ನುಪುರ್ ಶರ್ಮಾ ಇವರ ಹೇಳಿಕೆಯ ನೆಪದಲ್ಲಿ ರಕ್ತಪಿಪಾಸು ಮತಾಂಧ ಕಟ್ಟರ ಪಂಥೀಯರು ಜನಸಾಮಾನ್ಯರ ಕತ್ತನ್ನು ಸೀಳಿ ಹಾಗೂ ಕತ್ತು ಸೀಳುವ ಬೆದರಿಕೆಯೊಡ್ಡಿ ಒಂದು ರೀತಿಯಲ್ಲಿ ಸಂಪೂರ್ಣ ಭಾರತದ ಭದ್ರತೆಗೇ ಸವಾಲೆಸಗಿದ್ದಾರೆ. ಆದರೂ ಅನೇಕ ಜವಾಬ್ದಾರ ವ್ಯಕ್ತಿಗಳು ಈ ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವುದು ಕಾಣಿಸಲಿಲ್ಲ, ಇದು ಅತ್ಯಂತ ಖೇದಕರ ಹಾಗೂ ಚಿಂತೆಯನ್ನು ಹೆಚ್ಚಿಸುವ ವಿಷಯವಾಗಿದೆ. ಉದಯಪುರದ ಕನ್ಹಯ್ಯಾಲಾಲರ ಹಿಂದೆಯೆ ಅಮರಾವತಿಯಲ್ಲಿ ಔಷಧದ ವ್ಯಾಪಾರಿಯ ಹತ್ಯೆಯಾಯಿತು. ಮತಾಂಧ ಮುಸಲ್ಮಾನರು ಅತ್ಯಂತ ನಿರ್ದಯವಾಗಿ ಹತ್ಯೆಗೊಳಿಸುವ ಕೃತ್ಯದ ವಿಡಿಯೋ ಮಾಡಿದರು. ಅದನ್ನು ಸಂಪೂರ್ಣ ದೇಶವು ವಾರ್ತಾವಾಹಿನಿಗಳಿಂದ ನೋಡಿತು. ಅನಂತರ ಆರಂಭವಾದ ಬೆದರಿಕೆಯ ಪ್ರಕರಣಗಳೂ ವಾರ್ತಾವಾಹಿನಿಗಳಲ್ಲಿ ಬಹಿರಂಗವಾಗಿ ಕಾಣಿಸಿದವು. ನಮ್ಮದೆ ದೇಶದ ಒಂದು ಮುಷ್ಟಿಯಷ್ಟು ನಾಗರಿಕರು ಇನ್ನೊಂದು ದೊಡ್ಡ ಸಮೂಹವನ್ನು ಹೇಗೆ ಭಯಭೀತರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ, ಎಂಬುದನ್ನು ಇಡೀ ದೇಶ ಕಣ್ಣುಗಳನ್ನು ಅಗಲಿಸಿ ನೋಡುತ್ತಿತ್ತು. ಅನಂತರವೂ ಆ ಮತಾಂಧರಿಗೆ ಭಯಹುಟ್ಟಿಸುವ ಯಾವುದೇ ಕೃತಿಯು ಅಡಳಿತದ ಸ್ತರದಲ್ಲಿ ಘಟಿಸಿಲ್ಲ. ಬಂಧನ ಮತ್ತು ಖಟ್ಲೆಗಳ ಪರಿಣಾಮ ಏನೆಂಬುದು ಜನರಿಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದಲೆ ಅಷ್ಟರಿಂದ ಸಮಾಧಾನಪಡದ ಜನರಲ್ಲಿ ಆಂತರಿಕ ಕ್ರೋಧ ನಿರ್ಮಾಣವಾಗಿದೆ.
೧. ಅಲ್ಪಸಂಖ್ಯಾತರ ಓಲೈಕೆಗಾಗಿ ಮುಂಚೂಣಿಯಲ್ಲಿರುವ ತಥಾಕಥಿತ ವಿಚಾರವಾದಿಗಳು ಹಿಂದೂಗಳ ರಕ್ಷಣೆಯ ಬಗ್ಗೆ ತುಟಿ ಬಿಚ್ಚುವುದಿಲ್ಲ
‘ಭಾರತದಲ್ಲಿ ಮುಸಲ್ಮಾನ ಸಮೂಹ ಸುರಕ್ಷಿತವಾಗಿಲ್ಲ’, ಎಂದು ವಿಶ್ವದಾದ್ಯಂತ ಡಂಗುರ ಸಾರುವ ಅಮೇರಿಕಾದ ಸಮೀಕ್ಷಾ ಸಂಸ್ಥೆಗಳಿಗೆ ಭಾರತದ ಈ ಕುತ್ತಿಗೆ ಕೊಯ್ಯುವ ಸಮುದಾಯದವರು ಕಾಣಿಸಲಿಕ್ಕಿಲ್ಲ, ಎಂಬುದರಲ್ಲಿ ಸಂಶಯವೆ ಇಲ್ಲ. ‘ಹಿಂದೂಗಳ ನರ ಸಂಹಾರವಾಗಿದೆ’ ಎಂಬುದನ್ನು ನೇರವಾಗಿ ನಿರಾಕರಿಸುವ ತಥಾ ಕಥಿತ ವಿಚಾರವಾದಿಗಳು ಈಗ ‘ಕುತ್ತಿಗೆ ಕೊಯ್ಯುವವರನ್ನೂ ಅಪ ರಾಧಿಗಳೆಂದು ಒಪ್ಪಲು ಸಿದ್ಧರಿಲ್ಲ’, ಎಂಬುದು ಅದಕ್ಕಿಂತಲೂ ಭಯಾನಕ ಒಮ್ಮುಖ ನೀತಿಯಾಗಿದೆ. ಇದು ಇವರ ಎಂತಹ ಸರ್ವ ಧರ್ಮಸಮಭಾವವಾಗಿದೆ, ಎಂಬುದು ಅನೇಕರಿಗೆ ಅರ್ಥವಾಗಲೆ ಇಲ್ಲ. ‘೧೦೦ ಕೊಲ್ಲಬೇಕು ಹಾಗೂ ಒಂದು ಎಂದು ಎಣಿಸಬೇಕು’, ಎನ್ನುವ ಅರ್ಹತೆಯಿರುವ ಇಂತಹ ತಥಾಕಥಿತ ವಿಚಾರವಾದಿಗಳು ಪ್ರತಿ ಮೂಲೆಯಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತಾರೆ. ‘ಮತಾಂಧ ಪ್ರವೃತ್ತಿಯಿಂದ ಹಿಂದೂಗಳಿಗೆ ಸಂರಕ್ಷಣೆಯನ್ನು ನೀಡಿ’, ಎಂದು ಹೇಳಲು ಅವರಲ್ಲಿ ಒಬ್ಬರೂ ಮುಂದೆ ಬರುವುದಿಲ್ಲ. ಹೆಚ್ಚುಕಡಿಮೆ ಅವರೆಲ್ಲರೂ ಜನ್ಮಹಿಂದೂಗಳಾಗಿದ್ದಾರೆ, ಎಂಬುದು ಅದಕ್ಕಿಂತಲೂ ಲಜ್ಜಾಸ್ಪದ ವಿಷಯವಾಗಿದೆ ! ಮತಪೆಟ್ಟಿಗೆಯ ಸ್ವಾರ್ಥಕ್ಕಾಗಿ ಕೇವಲ ಒಂದೇ ವಿಶಿಷ್ಟ ಸಮೂಹದ ಬಗ್ಗೆ ಚಿಂತಿಸುತ್ತಾ ಅವರ ದುರ್ಗುಣಗಳನ್ನು ನಿರಂತರ ಮುಚ್ಚಿಡಲಾಗಿದೆ, ಎಂಬುದು ಈಗ ಜನರಿಗೆ ತಿಳಿದಿದೆ.
೨. ವಿಶಿಷ್ಟ ಸಮೂಹಕ್ಕೆ ಎಚ್ಚರಿಕೆ ನೀಡುವ ಮೌಲ್ವಿಗಳೇ ಕುತ್ತಿಗೆಯನ್ನು ಸೀಳುವ ಘಟನೆಗಳಿಗೆ ಹೊಣೆಯಾಗಿದ್ದಾರೆ ಎಂಬುದು ಕಾಣಿಸದಿರುವುದು ಆಶ್ಚರ್ಯಕರವಾಗಿದೆ !
‘ನುಪುರ್ ಶರ್ಮಾ ಇವರ ಹೇಳಿಕೆಯೆ ಕುತ್ತಿಗೆಯನ್ನು ಸೀಳುವ ಘಟನೆಗೆ ಹೊಣೆಯಾಗಿದೆ, ಎಂಬ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಮಾಡಿದ ಟಿಪ್ಪಣಿಯಂತೂ ಅದರ ಮೇರೆ ಮೀರಿತು’, ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನಿದೆ ? ‘ಭಾರತದ ಮೇಲೆ ಆಕ್ರಮಣ ಮಾಡಲು ಬಂದಿರುವ ಮಹಮ್ಮದ ಶಾಹ ಅಬ್ದಾಲಿಯ ಅಥವಾ ಗಝನಿಯ ಶೈಲಿಯಲ್ಲಿ ಕೆಲವು ಮೌಲ್ವಿಗಳು (ಇಸ್ಲಾಮ್‌ನ ಧಾರ್ಮಿಕ ನಾಯಕರು) ಮತ್ತು ನಾಯಕರು ಭಾರತದ ವಿಶಿಷ್ಟ ಸಮೂಹಕ್ಕೆ ಪ್ರಚೋಧನೆಯನ್ನು ನೀಡುತ್ತಾ ಮತಾಂಧತೆಯ ಕಿಡಿ ಹೊತ್ತಿಸಿದರು, ಆ ಮೌಲ್ವಿಗಳು ಕುತ್ತಿಗೆ ಸೀಳುವ ಘಟನೆಗಳಿಗೆ ಹೊಣೆಯಾಗಿರುವುದು ಇವರಿಗೇಕೆ ಕಾಣಿಸಲಿಲ್ಲ ?’, ಎಂಬುದು ಈ ದೇಶದ ಜನರಲ್ಲಿ ಮೂಡಿದ ನಿಜವಾದ ಪ್ರಶ್ನೆಯಾಗಿದೆ. ಒಂದು ವಿಷಯ ಅನುಕೂಲವಾಯಿತು ಅದೆಂದರೆ, ೧೫ ನಿವೃತ್ತ ನ್ಯಾಯಾಧೀಶರು, ೭೭ ನಿವೃತ್ತ ಆಡಳಿತಾಧಿಕಾರಿಗಳು ಹಾಗೂ ೨೫ ನಿವೃತ್ತ ಸೈನ್ಯಾಧಿಕಾರಿಗಳು ಲಿಖಿತ ಪತ್ರದ ಮೂಲಕ ನಾಗರಿಕರ ಭಾವನೆಯನ್ನು ನ್ಯಾಯಾಲಯಕ್ಕೆ ಕಳುಹಿಸಿದರು. ಹಿಂದೂ ಸಮೂಹವನ್ನು ದುರ್ಲಕ್ಷಿಸಿ ಅವರ ಭಾವನೆಯನ್ನು ಶಾಶ್ವತವಾಗಿ ಹೀನವೆಂದು ಪರಿಗಣಿಸುವ ಇಂತಹ ಏಕಾಂಗಿ ವಿಚಾರಸರಣಿಗೆ ದೇಶಾದ್ಯಂತದ ಇಷ್ಟು ಬುದ್ಧಿವಂತರು ಒಟ್ಟಾಗಿ ಪ್ರತ್ಯುತ್ತರ ನೀಡುವುದು ಬಹುಶಃ ಮೊದಲಬಾರಿಗೆ ಘಟಿಸಿರಬಹುದು.
೩. ಕಟ್ಟರಪಂಥಿಯರಿಗೆ ಯಾವುದೇ ನಿಲುವಿಲ್ಲ, ಎಂಬ ವಾಸ್ತವವನ್ನು ಸ್ವೀಕರಿಸಬೇಕಾಗಿದೆ !
ಅಮರಾವತಿಯ ಘಟನೆಯ ಸಂದರ್ಭವು ಆಘಾತಕಾರಿ ಯಾಗಿದೆ. ಹಿಂದೂ ಔಷಧದ ವ್ಯಾಪಾರಿಯು ಧರ್ಮಭೇದವನ್ನು ಪಾಲಿಸದೆ ನಿಜವಾದ ಭಾವನೆಯಿಂದ ಹೆಜ್ಜೆ ಹೆಜ್ಜೆಗೂ ಸಹಕಾರಿ ಯಾಗಿದ್ದರು. ಆದರೂ ಕೇವಲ ನುಪುರ್ ಶರ್ಮಾ ಇವರನ್ನು ಬೆಂಬಲಿಸಿದರೆಂದು, ಅವರ ಮುಸಲ್ಮಾನ ಮಿತ್ರನು ಕ್ರೌರ್ಯದಿಂದ ಕತ್ತನ್ನು ಸೀಳಿದನು. ಈ ಘಟನೆಯು ಪ್ರತಿಯೊಬ್ಬರ ಮನಸ್ಸಿನಲ್ಲಿ ನಡುಕವನ್ನುಂಟು ಮಾಡಿತು. ಈ ಹತ್ಯೆಯು ಮಾನವತೆಗೆ ಕಳಂಕವನ್ನುಂಟು ಮಾಡುವುದಾಗಿದೆ. ‘ಧಾರ್ಮಿಕ ಸೌಹಾರ್ದತೆಯ ಅಂಧಶ್ರದ್ಧೆಯನ್ನು ಎಷ್ಟು ಪಾಲಿಸಬೇಕು ? ಎಂಬುದರ ಅರಿವನ್ನು ಮೂಡಿಸುವ ಘಟನೆ ಇದಾಗಿದೆ’, ಎಂದು ಪರ್ಯಾಯವಿಲ್ಲದೇ ಹೇಳಬೇಕಾಗುತ್ತದೆ; ಏಕೆಂದರೆ ಒಂದು ರೀತಿಯಲ್ಲಿ ಧಾರ್ಮಿಕ ಸೌಹಾರ್ದತೆಯ ಕತ್ತನ್ನು ಸೀಳುವ ಈ ಪ್ರವೃತ್ತಿಯ ಮೇಲೆಯೆ ಈ ಘಟನೆಯು ಪ್ರಕಾಶ ಚೆಲ್ಲಿದೆ. ಅವರೆಲ್ಲ ಹಾಗಿರದಿದ್ದರೂ ಮೂಲಭೂತವಾದಿಗಳಿಗೆ ಯಾವುದೇ ನಿಲುವಿಲ್ಲ, ಎಂಬ ವಾಸ್ತವಿಕತೆಯನ್ನು ಈ ಘಟನೆಗಳು ಎತ್ತಿಹಿಡಿದಿವೆ.
೪. ರಕ್ತಪಿಪಾಸು ಮತಾಂಧತೆಯ ಹೊಸ ಆವೃತ್ತಿ ತಯಾರಾಗಿ ಮುಂದೆ ಬಂದಿದೆ
ಹಳ್ಳಿಯ ಮೂಲೆಗಳಲ್ಲಿಯೆ ಇರಲಿ ಅಥವಾ ಪ್ರತಿದಿನ ಜೀವನದಲ್ಲಿ ಭೇಟಿಯಾಗುವ ವ್ಯಕ್ತಿಯ ರೂಪದಲ್ಲಿರಲಿ, ಮತಾಂಧರು ನಮ್ಮ ಸುತ್ತಮುತ್ತಲೂ ಇರಬಹುದು. ಅದೇ ರೀತಿ ಅವರ ಅನೇಕ ರೂಪಗಳು ಹಿಂದಿನಿಂದಲೂ ನಮ್ಮ ಮುಂದಿವೆ. ನಿನ್ನೆಯ ವರೆಗೆ ಲವ್ ಜಿಹಾದ್ ರೂಪದಲ್ಲಿ, ಹಿಂದೂಗಳ ಮೆರವಣಿಗೆಯ ಮೇಲೆ ಆಕ್ಷೇಪವೆತ್ತಿ ಕಲ್ಲು ತೂರಾಟ ಮಾಡುವ ರೂಪದಲ್ಲಿ ಅವರು ಕಾಣಿಸುತ್ತಿದ್ದರು. ಇಂದು ರಕ್ತಪಿಪಾಸು ಮತಾಂಧತೆಯ ಹೊಸ ಆವೃತ್ತಿ ಎಂದು ಮುಂದೆ ಬಂದಿದೆ, ಇಷ್ಟೇ ಅದರಲ್ಲಿನ ವ್ಯತ್ಯಾಸ ! ದೇಶ ಮತ್ತು ರಾಜ್ಯ ಸ್ತರಗಳ ಆಡಳಿತ ವ್ಯವಸ್ಥೆಗೆ ಈ ಮತಾಂಧತೆಯನ್ನು ಎಂದಿಗೂ ಮುಗಿಸಲು ಸಾಧ್ಯವಾಗಿಲ್ಲ, ಹಾಗಾದರೆ ಅನಾವಶ್ಯಕವಾಗಿ ನಿರಂತರ ನಮ್ಮ ರಕ್ತವನ್ನು ಹರಿಸಿ ನಾವೇ ಅದರ ಬೆಲೆಯನ್ನೇಕೆ ತೆರಬೇಕು ? ಎಂಬ ಪ್ರಶ್ನೆ ಈಗ ಕೆಲವರಲ್ಲಿ ಏಳುತ್ತಿದೆ.
೫. ಭಾರತದಲ್ಲಿನ ಹಿಂದೂಗಳು ರಕ್ತಪಿಪಾಸು ಮತಾಂಧತೆಯೊಂದಿಗೆ ಹೇಗೆ ಸುರಕ್ಷಿತವಾಗಿರಬಹುದು ?
ನಮ್ಮ ಧಾರ್ಮಿಕ ಭಾವನೆಗಳನ್ನು ನೋಯಿಸುವ ಹಾಗೂ ಅವಮಾನಿಸುವುದರ ವಿರುದ್ಧ ಮುಕ್ತವಾಗಿ ಕೆಲವು ಅಭಿಪ್ರಾಯವನ್ನು ಮಂಡಿಸಿದರೆಂದು, ನೇರವಾಗಿ ಕತ್ತನ್ನು ಸೀಳುವ ರಕ್ತಪಿಪಾಸು ಮತಾಂಧರ ಜೊತೆಗೆ ಇನ್ನು ಮುಂದೆ ಭಾರತದ ಹಿಂದೂಗಳು ಹೇಗೆ ಸುರಕ್ಷಿತರಾಗಿರಬಲ್ಲರು ? ಎಂಬ ಪ್ರಶ್ನೆಯೂ ಭವಿಷ್ಯದಲ್ಲಿ ಕಾಡಬಹುದು. ಜನರಲ್ಲಿ ಮೂಡುವ ಚಿಂತೆಯೂ ಇದೇ ತರಹದ್ದಾಗಿದೆ. ಇಂದು ಏನೆಲ್ಲ ಘಟಿಸುತ್ತದೆಯೊ, ಅದು ಮುಂದೆಯೂ ನಡೆಯುತ್ತಿದ್ದರೆ, ಈ ಭಾವನೆಯು ಹೆಚ್ಚಾಗುವುದು ಖಚಿತವಾಗಿದೆ ಹಾಗೂ ಇದರಿಂದಲೆ ಒಂದು ದಿನ ಗೃಹಯುದ್ಧ ಭುಗಿಲೇಳುವ ಅಪಾಯ ಉದ್ಭವಿಸಬಹುದು. ಪ್ರತಿದಿನ ವಾರ್ತಾವಾಹಿನಿಗಳಲ್ಲಿ ನೋಡಲು ಹಾಗೂ ಕೇಳಲು ಸಿಗುವ ರಾಷ್ಟ್ರದ್ರೋಹಿ ಹೇಳಿಕೆಗಳು ಮತ್ತು ಹಿಂದೂದ್ವೇಷಿ ಭಾಷಣಗಳು ಬಹಿರಂಗವಾಗಿ ಭಾರತೀಯರ ವಿರುದ್ಧ ವಿಶಿಷ್ಟ ಸಮೂಹವನ್ನು ಉತ್ತೇಜಿಸುವುದು ಕಾಣಿಸುತ್ತದೆ. ಆದ್ದರಿಂದ ಇನ್ನೇನಾಗಬಹುದು ? ಆ ಮತಾಂಧ ಪ್ರವೃತ್ತಿಯನ್ನು ಹೆಡೆಮುರಿ ಕಟ್ಟುವ ಬದಲು ಧಾರ್ಮಿಕ ಸೌಹಾರ್ದತೆಯನ್ನು ಹೇರಿ ಹಿಂದೂಗಳನ್ನು ನಪುಂಸಕ ಮಾಡುವುದರಲ್ಲಿ ಧನ್ಯರೆನಿಸಿಕೊಳ್ಳುವ ಎಲ್ಲ ವ್ಯವಸ್ಥೆಗಳೂ ಭವಿಷ್ಯದಲ್ಲಿ ಆ ಕಾರಣದಿಂದ ಉದ್ಭವಿಸುವ ಪರಿಸ್ಥಿತಿಗೆ ಕಾರಣವಾಗಬಹುದು, ಎಂಬುದನ್ನು ಗಮನಿಸಬೇಕಾಗಿದೆ.
೬. ಮತಾಂಧರಲ್ಲಿ ಕ್ರೌರ್ಯ ನಿರ್ಮಾಣ ಮಾಡುವ ಪ್ರವೃತ್ತಿಗಳನ್ನು ಮೆಟ್ಟಿ ಹಾಕುವ ಕಾರ್ಯಕ್ರಮವನ್ನು ಪೊಲೀಸ್ ವ್ಯವಸ್ಥೆಗೆ ಕೈಗೆತ್ತಿಕೊಳ್ಳಬೇಕೆಂದು ಅನಿಸಿದರೆ ಅದೇ ಸುದಿನ !
ಸಂವಿಧಾನದಲ್ಲಿನ ಕಾನೂನುಗಳು ಹಿಂದೂ ಸಮೂಹ ಮತ್ತು ಅವರ ಹಕ್ಕನ್ನು ಸಂgಕ್ಷಿಸಲು ಸಂಪೂರ್ಣ ಸಕ್ಷಮವಿಲ್ಲವೆಂದು ಅನೇಕ ವರ್ಷಗಳಿಂದ ಅನುಭವವಾಗುತ್ತಿದೆ. ಅವುಗಳ ನೂರಾರು ಉದಾಹರಣೆಗಳದ್ದು ಅದರ ಬಗ್ಗೆ ಜನರ ಮನಸ್ಸಿನಲ್ಲಿ ಸಂತಾಪ ವಿದೆ; ಏಕೆಂದರೆ ಜನರಿಗೆ ತೀವ್ರತೆಯಿಂದ ಅನುಭವಕ್ಕೆ ಬರುವ ವಿಚಾರವೆಂದರೆ, ಹಿಂದುತ್ವದ ರಕ್ಷಣೆ, ಭಾವನೆ, ಸನ್ಮಾನ, ಸ್ವಾಭಿಮಾನ ಹಾಗೂ ಶ್ರದ್ಧೆಯ ಪ್ರಶ್ನೆ ಉದ್ಭವಿಸುವವರು ಏನೇ ಘಟಿಸಲಿ, ಆಯಾಯ ಪ್ರಸಂಗದಲ್ಲಿ ಹಿಂದುತ್ವವನ್ನು ಅಥವಾ ಹಿಂದೂ ಪ್ರೇಮಿಗಳನ್ನೆ ಹತ್ತಿಕ್ಕುವುದು, ಇದು ಹಿಂದಿನಿಂದಲೂ ನಡೆದು ಬಂದಿದೆ. ಮತಾಂಧ ಪ್ರವೃತ್ತಿಯನ್ನು ಮಟ್ಟ ಹಾಕುವ ಬದಲು ಹಿಂದೂಪ್ರೇಮಿ ಹಾಗೂ ಹಿಂದುತ್ವನಿಷ್ಠರನ್ನೆ ಬಡಿಯುವ ಕಾನೂನು-ವ್ಯವಸ್ಥೆಯನ್ನು ಹುಡುಕಲಾಗುತ್ತದೆ. ತಪ್ಪು ಹಾಗೂ ಭೀಕರ ಪದ್ಧತಿಯಲ್ಲಿ ಹಿಂದೂ ಧರ್ಮ, ರೂಢಿ ಮತ್ತು ದೇವಿದೇವತೆಗಳ ಸೂಕ್ಷ್ಮ ವಿಚಾರವನ್ನು ಮಂಡಿಸುವವರನ್ನು ಯೋಗ್ಯರೆಂದು ನಿರ್ಧರಿಸಲಾಗುತ್ತದೆ. ಇಂತಹ ನಿರರ್ಥಕ ಸರಕಾರಿ ವ್ಯವಸ್ಥೆಯು ಅನೇಕ ವರ್ಷಗಳಿಂದ ನಡೆಯುತ್ತಾ ಬಂದಿದೆ. ಸರಕಾರಿ ವ್ಯವಸ್ಥೆಯ ಇಂತಹ ಮಲಿನ ದೃಷ್ಟಿಕೋನವನ್ನು ಬದಲಾಯಿಸದಿದ್ದರೆ, ಮುಂದೆ ಈ ಕತ್ತುಕೊಯ್ಯುವವರು ಮತ್ತು ಅವರನ್ನು ಎದುರಿಸಲು ಪ್ರಯತ್ನಿಸುವವರು ಹೀಗೆಯೆ ಹೆಚ್ಚುತ್ತಾ ಹೋಗುವರೇ ? ಎಂಬ ಪ್ರಶ್ನೆ ತನ್ನಿಂತಾನೇ ಮುಂದೆ ಬರುತ್ತದೆ. ಆದ್ದರಿಂದ ಪೊಲೀಸ್ ವ್ಯವಸ್ಥೆಯಿಂದ ‘ಪ್ರತಿ ಜಿಲ್ಲೆಯಲ್ಲಿ ಶೋಧ ಕಾರ್ಯ ಹಮ್ಮಿಕೊಂಡು ಮತಾಂಧರಲ್ಲಿ ಕ್ರೌರ್ಯವನ್ನು ನಿರ್ಮಾಣ ಮಾಡುವ ಈ ಪ್ರವೃತ್ತಿಯನ್ನು ಮಟ್ಟ ಹಾಕಬೇಕು’, ಎಂಬ ಒಂದಂಶದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ಅನಿಸಿದರೆ, ಅದೇ ಸುದಿನವೆಂದು ಹೇಳಬಹುದು ! – ಶ್ರೀ. ಯೋಗೇಂದ್ರ ಪ್ರಭಾಕರ ಜೋಶಿ, ನಂದೂರಬಾರ. (೬.೭.೨೦೨೨)