ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಆರಂಭದಲ್ಲಿ ಜಿಜ್ಞಾಸು ಹಾಗೂ ಸಾಧಕರಿಗಾಗಿ ಸತ್ಸಂಗ ಮತ್ತು ಅಭ್ಯಾಸವರ್ಗ ತೆಗೆದುಕೊಳ್ಳುತ್ತಿದ್ದರು. ಸಮಾಜದ ಜನರಿಗೆ ಇದರ ಬಗ್ಗೆ ಅರಿವಾಗಬೇಕೆಂದು ವಿವಿಧ ಪತ್ರಿಕೆಗಳಲ್ಲಿ ‘ಇಂದಿನ ಕಾರ್ಯಕ್ರಮ’, ‘ಸಂಕ್ಷಿಪ್ತದಲ್ಲಿ ಮುಂಬಯಿ’, ‘ಸಂಕ್ಷಿಪ್ತದಲ್ಲಿ ಮಹಾರಾಷ್ಟ್ರ’ ಇತ್ಯಾದಿ ಅಂಕಣಗಳಲ್ಲಿ ಸತ್ಸಂಗ ಮತ್ತು ಅಭ್ಯಾಸವರ್ಗಗಳ ಮಾಹಿತಿ ಪ್ರಕಾಶನವಾಗುತ್ತಿತ್ತು; ಆದರೆ ಅದಕ್ಕಾಗಿ ನಾನು ವಿವಿಧ ದೈನಿಕ ಕಾರ್ಯಾಲಯಗಳಿಗೆ ಹೋಗಿ ಅವರಿಗೆ ಕೈ ಮುಗಿದು ಮುದ್ರಿಸಲು ವಿನಂತಿಸುತ್ತಿದ್ದೆನು. ಆದ್ದರಿಂದ ಅಲ್ಪಸ್ವಲ್ಪ ಮಾಹಿತಿ ಪ್ರಕಾಶನವಾಗುತ್ತಿತ್ತು. ಪರಾತ್ಪರ ಗುರು ಡಾ. ಆಠವಲೆಯವರು ನಮಗೆ ಅಭ್ಯಾಸವರ್ಗ ಮತ್ತು ಸತ್ಸಂಗಗಳಲ್ಲಿ ಕಲಿಸಿದ್ದರು

‘ಜೇ ಜೇ ಆಪಣಾಸೀ ಠಾವೆ ತೇ ತೇ ಇತರಾಂಸೀ ಸಾಂಗಾವೆ | ಶಹಾಣೆ ಕರೂನ ಸೋಡಾವೆ ಸಕಳ ಜನ ||’
ಅರ್ಥ : ನಮಗೇನು ಗೊತ್ತಿದೆಯೊ, ಅದನ್ನು ಕ್ರಮೇಣ ಎಲ್ಲರಿಗೂ ಕಲಿಸಬೇಕು. ಈ ರೀತಿ ಎಲ್ಲರಿಗೂ ಕಲಿಸಿ ಜಾಣರನ್ನಾಗಿಸಬೇಕು.
ಅದಕ್ಕನುಸಾರ ನಾನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿಷಯದಲ್ಲಿ ಮತ್ತು ಅವರು ಕಲಿಸಿದ ಅಭ್ಯಾಸವರ್ಗಗಳಲ್ಲಿನ ‘ಅಧ್ಯಾತ್ಮ ಮತ್ತು ಸಾಧನೆ’ ಈ ವಿಷಯದಲ್ಲಿ ಸಣ್ಣ ಸಣ್ಣ ಲೇಖನ ಬರೆಯುತ್ತಿದ್ದೆನು ಹಾಗೂ ಅದನ್ನು ಮುಂಬಯಿಯಲ್ಲಿನ ದೈನಿಕಗಳ ಸಂಪಾದಕರಲ್ಲಿಗೆ ಹೋಗಿ ಪ್ರಕಟಿಸಲು ವಿನಂತಿಸುತ್ತಿದ್ದೆನು. ಆ ಲೇಖನಗಳು ಪ್ರಕಾಶನವಾಗಲು ಅಸಾಧ್ಯವಾಗಿತ್ತು; ಏಕೆಂದರೆ ೧೯೯೦ ರಿಂದ ೧೯೯೫ ರಲ್ಲಿ ‘ಅಧ್ಯಾತ್ಮ ಮತ್ತು ಸಾಧನೆ’ಯ ವಿಷಯ ಬಹಳಷ್ಟು ಸಂಪಾದಕರಿಗೆ ಅಪಥ್ಯ (ಅಲರ್ಜಿ)ವಾಗಿತ್ತು. ಈ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರಿಗೆ ನಾನು ನನ್ನ ಅಡಚಣೆಯನ್ನು ಹೇಳಿದೆ. ಆಗ ಅವರು, ”ನಿಮ್ಮ ಲೇಖನ ಚೆನ್ನಾಗಿದೆ. ಬೇರೆ ದೈನಿಕದವರು ಇದನ್ನು ಮುದ್ರಿಸದಿದ್ದರೆ, ನಾವೇ ನಮ್ಮ ದೈನಿಕ ಆರಂಭಿಸೋಣ. ಆಗ ನೀವು ಬೇಕಾದಷ್ಟು ಲೇಖನ ಬರೆಯಬಹುದು’’ ಎಂದು ಹೇಳಿದರು. ಒಬ್ಬ ಮಗನು ತನ್ನ ತಂದೆಯ ಬಳಿ ಹೇಳುತ್ತಾನೆ, ‘ಒಬ್ಬ ಶ್ರೀಮಂತ ಹುಡುಗನಲ್ಲಿ ಚತುಶ್ಚಕ್ರ ವಾಹನ ಇದೆ, ನನಗೆ ಅಂತಹ ವಾಹನದ ಅವಶ್ಯಕತೆಯಿದೆ.’ ಆದರೆ ಅವನ ತಂದೆಯವರ ಆರ್ಥಿಕ ಪರಿಸ್ಥಿತಿ ಅವನಿಗೆ ವಾಹನ ಕೊಡಿಸುವಷ್ಟು ಚೆನ್ನಾಗಿರುವುದಿಲ್ಲ; ಆದರೆ ಅವರಲ್ಲಿ ಸಕಾರಾತ್ಮಕತೆ ಮತ್ತು ಆತ್ಮವಿಶ್ವಾಸ ಇರುತ್ತದೆ. ಆಗ ಅವನ ತಂದೆ ಅವನಿಗೆ ಹೇಳುತ್ತಾರೆ, ”ದೇವತಾನುಗ್ರಹದಿಂದ ನಿನಗೆ ಒಂದು ವಾಹನ ಖರೀದಿಸುವ ಬದಲು ಭವಿಷ್ಯದಲ್ಲಿ ನಾವು ವಾಹನ ತಯಾರಿಸುವ ಕಾರ್ಖಾನೆಯನ್ನೇ ಸ್ಥಾಪಿಸೋಣ.’’ ಆಗ ಆ ಮಗನಿಗೆ ಎಷ್ಟು ಆನಂದವಾಗಿರಬಹುದೋ, ಅದಕ್ಕಿಂತ ಹೆಚ್ಚು ಆನಂದ ಪರಾತ್ಪರ ಗುರು ಡಾ. ಆಠವಲೆಯವರು ”ನಾವೇ ದೈನಿಕ ಆರಂಭಿಸೋಣ’’, ಎಂದು ಆಶ್ವಾಸನೆ ನೀಡಿದಾಗ ನನಗಾಯಿತು. ಅದು ಸಾಕ್ಷಾತ್ ಭಗವಂತನೇ ನೀಡಿದ ವಚನವಾಗಿತ್ತು. ಅವರ ಈ ಸಂಕಲ್ಪಕ್ಕನುಸಾರ ಈಗ ‘ಸನಾತನ ಪ್ರಭಾತ’ದ ಅನೇಕ ನಿಯತಕಾಲಿಕೆಗಳು ಅನೇಕ ಭಾಷೆಗಳಲ್ಲಿ ಪ್ರಕಾಶನವಾಗುತ್ತಿವೆ. ‘ಸನಾತನ ಪ್ರಭಾತ’ ನಿಯತಕಾಲಿಕೆ ಪ್ರಕಾಶನವಾದಂದಿನಿಂದ ನನಗೆ ಕಲಿಯಲು ಸಿಕ್ಕಿದ ಅಂಶಗಳು ಮತ್ತು ಬಂದಿರುವ ಅನುಭೂತಿಗಳನ್ನು ಇಲ್ಲಿ ಕೊಡಲಾಗಿದೆ. ಈ ಮುಂದಿನ ಲೇಖನ ನಾನು ಅನುಭವಿಸಿದ ಪ್ರತ್ಯಕ್ಷ ಘಟನೆಗಳು ಮತ್ತು ಪ್ರಸಂಗಗಳನ್ನು ಆಧರಿಸಿವೆ. ‘ಸದ್ಯ ಜಗತ್ತಿನ ಯಾವುದೇ ದೈನಿಕದಲ್ಲಿ ಪೂರ್ಣತ್ವವಿದೆ’, ಎಂದು ನಾವು ಹೇಳಲು ಸಾಧ್ಯವಿಲ್ಲ; ಆದರೆ ‘ಮುಂದೆ ನೀಡಿರುವ ಗುಣವೈಶಿಷ್ಟ್ಯಗಳಿಂದ ಹಾಗೂ ಈಶ್ವರನ ಕೃಪೆಯಿಂದ ‘ಸನಾತನ ಪ್ರಭಾತ’ ನಿಯತಕಾಲಿಕೆಗಳು ಕ್ರಮೇಣ ಪೂರ್ಣತ್ವದ ದಿಕ್ಕಿನಲ್ಲಿ ಮಾರ್ಗಕ್ರಮಣ ಮಾಡುತ್ತಿವೆ’, ಎಂದು ನನಗನಿಸುತ್ತದೆ.
ನನ್ನ ಸಾಧನೆಯ ಹಾಗೂ ಜೀವನದ ಪ್ರವಾಸದಲ್ಲಿ ನನಗೆ ‘ಸನಾತನ ಪ್ರಭಾತ’ ದೀಪಸ್ತಂಭದ ಹಾಗೆ ಮಾರ್ಗದರ್ಶನ ಮಾಡುತ್ತಿದೆ. ಅದಕ್ಕಾಗಿ ನಾನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಮತ್ತು ‘ಸನಾತನ ಪ್ರಭಾತ’ದ ಸೇವೆ ಮಾಡುವ ಎಲ್ಲ ಸಾಧಕರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.’
– (ಪೂ.) ಶಿವಾಜಿ ವಟಕರ (ಸನಾತನದ ೧೦೨ ನೇ ಸಂತರು ವಯಸ್ಸು ೭೭ ವರ್ಷ), ಸನಾತನ ಆಶ್ರಮ, ಪನವೇಲ, ಮಹಾರಾಷ್ಟ್ರ.
ಆಧ್ಯಾತ್ಮಿಕ ಸ್ತರದ ಕಾರ್ಯಅ. ಆಧ್ಯಾತ್ಮಿಕ ಮಾರ್ಗದರ್ಶನ ಮಾಡಿ ಸಂತರನ್ನಾಗಿ ಮಾಡುವ ಸನಾತನದ ಶಾಲೆಗೆ ಸಹಾಯ ಮಾಡುವ ‘ಸನಾತನ ಪ್ರಭಾತ’ ! ‘ಸನಾತನ ಪ್ರಭಾತ’ ಸಾಧಕರ ಆಧ್ಯಾತ್ಮಿಕ ಉನ್ನತಿಗಾಗಿ ಚೈತನ್ಯಮಯ ವ್ಯಾಸಪೀಠವಾಗಿದೆ. ಸಾಧಕರಿಗೆ ಕಲಿಯಲು ಸಿಕ್ಕಿದ ಅಂಶಗಳು ಮತ್ತು ಬಂದಿರುವ ಅನುಭೂತಿಗಳಿಂದ ಸಾಧನೆ ಮಾಡಲು ಪ್ರೇರಣೆ ಸಿಗುತ್ತದೆ. ಸಂತರು ಮತ್ತು ಮಹರ್ಷಿಗಳು ಸಾಧನೆಗಾಗಿ ನೀಡಿರುವ ಸೂಚನೆಗಳು ಮತ್ತು ಸುವಚನಗಳಿಂದ ಸಾಧಕರಿಗೆ ಯೋಗ್ಯ ಸಾಧನೆ ಮಾಡಲು ಸಹಾಯವಾಗುತ್ತದೆ. ಆ. ಸೂಕ್ಷ್ಮದಿಂದ ಕಾರ್ಯ ಮಾಡುವ ‘ಸನಾತನ ಪ್ರಭಾತ’ ! ಅಜ್ಞಾನ ಹಾಗೂ ಅನಿಷ್ಟ ಶಕ್ತಿಗಳ ಆವರಣ ತೆಗೆದು ಜ್ಞಾನಶಕ್ತಿಯ ಆನಂದ ನೀಡುವ ‘ಸನಾತನ ಪ್ರಭಾತ’ ! ‘ಸನಾತನ ಪ್ರಭಾತ’ದ ಕಾರ್ಯ ಸೂಕ್ಷ್ಮ ಹಾಗೂ ಚೈತನ್ಯದ ಸ್ತರದಲ್ಲಿ ನಡೆಯುತ್ತಿದೆ. ವ್ಯಷ್ಟಿ ಸಾಧನೆ ಹಾಗೂ ಸಮಷ್ಟಿ ಕಾರ್ಯದಲ್ಲಿ ಬರುವ ಅಡಚಣೆಗಳಿಗೆ ಆಧ್ಯಾತ್ಮಿಕ ಪರಿಹಾರ ‘ಸನಾತನ ಪ್ರಭಾತ’ದಲ್ಲಿ ಪ್ರಕಾಶನವಾಗುತ್ತದೆ. ಇ. ಕಲಿಯುಗದಲ್ಲಿನ ಭಗವದ್ಗೀತೆಯಾಗಿರುವ ‘ಸನಾತನ ಪ್ರಭಾತ’ ! ‘ಶ್ರೀಕೃಷ್ಣ ಅರ್ಜುನನಿಗೆ ಹೇಳಿರುವ ಭಗವದ್ಗೀತೆಯ ಹಾಗೆ ‘ಸನಾತನ ಪ್ರಭಾತ’ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ಸಾಧಕರಿಗೆ, ರಾಷ್ಟ್ರಭಕ್ತರಿಗೆ ಮತ್ತು ಧರ್ಮರಕ್ಷಕರಿಗೆ ಹೇಳಿರುವ ಕಲಿಯುಗದಲ್ಲಿನ ಭಗವದ್ಗೀತೆಯಾಗಿದೆ’, ಎಂಬು ದನ್ನು ನಾನು ‘ಸನಾತನ ಪ್ರಭಾತ’ ಪ್ರಕಾಶನವಾದ ದಿನದಿಂದ ಅನುಭವಿಸುತ್ತಿದ್ದೇನೆ ‘ಸನಾತನ ಪ್ರಭಾತ’ದ ಸ್ಥೂಲದ ಕಾರ್ಯ ಅ. ವಾಸ್ತವವನ್ನು ತೋರಿಸಿ ಸತ್ಯಸ್ಥಿತಿ ಬೆಳಕಿಗೆ ತರುವ ‘ಸನಾತನ ಪ್ರಭಾತ’ ! ಆ. ವಾರ್ತೆ ಹಾಗೂ ಲೇಖನಗಳಲ್ಲಿನ ಭಾವ, ವಿಚಾರ ಮತ್ತು ದೃಷ್ಟಿಕೋನ ಯಥಾವತ್ತಾಗಿ ವ್ಯಕ್ತಪಡಿಸುವ ‘ಸನಾತನ ಪ್ರಭಾತ’ ! ಇ. ಜಗತ್ತಿನಲ್ಲಿ ಘಟಿಸಿರುವ ಯಾವುದೇ ಪ್ರಸಂಗದಲ್ಲಿ ‘ಎಲ್ಲಿ ತಪ್ಪಾಗಿದೆ ? ಅದರಿಂದ ಭವಿಷ್ಯದಲ್ಲಿ ಎಂತಹ ಪರಿಣಾಮವಾಗಲಿಕ್ಕಿದೆ ಹಾಗೂ ಅದನ್ನು ಹೇಗೆ ನಿವಾರಿಸಬೇಕು ?’ ಎಂಬುದರ ಶಿಕ್ಷಣ ನೀಡಿ ಕೃತಿಶೀಲರಾಗಲು ಹುರುಪು ನೀಡುವ ‘ಸನಾತನ ಪ್ರಭಾತ’ ! ಈ. ವರ್ತಮಾನದಲ್ಲಿ ಘಟಿಸುತ್ತಿರುವ ಪ್ರಸಂಗ ಅಥವಾ ಕಾರ್ಯಕ್ರಮಗಳನ್ನು ಅನುಸರಿಸಿ ಹಾಗೂ ಜಾಗೃತಿ ಮೂಡಿಸಿ ‘ಯೋಗ್ಯ ಕೃತಿಯನ್ನು ಕಲಿಸುವ ‘ಸನಾತನ ಪ್ರಭಾತ’ ! ಉ. ಮನೋರಂಜನೆ, ಕ್ರೀಡೆಗಳಿಗಿಂತ ‘ಇಂದಿನ ಕಲಿಯುಗದಲ್ಲಿನ ಆಪತ್ಕಾಲದ ಸ್ಥಿತಿಯಲ್ಲಿ ಘಟಿಸುವ ಪ್ರಸಂಗಗಳಲ್ಲಿ ಏನು ಮಾಡಬಹುದು ?’ ಎನ್ನುವ ವಿಷಯದಲ್ಲಿ ವಾರ್ತೆಗಳನ್ನು ನೀಡುವ ‘ಸನಾತನ ಪ್ರಭಾತ’ ! ಊ. ಕೇವಲ ವಾರ್ತೆಗಳನ್ನು ಮುದ್ರಿಸುವುದಲ್ಲ, ವಾರ್ತೆಗಳನ್ನು ಸಿದ್ಧಪಡಿಸುವ ‘ಸನಾತನ ಪ್ರಭಾತ’ ! : ೨೦೨೩ ರ ಗಣೇಶೋತ್ಸವದ ಸಮಯದಲ್ಲಿ ಖಾಸಗಿ ಟ್ರಾವಲ್ಸ್‌ಗಳು ಪ್ರಯಾಣಿಕರಿಂದ ಸರಕಾರ ನಿರ್ಧರಿಸಿರುವ ಬಸ್ ಬಾಡಿಗೆಗಿಂತ ಅನೇಕ ಪಟ್ಟು ಹೆಚ್ಚು ಬಾಡಿಗೆಯನ್ನು ಹೇರುತ್ತಿದ್ದವು. ಅದರ ವಿರುದ್ಧ ವಾರ್ತೆ ಪ್ರಕಟಿಸಿ ‘ಸನಾತನ ಪ್ರಭಾತ’ ಜನಜಾಗೃತಿ ಮಾಡಿತ್ತು. ಅದರ ಪರಿಣಾಮದಿಂದ ಮಹಾರಾಷ್ಟ್ರ ಸರಕಾರದ ಸಾರಿಗೆ ವಿಭಾಗ ಖಾಸಗಿ ಟ್ರಾವಲ್ಸ್‌ಗಳ ವಿರುದ್ಧ ಕ್ರಮ ತೆಗೆದುಕೊಂಡಿತ್ತು. ಎ. ತತ್ತ್ವನಿಷ್ಠ ‘ಸನಾತನ ಪ್ರಭಾತ’ ! : ಯಾವುದೇ ಪತ್ರಿಕೆ ಎಲ್ಲ ವಿಧದ ವಾಚಕರನ್ನು ಸಮಾಧಾನ ಪಡಿಸಲು ಸಾಧ್ಯವಿಲ್ಲ. ತತ್ತ್ವನಿಷ್ಠೆಯಿಂದ ಸಮಾಜಕ್ಕೆ ಏನು ಇಷ್ಟವಾಗುತ್ತದೆ ಅದಕ್ಕಿಂತ, ಇಂದಿನ ಪರಿಸ್ಥಿತಿಯಲ್ಲಿ ಸಮಾಜಕ್ಕೆ ನೈತಿಕ, ಸಾಮಾಜಿಕ, ಕೌಟುಂಬಿಕ ಹಾಗೂ ಧರ್ಮ ಮತ್ತು ರಾಷ್ಟ್ರದ ಸ್ತರದಲ್ಲಿ ಆವಶ್ಯಕವಾಗಿರುವುದನ್ನೇ ‘ಸನಾತನ ಪ್ರಭಾತ’ ನೀಡುತ್ತದೆ. ಏ. ಸಾಧಕರು, ಸಂತರು, ಭಕ್ತರು, ಧಾರ್ಮಿಕ ಸಂಸ್ಥೆ ಮತ್ತು ಧರ್ಮದರ್ಶಿಗಳೊಂದಿಗೆ ಆತ್ಮೀಯತೆ ಬೆಳೆಸುವ ‘ಸನಾತನ ಪ್ರಭಾತ’ – (ಪೂ.) ಶಿವಾಜಿ ವಟಕರ (ಸನಾತನದ ೧೦೨ ನೇ ಸಂತರು ವಯಸ್ಸು ೭೭ ವರ್ಷ), ಸನಾತನ ಆಶ್ರಮ, ಪನವೇಲ. |