ಸಂಸ್ಕೃತದ ಮೇಲಿನ ದಾಳಿಕೋರರ ಮುಖವಾಡಗಳನ್ನು ಗುರುತಿಸಿ ಅವರ ವಿರುದ್ಧ ಹೋರಾಡಬೇಕು ! – ಅಭಿಜೀತ ಜೋಗ್, ವ್ಯವಸ್ಥಾಪಕ ನಿರ್ದೇಶಕ, ‘ಪ್ರತಿಸಾದ್’ ಕಮ್ಯುನಿಕೇಷನ್

ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ ನಾಲ್ಕನೇ ದಿನ (ಜೂನ್ 27) – ಬೋಧಪ್ರದ ಸತ್ರ

ಹಿಂದೂ ರಾಷ್ಟ್ರಕ್ಕಾಗಿ ಸೈದ್ಧಾಂತಿಕ ಆಂದೋಲನ

ಅಭಿಜೀತ ಜೋಗ್

ವಿದ್ಯಾಧಿರಾಜ ಸಭಾಗೃಹ – ಸ್ವಾತಂತ್ರ್ಯಾನಂತರ ಇತಿಹಾಸ ಮತ್ತು ಶಿಕ್ಷಣಗಳ ಮೇಲೆ ಕಮ್ಯುನಿಸ್ಟರ ಪ್ರಾಬಲ್ಯ ಉಳಿದಿದೆ. ಭಾರತದ ವಿಭಜನೆಯು ಕಮ್ಯುನಿಸ್ಟರ ನೀತಿಯಾಗಿದೆ. ಅವರು ಭಾರತವನ್ನು ವಿಭಜಿಸಲು ಇತಿಹಾಸ ಮತ್ತು ಶಿಕ್ಷಣವನ್ನು ನಾಶಪಡಿಸಿದರು. 2014 ರಲ್ಲಿ ಈ ಪ್ರಯತ್ನಗಳು ವಿಫಲವಾದ ನಂತರ, ಅವರು ಹಿಂದೂ ಸಂಸ್ಕೃತಿಯನ್ನು ಗುರಿಯಾಗಿಸಲು ಪ್ರಾರಂಭಿಸಿದರು. ಧರ್ಮಸಂಸ್ಥೆ, ರಾಷ್ಟ್ರವಾದ ಮತ್ತು ಶಿಕ್ಷಣ ವ್ಯವಸ್ಥೆಯು ಸಂಸ್ಕೃತಿಯ ಆಧಾರವಾಗಿದೆ. ಹಾಗಾಗಿ ಅವುಗಳನ್ನು ನಾಶಪಡಿಸುವ ಪ್ರಯತ್ನ ನಡೆದಿದೆ. ನಮ್ಮ ಸಂಸ್ಕೃತಿ ನಾಶವಾದರೆ ನಮ್ಮ ಅಸ್ತಿತ್ವ ನಾಶವಾಗುತ್ತದೆ. ಹಾಗಾಗಿ ಈ ದಾಳಿಯನ್ನು ಅರ್ಥ ಮಾಡಿಕೊಳ್ಳಬೇಕು. ಇದಕ್ಕಾಗಿ ಅವರ ಮುಖವಾಡಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅವರ ವಿರುದ್ಧ ಹೋರಾಡಬೇಕು. ಅಂತಿಮವಾಗಿ ಗೆಲುವು ನಮ್ಮದಾಗುತ್ತದೆ ಎಂದು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ನಾಲ್ಕನೇ ದಿನ ಅಂದರೆ ಜೂನ್ 27 ರಂದು ‘ಪ್ರತಿಸಾದ’ ಕಮ್ಯುನಿಕೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಅಭಿಜಿತ ಜೋಗ ಇವರು ಪ್ರತಿಪಾದಿಸಿದರು.

ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ”ಭಾರತವನ್ನು ದೀರ್ಘಕಾಲ ಆಳುವ ಸಲುವಾಗಿ ಅವರು ಸಂಸ್ಕೃತಿಯನ್ನು ನಾಶಪಡಿಸಿ ಭಾರತೀಯರ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ನಾಶಮಾಡಲು ಪ್ರಯತ್ನಿಸಲಾಯಿತು. ಅದಕ್ಕಾಗಿ ಅವರು ಶಿಕ್ಷಣ ಮತ್ತು ಇತಿಹಾಸವನ್ನು ನಾಶಮಾಡಲು ಪ್ರಯತ್ನಿಸಿದರು. ಹಿಂದಿನಿಂದಲೂ ನಡೆಯುತ್ತಿದ್ದ ಗುರುಕುಲಗಳನ್ನು ಮುಚ್ಚಿ ಇಂಗ್ಲಿಷ್ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರಲಾಯಿತು. ಪರಿಣಾಮವಾಗಿ, ಭಾರತದಲ್ಲಿ ಹೆಚ್ಚಿನ ಜನರು ಅನಕ್ಷರಸ್ಥರಾದರು. ಇದರೊಂದಿಗೆ, ಅವರು ಭಾರತದ ಮೂಲ ಇತಿಹಾಸದಲ್ಲಿ ಸುಳ್ಳು ಅಂಶಗಳನ್ನು ತುರುಕಿಸಿದರು ಮತ್ತು ಅವರು ಭಾರತದಲ್ಲಿ ಮೊದಲು ಮಾನವ ಕರ್ಮವನ್ನು ಆಧರಿಸಿದ್ದ ಜಾತಿ ವ್ಯವಸ್ಥೆಯನ್ನು ಜನ್ಮ ಆಧಾರಿತ ಜಾತಿ ವ್ಯವಸ್ಥೆ ಎಂದು ಹೆಸರಿಸಿದರು. ಈ ರೀತಿಯಲ್ಲಿ ಬ್ರಿಟಿಷರು ನಮ್ಮ ಗುರುತನ್ನು ಕಸಿದುಕೊಂಡು ತಮಗೆ ಬೇಕಾದ ಗುರುತನ್ನು ನಮ್ಮ ಮೇಲೆ ಹೇರಿದರು. ಹೀಗಾಗಿ ಮೆಕಾಲೆ ಪುತ್ರರು ಮತ್ತು ಮಾರ್ಕ್ಸ್‌ವಾದಿಗಳು ಒಟ್ಟಾಗಿ ಭಾರತದ ಸ್ವಾಭಿಮಾನವನ್ನು ನಾಶಪಡಿಸಲು ಪ್ರಯತ್ನಿಸಿದರು.” ಎಂದು ಹೇಳಿದರು.