ಸಂಸ್ಕೃತದಿನದ ನಿಮಿತ್ತ (ಆಗಸ್ಟ್ ೧೨)
ಆಂಗ್ಲ ಭಾಷೆಯನ್ನು ಅಧ್ಯಯನ ಮಾಡುವಾಗ ಒಂದು ವಾಕ್ಯವನ್ನು ಯಾವಾಗಲೂ ಹೇಳಲಾಗುತ್ತದೆ, ಆ ವಾಕ್ಯವೆಂದರೆ – ‘A QUICK BROWN FOX JUMPS OVER THE LAZY DOG.’ ಈ ವಾಕ್ಯದ ವಿಶೇಷವೇನೆಂದರೆ, ಈ ವಾಕ್ಯದಲ್ಲಿ ಆಂಗ್ಲ ವರ್ಣಮಾಲೆಯಲ್ಲಿನ ಎಲ್ಲ ವರ್ಣಗಳು ಬಂದಿವೆ; ಆದರೆ ನಾವು ಅದನ್ನು ಸರಿಯಾಗಿ ನೋಡಿದರೆ ಈ ವಾಕ್ಯದಲ್ಲಿ ನಮಗೆ ಕೆಲವು ಕೊರತೆಗಳು ಕಂಡು ಬರುತ್ತವೆ. ಉದಾಹರಣೆಗೆ ಆಂಗ್ಲ ವರ್ಣಮಾಲೆಯಲ್ಲಿ ೨೬ ವರ್ಣ(ಅಕ್ಷರ)ಗಳಿರುವಾಗ ಇಲ್ಲಿ ೩೩ ವರ್ಣಗಳು ಬಂದಿವೆ. O, A, E, U, R ಇವುಗಳನ್ನು ಪುನಃ ಪುನಃ ಉಪಯೋಗಿಸಲಾಗಿದೆ, ಹಾಗೆಯೇ A, B, C, D ಈ ಕ್ರಮದ ಪಾಲನೆಯೂ ಆಗಿಲ್ಲ. ಆದರೆ ನಾವು ಈ ಕೆಳಗಿನ ಶ್ಲೋಕವನ್ನು ನೋಡಿದರೆ ಸಂಸ್ಕೃತ ಭಾಷೆಯ ಚಮತ್ಕಾರ ನಮ್ಮ ಗಮನಕ್ಕೆ ಬರುತ್ತದೆ –
ಕಃಖಗೀಘಾಙಚೈಚ್ಛೌಜಾಝಾಞÆ್ಜ÷್ಞÃಟೌಠೀಡಢಣ: |
ತಥೋದಧೀನ ಪಫರ್ಬಾಭೀರ್ಮಯೋಽರಿಲ್ವಾಶಿಷಾಂ ಸಹ ||
ಅರ್ಥ : ಪಕ್ಷಿಗಳ ಬಗ್ಗೆ ಪ್ರೇಮ, ಶುದ್ಧಬುದ್ಧಿ, ಇತರರ ಬಲದ ಅಪಹರಣ ಮಾಡುವುದರಲ್ಲಿ ಪಾರಂಗತ, ಶತ್ರುಗಳ ಸಂಹಾರದಲ್ಲಿ ಅಗ್ರ, ಮನಸ್ಸಿನಿಂದ ನಿಶ್ಚಲ ಹಾಗೂ ಭಯರಹಿತ ಮತ್ತು ಮಹಾ ಸಾಗರವನ್ನು ಯಾರು ಸೃಷ್ಟಿಸಿದರೋ ? ಯಾರಿಗೆ ತನ್ನ ಶತ್ರುಗಳ ಆಶೀರ್ವಾದ ಪ್ರಾಪ್ತವಾಗಿದೆಯೋ ಅಂತಹ ರಾಜಾ ಮಯ.
ಇದರಲ್ಲಿ ನೋಡಿದರೆ, ಸಂಸ್ಕೃತ ವರ್ಣಮಾಲೆಯಲ್ಲಿನ ಎಲ್ಲ ೩೩ ವ್ಯಂಜನಗಳು ಬಂದಿವೆ, ಮತ್ತು ಅವು ಕ್ರಮವಾಗಿಯೂ ಬಂದಿವೆ ! ಅದೇ ರೀತಿ ನಾವು ಸಂಸ್ಕೃತ ವರ್ಣಮಾಲೆಯನ್ನು ನೋಡಿದರೆ, ಅದು ಎಲ್ಲಕ್ಕಿಂತ ವೈಜ್ಞಾನಿಕ ದೃಷ್ಟಿಯಿಂದ ಸಿದ್ಧವಾಗಿದೆ, ಎಂಬುದು ನಮ್ಮ ಗಮನಕ್ಕೆ ಬರುತ್ತದೆ.
ಸ್ವರಗಳು – ಅ ಆ ಇ ಈ ಉ ಊ ಋ ಎ ಐ ಓ ಔ ಅಂ ಅಃ |
ವ್ಯಂಜನಗಳು –
ಕಂಠ್ಯ – ಕ ಖ ಗ ಘ ಙ |
ತಾಲವ್ಯ – ಚ ಛ ಜ ಝ ಞ |
ಮೂರ್ಧನ್ಯ – ಟ ಠ ಡ ಢ ಣ |
ದಂತ್ಯ – ತ ಥ ದ ಧ ನ |
ಓಷ್ಠ್ಯ – ಪ ಫ ಬ ಭ ಮ |
ಮೃದು ವ್ಯಂಜನಗಳು – ಯ ರ ಲ ವ ಶ ಷ ಸ |
ಮಹಾಸ್ಫುಟ ಪ್ರಾಣ – ಹ ಕ್ಷ |
ಈ ಮೇಲಿನ ವರ್ಗೀಕರಣವನ್ನು ನೋಡಿದರೂ, ನಮಗೆ ಸಂಸ್ಕೃತ ಭಾಷೆ ಎಷ್ಟು ವೈಜ್ಞಾನಿಕವಾಗಿದೆ, ಎಂಬುದು ಗಮನಕ್ಕೆ ಬರುತ್ತದೆ. ಎಲ್ಲಕ್ಕಿಂತ ಮಹತ್ವದ್ದೆಂದರೆ, ಸ್ವರಗಳು ಮತ್ತು ವ್ಯಂಜನಗಳು ಬೇರೆ ಬೇರೆಯಾಗಿದ್ದು ಆಂಗ್ಲದಂತೆ ಎಲ್ಲವೂ ಒಟ್ಟಿಗೆ ಇಲ್ಲ. ಪುನಃ ವ್ಯಂಜನಗಳಲ್ಲಿಯೂ ಇನ್ನೂ ವರ್ಗೀಕರಣವಿದೆ – ಕಂಠದಿಂದ ಬರುವ ವ್ಯಂಜನ ಕಂಠ್ಠಯ್, ತಾಲದಿಂದ ಬರುವ ತಾಲವ್ಯ, ಕಂಠ ಮತ್ತು ನಾಲಿಗೆಯಿಂದ ಬರುವ ಮುಧರ್ನ್ಯ ಮತ್ತು ತುಟಿಗಳಿಂದ ಬರುವ ಓಷ್ಠ್ಯಯ. ಅದರಲ್ಲಿಯೂ ಕಂಠದಿಂದ ತುಟಿಯವರೆಗಿನ ಕ್ರಮವು ಇನ್ನೂ ಯೋಗ್ಯವಾಗಿದೆ. ಇನ್ನೂ ಮುಂದೆ ನೋಡಿದರೆ, ಪ್ರತಿಯೊಂದು ವರ್ಣದಲ್ಲಿನ ೧ ಮತ್ತು ೩ ವ್ಯಂಜನಗಳು ಅಲ್ಪಪ್ರಾಣ (ಅಲ್ಪ ಶ್ವಾಸ ಬೇಕಾಗುವ) ಮತ್ತು ೨ ಮತ್ತು ೪ ವ್ಯಂಜನಗಳು ಮಹಾಪ್ರಾಣ (ಹೆಚ್ಚು ಶ್ವಾಸ ಬೇಕಾಗುವ). ಪ್ರತಿಯೊಂದು ವರ್ಣದಲ್ಲಿನ ಐದನೆವ್ಯಂಜನವೆಂದರೆ, ಅನುನಾಸಿಕ, ಅಂದರೆ ಮೂಗಿನ ಸಹಾಯದಿಂದ ಉಚ್ಚರಿಸಬೇಕಾಗುತ್ತದೆ. ಆದ್ದರಿಂದಲೇ ಸಂಸ್ಕೃತ ಭಾಷೆಯು ಗಣಕಯಂತ್ರಕ್ಕಾಗಿ (ಕಂಪ್ಯುಟರ್‌ಗಾಗಿ) ಎಲ್ಲಕ್ಕಿಂತ ಯೋಗ್ಯ ಭಾಷೆಯಾಗಿದೆ, ಎಂದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.
ಸರ್ವೋತ್ಕೃಷ್ಠ ಸಂಸ್ಕೃತ ಭಾಷೆಯ ಅಭಿಮಾನ ಪ್ರತಿಯೊಬ್ಬರಿಗೂ ಬೇಕು !
ಸಂಸ್ಕೃತ ಭಾಷೆಯ ಚಮತ್ಕಾರವನ್ನು ನೋಡಬೇಕಾಗಿದ್ದರೆ, ನಾವು ಸಂಸ್ಕೃತದಲ್ಲಿನ ವಿವಿಧ ಸಾಹಿತ್ಯಗಳನ್ನು ಅಧ್ಯಯನ ಮಾಡಿ ನೋಡಬಹುದು. ಅದರಲ್ಲಿನ ಕೆಲವು ವಿಶಿಷ್ಟ ಉದಾಹರಣೆಗಳನ್ನು ಕೆಳಗೆ ಕೊಡುತ್ತಿದ್ದೇವೆ.
ಅ. ‘ಮಾಘ’ ಎಂಬ ಹೆಸರಿನ ಓರ್ವ ಮಹಾಕವಿ ಭಾರತದಲ್ಲಿ ಆಗಿಹೋದರು. ಅವರು ತಮ್ಮ ‘ಶಿಶುಪಾಲವಧಮ್’ ಎಂಬ ಮಹಾ ಕಾವ್ಯದಲ್ಲಿ ಕೇವಲ ‘ಭ’ ಮತ್ತು ‘ರ’ ಇವುಗಳನ್ನು ಉಪಯೋಗಿಸಿ ಒಂದು ಶ್ಲೋಕವನ್ನು ಸಿದ್ಧಪಡಿಸಿದರು. ಅದು ಹೀಗಿದೆ –
ಭೂರಿಭಿರ್ಭಾರಿಬಿಭೀರೈರ್ಭೂಭಾರೈರಭಿರೇಭಿರೆ |
ಭೆರಿರೆಭಿಭಿರಭ್ರಾಭೌರಭೀರೂಭಿರಿಭೌರಿಭಾಃ ||
– ಶಿಶುಪಾಲವಧಮ್, ಸರ್ಗ ೧೯, ಶ್ಲೋಕ ೬೬
ಅರ್ಥ : ಭೂಮಿಗೂ ಭಾರವೆನಿಸುವ, ವಾದ್ಯಯಂತ್ರದಂತೆ ಧ್ವನಿ ಹೊರಡಿಸುವ ಮತ್ತು ಮೇಘದಂತಹ ಕೃಷ್ಣವರ್ಣದ ಭಯವಿಲ್ಲದ ಆನೆಯು ತನ್ನ ಶತ್ರು ಆನೆಯ ಮೇಲೆ ಆಕ್ರಮಣ ಮಾಡಿತು.
ಆ. ಅದೇ ರೀತಿ ‘ಕಿರಾತಾರ್ಜುನೀಯಮ್’ ಈ ಕಾವ್ಯ ಸಂಗ್ರಹದಲ್ಲಿ ಮಹಾಕವಿ ‘ಭಾರವಿ’ ಇವರು ಕೇವಲ ‘ನ’ ವನ್ನು ಉಪಯೋಗಿಸಿ ಒಂದು ಶ್ಲೋಕವನ್ನು ಸಿದ್ಧಪಡಿಸಿದರು.
ನ ನೋನನುನ್ನೋ ನುನ್ನೋನೋ ನಾನಾ ನಾನಾನನಾ ನನು |
ನುನ್ನೋ ನುನ್ನೋ ನನುನ್ನೇನೋ ನಾನೇನಾ ನುನ್ನನುನ್ನನುತ್ ||
– ಕಿರಾತಾರ್ಜುನೀಯಮ್, ಸರ್ಗ ೧೫, ಶ್ಲೋಕ ೧೪
ಅರ್ಥ : ಹೇ ಅನೇಕ ಮುಖಗಳಿರುವ ಗಣಗಳೇ, ಯಾವ ಮನುಷ್ಯನು ಯುದ್ಧದಲ್ಲಿ ತನಗಿಂತ ದುರ್ಬಲರಿರುವರಿಂದ ಸೋಲುತ್ತಾನೆಯೋ, ಅವನು ನಿಜವಾದ ಮನುಷ್ಯನಲ್ಲ; ಯಾವನು ತನಗಿಂತ ದುರ್ಬಲವಿರುವರನ್ನು ಸೋಲಿಸುತ್ತಾನೆಯೋ, ಅವನು ಕೂಡ ನಿಜವಾದ ಮನುಷ್ಯನಲ್ಲ. ಯುದ್ಧದಲ್ಲಿ ಯಾವ ಮನುಷ್ಯನ ಸ್ವಾಮಿ ಸೋತಿಲ್ಲವೋ, ಅವನು ಸೋತರೂ ಸೋತಿದ್ದಾನೆಂದು ಹೇಳುವುದಿಲ್ಲ ಮತ್ತು ಗಾಯಗೊಂಡಿರುವ ಮನುಷ್ಯನನ್ನು ಗಾಯಗೊಳಿಸುವವನು ನಿಜವಾದ ಮನುಷ್ಯನಲ್ಲ.(ನಿರ್ದೋಷಿಯಲ್ಲ.)
ಇ. ಇನ್ನೂ ಮುಂದೆ ನೋಡಲು ಹೋದರೆ, ‘ಮಹಾಯಮಕ’ ಅಲಂಕಾರದಲ್ಲಿನ ಒಂದು ಶ್ಲೋಕವಿದೆ. ಅದರ ನಾಲ್ಕೂ ಪದಗಳು ಒಂದೇ ರೀತಿಯಾಗಿವೆ; ಆದರೆ ಪ್ರತಿಯೊಂದು ಪದದ ಅರ್ಥ ಭಿನ್ನವಾಗಿದೆ.
ವಿಕಾಶಮೀಯುರ್ಜಗತೀಶಮಾರ್ಗಣಾ
ವಿಕಾಶಮೀಯುರ್ಜಗತೀಶಮಾರ್ಗಣಾ |
ವಿಕಾಶಮೀಯುರ್ಜಗತೀಶಮಾರ್ಗಣಾ
ವಿಕಾಶಮೀಯುರ್ಜಗತೀಶಮಾರ್ಗಣಾ ||
– ಕಿರಾತಾರ್ಜುನೀಯಮ್, ಸರ್ಗ ೧೫, ಶ್ಲೋಕ ೫೨
ಅರ್ಥ : ಪೃಥ್ವೀಪತೀ ಅರ್ಜುನನ ಬಾಣಗಳು ಎಲ್ಲೆಡೆ ವ್ಯಾಪಿಸಿವೆ, ಇದರಿಂದಾಗಿ ಶಂಕರನ ಬಾಣಗಳು ಖಂಡಿತವಾಗಿವೆ. ಈ ರೀತಿ ಅರ್ಜುನನ ರಣಕೌಶಲ್ಯವನ್ನು ನೋಡಿ ದಾನವರನ್ನು ಸೋಲಿಸುವ ಶಂಕರನ ಗಣಗಳು ಆಶ್ಚರ್ಯಚಕಿತರಾಗಿದ್ದಾರೆ. ಶಂಕರ ಮತ್ತು ತಪಸ್ವೀ ಅರ್ಜುನನ ಯುದ್ಧವನ್ನು ನೋಡಲು ಶಂಕರನ ಭಕ್ತರು ಆಕಾಶದಲ್ಲಿ ಬಂದಿದ್ದಾರೆ.
ಇದನ್ನು ಓದಿ ನಿಮಗೆ ಸಂಸ್ಕೃತ ಭಾಷೆಯ ಚಮತ್ಕಾರವು ಗಮನಕ್ಕೆ ಬಂದಿರಲೇಬೇಕು. ಆದ್ದರಿಂದ ‘ಭಾಷಾಣಾಂ ಜನನೀ’ ಆಗಿರುವ ಸಂಸ್ಕೃತ ಭಾಷೆಯ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನವಿರಲೇಬೇಕು. ಕೊನೆಗೆ ಮಾಘ ಕವಿಯವರು ಮಾಡಿದ ಕೃಷ್ಣನ ಸ್ತುತಿಯೊಂದಿಗೆ ನಿಲ್ಲಿಸುತ್ತೇನೆ.
ದಾದದೋ ದುಧದುಧಾದಿ ದಾದದೋ ದೂದದೀದದೋಃ |
ದುದ್ಧಾದಂ ದದದೆ ದುಧೇ ದಾದಾದದದದೋದದಃ ||
– ಶಿಶುಪಾಲವಧಮ್, ಸರ್ಗ ೧೯, ಶ್ಲೋಕ ೧೧೪
ಅರ್ಥ : ಪ್ರತಿಯೊಬ್ಬರಿಗೂ ವರದಾನ ನೀಡುವ, ದುರಾಚಾರಿ ಮನುಷ್ಯರ ನಿವಾರಣೆ ಮಾಡಿ, ಅವರನ್ನು ಶುದ್ಧಗೊಳಿಸುವ, ಪರರಿಗೆ ಪೀಡೆಯನ್ನು ನೀಡುವವರನ್ನು ನಿವಾರಿಸಲು ಸಮರ್ಥ ಬಾಹುಗಳುಳ್ಳ ಭಗವಾನ ಶ್ರೀಕೃಷ್ಣನು ಶತ್ರುಗಳ ಮೇಲೆ ತನ್ನ ಮರ್ಮಭೇದಿ ಬಾಣವನ್ನು ಬಿಟ್ಟನು.
ಜಯತು ಸಂಸ್ಕೃತಮ್ ||
– ವಿಶ್ವಂಭರ ಮುಳೆ (ಗೋಂದೀಕರ್)
(ಆಧಾರ : ವಾಟ್ಸ್ಅಪ್)