Sanskrit at Mahakumbh : ಸಂಸ್ಕೃತ ಭಾಷೆಯನ್ನು ಪ್ರಸಾರ ಮಾಡಲು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಮಹಾಕುಂಭ ಪರ್ವದಲ್ಲಿ ಸಹಭಾಗ

ಪ್ರಾ. ಡಾ. ದೇವಕರಣ ಶರ್ಮಾ

ಪ್ರಯಾಗರಾಜ, ಜನವರಿ 18 (ಸುದ್ದಿ.) – ಮಹಾಕುಂಭ ಮೇಳದಲ್ಲಿ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇಲ್ಲಿನ ವಿವಿಧ ಅಖಾಡಗಳು ಮತ್ತು ವಿವಿಧ ಮಂಟಪಗಳಿಗೆ ಭೇಟಿ ನೀಡಿ ರುದ್ರಪಾಠ, ಸ್ತೋತ್ರಪಠಣ, ಪೂಜೆ, ಸಂಸ್ಕೃತ ಗೀತೆಗಳ ಗಾಯನ, ವೇದ ಮಂತ್ರಗಳನ್ನು ಪಠಿಸುವುದು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸಿ ಸಂಸ್ಕೃತ ಭಾಷೆಯ ಪ್ರಚಾರ ಮತ್ತು ಪ್ರಸಾರ ಮಾಡುತ್ತಿದ್ದಾರೆ. ಎಂದು ಜಯಪುರದ ಪ್ರಾ. ಡಾ. ದೇವಕರಣ ಶರ್ಮಾ ಇವರು ಮಾಹಿತಿ ನೀಡಿದರು. ‘ಸಂಸ್ಕೃತ ಭಾಷಾ ಪ್ರಸಾರ ಅಭಿಯಾನ’ದ ಮೂಲಕ ಸಂಸ್ಕೃತ ಭಾಷೆಯನ್ನು ಉತ್ತೇಜಿಸಲಾಗುತ್ತಿದೆ.

ಡಾ. ಶರ್ಮಾ ಮಾತು ಮುಂದುವರೆಸಿ,

1. ಕುಲಪತಿ ಪ್ರಾ. ಡಾ. ಶ್ರೀನಿವಾಸ್ ವರಖೆಡೆ ಅವರ ಮಾರ್ಗದರ್ಶನದಲ್ಲಿ, ಒಟ್ಟು 13 ಶಾಖೆಗಳಿದ್ದು, ಅವುಗಳ ಮೂಲಕ ಒಟ್ಟು 27 ಸಂಸ್ಕೃತ ಕಾಲೇಜುಗಳು ಮತ್ತು 100 ಕ್ಕೂ ಹೆಚ್ಚು ಸಂಸ್ಕೃತ ಭಾಷಾ ಶಿಕ್ಷಣ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಈ ಕೇಂದ್ರಗಳನ್ನು ಐ.ಐ.ಟಿ., ಐ.ಐ.ಎಂ. ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ನಡೆಸಲಾಗುತ್ತದೆ.

2. ಸಂಸ್ಕೃತ ವಿಶ್ವವಿದ್ಯಾಲಯದ ಎಲ್ಲಾ ಶಾಖೆಗಳ ವಿದ್ಯಾರ್ಥಿಗಳನ್ನು ಕುಂಭ ಮೇಳದಲ್ಲಿ ಜನವರಿ 13 ರಿಂದ ಫೆಬ್ರವರಿ 26, 2025 ರವರೆಗೆ 2 ದಿನಗಳ ಕಾಲ ಭಾಗವಹಿಸಲು 50 ವಿದ್ಯಾರ್ಥಿಗಳನ್ನು ಗುಂಪುಗಳಲ್ಲಿ ವಿಂಗಡಿಸಿ ಕರೆತರಲು ಯೋಜಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವತಿಯಿಂದ ವಿದ್ಯಾಲಯದ ಹೆಸರನ್ನು ಹೊಂದಿರುವ ಟಿ-ಶರ್ಟ್‌ಗಳನ್ನು ಹಾಕಲು ಒದಗಿಸಲಾಗಿದೆ.

3. ಸಂಸ್ಕೃತ ಭಾಷೆಯ ಪ್ರಸಾರ ಮತ್ತು ಪ್ರಭಾವ ಈ ಆಧುನಿಕ ಯುಗದಲ್ಲೂ ಹೆಚ್ಚುತ್ತಿದ್ದು, ಅನೇಕ ವಿದ್ವಾಂಸರು, ಬುದ್ಧಿಜೀವಿಗಳು ಹಾಗೂ ತಂತ್ರಜ್ಞಾನ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿರುವವರು ಇದರತ್ತ ಆಕರ್ಷಿತರಾಗುತ್ತಿದ್ದಾರೆ ಎಂಬುದು ಜಾಗತಿಕ ಚಿತ್ರಣವಾಗಿದೆ.