ಶ್ರೀಲಂಕಾದಲ್ಲಿ ಸರಕಾರದ ವಿರುದ್ಧ ಜನರುಆರಂಭಿಸಿದತಾಂಡವ
ಜನರ ಹಣದ ಲೂಟಿ, ಐಶಾರಾಮಿ ಜೀವನ, ಎಲ್ಲ ಭೌತಿಕ ಸುಖಸೌಲಭ್ಯಗಳ ಮನಸಾರೆ ಆನಂದ ಪಡೆಯುವುದು, ಮುಂದಿನ ೨೫ ಪೀಳಿಗೆಗಳಿಗೆ ಬೇಕಾಗುವಷ್ಟು ಐಶ್ವರ್ಯದ ವ್ಯವಸ್ಥೆ, ತಮ್ಮ ಎಲ್ಲ ಸಂಬಂಧಿಕರಿಗೆ ಸರಕಾರಿ ಆರ್ಥಿಕ ಲಾಭ, ರಾಜಕಾರಣದಿಂದ ಸಿಗುವ ಹಣದಿಂದ ಗೂಂಡಾಗಳ ಪೋಷಣೆಯನ್ನು ಮಾಡುವುದು ಮತ್ತು ಚುನಾವಣೆಯಲ್ಲಿ ಅವರನ್ನು ದುರುಪಯೋಗಿಸಿ ಅಧಿಕಾರವನ್ನು ಪಡೆಯುವುದು, ಇದು ರಾಜಕಾರಣಿಗಳಿಂದ ಆಗುತ್ತಿರುತ್ತದೆ. ಇದೆಲ್ಲವನ್ನೂ ಮಾಡುತ್ತಿರುವಾಗ ಮತದಾರರನ್ನು ಹಗುರವಾಗಿ ಪರಿಗಣಿಸುವುದು, ಜನರನ್ನು ತಮಗೆ ಬೇಕಾದ ಹಾಗೆ ದುಡಿಸಿಕೊಳ್ಳುವುದು ಮತ್ತು ಜನರ ಮೂಲಭೂತ ಅವಶ್ಯಕತೆಗಳ ಕಡೆಗೆ ದುರ್ಲಕ್ಷ ಮಾಡುವುದು ಇತ್ಯಾದಿ ನಡೆಯುತ್ತದೆ. ಅದರ ಪರಿಣಾಮದಿಂದ ಶ್ರೀಲಂಕಾ ಜನರ ಸಂಯಮದ ಕಟ್ಟೆ ಒಡೆಯಿತು. ಹೊಟ್ಟೆಯಲ್ಲಿ ಬೆಂಕಿಬಿದ್ದಾಗ ಮನುಷ್ಯ ರಾಕ್ಷಸನಾಗುತ್ತಾನೆ. ಇದು ಅವನ ದೋಷವಾಗಿಲ್ಲ.
ಶ್ರೀಲಂಕಾದ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳ ನಿವಾಸಸ್ಥಾನಗಳನ್ನು ವಶಪಡಿಸಿಕೊಂಡ ಉದ್ರಿಕ್ತ ಜನರು
ಶ್ರೀಲಂಕಾದ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿ ಇವರು ಕೇವಲ ಮತ್ತು ಕೇವಲ ತಮ್ಮ ಕುಟುಂಬದವರಿಗಾಗಿ ದೇಶವನ್ನು ಲೂಟಿಮಾಡಿದರು. ಇದರಿಂದ ದೇಶದ ಆರ್ಥಿಕ ನಿಯೋಜನೆಯು ಬುಡಮೇಲಾಯಿತು. ಅರಾಜಕತೆ ಸೃಷ್ಟಿಯಾಯಿತು. ಲಕ್ಷಗಟ್ಟಲೆ ಜನರು ಭಯಂಕರರೂಪತಾಳಿ ಬೀದಿಗಿಳಿದರು. ಈ ಉದ್ರೇಕ ಎಷ್ಟಿತೆಂದರೆ, ದೇಶದ ಪ್ರಮುಖ ರರಾಜವೈಭವೋಪೇತ ನಿವಾಸಸ್ಥಾನಗಳ ಮೇಲೆಯೆ ಜನರು ಆಕ್ರಮಣ ಮಾಡಿದರು. ಶ್ರೀಲಂಕಾದ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿ ಇವರು ಕೇವಲ ಮತ್ತು ಕೇವಲ ತಮ್ಮ ಕುಟುಂಬದವರಿಗಾಗಿ ದೇಶ ವನ್ನು ಲೂಟಿ ಮಾಡಿದರು. ಇದರಿಂದ ದೇಶದ ಆರ್ಥಿಕ ನಿಯೋಜನೆಯು ಬುಡಮೇಲಾಯಿತು. ಅರಾಜಕತೆ ಸೃಷ್ಟಿ ಯಾಯಿತು. ಲಕ್ಷಗಟ್ಟಲೆ ಜನರು ಭಯಂಕರ ರೂಪತಾಳಿ ಬೀದಿಗಿಳಿದರು. ಈ ಉದ್ರೇಕ ಎಷ್ಟಿತೆಂದರೆ, ದೇಶದ ಪ್ರಮುಖರ ರಾಜ ವೈಭವೋಪೇತ ನಿವಾಸಸ್ಥಾನಗಳ ಮೇಲೆಯೆ ಜನರು ಆಕ್ರಮಣ ಮಾಡಿದರು. ಶ್ರೀಲಂಕಾದ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳ ನಿವಾಸ ಸ್ಥಾನಗಳನ್ನು ಜನರು ತಮ್ಮ ವಶಕ್ಕೆ ತೆಗೆದುಕೊಂಡರು. ಆಗ ಅವರಿಬ್ಬರೂ (ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿ) ನಿವಾಸಸ್ಥಾನದ ಗುಪ್ತ ಮಾರ್ಗದಿಂದ ತಮ್ಮ ಜೀವವನ್ನು ಉಳಿಸಿಕೊಳ್ಳಲು ಪಲಾಯನಗೈದರು.
ಜನರು ರಾಷ್ಟ್ರಪತಿಗಳ ನಿವಾಸಸ್ಥಾನದೊಳಗೆ ನುಗ್ಗಿ ಅದನ್ನು ವಶಪಡಿಸಿಕೊಂಡರು ಮತ್ತು ಈ ನೇತಾರರು ಅನುಭವಿಸುತ್ತಿದ್ದ ಭೌತಿಕ ಸುಖವನ್ನು ಈ ಜನರು ಕೆಲವು ಕ್ಷಣವಾದರೂ ಅನುಭವಿಸುತ್ತಿದ್ದಾರೆ. ಕೆಲವರು ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಿ ನಿರ್ಮಿಸಿದ ಜಿಮ ಅನ್ನು (Gim) ಉಪಯೋಗಿಸಿ ಆನಂದವನ್ನು ಪಡುತ್ತಿದ್ದಾರೆ, ಕೆಲವರು ಈಜುಗೊಳದ ಆನಂದ, ಕೆಲವರು ರಾಷ್ಟ್ರಪತಿಗಳ ಶಯನಗೃಹದ ಅನುಭವವನ್ನು ಪಡೆಯುತ್ತಿದ್ದಾರೆ. ಲಕ್ಷಗಟ್ಟಲೆ ಸಂಖ್ಯೆಯಲ್ಲಿದ್ದ ಶ್ರೀಲಂಕಾದ ಆಕ್ರಮಕ ಜನರನ್ನು ನಿಯಂತ್ರಿಸುವುದು ಪೊಲೀಸರು ಮತ್ತು ಸೈನ್ಯಕ್ಕೂ ಸಾಧ್ಯವಾಗಿಲ್ಲ. ಇಷ್ಟು ಮಾತ್ರವಲ್ಲ, ಜನರು ಪ್ರಧಾನಂತ್ರಿಗಳ ನಿವಾಸಕ್ಕೆ ಬೆಂಕಿಯನ್ನೂ ಹಚ್ಚಿದ್ದಾರೆ.
ಶ್ರೀಲಂಕೆಯ ಜನರು ಮಾಡಿದ ಉದ್ರೇಕದಿಂದ ಎಲ್ಲೆಡೆಯ ಆಡಳಿತಗಾರರು ಕಲಿಯಬೇಕಾದ ಪಾಠ !
ಜನರು ಇಷ್ಟು ಆಕ್ರಮಣಕಾರಿಯಾದರು ? ಪ್ರಧಾನಮಂತ್ರಿಗಳ ನಿವಾಸಸ್ಥಾನವನ್ನು ವಶಪಡಿಸಿಕೊಂಡು ಆಂದೋಲನಕಾರರು, ಅಲ್ಲಿ ‘ಪ್ರಧಾನಮಂತ್ರಿಗಳ ನಿವಾಸಸ್ಥಾನ ಸಾಮಾನ್ಯ ಜನರಿಗಾಗಿ ತೆರೆಯಲಾಗಿದೆ’ ಎಂಬ ಫಲಕವನ್ನು ಹಾಕಿದ್ದಾರೆ, ಜನರ ಹಣದಿಂದ ಮೋಜು-ಮಜಾ ಮಾಡುತ್ತಾ ಅವರನ್ನು ಭಿಕ್ಷಾಟನೆಗೆ ತಳ್ಳಿದ ಸರಕಾರ ಮತ್ತು ಅದರ ಆಡಳಿಗಾರರು ಸದಾ ಕಾಲ ಜನರನ್ನು ಮೋಸಗೊಳಿಸಲು ಸಾಧ್ಯವಿಲ್ಲ, ಎಂಬುದನ್ನು ಗಮನದಲ್ಲಿಡಬೇಕು. ಎಲ್ಲದಕ್ಕೂ ಸಮಯ ಬರಬೇಕಾಗುತ್ತದೆ. ಈ ಘಟನೆಯು ಸಂಪೂರ್ಣ ಜಗತ್ತಿಗೆ ಪಾಠ ಕಲಿಸಿದೆ. ಅಧಿಕಾರದ ಅಮಲಿನಲ್ಲಿ ಜನಸಾಮಾನ್ಯರ ಸಮಸ್ಯೆಗಳ ಕಡೆಗೆ ದುರ್ಲಕ್ಷ ಮಾಡಿದರೆ, ನಿಮ್ಮನ್ನು ತಲೆಯ ಮೇಲೆ ಹೊತ್ತುಕೊಳ್ಳುವ ಅದೇ ಜನರು ನಿಮ್ಮ ಚಟ್ಟ ಕಟ್ಟಲು ಹಿಂದೆ ಮುಂದೆ ನೋಡಲಾರರು. ಶ್ರೀಲಂಕಾದ ಈ ಇಬ್ಬರೂ ನೇತಾರರು ಮತ್ತು ಅವರ ಕುಟುಂಬದವರು ಸುಖ ವಿಲಾಸದಲ್ಲಿ ಮೋಜುಮಜಾ ಮಾಡುತ್ತಿದ್ದರು. ಅವರು ಸರಕಾರದ ಹಣವನ್ನು ಲೂಟಿ ಮಾಡಿ ಸಂಬಂಧಿಕರಿಗೆ ಲಾಭ ಮಾಡಿಕೊಡುತ್ತಿದ್ದರು. ಕೊನೆಗೆ ಅಂತ್ಯವಾಯಿತು ಮತ್ತು ಸರಕಾರಿ ನಿವಾಸಸ್ಥಾನಗಳ ಮೇಲೆ ಜನರು ಉಗ್ರರೂಪವನ್ನು ಧಾರಣೆ ಮಾಡಿ ಅವುಗಳನ್ನು ವಶಪಡಿಸಿಕೊಂಡರು. ಸರಕಾರಿ ಸಿಬ್ಬಂದಿಗಳೇ, ಜಾಗೃತರಾಗಿರಿ ! ಸಂಯಮ ದಿಂದಿರಿ. ನೀವು ಜನರ ಹಣದಿಂದ ಮೋಜುಮಜಾ ಮಾಡುತ್ತಿದ್ದೀರಿ. ಜನರನ್ನು ಯಾವಾಗಲೂ ಮೂರ್ಖರಾಗಿ ಮಾಡಲು ಸಾಧ್ಯವಿಲ್ಲ. – ವಕೀಲ ನಕುಲ ಪಾರ್ಸೆಕರ್, ಸಾವಂತವಾಡಿ, ಸಿಂಧುದುರ್ಗ (ಆಧಾರ : ಫೇಸ್‌ಬುಕ್)