ಹಿಂದೂಗಳಿಲ್ಲದೇ ಅನಾಥವಾಗುತ್ತಿರುವ ಭಾರತ !

ಉದಯಪುರದ ಕನ್ಹಯ್ಯಾಲಾಲ್ ಇವರ ಹತ್ಯೆಗೆ ೧ ತಿಂಗಳು ಉರುಳಿದೆ. ಜೂನ್ ೨೮ ರಂದು ಮಹಮ್ಮದ ಗೌಸ್ ಮತ್ತು ರಿಯಾಜ್ ಅತ್ತಾರಿ ಇವರು ಕನ್ಹಯ್ಯಾಲಾಲ್ ಇವರ ಶಿರಚ್ಛೇದ ಮಾಡಿದರು. ನೂಪುರ ಶರ್ಮಾರನ್ನು ಬೆಂಬಲಿಸಿ ವಾಟ್ಸ್ಆ್ಯಪ್‌ನಲ್ಲಿ ಪೋಸ್ಟ್ ಮಾಡಿದರೆಂದು ಈ ಕ್ರೂರ ಕೃತ್ಯವನ್ನು ಎಸಗಲಾಯಿತು. ಇಬ್ಬರೂ ಜಿಹಾದಿಗಳ ತನಿಖೆ ನಡೆದಿದ್ದು ‘ಅವರನ್ನು ಗಲ್ಲಿಗೇರಿಸಲಾಗುವುದು’, ಎಂಬ ಆಶಾಭಾವನೆ ಹಿಂದೂಗಳಿಗಿದೆ. ‘ದಾವತ್-ಎ-ಇಸ್ಲಾಮಿ’ ಎಂಬ ಪಾಕ್‌ನ ಭಯೋತ್ಪಾದಕ ಸಂಘಟನೆಯು ಇದಕ್ಕೆ ಹೊಣೆಯಾಗಿದೆ ಎಂದು ಬೆಳಕಿಗೆ ಬಂದಿದೆ. ಇದು ಒಂದು ಘಟನೆಯಾಗಿರದೇ ನೂಪುರ ಶರ್ಮಾರನ್ನು ಬೆಂಬಲಿಸಿ ಯಾರೆಲ್ಲ ವಿಚಾರಗಳನ್ನು ಮಂಡಿಸುತ್ತಿರುವರೋ, ಆಯಾ ಹಿಂದೂ ಜೀವವನ್ನು ಕಳೆದುಕೊಳ್ಳಬೇಕಾಗುತ್ತಿದೆ. ಮಹಾರಾಷ್ಟ್ರದ ಅಮರಾವತಿಯ ಡಾ. ಉಮೇಶ ಕೊಲ್ಹೆ ಇವರ ಹತ್ಯೆ, ಸೀತಾಮಢಿ (ಬಿಹಾರ) ನ ಅಂಕಿತ ಝಾ ಎಂಬ ಹಿಂದೂ ಯುವಕನ ಮೇಲೆ ಮಾರಣಾಂತಿಕ ಆಕ್ರಮಣ, ಭೋಪಾಳದ ನಿಶಾಂಕ ರಾಠೌರ ಈ ವಿದ್ಯಾರ್ಥಿಯ ಹತ್ಯೆ ಅಥವಾ ಈಗ ಬೆಳ್ಳಾರೆಯಲ್ಲಿ ಭಾರತೀಯ ಜನತಾ ಯುವಾ ಮೋರ್ಚಾದ ಮುಖಂಡ ಪ್ರವೀಣ ನೆಟ್ಟಾರು ಇವರ ಹತ್ಯೆ, ಇವು ಅದರ ಜ್ವಲಂತ ಉದಾಹರಣೆಗಳು ! ಪ್ರವೀಣ ನೆಟ್ಟಾರು ಇವರು ಕನ್ಹಯ್ಯಾಲಾಲ್‌ರನ್ನು ಸಮರ್ಥಿಸುವ ಒಂದು ಫೆಸ್‌ಬುಕ್ ಪೋಸ್ಟ್ ಮಾಡಿದ್ದರು.

‘ಭಾರತದ ೨೫ ರಾಜ್ಯಗಳಲ್ಲಿನ ೩೦೦ ಜನರು ‘ದಾವತ್-ಎ-ಇಸ್ಲಾಂ’ನ ೧೮ ಭಯೋತ್ಪಾದಕರ ಸಂಪರ್ಕದಲ್ಲಿದ್ದಾರೆ’, ಎಂದು ಕನ್ಹಯ್ಯಾಲಾಲ್‌ರ ಹತ್ಯೆಯ ತನಿಖೆಯಿಂದ ಬಹಿರಂಗವಾಗಿದೆ. ಆದುದರಿಂದ ಈ ಹತ್ಯಾಸರಣಿಗಳಿಗೆ ಈ ಸಂಘಟನೆಯೇ ಕಾರಣ ಎಂದು ಬೆರಳು ತೋರಿಸಲಾಗುತ್ತಿದೆ. ಹಾಗೆಯೇ ಯಾವೆಲ್ಲ ‘ಯೂ ಟ್ಯೂಬರ್ಸ್’, ‘ಬ್ಲಾಗರ್ಸ್’, ಖ್ಯಾತ ನ್ಯಾಯವಾದಿಗಳು ಅಥವಾ ಹಿಂದುತ್ವನಿಷ್ಠರು ಕಳೆದ ೨ ತಿಂಗಳುಗಳಲ್ಲಿ ನೂಪುರ ಶರ್ಮಾ ಇವರ ಪರವಾಗಿ ಧ್ವನಿ ಎತ್ತಿದರೋ, ಅವರೆಲ್ಲರೂ ತಮ್ಮ ಜೀವವನ್ನು ಮುಷ್ಠಿಯಲ್ಲಿಟ್ಟುಕೊಂಡು ಕುಳಿತುಕೊಳ್ಳಬೇಕಾಗಿದೆ ! ಯಾವುದಾದರೊಂದು ರಹಸ್ಯಮಯ ಚಲನಚಿತ್ರದಲ್ಲಿ ‘ಮುಂದಿನ ಹತ್ಯೆ ಯಾರದು ?’. ಎಂಬ ಸ್ಥಿತಿ ಇರುತ್ತದೆ, ಅದರಂತೆ ‘ನೂಪುರ ಶರ್ಮಾ ಇವರನ್ನು ಸಮರ್ಥಿಸುವವರ ಪೈಕಿ ಈಗ ಯಾರ ಸರತಿ ಇದೆ ?’, ಎಂಬುದನ್ನು ಜೀವವನ್ನು ಮುಷ್ಠಿಯಲ್ಲಿಟ್ಟು ದಾರಿ ಕಾಯಬೇಕಾಗುತ್ತಿದೆ. ಬಹುಸಂಖ್ಯಾತ; ಆದರೆ ಅಸಹಾಯಕ ಹಿಂದೂಗಳ ದೇಶದ ಇದು ಭಯಾನಕ ದುರ್ದೈವವೇ ಆಗಿದೆ !

ಜಿಹಾದ್ ಮತ್ತು ಫ್ರಾನ್ಸ್ !

ಪ್ರವೀಣ ನೆಟ್ಟಾರು ಇವರ ಹತ್ಯೆಯಿಂದ ೩ ಜ್ವಲಂತ ಪ್ರಶ್ನೆಗಳು ಹುಟ್ಟಿಕೊಂಡಿವೆ. ಕರ್ನಾಟಕದಲ್ಲಿ ಮತ್ತು ಕೇಂದ್ರದಲ್ಲಿ ಹಿಂದುತ್ವನಿಷ್ಠ ಭಾಜಪದ ಆಡಳಿತವಿರುವಾಗ ಭಾಜಪ ಯುವಮೋರ್ಚಾದ ಮುಖಂಡರ ಹತ್ಯೆಯಾಗುವುದು, ಇದರಿಂದ ಆಡಳಿತಾರೂಢ ಪಕ್ಷದ ಮುಖಂಡರೇ ಅಸುರಕ್ಷಿತರಿರುವಾಗ ಸರ್ವಸಾಮಾನ್ಯ ಹಿಂದೂಗಳು ಕಥೆ ಏನು ? ಇದು ಮೊದಲ ಪ್ರಶ್ನೆಯಾಗಿದೆ ! ಈ ಪ್ರಕರಣದ ಹಿಂದೆ ಜಿಹಾದಿ ಭಯೋತ್ಪಾದನಾ ಸಂಘಟನೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಕೈವಾಡವಿರುವುದಾಗಿ ಪೊಲೀಸರಿಗೆ ಸಂಶಯವಿದೆ. ಇದೇ ಸಂಘಟನೆಯು ೨೦೪೭ ನೇ ಇಸವಿಯಲ್ಲಿ ಭಾರತವನ್ನು ಇಸ್ಲಾಮಿ ರಾಷ್ಟ್ರವನ್ನಾಗಿ ಮಾಡಲು ಸಮಯಮಿತಿಯನ್ನಿಟ್ಟುಕೊಂಡು ಅದಕ್ಕಾಗಿ ಒಂದು ‘ಬ್ಲೂ ಪ್ರಿಂಟ್’ (ನಿಯೋಜನೆಯ ನೀಲನಕ್ಷೆ) ಸಿದ್ಧ ಮಾಡಿದೆ. ಇದಕ್ಕಾಗಿ ಅದು ಅನೇಕ ರಾಜ್ಯಗಳಲ್ಲಿನ ಮತಾಂಧ ಮುಸಲ್ಮಾನರಿಗೆ ಸೇನಾ ತರಬೇತಿಯನ್ನೂ ನೀಡುತ್ತಿದೆ. ‘ಇಷ್ಟಾದರೂ ಅದನ್ನೇಕೆ ನಿಷೇಧಿಸಿಲ್ಲ ?’,ಎಂಬುದು ಎರಡನೇ ಪ್ರಶ್ನೆ ! ನೆಟ್ಟಾರು ಇವರ ಹತ್ಯೆಯ ಬಗ್ಗೆ ಪ್ರಖರ ಹಿಂದುತ್ವನಿಷ್ಠ ಮತ್ತು ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯರು ಅತ್ಯಂತ ನಿರರ್ಗಳ ಮತ್ತು ಚಿಂತನೆಗೀಡು ಮಾಡುವ ಟ್ಟಿಟ್ ಮಾಡಿದ್ದಾರೆ. ಅವರು, “ನಿಂದಿಸುವುದರಿಂದ, ಪ್ರತಿಮೆಗಳನ್ನು ಸುಡುವುದರಿಂದ, ಪ್ರತಿಭಟನಾ ಮೆರವಣಿಗೆಗಳನ್ನು ತೆಗೆಯುವುದರಿಂದ, (ಹತ್ಯೆಯಾದ ಹಿಂದೂಗಳ) ಛಾಯಾಚಿತ್ರವನ್ನು ಪ್ರಸಾರ ಮಾಡುವುದರಿಂದ, ‘ರಸ್ತೆ ತಡೆ’) ಆಂದೋಲನ ಮಾಡುವುದರಿಂದ, ‘ಟ್ವಿಟರ್ ಟ್ರೆಂಡ್’ ಮಾಡುವುದರಿಂದ, ಪ್ರಸಾರಮಾಧ್ಯಮಗಳಲ್ಲಿ ಚರ್ಚಾಗೋಷ್ಠಿಗಳನ್ನು ಆಯೋಜಿಸುವುದರಿಂದ, ಗಲ್ಲು ಶಿಕ್ಷೆಯ ಬೇಡಿಕೆ ಮಾಡುವುದರಿಂದ, ಪೀಡಿತ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವುದರಿಂದ ಅಥವಾ ಹನುಮಾನ ಚಾಲಿಸಾದ ಪಠಣ ಮಾಡುವುದರಿಂದ ‘ಜಿಹಾದ್’ ಕೊನೆಗೊಳ್ಳುವುದಿಲ್ಲ ! ಕಬ್ಬಿಣವನ್ನು ಕಬ್ಬಿಣದಿಂದಲೇ ಕತ್ತರಿಸಬಹುದು ! ಆದುದರಿಂದ ಜಿಹಾದಿ ಆಕ್ರಮಣಗಳ ಮೇಲೆ ಕಠಿಣ ಜಿಹಾದ್ ವಿರೋಧಿ ಕಾನೂನುಗಳನ್ನು ಜಾರಿಗೆ ತರುವುದೇ ಏಕೈಕ ಮಾರ್ಗವಾಗಿದೆ !” ಎಂದು ಹೇಳಿದ್ದಾರೆ. ಇದರಿಂದ ಜಿಹಾದ್ ವಿರೋಧಿ ಕಾನೂನನ್ನು ಜಾರಿಗೆ ತರಲು ಸರಕಾರವು ವಿಚಾರ ಮಾಡುತ್ತಿದೆಯೋ ಅಥವಾ ಜಿಹಾದಿಗಳ ‘ಸರ ತನ್ ಸೆ ಜುದಾ’ ಈ ಅಭಿಯಾನಕ್ಕೆ ಹಿಂದೂಗಳನ್ನು ಒಪ್ಪಿಸುವಲ್ಲಿ ಧನ್ಯತೆಯೆಂದು ತಿಳಿದುಕೊಳ್ಳಲಿದೆಯೋ ? ಎಂಬುದು ಮೂರನೆಯ ಪ್ರಶ್ನೆ !

ಫ್ರಾನ್ಸ್ ನಲ್ಲಿ ಜಿಹಾದಿ ವಿದ್ಯಾರ್ಥಿಯೊಬ್ಬನು ‘ಸ್ಯಾಮ್ಯುಯೆಲ್ ಪ್ಯಟಿ’ ಎಂಬ ಶಿಕ್ಷಕರ ಶಿರಚ್ಛೇದ ಮಾಡಿದಾಗ ಅಲ್ಲಿ ‘ಪ್ರಗತಿಪರ’ ಫ್ರಾನ್ಸ್ ದೇಶವು ಜಿಹಾದ್ ಮತ್ತು ಮದರಸಾ-ಮಸೀದಿಗಳನ್ನು ಕಡಿವಾಣ ಹಾಕಲು ಒಟ್ಟು ೫ ಕಾನೂನುಗಳನ್ನು ರಚಿಸಿತು, ಅದೇ ರೀತಿ ಇಲ್ಲಿಯೂ ಹಿಂದುತ್ವಪರವೆಂದು ಪರಿಗಣಿಸಲ್ಪಡುವ ಭಾರತೀಯ ಸರಕಾರವು ಕಠೋರವಾಗಿ ಜಿಹಾದಿಗಳ ತನಿಖೆ ಮಾಡಿ ಅವರ ಹಿಂದಿರುವ ವ್ಯವಸ್ಥೆಯನ್ನು ಪತ್ತೆ ಹಚ್ಚಿ ಜಿಹಾದಿಗಳನ್ನು ಒಂದು ನಿಶ್ಚಿತ ಸಮಯ ಮಿತಿಯಲ್ಲಿ ಗಲ್ಲಿಗೇರಿಸುವುದು ಅತ್ಯಂತ ಆವಶ್ಯಕವಾಗಿದೆ !

ಸ್ವಸಂರಕ್ಷಣೆ ಆವಶ್ಯಕ !

ಅನೇಕ ಹಿಂದೂಗಳು ಕೊಲ್ಲಲ್ಪಟ್ಟರು; ಆದರೆ ಇದರಿಂದ ‘ಪ್ರಜಾಪ್ರಭುತ್ವದ ಹತ್ಯೆ’, ‘ಅಭಿವ್ಯಕ್ತಿಸ್ವಾತಂತ್ರ್ಯದ ಹತ್ಯೆ’, ‘ವಿಚಾರಸ್ವಾತಂತ್ರ್ಯದ ಹತ್ಯೆ’, ಹೀಗೆ ಅಳಬೇಕೆಂದು ಯಾರಿಗೂ ಅನಿಸಲಿಲ್ಲ. ಎಮ್. ಎಮ್. ಕಲಬುರ್ಗಿ ಮತ್ತು ದಾದರಿ ಎಂಬಲ್ಲಿ ‘ಮುಸಲ್ಮಾನ್’ ಅಖಲಾಕ್ ಇವರ ಹತ್ಯೆಯಾದ ನಂತರ ಕಣ್ಣೀರು ಸುರಿಸುವ ಮತ್ತು ಸಂಸತ್ತಿನಿಂದ ರಾಷ್ಟ್ರಪತಿಭವನದ ವರೆಗೆ ‘ಅಸಹಿಷ್ಣುತಾ ಮಾರ್ಚ್’ಅನ್ನು ತೆಗೆಯುವ ಕಾಂಗ್ರೆಸ್‌ಗೆ ಹಿಂದೂಗಳ ಹತ್ಯೆಗಳ ಬಗ್ಗೆ ಏನು ಹೇಳಲಿಕ್ಕಿದೆ ? ದೇಶದಲ್ಲಿನ ‘ಇಲೀಟ್ ಕ್ಲಾಸ್'(ಗಣ್ಯ ವರ್ಗ) ಅಂದರೆ ಬುದ್ಧಿಜೀವಿ ಲೇಖಕರು, ಪತ್ರಕರ್ತರು, ಉದ್ಯಮಿಗಳು, ನ್ಯಾಯವಾದಿಗಳು ಮುಂತಾದ ‘ಪ್ರತಿಷ್ಠಿತ’ರ ತಂಡ ಪಂಚತಾರಾ ಹೊಟೇಲುಗಳಲ್ಲಿ ಹಾಯಾಗಿ ಕುಳಿತಿದ್ದಾರೆ. ಇವರೆಲ್ಲರ ದ್ವಿಮುಖನೀತಿಯನ್ನು ಸಮಸ್ತ ಹಿಂದೂ ಜನತೆಯು ಕಾನೂನು ಮಾರ್ಗದಿಂದ ಖಂಡಿಸುವುದು ಆವಶ್ಯಕವಾಗಿದೆ. ಇಲ್ಲದಿದ್ದರೆ ಪಾಕಿಸ್ತಾನ್-ಬಾಂಗ್ಲಾದೇಶದ ಹಿಂದೂಗಳಿಗಾಗಿರುವ ದುಸ್ಥಿತಿಯೇ, ಕೆಲವು ದಶಕಗಳಲ್ಲಿ ಭಾರತೀಯ ಹಿಂದೂಗಳ ಸ್ಥಿತಿಯಾಗುವುದು. ಈ ದೃಷ್ಟಿಯಿಂದ ಹಿಂದೂಹೃದಯಸಮ್ರಾಟ ಬಾಳಾಸಾಹೇಬ ಠಾಕರೆ ಇವರು ೨೦ ರಿಂದ ೨೫ ವರ್ಷಗಳ ಹಿಂದೆ ಮಾಡಿದ ಒಂದು ಮಾರ್ಮಿಕ ಹೇಳಿಕೆಯು ಇಂದು ಹೆಚ್ಚು ಸೂಕ್ತವಾಗಿದೆ. ಒಂದು ಕಾರ್ಯಕ್ರಮದಲ್ಲಿ ಓರ್ವ ಯುವತಿಯು, ‘ಇಂದು ಪ್ರತಿಭಟನಾ ಮೆರವಣಿಗೆಗಳು, ಗಲಭೆಗಳಲ್ಲಿ ಯುವಾ ಪೀಳಿಗೆ ಎಲ್ಲಕ್ಕಿಂತ ಮುಂಚೂಣಿಯಲ್ಲಿರುತ್ತದೆ, ಹಾಗಾದರೆ ನೀವು ಅವರಿಗೇನು ಸಂದೇಶವನ್ನು ನೀಡಲು ಇಚ್ಛಿಸುವಿರಿ ?’, ಎಂಬ ಪ್ರಶ್ನೆಯನ್ನು ಕೇಳಿದ್ದರು. ಅದಕ್ಕೆ ಬಾಳಾಸಾಹೇಬರು, ‘ಒಂದು ವೇಳೆ ದೇಶದ ಕಾನೂನು ನಿಮ್ಮ ರಕ್ಷಣೆಯನ್ನು ಮಾಡಲು ಅಸಮರ್ಥವೆಂದು ಸಿದ್ಧವಾದರೆ, ನಿಮಗೆ ನಿಮ್ಮ ರಕ್ಷಣೆ ಮಾಡಿ ಕೊಳ್ಳುವ ಅಧಿಕಾರವಿದೆ !’, ಎಂದು ಉತ್ಸೂ÷್ರ್ತವಾಗಿ (ಉತ್ಸಸ್ಫುರಿತವಾಗಿ) ಹೇಳಿದ್ದರು. ಇದರಲ್ಲಿನ ಮಾರ್ಮಿಕ ಅರ್ಥವು ‘ಪ್ರತಿಯೊಬ್ಬರು ಶಸ್ತ್ರವನ್ನು ತೆಗೆದುಕೊಂಡು ಹಿಂಸಾಚಾರವನ್ನು ಮಾಡುವುದು’, ಅಪೇಕ್ಷಿತವಾಗಿರದೇ ಸ್ವಸಂರಕ್ಷಣೆಗಾಗಿ ಸಕ್ಷಮರಾಗುವುದು ಆವಶ್ಯಕವಾಗಿದೆ. ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ನೀಡಿದ ಜೀವನವನ್ನು ಜೀವಿಸುವ ಅಧಿಕಾರವನ್ನು ನೋಡಿದರೆ ಸ್ವಸಂರಕ್ಷಣೆಗೆ ಪ್ರಯತ್ನಿಸುವುದಕ್ಕೆ ಕಾನೂನಿನ ಅಡೆತಡೆ ಇಲ್ಲ. ಆದುದರಿಂದ ಈಗಲಾದರೂ ಹಿಂದೂಗಳು ಸಂಘಟನೆಗಳನ್ನು ಮಾಡಬೇಕು, ಸಕ್ಷಮರಾಗಬೇಕು ಮತ್ತು ಸ್ವಧರ್ಮ ಮತ್ತು ಹಿಂದೂ ಸಮಾಜದ ರಕ್ಷಣೆ ಮಾಡಲು ಕಟಿಬದ್ಧರಾಗಬೇಕು, ಇಲ್ಲದಿದ್ದರೆ ಈ ಪುಣ್ಯಭೂಮಿಯಾಗಿರುವ ಭಾರತಭೂಮಿಯನ್ನು ನೀವು ಕಳೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ !

ಸಂಪೂರ್ಣ ‘ವಂದೇ ಮಾತರಮ್’ ಹೇಳಿರಿ

 

‘ವಂದೇ ಮಾತರಮ್’ ಸಂಸ್ಕೃತ ಭಾಷೆಯಲ್ಲಿದೆ ಹಾಗೆಯೇ ಅದರಲ್ಲಿ ಮಾತೃಭೂಮಿಗೆ ‘ವಂದನೆ ಹಾಗೂ ಸ್ತುತಿ’ಯಿರುವುದರಿಂದ ಅದರಲ್ಲಿ ಚೈತನ್ಯ ಹಾಗೂ ಶಕ್ತಿಯಿದೆ ಇದರಿಂದ ರಾಷ್ಟ್ರಭಕ್ತಿಯು ಹೆಚ್ಚಿ ರಾಷ್ಟ್ರನಿಷ್ಠೆಯು ಪ್ರಬಲವಾಗುತ್ತದೆ. ‘ವಂದೆ ಮಾತರಮ್’ನ ಕೊನೆಯ ೪ ಸಾಲು ಮಾತೃಭೂಮಿಯು ದೇವಿಸ್ವರೂಪವಾಗಿರುವುದರಿಂದ ಅವಳಿಗೆ ವಂದನೆಯನ್ನು ಮಾಡಲಾಗಿದೆ ರಾಷ್ಟ್ರೀಯ ಗೀತೆಯೆಂದು ಮಾನ್ಯತೆಯನ್ನು ನೀಡುವ ಪ್ರಸ್ತಾವಕ್ಕೆ ಸಮ್ಮತಿ ದೊರಕಿತು ಹಾಗೂ ನಂತರ ಅದನ್ನೇ ಶಾಲೆಯಲ್ಲಿ ಹಾಗೂ ಎಲ್ಲಾ ಕಡೆ ಹೇಳಲಾಗುತ್ತಿತ್ತು ಇನ್ನು ಮುಂದೆಯೂ ಸಂಪೂರ್ಣ ‘ವಂದೇ ಮಾತರಮ್’ನ್ನು ಎಲ್ಲಾ ಕಡೆ ಹೇಳುವಂತಾಗಬೇಕು.