ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿಗಾಗಿ ಅಂತರರಾಷ್ಟ್ರೀಯ ಚಳುವಳಿ ಮೆಲ್ಬರ್ನ್ ನಿಂದ ಪ್ರಾರಂಭ!

ಪ್ರಯಾಗರಾಜ – ತ್ರಿವೇಣಿಯ ದಡದಿಂದ ಪ್ರಾರಂಭವಾದ ಶ್ರೀ ಕೃಷ್ಣನ ಜನ್ಮಭೂಮಿದ ಮುಕ್ತಿಗಾಗಿ ಚಳುವಳಿಯ ಪ್ರತಿಧ್ವನಿಗಳು ಈಗ ಏಳು ಸಮುದ್ರಗಳಾಚೆಗೆ ತಲುಪಿದೆ. ವಿದೇಶದಲ್ಲಿ ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನದ ಶಂಖನಾದ ಮೊಳಗುತ್ತಿರುವುದು ಇದೇ ಮೊದಲ ಬಾರಿಯಾಗಿರಬಹುದು. ಮಾರ್ಚ್ ಕೊನೆಯ ವಾರದಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ಶ್ರೀಕೃಷ್ಣನ ಜನ್ಮಭೂಮಿದ ಕುರಿತು ಒಂದು ಭವ್ಯ ಸಂವಾದವನ್ನು ಆಯೋಜಿಸಲಾಗಿತ್ತು. ಅದರ ರೂಪರೇಷೆಯನ್ನು ಸಿದ್ಧಗೊಳಿಸಲಾಗಿದೆ. ಈ ಆಂದೋಲನವು ಸಹಿ ಅಭಿಯಾನದೊಂದಿಗೆ ಪ್ರಾರಂಭವಾಗಿದೆ. ಪ್ರಪಂಚದಾದ್ಯಂತದ ಅನಿವಾಸಿ ಭಾರತೀಯರನ್ನು ಈ ಆಂದೋಲನದೊಂದಿಗೆ ಸಂಪರ್ಕಿಸಲು ಪ್ರಯತ್ನಗಳು ನಡೆದಿವೆ.

1. ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನ್ಯಾಸದ ಅಧ್ಯಕ್ಷರಾಗಿರುವ ಮಹೇಂದ್ರ ಪ್ರತಾಪ ಸಿಂಗ ಮಾತನಾಡಿ, ಶ್ರೀ ಕೃಷ್ಣ ಜನ್ಮಭೂಮಿಯ ಮುಕ್ತಿಗಾಗಿ ಮಾರ್ಚ್ 28 ರಿಂದ 30 ರವರೆಗೆ ಮೆಲ್ಬರ್ನ್ ನಲ್ಲಿ ಬೃಹತ್ ವಿಚಾರ ಸಂಕಿರಣವನ್ನು ಆಯೋಜಿಸಲಾಗುವುದು. ಮಹಾಸಂವಾದದಲ್ಲಿ ಮುಖ್ಯ ಅತಿಥಿಗಳಾಗಿ ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರನ್ನು ಆಹ್ವಾನಿಸಲಾಗುವುದು. ಮಹಾಸಂವಾದದ ಮೂಲಕ ಪ್ರಪಂಚದಾದ್ಯಂತವಿರುವ ಸನಾತನಿ ಹಿಂದೂಗಳು ಮತ್ತು ಅನಿವಾಸಿ ಭಾರತೀಯರಲ್ಲಿ ಅರಿವು ಮೂಡಿಸಲಾಗುವುದು, ಎಂದು ಹೇಳಿದರು.

2. ಈ ಆಂದೋಲನವು ಮಾರ್ಚ್ 14 ರ ನಂತರ ಶ್ರೀ ರಾಮಲಲ್ಲಾನ ಜನ್ಮಸ್ಥಾನ ಅಯೋಧ್ಯೆಯಿಂದ ಪ್ರಾರಂಭವಾಗಲಿದೆ. ತದ ನಂತರ, ಶ್ರೀಕೃಷ್ಣನ ಭಕ್ತರು ಜಾಗತಿಕ ಮಟ್ಟದಲ್ಲಿ ಒಗ್ಗೂಡುತ್ತಾರೆ. ಮೆಲ್ಬರ್ನ್ ನಂತರ, ದಕ್ಷಿಣ ಆಫ್ರಿಕಾ, ಕೀನ್ಯಾ, ಮಾರಿಷಸ್, ಮಲೇಷ್ಯಾ ಮತ್ತು ಅಮೇರಿಕಾದಲ್ಲಿ ಸಹಿ ಅಭಿಯಾನಗಳು ಹಾಗೂ ಜಾಗೃತಿ ಅಭಿಯಾನಗಳನ್ನು ಆಯೋಜಿಸಲಾಗುವುದು.

3. ಶ್ರೀ ಕೃಷ್ಣನ ಜನ್ಮಭೂಮಿದ ಮುಕ್ತಿಗಾಗಿ ಸಹಿ ಅಭಿಯಾನದಲ್ಲಿ ಇಲ್ಲಿಯವರೆಗೆ, ಮೂರುವರೆ ಕೋಟಿಗೂ ಹೆಚ್ಚು ಹಿಂದೂಗಳು ಭಾಗವಹಿಸಿದ್ದಾರೆ.