ಹಿಂದೂಗಳು ವಿಭಜನೆ ಕಾಲದ ಸತ್ಯ ಇತಿಹಾಸವನ್ನು ಅರ್ಥಮಾಡಿಕೊಂಡು ಆತ್ಮಾವಲೋಕನ ಮಾಡಬೇಕು ! – ನ್ಯಾಯವಾದಿ ಸತೀಶ ದೇಶಪಾಂಡೆ

ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ವಿಶೇಷ ಸಂವಾದ : ‘ಭಾರತ ವಿಭಜನೆಯ ಕರಾಳ ಇತಿಹಾಸ !’

ನ್ಯಾಯವಾದಿ ಸತೀಶ ದೇಶಪಾಂಡೆ

ಭಾರತದ ವಿಭಜನೆಯ ಸಮಯದಲ್ಲಿ ಹಿಂದೂ ಮತ್ತು ಸಿಕ್ಖ್‌ರನ್ನು ಕೊಲ್ಲಲಾಯಿತು. ಹಿಂದೂ ಮತ್ತು ಸಿಕ್ಖ್ ಮಹಿಳೆಯರು, ಹುಡುಗಿಯರ ಮೇಲೆ ಭೀಕರ ಅತ್ಯಾಚಾರ ಮಾಡಲಾಯಿತು, ಇದನ್ನು ಶಬ್ದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ತಮ್ಮನ್ನು ಬುದ್ಧಿಜೀವಿ ಮತ್ತು ಇತಿಹಾಸತಜ್ಞರೆಂದು ತಿಳಿದುಕೊಳ್ಳುವವರು ಎರಡೂ ಕಡೆ ಹಿಂಸಾಚಾರ ನಡೆದಿದೆ ಎಂದು ಸುಳ್ಳು ಹೇಳಿದ್ದಾರೆ. ಇದು ಮೃತಪಟ್ಟ ಹಿಂದೂಗಳ ಮೇಲಿನ ಅನ್ಯಾಯವಾಗಿದೆ ಮತ್ತು ಇತಿಹಾಸದಲ್ಲಿ ತಪ್ಪಾಗಿದೆ. ಹಿಂದೂಗಳು ವಿಭಜನೆಯ ಸಮಯದ ಸತ್ಯ ಇತಿಹಾಸವನ್ನು ಅರ್ಥಮಾಡಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಇತಿಹಾಸ ಮತ್ತು ಸಂಸ್ಕೃತಿ ಅಭ್ಯಾಸಕರಾದ ಮತ್ತು ಬರಹಗಾರರಾದ ನ್ಯಾಯವಾದಿ ಸತೀಶ ದೇಶಪಾಂಡೆಯವರು ಕರೆ ನೀಡಿದರು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಭಾರತ ವಿಭಜನೆಯ ಕರಾಳ ಇತಿಹಾಸ !’ ಈ ಕುರಿತ ‘ಆನ್‌ಲೈನ್’ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

ನ್ಯಾಯವಾದಿ ದೇಶಪಾಂಡೆಯವರು ಮಾತನ್ನು ಮುಂದುವರೆಸುತ್ತಾ, ಮುಸ್ಲಿಂ ಲೀಗ್‌ನ ‘ಡೈರೆಕ್ಟ ಎಕ್ಷನ್ ಡೆ’ನ ಘೋಷಣೆಯಿಂದ ಗಲಭೆಗಳನ್ನು ನಡೆಸಿ, ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುವ ಮೂಲಕ ಮತ್ತು ಭೂಮಿಯನ್ನು ಕಬಳಿಸುವ ಮೂಲಕ ವಿಭಜನೆಗೆ ಕಾರಣವಾಯಿತು. ಪಶ್ಚಿಮ ಬಂಗಾಲ ಪ್ರಾಂತ ಮತ್ತು ಆಗಿನ ಪೂರ್ವ ಬಂಗಾಲ (ಈಗಿನ ಬಾಂಗ್ಲಾದೇಶ)ದಲ್ಲಿ ಶ್ರೀ. ಗೋಪಾಲ ಪಾಠಾ ನೇತೃತ್ವದಲ್ಲಿ ಹಿಂದೂಗಳು ಮಾಡಿದ ಪ್ರತಿರೋಧದಿಂದ ಮುಸ್ಲಿಂ ಲೀಗ್ ಆ ಸಮಯದಲ್ಲಿ ಗಲಭೆಗಳನ್ನು ನಿಲ್ಲಿಸಿತು; ಆದರೆ ಶ್ರೀ. ಗೋಪಾಲ ಪಾಠಾ ಯಾರೆಂದು ಇಂದಿನ ಪೀಳಿಗೆಗೆ ತಿಳಿದೇ ಇಲ್ಲ, ಏಕೆಂದರೆ ಭಾರತ ವಿಭಜನೆಯ ಸಮಯದಲ್ಲಿ ಹಿಂದೂ ಸಹೋದರರ ಮೇಲೆ ನಡೆದ ದೌರ್ಜನ್ಯ ಮತ್ತು ಬಲಿದಾನದ ಸತ್ಯ ಇತಿಹಾಸವನ್ನು ಇದುವರೆಗೆ ಹೇಳಲಾಗಿಲ್ಲ. ಈಗಿನ ಪಾಕಿಸ್ತಾನದಲ್ಲಿರುವ ಲಾಹೋರ್ ಮತ್ತು ರಾವಲ್ಪಿಂಡಿಯ ಸ್ಥಳದಲ್ಲಿ ಹಿಂದೂಗಳ ಬರ್ಬರ ಹತ್ಯೆ, ಮಹಿಳೆಯರ ಮೇಲೆ ಅಮಾನವೀಯ ಅತ್ಯಾಚಾರಗಳು ನಡೆದವು. ಹಿಂದೂಗಳ ಮೃತ ದೇಹಗಳನ್ನು ಅಮೃತಸರ ಮತ್ತು ದೇಶದ ಇತರ ಸ್ಥಳಗಳಿಗೆ ‘ಆಜಾದಿ ಕಾ ತೋಫಾ’ ಎಂದು ರೈಲುಗಳಲ್ಲಿ ಕಳುಹಿಸಲಾಯಿತು.
ಸ್ವಾತಂತ್ರ್ಯ ವೀರ ಸಾವರಕರ್ ಅವರು 1942 ರಲ್ಲಿ ತಮ್ಮ ಭಾಷಣದಲ್ಲಿ ದೇಶ ವಿಭಜನೆಯಾಗುತ್ತದೆ ಎಂದು ಎಚ್ಚರಿಸಿದ್ದರು, ಆದರೆ ದೇಶ ವಿಭಜನೆಗೆ ಸಾವರಕರ ಕಾರಣ ಎಂದು ಇಂದಿಗೂ ಅಪಪ್ರಚಾರ ಮಾಡಲಾಗುತ್ತಿದೆ. ಮೊಹಮ್ಮದ್ ಅಲಿ ಜಿನ್ನಾ ಸೇರಿದಂತೆ ಮುಸ್ಲಿಂ ನಾಯಕರು ವಿಭಜನೆ ಮಾಡಿದರು ಎಂಬ ಅಂಶವನ್ನು ಸ್ಪಷ್ಟವಾಗಿ ಹೇಳುತ್ತಿಲ್ಲ ಎಂದು ನ್ಯಾಯವಾದಿ ದೇಶಪಾಂಡೆ ಹೇಳಿದರು.