ಭಾರತಕ್ಕೆ ಸ್ವಾತಂತ್ರ್ಯ ದೊರಕಿ ೧೫ ಆಗಸ್ಟ್ ೨೦೨೨ ರಂದು ೭೫ ವರ್ಷ ಪೂರ್ಣಗೊಳ್ಳುತ್ತದೆ. ಈ ವರ್ಷ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸುವ ದೃಷ್ಟಿಯಲ್ಲಿ ಸರಕಾರ ಮತ್ತು ಅರೆಸರಕಾರಿ ಮಟ್ಟದಲ್ಲಿ ಚಟುವಟಿಕೆಗಳು ನಡೆಯುತ್ತಿವೆ. ದೇಶದ ಅನೇಕ ಖಾಸಗಿ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿವೆ. ಒಟ್ಟಾರೆ ದೇಶ ಸ್ವತಂತ್ರವಾದ ನಂತರ ಪ್ರಾರಂಭದಿಂದಲೆ ದೇಶದ ರಾಜಕಾರಣದಲ್ಲಿರುವ ಎಲ್ಲ ಘಟಕಗಳು, ರಾಜಕೀಯ ಪಕ್ಷಗಳು ಕಳೆದ ೭ ದಶಮಾನಗಳಿಂದ ‘ದೇಶಹಿತಕ್ಕಾಗಿ ನಮ್ಮ ಸರ್ವಸ್ವವನ್ನೂ ಪಣಕ್ಕಿಟ್ಟಿದ್ದೇವೆ ?’ ಎಂದು ಡಂಗುರ ಸಾರಲು ಸ್ಪರ್ಧೆ ನಡೆಸುತ್ತಿರಬಹುದು. ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ನಿಮಿತ್ತದಲ್ಲಿ ೧೯೯೭ ರಲ್ಲಿ ಬಂದ ರೀತಿಯಲ್ಲಿಯೇ ಅಮೃತ ಮಹೋತ್ಸವದ ನಿಮಿತ್ತದಲ್ಲಿ ೨೦೨೨ ರಲ್ಲಿಯೂ ಬಂದು ನಾವು ಪುನಃ ಸ್ವಾತಂತ್ರ್ಯದ ಶತಮಾನೋತ್ಸವದ ಕಡೆಗೆ ಪ್ರಯಾಣವನ್ನು ಪ್ರಾರಂಭಿಸೋಣ ! ಇದನ್ನು ಹೇಳುವುದರ ಹಿಂದಿನ ಮಹತ್ವದ ಕಾರಣವೆಂದರೆ, ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಇಂದಿನ ವರೆಗೆ ಅಧಿಕಾರಕ್ಕೆ ಬಂದಿರುವ ದೇಶದ ಎಲ್ಲ ಪ್ರಧಾನಮಂತ್ರಿಗಳು ಕೆಂಪು ಕೋಟೆಯ ಮೇಲೆ ಮುಖ್ಯಮಂತ್ರಿಗಳು ಆಯಾ ರಾಜ್ಯದ ರಾಜಧಾನಿಯಲ್ಲಿ ಒಂದೆರಡು ಕಲ್ಯಾಣಕಾರಿ ಯೋಜನೆಗಳ ಘೋಷಣೆ ಮಾಡುವುದರ ಹೊರತು ಬೇರೆ ಏನೂ ಮಾಡಿಲ್ಲ. ಜನರ ದೇಶಪ್ರೇಮವೂ ರಾಷ್ಟ್ರೀಯ ಹಬ್ಬದ ನಿಮಿತ್ತದಲ್ಲಿ ಸಿಕ್ಕಿರುವ ಒಂದು ದಿನದ ರಜೆಯ ಆನಂದವನ್ನು ಸವಿಯುವುದರ ಆಚೆಗೆ ಸರಿಯಲಿಲ್ಲ. ೭ ದಶಮಾನಗಳ ಕಾಲಾವಧಿಯಲ್ಲಿ ನಮಗೆ ಇದುವರೆಗೂ ‘ದೇಶ’ ಮತ್ತು ‘ರಾಷ್ಟ್ರ’ ಇವು ಭಿನ್ನ ಅರ್ಥದ ಶಬ್ದಗಳಾಗಿದ್ದು ಅವುಗಳ ವ್ಯಾಪ್ತಿಯೂ ಬೇರೆಯಾಗಿದೆಯೆಂಬುದೂ ಅರಿವಾಗಿಲ್ಲ, ಎಂಬುದು ದೊಡ್ಡ ಪಶ್ಚಾತ್ತಾಪದ ವಿಷಯವಾಗಿದೆ. ಬಹುಶಃ ಇದರಿಂದಲೇ ದೇಶದಲ್ಲಿ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ರಾಷ್ಟ್ರೀಯತೆ ಅಂಕುರಿಸಲಿಲ್ಲ. – ಶ್ರೀ. ಪರಮೇಶ್ವರ ಲಾಂಡಗೆ, ಕೇಂದ್ರೀಯ ಉಪಾಧ್ಯಕ್ಷರು, ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಂಘ, ಬೀಡ್, ಮಹಾರಾಷ್ಟ್ರ. |
‘ಪ್ರತ್ಯೇಕ ರಾಷ್ಟ್ರ ಬೇಕು’,ಎಂಬ ನಿಲುವು ರಾಷ್ಟ್ರವನ್ನು ವಿಭಜಿಸುತ್ತದೆ !
ಭಾರತವು ಸ್ವತಂತ್ರವಾಗುವಾಗ ಪಾಕಿಸ್ತಾನ ಮತ್ತು ನಂತರ ಬಾಂಗ್ಲಾದೇಶ ಇವೆರಡು ಸ್ವತಂತ್ರ ದೇಶಗಳು ನಿರ್ಮಾಣವಾದವು. ಇದರ ನೇರ ಅರ್ಥವೆಂದರೆ, ಒಂದು ರಾಷ್ಟ್ರದಲ್ಲಿ ಎರಡು ಧರ್ಮಗಳು ನೆಲೆಸಲು ಸಾಧ್ಯವಿಲ್ಲ. ಎರಡು ಜಾತಿಗಳು ಪರಸ್ಪರರೊಂದಿಗೆ ನೆಲೆಸುವುದಿಲ್ಲ ಎಂಬ ಭೇದವು ಇದರಿಂದ ಉದಯವಾಯಿತು. ‘ಭೇದವೆಂದು ಬೇರೆಯೆ ರಾಷ್ಟ್ರ ಬೇಕು’, ಎಂಬ ನಿಲುವು ಕೇವಲ ರಾಷ್ಟ್ರವನ್ನು ಇಬ್ಭಾಗಿಸುತ್ತದೆ, ಆಮೇಲೆ ಪ್ರತಿಯೊಂದು ಭಾಗವು ತನ್ನನ್ನು ಸ್ವತಂತ್ರ ರಾಷ್ಟ್ರವೆಂದು ತಿಳಿಯುತ್ತದೆ. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟವು ಜಾತಿ-ಧರ್ಮ ರಾಜ್ಯವ್ಯವಸ್ಥೆಯ ಧ್ಯೇಯವನ್ನೇ ಸಿದ್ಧಪಡಿಸಿದೆ. ಆದ್ದರಿಂದ ಆಗಸ್ಟ್ ೧೫ ರಂದು ರಾಷ್ಟ್ರಧ್ವಜವನ್ನು ಹಾರಿಸುವಾಗ ಹಾಗೂ ಅನಂತರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಡೆಗೆ ಪ್ರಯಾಣಿಸುವಾಗ ಕಳೆದ ೭ ದಶಮಾನಗಳಲ್ಲಿ ಭಾರತೀಯ ರಾಜಕಾರಣದಲ್ಲಿ ಘಟಿಸಿರುವ ಸ್ಥಿತ್ಯಂತರಗಳ ಪರಾಮರ್ಶೆ ಹಾಗೂ ಸಿಕ್ಕಿರುವ ಸ್ವಾತಂತ್ರ್ಯದ ಅರ್ಥವನ್ನು ತಿಳಿದುಕೊಳ್ಳುವುದು ಅತೀ ಅವಶ್ಯಕವೆಂದು ಅನಿಸುತ್ತದೆ.
ಪರಸ್ಪರರೊಂದಿಗೆ ಜೀವಿಸಲು ಇಚ್ಛೆಯಿಲ್ಲದ ನಾಗರಿಕರ ದೇಶದಲ್ಲಿ ರಾಷ್ಟ್ರೀಯತೆಯ ವಿಕಾಸವಾಗಲು ಸಾಧ್ಯವಿಲ್ಲ !
ಯಾವ ದೇಶದ ನಾಗರಿಕರಿಗೆ ಪರಸ್ಪರರೊಂದಿಗೆ ಜೀವಿಸುವ ಇಚ್ಛೆ ಇಲ್ಲವೋ, ಆ ದೇಶದಲ್ಲಿ ರಾಷ್ಟ್ರೀಯತೆಯ ವಿಕಾಸವಾಗಲು ಸಾಧ್ಯವಿಲ್ಲ. ಮಾತೃಭೂಮಿಯನ್ನು ಪ್ರೇಮಿಸುವ ಅವಶ್ಯಕತೆಯಿದೆ; ಆದರೆ ಅಷ್ಟೇ ಸಾಲದು. ನಮ್ಮ ಸುಜಲಾಮ್, ಸುಫಲಾಮ್ ಮತ್ತು ವಿವಿಧತೆಯಲ್ಲಿನ ಏಕತೆಯಿಂದ, ಅಖಂಡತೆಯಿಂದ ಸಿಂಗರಿಸಲ್ಪಟ್ಟ ಭೂಭಾಗವನ್ನು ಪ್ರೇಮಿಸುವುದು ಆವಶ್ಯಕವಾಗಿದೆ. ಒಬ್ಬ ಭೂ ಮಾಲೀಕನೂ ತನ್ನ ಭೂಮಿಯನ್ನು ಪ್ರೇಮಿಸುತ್ತಾನೆ; ಅದರೆ ಅವನು ಅಲ್ಲಿರುವ ರೈತರನ್ನು ಪ್ರೇಮಿಸುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ರಾಷ್ಟ್ರಭಕ್ತಿ ಎಂದರೆ ನಾವು ಯಾವ ಭೂಮಿಯನ್ನು ಮಾತೃಭೂಮಿಯೆಂದು ನಂಬುತ್ತೇವೆಯೊ, ಆ ಭೂಮಿಯಲ್ಲಿರುವ ಜನರು, ಅವರ ಆಚಾರ-ವಿಚಾರ ಹಾಗೂ ಅವರಲ್ಲಿನ ಗುಣದೋಷಸಹಿತ ಅವರ ಸಂಸ್ಕೃತಿಯನ್ನು ಪ್ರೇಮಿಸುವುದು !
ಸ್ವಾತಂತ್ರ್ಯದ ನಂತರ ಬಂದಿರುವ ಆಡಳಿತದವರು ಸ್ವಾತಂತ್ರ್ಯದ ಅರ್ಥವನ್ನೇ ಬದಲಾಯಿಸಿದರು !
ಭಾರತವನ್ನು ಆಂಗ್ಲರ ಅತ್ಯಾಚಾರಿ ಗುಲಾಮಗಿರಿಯಿಂದ ಮುಕ್ತಗೊಳಿಸಲು ನಮ್ಮ ಪೂರ್ವಜರು ಮಾಡಿರುವ ತ್ಯಾಗ ಹಾಗೂ ಅನುಭವಿಸಿದ ನರಕಯಾತನೆಯನ್ನು ಮರೆತು ಇಲ್ಲಿನ ಆಡಳಿತಾ ರೂಢರು ಸ್ವಾತಂತ್ರ್ಯದ ಅರ್ಥವನ್ನೇ ಬದಲಾಯಿಸಿಬಿಟ್ಟರು. ಅವರು ಅಧಿಕಾರವನ್ನು ಸಂಪತ್ತು ಸಂಗ್ರಹಿಸುವ ಸಾಧನವನ್ನಾಗಿ ಮಾಡಿ ಪಂಚತಾರಾಂಕಿತ ಸಂಸ್ಕೃತಿಯನ್ನು ಕೊಂಡಾಡುವುದರಲ್ಲಿಯೇ ಧನ್ಯರೆನಿಸಿಕೊಂಡರು. ನಾಗರಿಕರಿಗೆ ಸ್ವಾತಂತ್ರ್ಯಕ್ಕೆ ಇಂಬು ನೀಡುವ ಯಾವುದೇ ಘಟನೆ ಅಥವಾ ನಿಸರ್ಗರಮ್ಯ ಸ್ವಾತಂತ್ರ್ಯವನ್ನು ನೀಡುವ ಪ್ರಜಾಪ್ರಭುತ್ವ ಶೈಲಿಯು ಇದುವರೆಗೂ ಇಲ್ಲಿ ಸ್ಥಾಪಿತವಾಗಿಲ್ಲ. ಇಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಮತದಾನ ಮಾಡುವ ಅಧಿಕಾರವಿದೆ ನಿಜ; ಆದರೆ ಅವನಿಗೆ ತನ್ನದೇ ಆದ ಅಭಿಮತವಿಲ್ಲ, ಎಂಬುದು ದೊಡ್ಡ ದುರಂತವಾಗಿದೆ. ಸಂವಿಧಾನದಲ್ಲಿನ ಕಾನೂನು ಹಾಗೂ ನಿಯಮಗಳನ್ನು ಉಪಭೋಗಿಸುವ ಕಡೆಗೆ ಭಾರತೀಯ ನಾಗರಿಕನು ಉಪೇಕ್ಷಿಸುತ್ತಾನೆ.
ಸ್ವಾತಂತ್ರ್ಯಹೋರಾಟದಲ್ಲಿ ಇತರರ ಬಲಿದಾನದಬಗ್ಗೆ ಏಕೆ ಮರೆಯುತ್ತೇವೆ ? ಎಂಬುದಕ್ಕೆ ಉತ್ತರವಿಲ್ಲ !
ಇಂದಿನ ವರೆಗೆ ಬಂದಿರುವ ಪರಿವಾರವಾದಿ ಸರಕಾರಗಳು ಈ ಸ್ವಾತಂತ್ರ್ಯವನ್ನು ಕೇವಲ ತಮ್ಮ ಕುಟುಂಬಕ್ಕಷ್ಟೇ ಸೀಮಿತಗೊಳಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ನೀಡಿದವರನ್ನು ಕೇವಲ ಅವಹೇಳನೆ ಹಾಗೂ ಅವಮಾನ ಮಾಡಿದವು. ಸ್ವಾತಂತ್ರ್ಯ ಪ್ರಾಪ್ತಿಯ ನಂತರ ಅತ್ಯಧಿಕ ಸಮಯ ಅಧಿಕಾರದಲ್ಲಿದ್ದ ನೆಹರು ಹಾಗೂ ಗಾಂಧಿ ಮನೆತನವು ಭಾರತಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿ ಕೊಟ್ಟಿರುವ ಶ್ರೇಯಸ್ಸನ್ನು ಪಡೆದುಕೊಂಡಿತು ಮತ್ತು ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶವನ್ನು ವಿಭಜಿಸಿ ಮೊದಲ ಪ್ರಧಾನಮಂತ್ರಿಯ ಹುದ್ದೆಯನ್ನು ಉಪಭೋಗಿಸಲು ಹಟ ಸಾಧಿಸಿಕೊಂಡರು. ಸ್ವಾತಂತ್ರ್ಯದ ಮಹಾಯಜ್ಞದಲ್ಲಿ ಸರ್ವಸ್ವವನ್ನೂ ಆಹುತಿ ನೀಡಿರುವ ಅನೇಕ ಕ್ರಾಂತಿವೀರರನ್ನು ನೆಹರು ಮತ್ತು ಗಾಂಧಿ ಮನೆತನವು ಉದ್ದೇಶಪೂರ್ವಕವಾಗಿ ದುರ್ಲಕ್ಷಿಸಿತು.
ಸ್ವಾತಂತ್ರ್ಯದ ನಂತರ ಮುಸಲ್ಮಾನ ಪುರಸ್ಕೃತ ಅಥವಾ ಹಿಂದೂವಿರೋಧಿ ವಿಚಾರಶೈಲಿಯ ಶಿಕ್ಷಣಸಚಿವರು ತಮಗೆ ಬೇಕಾದಂತೆ ಇತಿಹಾಸವನ್ನು ಕಲಿಸಿದರು !
ಸ್ವಾತಂತ್ರ್ಯಪ್ರಾಪ್ತಿಯ ನಂತರ ಇಂದಿನವರೆಗೆ ಅನೇಕ ಆಡಳಿತದವರು ಬಂದರು, ಆದರೆ ಜಾತ್ಯತೀತತೆಯ ಹೆಸರಿನಲ್ಲಿ ಅವರು ಕೇವಲ ಭೇದಭಾವವನ್ನೆ ಮಾಡಿದ್ದಾರೆ. ಮಸೀದಿಗಳಲ್ಲಿ ನಮಾಜು ಪಠಣ ಮಾಡುವ ಮೌಲ್ವಿಗಳಿಗೆ ಮಾನಧನ ಕೊಟ್ಟರು; ಆದರೆ ದೇವಸ್ಥಾನಗಳನ್ನು ಧ್ವಂಸ ಮಾಡುವವರಿಗೆ ಶಿಕ್ಷೆ ನೀಡದೆ ಅವರನ್ನು ರಕ್ಷಿಸಲಾಯಿತು. ಮದರಸಾಗಳಿಗೆ ಅನುದಾನ ನೀಡಿದರು; ಆದರೆ ಶಾಲಾ ಪಠ್ಯಕ್ರಮದಲ್ಲಿ ಕಲಿಸುವ ಇತಿಹಾಸವನ್ನು ಪರಿಶೀಲಿಸಲಿಲ್ಲ; ಇದರಿಂದ ಸ್ವಾತಂತ್ರ್ಯಾನಂತರ ಇಂದಿನವರೆಗೆ ನಮ್ಮ ಅನೇಕ ಪೀಳಿಗೆಗಳಿಗೆ ತಪ್ಪು ಹಾಗೂ ದಾರಿತಪ್ಪಿಸುವ ಇತಿಹಾಸವನ್ನು ಕಲಿಸಲಾಯಿತು, ಅದು ಕೂಡ ಮುಸಲ್ಮಾನ ಪುರಸ್ಕೃತ ಅಥವಾ ಹಿಂದೂವಿರೋಧಿ ವಿಚಾರಶೈಲಿಯ ಶಿಕ್ಷಣಮಂತ್ರಿಗಳ ಅನುಕೂಲಕ್ಕನುಸಾರ ! ಇಷ್ಟಾದರೂ ನಮ್ಮಲ್ಲಿ ಉಪರಾಷ್ಟ್ರಪತಿಯ ಹುದ್ದೆಯಲ್ಲಿರುವ ಹಮೀದ ಅನ್ಸಾರಿಯಂತಹ ವ್ಯಕ್ತಿಗೆ ನಮ್ಮ ಸರ್ವ ಸಮಾವೇಶಕ ಹಾಗೂ ಸಹಿಷ್ಣು ಭಾರತದಲ್ಲಿ ಅಸುರಕ್ಷಿತವೆನಿಸುತ್ತದೆ, ಇದೇ ಈ ಜನರು ಮಾಡಿದ ನಮ್ಮ ಪ್ರಜಾಪ್ರಭುತ್ವದ ನಿಜವಾದ ತಿರಸ್ಕಾರ ಅಥವಾ ಚೇಷ್ಟೆಯಾಗಿತ್ತು, ಎಂದೇಕೆ ತಿಳಿಯಬಾರದು ?
ಕಾಂಗ್ರೆಸ್ ಕೇವಲ ಮತಪೆಟ್ಟಿಗೆಗಾಗಿ ಮುಸಲ್ಮಾನರುಮತ್ತು ಇತರ ಸಮೂಹದವರನ್ನು ಒಲೈಸುವುದು !
ಎಲ್ಲಕ್ಕಿಂತ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಕೇವಲ ಮತಪೆಟ್ಟಿಗೆಗಾಗಿ ಇಲ್ಲಿನ ಮುಸಲ್ಮಾನರನ್ನು ಮತ್ತು ರಾಷ್ಟ್ರವನ್ನು ಒಡೆಯುವ ಇತರ ಸಮೂಹದವರನ್ನು ತಲೆ ಮೇಲೇರಿಸಿಕೊಂಡು ರಾಜಕಾರಣ ಮಾಡಿತು. ಜನಸಂಖ್ಯಾ ನಿಯಂತ್ರಣದಂತಹ ಕಾನೂನನ್ನು ತರಬೇಕು; ಆದರೆ ಅದನ್ನು ಕೇವಲ ಹಿಂದೂಗಳೆ ಪಾಲಿಸಬೇಕು. ತದ್ವಿರುದ್ಧ ಇದೇ ದೇಶದಲ್ಲಿ ಮೂರನೇ ಓಂದಂಶದಷ್ಟು ಜನಸಂಖ್ಯೆಯನ್ನು ದಾಟಿದ ಮತಾಂಧರು ಅಲ್ಪಸಂಖ್ಯಾತರೆಂಬ ಲಾಭವನ್ನು ಪಡೆಯುತ್ತಾ ರಾಜಕೀಯ ಮುಖಂಡರನ್ನು ಕೈಯಲ್ಲಿಟ್ಟುಕೊಂಡು ಮತಪೆಟ್ಟಿಗೆಯ ಆಮಿಷವನ್ನು ತೋರಿಸಿ ದೇಶದ ಮೇಲೆ ಅಧಿಕಾರವನ್ನು ಸ್ಥಾಪಿಸುವ ಪ್ರಭಾವೀ ಅಟ್ಟಹಾಸ ಮಾಡುತ್ತಿದ್ದಾರೆ. ರಾಜಕೀಯ ನೇತಾರರು ಹಿಂದೂಗಳಿಗೆ ಮಾತ್ರ ಆಮಿಷವನ್ನು ತೋರಿಸುತ್ತಾ ದೇವರು, ದೇಶ ಹಾಗೂ ಧರ್ಮದ ವಿಷಯದಲ್ಲಿರುವ ಸ್ವಾಭಿಮಾನವನ್ನು ಒತ್ತೆಯಿಟ್ಟು ನಿಷ್ಕ್ರಿಯತೆಯ ನಾಟಕವಾಡುತ್ತಾರೆ. ಈ ಸಮಯದಲ್ಲಿ ಅವರ ಇಂತಹ ದೌರ್ಬಲ್ಯದ ಬಗ್ಗೆ ನಿಜವಾಗಿ ಕನಿಕರ ಮೂಡುತ್ತದೆ.
ಸ್ವಾತಂತ್ರ್ಯ ಪ್ರಾಪ್ತಿಯಿಂದ ಇಂದಿನ ವರೆಗೆ ಒಮ್ಮೆ ಕೂಡ ಶೇ. ೧೦೦ ರಷ್ಟು ಮತದಾನವಾಗಿಲ್ಲ !
ಸ್ವಾತಂತ್ರ್ಯ ಪ್ರಾಪ್ತಿಯಾದ ನಂತರ ಇಂದಿನವರೆಗೆ ಆಗಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಶೇ. ೧೦೦ ರಷ್ಟು ಮತದಾನ ಆಗಿಲ್ಲ. ಇದರ ಅರ್ಥ ಇದುವರೆಗೂ ನಮಗೆ ನಮ್ಮ ಮತ ಹಾಗೂ ಸ್ವಾತಂತ್ರ್ಯದ ಮೌಲ್ಯ ತಿಳಿದಿಲ್ಲ, ಎಂದೇ ತಿಳಿಯಬಹುದು. ಈ ವಿಷಯದಲ್ಲಿ ಪ್ರಾಮುಖ್ಯವಾಗಿ ಜನಜಾಗೃತಿಯಾಗುವುದು ಆವಶ್ಯಕವಿರುವಾಗ ‘ಮತವನ್ನು ಹೆಚ್ಚಿಸುವುದಕ್ಕಿಂತ ಪ್ರತಿಸ್ಪರ್ಧಿಗಳ ಎಷ್ಟು ಮತಗಳನ್ನು ಕಡಿಮೆಗೊಳಿಸಬಹುದು’, ಎಂಬ ಲೆಕ್ಕಾಚಾರವನ್ನು ಉಪಯೋಗಿಸಲಾಗುತ್ತದೆ.
ಭಾರತದಲ್ಲಿ ಹಿಂದೂ ರಾಷ್ಟ್ರಸ್ಥಾಪಿಸಲು ಇಚ್ಛಿಸುವುದರಲ್ಲಿ ತಪ್ಪೇನಿದೆ ?
ಕೇವಲ ಜನಸಂಖ್ಯೆಯ ಆಧಾರದಲ್ಲಿ ಮುಸಲ್ಮಾನರು ಜಗತ್ತಿನ ೫೭ ದೇಶಗಳಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿರುವಾಗ ಈ ರಾಷ್ಟ್ರವನ್ನು ಉಳಿಸಿಕೊಳ್ಳಲು ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಕಾಮನೆ ಮಾಡುವುದರಲ್ಲಿ ತಪ್ಪೇನಿದೆ ?, ಇಷ್ಟು ಮಾತ್ರವಲ್ಲ, ಜಗತ್ತಿನಲ್ಲಿರುವ ಒಟ್ಟು ಮುಸಲ್ಮಾನರ ಸಂಖ್ಯೆಯಲ್ಲಿ ಅತೀ ಹೆಚ್ಚು ಮುಸಲ್ಮಾನರು ಭಾರತದಲ್ಲಿರುವಾಗ ಇಲ್ಲಿ ಅವರು ಅಲ್ಪಸಂಖ್ಯಾತರು ಹೇಗೆ ? ಎಂಬ ವಿಷಯದಲ್ಲಿ ಪ್ರತಿಯೊಬ್ಬರೂ ಆತ್ಮಚಿಂತನೆ ಮಾಡುವ ಅವಶ್ಯಕತೆಯಿದೆ. ಭಾರತಕ್ಕೆ ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಲು ಪ್ರತ್ಯಕ್ಷ ಕೃತಿ ಸ್ವರೂಪದಲ್ಲಿ ಬರುವ ಜನಗಣನೆಯಲ್ಲಿ ಪ್ರತಿಯೊಬ್ಬ ರಾಷ್ಟ್ರಪ್ರೇಮಿ ನಾಗರಿಕನು ತನ್ನ ಧರ್ಮವನ್ನು ‘ಹಿಂದೂ’ ಎಂದೇ ನೊಂದಾಯಿಸಬೇಕು. ಇಲ್ಲದಿದ್ದರೆ ಮುಂಬರುವ ಕಾಲದಲ್ಲಿ ಮತ್ತೊಮ್ಮೆ ನಾವು ಮೊಗಲರ ಅತ್ಯಾಚಾರವನ್ನು ಅನುಭವಿಸಲು ಮಾನಸಿಕ ಸಿದ್ಧತೆ ಮಾಡಬೇಕಾಗಬಹುದು. ಇದು ಭಯವನ್ನು ತೋರಿಸುವ ಅಥವಾ ಮರುಳು ಮಾಡುವ ಪ್ರಯತ್ನ ಆಗಿರದೆ ಈ ದೇಶದ ಮುಂದಿನ ಭವಿಷ್ಯದಲ್ಲಿನ ಸ್ಪಷ್ಟ ಚಿತ್ರಣವಾಗಿದೆ, ಎಂಬುದನ್ನು ಗಮನಿಸಬೇಕು.
ಪೂರ್ವಜರ ಅಸೀಮ ತ್ಯಾಗದಿಂದ ಸಿಕ್ಕಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯಕರ್ತವ್ಯ !
ನಮ್ಮ ಸುತ್ತಲೂ ಘಟಿಸುವ ಚಿಕ್ಕಪುಟ್ಟ ವಿಷಯಗಳನ್ನು ರಾಷ್ಟ್ರಹಿತವೆಂದು ನೋಡುವುದು ನಮ್ಮ ಆದ್ಯಕರ್ತವ್ಯವಾಗಿದೆ. ಇದನ್ನು ದುರ್ಲಕ್ಷಿಸಿದರೆ ನಮ್ಮ ಮುಂದಿನ ಪೀಳಿಗೆಗೆ ಆಗುವ ಅಪಾರ ಹಾನಿಗೆ ನಾವೇ ಕಾರಣರಾಗುತ್ತೇವೆ, ಎಂಬುದನ್ನು ಗಮನಿಸಿ ನಮ್ಮ ಪೂರ್ವಜರ ಅಪಾರ ತ್ಯಾಗದಿಂದ ಸಿಕ್ಕಿರುವ ಸ್ವಾತಂತ್ರ್ಯವನ್ನು ರಕ್ಷಿಸುವುದು ನಮ್ಮ ಆದ್ಯಕರ್ತವ್ಯವಾಗಿದೆ. ಆದ್ದರಿಂದ ಈ ರಾಷ್ಟ್ರೀಯ ಹಬ್ಬದ ನಿಮಿತ್ತ ನಾವು ನಮ್ಮ ವೀರ ಹುತಾತ್ಮರಿಗೆ ಗೌರವವಂದನೆಯನ್ನು ಕೊಡುವಾಗ ಹಾಗೂ ತ್ರಿವರ್ಣಧ್ವಜವನ್ನು ಹಾರಿಸುವ ನಮ್ಮ ಸ್ವಾತಂತ್ರ್ಯವು ‘ದೀನ’ ಆಗಬಾರದು, ಇಷ್ಟಾದರೂ ಕಾಳಜಿ ವಹಿಸಬೇಕು, ಎಂಬ ಅಪೇಕ್ಷೆಯಾಗಿದೆ.
– ಶ್ರೀ. ಪರಮೇಶ್ವರ ಲಾಂಡಗೆ, ಕೇಂದ್ರೀಯ ಉಪಾಧ್ಯಕ್ಷ, ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಂಘ. ಬೀಡ್.