‘ಜುಲೈ ೨೯ ರಿಂದ ಶ್ರಾವಣ ಮಾಸ ಆರಂಭವಾಗಿದೆ. ಈ ಕಾಲಾವಧಿಯಲ್ಲಿ ವಿವಿಧ ಹಬ್ಬಗಳು ಬರುತ್ತವೆ. ಈ ಸಮಯದಲ್ಲಿ ಅಧ್ಯಾತ್ಮ ಪ್ರಸಾರದ ದೃಷ್ಟಿಯಿಂದ ಮುಂದಿನ ಪ್ರಯತ್ನಗಳನ್ನು ಮಾಡಬಹುದು.
೧. ದೇವಸ್ಥಾನದಲ್ಲಿ ಗ್ರಂಥಪ್ರದರ್ಶನ ಆಯೋಜಿಸುವುದು
ಅ. ಸೋಮವಾರ, ಮಂಗಳವಾರ ಇತ್ಯಾದಿ ವಾರಗಳ ಸಮಯದಲ್ಲಿ ಆಯಾ ದೇವತೆಗಳ ದೇವಸ್ಥಾನಗಳಲ್ಲಿ ಸನಾತನದ ಗ್ರಂಥ, ಕಿರು ಗ್ರಂಥ ಮತ್ತು ಉತ್ಪನ್ನಗಳ ಪ್ರದರ್ಶನ ಹಾಕಬೇಕು. ಈ ಸಮಯದಲ್ಲಿ ಆಯಾ ದೇವತೆಗಳ ಅಧ್ಯಾತ್ಮಶಾಸ್ತ್ರದ ಮಾಹಿತಿಪರ ಫಲಕಗಳನ್ನೂ ಹಾಕಬಹುದು. ಸೋಮವಾರದಂದು ಶಿವನ ದೇವಸ್ಥಾನದಲ್ಲಿ ಜನದಟ್ಟಣೆಯಿರುತ್ತದೆ. ಆಗ ಶಿವನ ದೇವಸ್ಥಾನದಲ್ಲಿ ಗ್ರಂಥ ಪ್ರದರ್ಶನ ಹಾಕಲು ಆದ್ಯತೆಯಿಂದ ಆಯೋಜನೆ ಮಾಡಬೇಕು.
ಆ. ದೇವತೆಗಳ ನಾಮಪಟ್ಟಿಗಳು, ಚಿತ್ರಗಳು, ಗ್ರಂಥ, ಕಿರುಗ್ರಂಥ ಮತ್ತು ಲಾಕೆಟ್‌ಗಳ ವಿವಿಧ ಆಕರ್ಷಕ ಕಟ್ಟುಗಳನ್ನು ನಿರ್ಮಿಸಿ ಗ್ರಂಥಪ್ರದರ್ಶನದಲ್ಲಿ ಮಾರಾಟ ಮಾಡಬಹುದು.
ಇ. ಗ್ರಂಥ ಪ್ರದರ್ಶನದಲ್ಲಿ ಭೇಟಿ ನೀಡುವ ಜಿಜ್ಞಾಸುಗಳಿಗೆ ಸನಾತನ ಪಂಚಾಂಗದ ಮಹತ್ವವನ್ನು ಹೇಳಿ ೨೦೨೩ ರ ಪಂಚಾಂಗದ ಬೇಡಿಕೆಯನ್ನು ತೆಗೆದುಕೊಳ್ಳಬಹುದು.
೨. ಸಾರ್ವಜನಿಕ ಸ್ಥಳಗಳಲ್ಲಿ ಪ್ರವಚನಗಳ ಆಯೋಜನೆ
ದೇವಸ್ಥಾನಗಳು, ಶಾಲೆ, ಮಹಾವಿದ್ಯಾಲಯಗಳು, ಹಿರಿಯ ನಾಗರಿಕ ಸಂಘ, ಮಹಿಳಾ ಮಂಡಳಿ, ವಸತಿ ಸಂಕೀರ್ಣಗಳು ಇತ್ಯಾದಿ ಸ್ಥಳಗಳಲ್ಲಿ ‘ಶ್ರಾವಣ ಮಾಸದ ಮಹತ್ವ’ದ ಬಗ್ಗೆ ಹಾಗೂ ದೇವತೆಗಳ ಅಧ್ಯಾತ್ಮಶಾಸ್ತ್ರೀಯ ಮಾಹಿತಿ ನೀಡುವ ಪ್ರವಚನ ಆಯೋಜಿಸಬಹುದು. ‘ಆದರ್ಶ ಗಣೇಶೋತ್ಸವ ಹೇಗೆ ಆಚರಿಸಬೇಕು ?’, ಈ ಕುರಿತು ಮನವರಿಕೆಯನ್ನು ಮಾಡಿಕೊಡಬಹುದು.
೩. ವಿವಿಧ ಕಾರ್ಯಕ್ರಮಗಳ ಮೂಲಕ ಅಧ್ಯಾತ್ಮ ಪ್ರಸಾರ
ಅ. ಚಾತುರ್ಮಾಸದ ನಿಮಿತ್ತ ವಿವಿಧ ದೇವಸ್ಥಾನಗಳಲ್ಲಿ ದೊಡ್ಡ ಪ್ರಮಾಣಗಳಲ್ಲಿ ಕೀರ್ತನೆ, ಪ್ರವಚನ ಇತ್ಯಾದಿಗಳ ಆಯೋಜನೆ ಮಾಡಲಾಗುತ್ತದೆ. ಇಂತಹ ಸ್ಥಳಗಳಲ್ಲಿ ಗ್ರಂಥ ಪ್ರದರ್ಶನ ಹಾಕಬಹುದು ಹಾಗೂ ಆಯೋಜಕರ ಅನುಮತಿಯನ್ನು ಪಡೆದು ‘ಚಾತುರ್ಮಾಸದ ಮಹತ್ವ’ ಇತ್ಯಾದಿ ವಿಷಯಗಳ ಕುರಿತು ಪ್ರವಚನಗಳನ್ನು ತೆಗೆದುಕೊಳ್ಳಬಹುದು.
ಆ. ಶ್ರಾವಣ ಮಾಸದಲ್ಲಿ ಮಂಗಳಗೌರಿಯ ನಿಮಿತ್ತ ಸುವಾಸಿನಿಯರು ಒಟ್ಟಿಗೆ ಸೇರುತ್ತಾರೆ. ಅವರಿಗಾಗಿ ಪ್ರವಚನ ಅದೇ ರೀತಿ ಗ್ರಂಥ ಪ್ರದರ್ಶನಗಳ ಆಯೋಜನೆ ಮಾಡಬಹುದು.
ಇ. ಈ ಮಾಸದಲ್ಲಿ ಕೆಲವರು ಮನೆಯಲ್ಲೇ ಪೂಜೆ ಮಾಡುತ್ತಾರೆ. ಈ ನಿಮಿತ್ತ ಧಾರ್ಮಿಕ ಕೃತಿಗಳ ಶಾಸ್ತ್ರಗಳನ್ನು ತಿಳಿಸುವ ಗ್ರಂಥಗಳನ್ನು ಸಮಾಜದ ವರೆಗೆ ತಲುಪಿಸಬಹುದು.
೪. ಮನೆ ಮನೆಗೆ ಹೋಗಿ ಪ್ರಸಾರ
ಹಬ್ಬ-ಹರಿದಿನಗಳು ಕುರಿತು ಅದೇ ರೀತಿ ವಿವಿಧ ದೇವತೆಗಳ ಮಾಹಿತಿ ನೀಡುವ ಗ್ರಂಥ ಹಾಗೂ ಕಿರುಗ್ರಂಥಗಳನ್ನು ಮನೆ ಮನೆಗೆ ತೆರಳಿ ವಿತರಣೆ ಮಾಡಬಹುದು.
೫. ಫಲಕಗಳ ಮೂಲಕ ಪ್ರಸಿದ್ಧಿ
ಶ್ರಾವಣ ಮಾಸದ ಕುರಿತು ಅದೇ ರೀತಿ ದೇವತೆಗಳ ಕುರಿತು ಮಾಹಿತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಫಲಕಗಳಲ್ಲಿ ಬರೆದು ಫಲಕ ಪ್ರಸಿದ್ಧಿ ಮಾಡಬಹುದು.
ಸಾಧಕರೇ, ಶ್ರಾವಣ ಮಾಸದ ನಿಮಿತ್ತ ಕಲಿಯುಗದಲ್ಲಿ ಜ್ಞಾನದೀಪವಾಗಿರುವ ಸನಾತನದ ಗ್ರಂಥ ಮತ್ತು ಕಿರುಗ್ರಂಥಗಳನ್ನು ಮನೆ ಮನೆಗಳಿಗೆ ತಲುಪಿಸಿ ! (೨೯.೭.೨೦೨೨)
ಹಬ್ಬ, ಉತ್ಸವ ಮತ್ತು ವ್ರತ ಇವುಗಳ ಬಗ್ಗೆ ಧರ್ಮಶಾಸ್ತ್ರವನ್ನು ಕಲಿಸುವ ಸನಾತನದ ಗ್ರಂಥ !ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರಸನಾತನದ ಈ ಗ್ರಂಥದಲ್ಲಿ ಓದಿ …
ಸನಾತನ ನಿರ್ಮಿತ ‘ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ’ ಈ ಗ್ರಂಥವೂ ಲಭ್ಯ ಸಂಪರ್ಕ ಕ್ರಮಾಂಕ : ೯೩೪೨೫೯೯೨೯೯ ‘ಆನ್‌ಲೈನ್’ ಖರೀದಿಗಾಗಿ : www.SanatanShop.com ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. |