರ ಟೈಮ್ಸ್’ ಮತ್ತು ‘ಸನಾತನ ಪ್ರಭಾತ’ ನಂತಹ ಪ್ರಮುಖ ಮರಾಠಿ ಪತ್ರಿಕೆಗಳಲ್ಲಿ ಹಾಗೂ ‘ಕ್ಯಾಸ್ ಜರ್ನಲ್’, ‘ನ್ಯೂಸ್ ಭಾರತಿ ಆರ್ಗನೈಸರ್’ ನಂತಹ ಇಂಗ್ಲಿಷ್ ಪ್ರಕಟಣೆಗಳಲ್ಲಿ ಪ್ರಕಟವಾಗುತ್ತವೆ. ಅವರು ರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಳಿಗೂ ಕೊಡುಗೆ ನೀಡುತ್ತಾರೆ.

೫ ಆ ೨. ಅವರು ‘ಐಬಿಎನ್ ಲೋಕಮತ್’, ‘ಝೀ ೨೪ ತಾಸ’, ‘ಎಬಿಪಿ ಮಾಝಾ’, ‘ಟೈಮ್ಸ್ ನೌ’ ಮತ್ತು ‘ಮಿರರ್ ನೌ’ ನಂತಹ ಮರಾಠಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಸುದ್ದಿ ವಾಹಿನಿಗಳ ಚರ್ಚಾಕೂಟಗಳಲ್ಲಿಯೂ ಭಾಗವಹಿಸುತ್ತಾರೆ.

೫ ಆ ೩. ಅವರು ಸ್ವತಃ ಆನ್‌ಲೈನ್ ವೀಡಿಯೊಗಳ ಮೂಲಕ ವೀಕ್ಷಕರವರೆಗೆ ತಲುಪುತ್ತಾರೆ.

ಅ. ಫೇಸ್‌ಬುಕ್‌ನಲ್ಲಿನ ಜನಪ್ರಿಯ ‘ಇ-ಲೆಕ್ಚರ್’ ಸರಣಿಯು ೫ ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

ಆ. ಅವರ ಯೂಟ್ಯೂಬ್ ಚಾನೆಲ್ ‘https://www.youtube.com/@hemantmahajan12153/videos’ ಈ ಲಿಂಕ್‌ನಲ್ಲಿದ್ದು, ೨ ಲಕ್ಷ ೩೫ ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆಯುತ್ತಿದೆ.

ಇ. ಅವರ [https://brighemantmahajan.blogspot.com](https://brighemantmahajan.blogspot.com) ಈ ‘ಬ್ಲಾಗ್’ ೧೦ ಲಕ್ಷ ವೀಕ್ಷಣೆಗಳನ್ನು ಪಡೆಯುತ್ತಿದೆ.


ನಿವೃತ್ತ ಬ್ರಿಗೇಡಿಯರ್ ಮಹಾಜನ್ ಅವರು ರಾಷ್ಟ್ರೀಯ ಭದ್ರತೆಯ ಕುರಿತು ಬರೆದ ಪುಸ್ತಕಗಳು

೧. ‘ನಕ್ಸಲವಾದದ ಸವಾಲು: ಚೀನಾದಿಂದ ಭಾರತದೊಂದಿಗೆ ಗುಪ್ತ ಯುದ್ಧ’, ಪ್ರಕಾಶಕರು: ನಚಿಕೇತ್ ಪ್ರಕಾಶನ್, ನಾಗ್ಪುರ.

೨. ‘ಆಹ್ವಾನ್ ಚೀನಿ ಡ್ರ್ಯಾಗನ್‌ಚೆ’, ಪ್ರಕಾಶಕರು: ನಚಿಕೇತ್ ಪ್ರಕಾಶನ್, ನಾಗ್ಪುರ.

೩. ‘Proxy War In Jammu Kashmir : A Winning Strategy-2014’ ಇದು ‘ಥಿಂಕ್ ಟ್ಯಾಂಕ್’ಗಾಗಿ (ಬುದ್ಧಿಜೀವಿಗಳ ಗುಂಪಿಗಾಗಿ) ಪುಸ್ತಕ ರೂಪದಲ್ಲಿ ಪ್ರಕಟವಾದ ಸಂಶೋಧನಾ ಯೋಜನೆ.

೪. ‘ಆಹ್ವಾನ್ ಜಮ್ಮು-ಕಾಶ್ಮೀರದಿಲ್ ಛುಪ್ಯಾ ಯುದ್ಧಾಚೆ’, ಪ್ರಕಾಶಕರು: ಮಾಧವಿ ಪ್ರಕಾಶನ್, ಪುಣೆ.

೫. ‘ಬಾಂಗ್ಲಾದೇಶಿ ನುಸುಳುವಿಕೆ ಭಾರತದ ಸುರಕ್ಷತೆಗೆ ಅತಿ ದೊಡ್ಡ ಭದ್ರತಾ ಸವಾಲು. ೨೦೨೯ ರ ಮೊದಲು ಅಸ್ಸಾಂ, ಬಂಗಾಳದ ಮುಖ್ಯಮಂತ್ರಿ ಸ್ಥಾನದಲ್ಲಿ ಇಬ್ಬರು ಬಾಂಗ್ಲಾದೇಶಿಗಳು? (ಅಕ್ಟೋಬರ್ ೨೦೧೫, ೨೦೧೬)’, ಪ್ರಕಾಶಕರು: ಭಾರತೀಯ ವಿಚಾರ ಸಾಧನಾ, ಪುಣೆ.